
ಕನ್ನಡ ಚಿತ್ರರಂಗದ ಅದ್ಭುತ ಗಾಯಕ, ಸೆನ್ಸೇಷನ್ ಮ್ಯೂಸಿಕ್ ಕಂಪೋಸರ್ ಗುರುಕಿರಣ್ ಹಾಗೂ ಪತ್ನಿ ಪಲ್ಲವಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಜಾ ರಾಣಿ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರು. ವೇದಿಕೆ ಮೇಲೆ ವೆಡಿಂಗ್ ಆ್ಯನಿವರ್ಸರಿ ಆಚರಿಸಿಕೊಂಡ ಗುರುಕಿರಣ್ ವೈವಾಹಿಕ ಜರ್ನಿ ಬಗ್ಗೆ ಮಾತನಾಡಿದ್ದಾರೆ.
ನಿರೂಪಕಿ ಅನುಪಮಾ ಗೌಡ 'ಅವರ ವೈಫ್ ಆಗಿ ನೀವು ಅವರ ಬಗ್ಗೆ ಹೇಳಿ' ಎಂದು ಕೇಳುತ್ತಾರೆ. 'ಇನ್ನು ಬ್ಯಾಚುಲರ್ ತರ ಇದ್ದಾರೆ ಅವರು, ಅವರಿಗೆ ಮದುವೆ ಆಗಿಲ್ಲ...ಆ ತರವೇ ಇರುತ್ತಾರೆ,' ಎಂದು ಪಲ್ಲವಿ ಹೇಳುತ್ತಾರೆ. 'ನಾವಿನ್ನೂ ಬಾಯ್‌ಫ್ರೆಂಡ್-ಗರ್ಲ್‌ಫ್ರೆಂಡ್ ತರಾನೇ ಇದ್ದೀವಿ' ಎಂದು ಹೇಳುತ್ತಾರೆ. ಇಬ್ಬರಿಗೂ ಸಣ್ಣ ಪುಟ್ಟ ಟಾಸ್ಕ್ ನೀಡಲಾಗಿತ್ತು, ಒಂದು ಎಳ ನೀರಿನಲ್ಲಿ ಎರಡು ಸ್ಟ್ರಾ ಹಾಕಿ ಕೊಡಲಾಗಿತ್ತು ಗುರು ಕಿರಣ್ ಮೊದಲು ಕುಡಿಯುವ ಪ್ರಯತ್ನ ಮಾಡುತ್ತಾರೆ. ಆದರೆ, ಅಷ್ಟರಲ್ಲಿಯೇ ಸೃಜನ್ ತಕ್ಷಣವೇ 'ಗುರು ಪಲ್ಲವಿಗೂ ಕುಡಿಯಲು ಬಿಡು' ಎಂದು ಕಾಲೆಳೆಯುತ್ತಾರೆ.
ಪಲ್ಲವಿ ಅವರು ಮೂಲತಃ ಉಡುಪಿ ಜಿಲ್ಲೆಯವರು. ಕಾಲೇಜು ದಿನಗಳಲ್ಲಿ ಪಲ್ಲವಿ ಅವರು ಮಿಸ್ ಮಣಿಪಾಲ್ ಕರೀಟ ಪಡೆದುಕೊಂಡಿದ್ದರು. ಕೆಲವು ವರ್ಷಗಳ ಕಾಲ ಅಸ್ಸಾಂನಲ್ಲಿಯೂ ನೆಲೆಸಿದ್ದರು. ತಂದೆ ಬ್ಯಾಂಕ್ ಮ್ಯಾನೇಜರ್ ಅಗಿದ್ದ ಕಾರಣ ಅನೇಕ ರಾಜ್ಯಗಳಲ್ಲಿ ತಮ್ಮ ಜೀವನ ಕಳೆದಿದ್ದಾರೆ. ಪಲ್ಲವಿ ಅವರು ಡಿಗ್ರಿ ಫೈನಲ್ ಪರೀಕ್ಷೆ ಮುಗಿಸುತ್ತಿದ್ದಂತೆ, ಗುರುಕಿರಣ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 20 ವರ್ಷಕ್ಕೆ ಮದುವೆಯಾದ ಪಲ್ಲವಿ ಅವರಿಗೆ ಇಬ್ಬರು ಮಕ್ಕಳಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.