ಎಲ್ಲೋ ಗೋಜಪ್ಪಾ ಸಾಕಪ್ಪಾ ಎಂದ ಇಶಾನಿ: ಶಿವಣ್ಣ ಕ್ಷಮಿಸಿಬಿಡಿ ಎನ್ನುತ್ತಲೇ ಮತ್ತೊಮ್ಮೆ ಹಾಡಿದ್ರು ಕೇಳಿ...

By Suvarna News  |  First Published Feb 1, 2024, 5:51 PM IST

ಎಲ್ಲೋ ಜೋಗಪ್ಪ ಹಾಡನ್ನು ತಪ್ಪಾಗಿ ಹಾಡಿದ ಗಾಯಕಿ ಊರ್ಮಿಳಾ ಇಶಾನಿ ಶಿವರಾಜ್​ ಕುಮಾರ್​ ಕ್ಷಮೆ ಕೋರಿ ಏನಂದ್ರು ಕೇಳಿ...
 


ಕಳೆದ ಕೆಲ ವಾರಗಳಿಂದ ಎಲ್ಲೋ ಗೋಜಪ್ಪ ನಿನ್ನ ಅರಮನೆ... ಎಂಬ ಹಾಡು ಮೀಮ್ಸ್​ಗಳಲ್ಲಿ ಕಾಣಸಿಗುತ್ತಿದೆ. ಇದಕ್ಕೆ ಕಾರಣ ಬಿಗ್​ಬಾಸ್​ ಕನ್ನಡ ಸೀಸನ್​ 7ನಲ್ಲಿ ವೈಲ್ಡ್​ ಕಾರ್ಡ್​ ಎಂಟ್ರಿಯಾಗಿ ಹೋಗಿದ್ದ ರ್ಯಾಪರ್ ಊರ್ಮಿಳಾ ಇಶಾನಿ. 2005 ರಲ್ಲಿ ತೆರೆಗೆ ಬಂದ ಬ್ಲಾಕ್ ಬಸ್ಟರ್‌ ‘ಜೋಗಿ’ ಸಿನಿಮಾದಲ್ಲಿ ಆಧುನಿಕ ಟಚ್​ ಕೊಟ್ಟು ಹೇಳಲಾಗಿದ್ದ ಸುಪ್ರಸಿದ್ಧ ಜನಪದ ಗೀತೆ ‘ಎಲ್ಲೋ ಜೋಗಪ್ಪ ನಿನ್ನ ಅರಮನೆ..’ ಹಾಡನ್ನು ಕನ್ನಡ ಸರಿಯಾಗಿ ತಿಳಿಯದ ಇಶಾನಿಯವರು ಎಡವಟ್ಟು ಮಾಡಿ ಟ್ರೋಲ್​ ಕೂಡ ಆಗಿದ್ದರು. ಆದರೆ ಕೊನೆಗೆ ಗೋಜಪ್ಪ ಎಂದೇ ಟ್ರೆಂಡಿಂಗ್​ ಕೂಡ ಆಯಿತು.  ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸ್ಪರ್ಧಿಗಳಿಗೆ ‘ಬಿಗ್ ಬಾಸ್‌’ ಮೋಜಿನ ಚಟುವಟಿಕೆ ನೀಡಿದ್ದರು. ಇದರ ಅನುಸಾರ… ‘ಬಿಗ್ ಬಾಸ್‌’ ಪ್ಲೇ ಮಾಡುವ ಹಾಡನ್ನು.. ಬಲೂನ್‌ನಲ್ಲಿ ತುಂಬಿರುವ ಹೀಲಿಯಂ ಅನಿಲ ಸೇವಿಸಿ ಸ್ಪರ್ಧಿಗಳು ಹಾಡಬೇಕಿತ್ತು.

ಆ ಸಂದರ್ಭದಲ್ಲಿ,  ಎಲ್ಲೋ ಜೋಗಪ್ಪ ನಿನ್ನ ಅರಮನೆ..’ ಹಾಡನ್ನ ‘ಬಿಗ್ ಬಾಸ್‌’ ಪ್ಲೇ ಮಾಡಿದ್ದರು. ಹೀಲಿಯಂ ಅನಿಲ ಸೇವಿಸಿ ಹಾಡುವಾಗ ‘ಎಲ್ಲೋ ಗೋಜಪ್ಪ ನಿನ್ನ ಅರಮನೆ..’ ಎಂದು ಹಾಡಿದ್ದರು  ಇಶಾನಿ.  ಇದು ಸಕತ್​ ಟ್ರೋಲ್​ ಆಗಿತ್ತು. ಅಷ್ಟಕ್ಕೂ ಗಾಯಕಿ ಇಶಾನಿ ಹುಟ್ಟಿದ್ದು ಮೈಸೂರಿನಲ್ಲಿ. ಆದರೆ ಅವರ ಮುಂದಿನ ಜೀವನ ಬೆಂಗಳೂರು, ದುಬೈ ಹಾಗೂ ಲಾಸ್ ಏಂಜಲೀಸ್‌ನಲ್ಲಿ ನಡೆಯಿತು.  ಪಾಪ್, ಹಿಪ್ ಹಾಪ್, ರಾಪ್ ಸಂಗೀತವನ್ನ ಫ್ಯೂಶನ್ ಮಾಡಿ ತಮ್ಮದೇ ಶೈಲಿಯಲ್ಲಿ ಹಾಡುಗಳನ್ನ ಹಾಡುತ್ತಾರೆ ಇವರು. ಇದುವರೆಗೂ 17 ಇಂಗ್ಲೀಷ್ ಆಲ್ಬಂ, 3 ಕನ್ನಡ ಆಲ್ಬಂ ಮಾಡಿದ್ದಾರೆ ಇಶಾನಿ. ಇಂತಿಪ್ಪ ಇಶಾನಿ ಜೋಗಪ್ಪ ಹೋಗಿ ಗೋಜಪ್ಪ ಮಾಡಿದ್ರು.

