
ಕನ್ನಡ ಕಿರುತೆರೆ ವಾಹಿನಿಯ ಜನಪ್ರಿಯ ನಾಯಕ ಶೈನ್ ಶೆಟ್ಟಿ ತಮ್ಮ ಕನಸಿನ ಕಾರನ್ನು ಖರೀದಿಸಿದ್ದಾರೆ. ತಾಯಿ ಜೊತೆ ಕಾರಿನ ಪಕ್ಕನಿಂತು ಫೋಟೋ ಹಂಚಿಕೊಂಡಿದ್ದಾರೆ. ಶೈನ್ ಲೈಫಲ್ಲಿ ಎಲ್ಲಾ ಇದೆ, ಮಡದಿ ಒಬ್ರು ಮಿಸಿಂಗ್ ಎಂದು ಕಾಲೆಳೆದ ನೆಟ್ಟಿಗರು.
ಬಿಗ್ ಬಾಸ್ ಸೀಸನ್ 7ರ ವಿನ್ನರ್ ಶೈನ್ ಶೆಟ್ಟಿ ಇದೀಗ ನೀಲಿ ಬಣ್ಣದ ಬಿಎಂಡಬ್ಲ್ಯೂ ಕಾರು ಖರೀದಿಸಿದ್ದಾರೆ. ಪಿಂಕ್ ಟೀ-ಶರ್ಟ್ ಹಾಗೂ ವೈಟ್ ಪ್ಯಾಂಟ್‌ನಲ್ಲಿ ಶೈನ್ ಮಿಂಚುತ್ತಿದ್ದಾರೆ. ಬೆಂಗಳೂರಿನ ಬನಶಂಕರಿ ಹಾಗೂ ರಾಜರಾಜೇಶ್ವರಿ ನಗರದಲ್ಲಿ 'ಗಲ್ಲಿ ಕಿಚನ್' ಹೋಟೆಲ್ ಹೊಂದಿರುವ ಶೈನ್ ಅನೇಕ ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾದಲ್ಲಿ ಶೈನ್ ಕೈ ರುಚಿ ಬಗ್ಗೆ ಬರೆದುಕೊಂಡಿದ್ದಾರೆ. 'ಲೈಫಲ್ಲಿ ಎಲ್ಲಾ ಸಿಗ್ತು ಸರ್ ಮದುವೆ ಆದ್ರೆ ಮೇಡಂ ಪಕ್ಕದಲ್ಲಿ ನೀವು ಡ್ರೈವಿಂಗ್ ಸೀಟ್‌ನಲ್ಲಿ ಝೂಮ್ ಆಂತ ಲಾಂಗ್ ಡ್ರೈವ್ ಹೋಗಬಹುದು' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ವೃತ್ತಿ ಜೀವನ ಆರಂಭದಲ್ಲಿ ಕಷ್ಟ ಅನುಭವಿಸಿದ ನಟ ಶೈನ್ ಬಿಗ್ ಬಾಸ್ ಟ್ರೋಫಿ ಕೈ ಸೇರಿದ ನಂತರ ನಸೀಬ್ ಬದಲಾಗಿದದೆ. ಇಷ್ಟು ದಿನ ನಾಯಕನಾಗಿ, ಉದ್ಯಮಿ ಆಗಿ ಮಿಂಚಿದ ಶೈನ್ ಈಗ ನಿರೂಪಣೆ ಲೋಕಕ್ಕು ಎಂಟ್ರಿ ಕೊಟ್ಟಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ಡ್ಯಾನ್ಸ್ ರಿಯಾಲಿಟಿ ಶೋನ ನಿರೂಪಣೆ ಮಾಡುತ್ತಿದ್ದಾರೆ. ನಟಿ ಹರಿಪ್ರಿಯಾ, ಪ್ರಜ್ವಲ್ ದೇವರಾಜ್ ಹಾಗೂ ನಿರ್ದೇಶಕ ಹರ್ಷ ಈ ಕಾರ್ಯಕ್ರಮದ ತೀರ್ಪುಗಾರರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.