Tap to resize

Latest Videos

ಸ್ನೇಕ್​ ಶ್ಯಾಮ್​, ಗೌರೀಶ್​ ಅಕ್ಕಿ ಬಿಗ್​ಬಾಸ್​ನಿಂದ ಬೇಗ ಹೊರಬಂದದ್ದೇಕೆ? ಕೆಲವೇ ದಿನ ಇದ್ದ ಭಾಗ್ಯಶ್ರೀ ಹೇಳಿದ್ದೇನು?

ಈ ಬಗ್ಗೆ ಇದೀಗ ಇಶಾನಿಯವರು ಜೋಗಿ ಚಿತ್ರದ ನಾಯಕ ಶಿವರಾಜ್​ ಕುಮಾರ್​ ಅವರ ಕ್ಷಮೆ ಕೋರಿದ್ದಾರೆ. ಕಲರ್ಸ್​ ಕನ್ನಡ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು, ಈ ಹಾಡನ್ನು ಮತ್ತೊಮ್ಮೆ ಸರಿಯಾಗಿ ಹಾಡುವ ಮೂಲಕ ತಪ್ಪು ಹಾಡಿದ್ದಕ್ಕೆ ಕ್ಷಮೆ ಕೋರಿದರು. ಗೋಜಪ್ಪಾ ಸಾಕಪ್ಪ ಎಂದರು. ನಾನು ಕನ್ನಡದ ಹುಡುಗಿ. ಬೆಂಗಳೂರಿನಲ್ಲಿ ಏನಾದರೂ ದೊಡ್ಡದಾಗಿ ಮಾಡಬೇಕು ಎಂದುಕೊಂಡಿದ್ದೇನೆ. ‘ಬಿಗ್ ಬಾಸ್‌’ಗೆ ಬರಲೇಬೇಕು. ಏನಾದರೂ ಡಿಫರೆಂಟ್ ಆಗಿ ಪ್ರೂವ್ ಮಾಡಲೇಬೇಕು ಎಂದುಕೊಂಡಿದ್ದೇನೆ ಎಂದು ‘ಬಿಗ್ ಬಾಸ್’ ವೇದಿಕೆ ಮೇಲೆ ಇಶಾನಿ ಹೇಳಿದ್ದರು. ನಂತರ ಬಹುಬೇಗನೆ ಎಲಿಮಿನೇಟ್​ ಆಗಿ ಹೊರಕ್ಕೆ ಬಂದರು.  

ಇದೇ ವಿಡಿಯೋದಲ್ಲಿ ಬುಲೆಟ್​ ರಕ್ಷಕ್​ ಕೂಡ ಮಾತನಾಡಿದ್ದಾರೆ. ಬಿಗ್​ಬಾಸ್​ ಮನೆಯಲ್ಲಿ ಕಲಿತದ್ದು ಏನು ಎಂದು ಕೇಳಿದ್ದಕ್ಕೆ, ನನಗೆ ಕೋಪ ಹೆಚ್ಚು. ನನಗೆ ಬಿಗ್​ಬಾಸ್​ ಪೇಷನ್ಸ್​ ಹೇಳಿಕೊಡ್ತು ಎಂದರು. ಜೊತೆಗೆ ಕ್ಯಾಮೆರಾ ಇದೆಯಂತ ಡ್ರಾಮಾ ಮಾಡುವುದು ನನಗೆ ಇಷ್ಟವಿಲ್ಲ. ಎಲ್ಲಾ ಸಂದರ್ಭಗಳಲ್ಲಿಯೂ ಒಂದೇ ರೀತಿ ಇರುತ್ತೇನೆ.  ಎಲ್ಲರ ಜೊತೆನೂ ಒಂದೇ ರೀತಿ ಇರುತ್ತೇನೆ. ಬಿಗ್​ಬಾಸ್​ ಮನೆಯಲ್ಲಿ  ಹೊಸ ಫ್ರೆಂಡ್ಸ್​ ಸಿಕ್ಕ ಖುಷಿಯಿದೆ ಎಂದರು. ಇಶಾನಿಯವರು ಎಲ್ಲೋ ಗೋಜಪ್ಪ ಎಂದು ಹಾಡಿದಾಗ ಅಯ್ಯೋ ಎಲ್ಲಪ್ಪಾ ಇವಳು ಸಿಕ್ಕಿಬಿದ್ದಳು ಎನ್ನಿಸಿತು ಎಂದರು ರಕ್ಷಕ್​.  

'ಕೆ' ಅಕ್ಷರದ ಜ್ಯೋತಿಷಿ ಮಾತು ನೆನಪಿಸಿದ ಕೋಮಲ್​: ಕಾರ್ತಿಕ್​ಗೆ ಮಗಳ ಸಂದೇಶ ತಲುಪಿಸಿದ ಶ್ರುತಿ

click me!