ಮನಸು ಮನಸುಗಳ ಸಮ್ಮಿಲನ... ತುಳಸಿ-ಮಾಧವರ ಒಲವಿನ ಗಾನದ ಶೂಟಿಂಗ್​ ವಿಡಿಯೋ ವೈರಲ್​

Published : Nov 22, 2023, 05:31 PM IST
ಮನಸು ಮನಸುಗಳ ಸಮ್ಮಿಲನ... ತುಳಸಿ-ಮಾಧವರ ಒಲವಿನ ಗಾನದ ಶೂಟಿಂಗ್​ ವಿಡಿಯೋ ವೈರಲ್​

ಸಾರಾಂಶ

 'ಶ್ರೀರಸ್ತು- ಶುಭಮಸ್ತು'  ಸೀರಿಯಲ್​ನ  ತುಳಸಿ-ಮಾಧವರ ಒಲವಿನ ಗಾನದ ಶೂಟಿಂಗ್​ ವಿಡಿಯೋದ ಪ್ರೊಮೋ ರಿಲೀಸ್​ ಮಾಡಲಾಗಿದ್ದು, ಸುಧಾರಾಣಿ ಹಾಗೂ ಅಜಿತ್​ ಹಂದೆಯವರು ಹೇಳಿದ್ದೇನು?  

 ಸೊಸೆಯೇ ಖುದ್ದಾಗಿ ವಿಧವೆ ಅತ್ತೆಗೆ ಮತ್ತೊಂದು ಮದುವೆ ಮಾಡಿ ಮಗಳ ರೀತಿಯಲ್ಲಿ ಜವಾಬ್ದಾರಿ ನಿಭಾಯಿಸಿರುವ  ವಿಭಿನ್ನ ಕಥಾ ಹಂದರ ಹೊಂದಿರುವ ಶ್ರೀರಸ್ತು ಶುಭಮಸ್ತು ಸೀರಿಯಲ್​  ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಿದೆ. ಈ ಧಾರಾವಾಹಿಯಲ್ಲಿನ ಎಲ್ಲಾ ಪಾತ್ರಧಾರಿಗಳೂ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮಧ್ಯ ವಯಸ್ಕರ ನಡುವಿನ ಪ್ರೀತಿ, ಮದುವೆ ಹಾಗೂ ಕುಟುಂಬಸ್ಥರು ಮತ್ತು  ಸಮಾಜ ಅವರನ್ನು ಹೇಗೆ ಸ್ವೀಕರಿಸುತ್ತೆ ಎನ್ನುವ ಈ ಧಾರಾವಾಹಿಯ ವಿಷಯ ಹಲವರಿಗೆ ಆಪ್ತವಾಗಿದೆ. ಸೊಸೆ ಎಂದರೆ ಹೀಗಿರಬೇಕು ಎನ್ನುತ್ತಿದ್ದಾರೆ ಹಲವು ಮಹಿಳೆಯರು. ಈ ಧಾರಾವಾಹಿಯ ನಟಿ ತುಳಸಿ ಮದುವೆಯಾಗಿ ಹೋದ ಮೇಲೆ ಪತಿಯ ಮನೆಯ ಕಾರಣದಿಂದ ಹಿಂಸೆ ಅನುಭವಿಸುತ್ತಿದ್ದಾಳೆ ನಿಜ. ಆದರೆ ಎಲ್ಲವೂ ಒಳ್ಳೆಯದಾಗುತ್ತದೆ, ಅದೂ ತುಳಸಿಯಿಂದಲೇ ಎನ್ನುವುದು ಸೀರಿಯಲ್ ಪ್ರಿಯರ ಅನಿಸಿಕೆ. 

 ಓರ್ವ ಮಧ್ಯ ವಯಸ್ಸಿನ ವಿಧವೆ ಅಥವಾ ವಿಧುರ ಮದುವೆಯಾಗುವುದು, ಅದರಲ್ಲಿಯೂ ಮಕ್ಕಳು ಮದ್ವೆಯಾಗಿದ್ದರೆ ಅಥವಾ  ಮದುವೆ ವಯಸ್ಸಿಗೆ ಬಂದ ಸಂದರ್ಭದಲ್ಲಿ ಮದುವೆಯಾಗುವುದು ಎಂದರೆ ಎಷ್ಟೋ ಮಂದಿಗೆ ಅದು ಸಹ್ಯವಾಗದ ಮಾತು. ಚಿಕ್ಕ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡರೂ ಓರ್ವ ಹೆಣ್ಣು ವಿಧವೆಯಾಗಿಯೇ ಜೀವನ ಸವೆಸಬೇಕು ಎನ್ನುವ ಮನಸ್ಥಿತಿ ಹಲವರದ್ದು. ಗಂಡು ಇನ್ನೊಂದು ಮದ್ವೆಯಾಗುವುದನ್ನು ಒಪ್ಪಿದರೂ ಹೆಣ್ಣು ಮಾತ್ರ ಹಾಗೆಯೇ ಇರಬೇಕು ಎನ್ನುವವರೇ ಹೆಚ್ಚು. ಆದರೆ ಇಂದು ಮನಸ್ಸು ಬದಲಾಗುತ್ತಿದೆ, ಬದಲಾಗದಿದ್ದರೂ ಅದನ್ನು ಒಪ್ಪಿಕೊಳ್ಳುವಂತೆ ಕೆಲವು ಹೆಣ್ಣು ಮಕ್ಕಳು ನಡೆ ಇಡುತ್ತಾರೆ. ಅಂಥವುಗಳಲ್ಲಿ ಒಂದು ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಈ ಧಾರಾವಾಹಿ,  ಮೆಚ್ಚಿಕೊಂಡಿರುವವರನ್ನು ನೋಡಿದರೆ ಇಂದು ಬದಲಾಗುತ್ತಿರುವ ಕಾಲಘಟ್ಟದಲ್ಲಿ ಮನಸ್ಥಿತಿಯೂ ಬದಲಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. 

ಮನಸು ಮನಸುಗಳ ಸಮ್ಮಿಲನ ಎನ್ನುತ್ತಲೇ ತುಳಸಿ ಮತ್ತು ಮಾಧವರ ಒಲವಿನ ಗಾನದ ಶೂಟಿಂಗ್​ ನಡೆದಿದ್ದು, ಅದರ ಬಗ್ಗೆ ಖುದ್ದು ಸುಧಾರಾಣಿ ಮತ್ತು ಅಜಿತ್​ ಹಂದೆಯವರು ಮಾಹಿತಿ ನೀಡಿದ್ದಾರೆ.  ಶೂಟಿಂಗ್​ ಹೇಗೆಲ್ಲಾ ನಡೆಯಿತು ಎಂಬ ಬಗ್ಗೆ ತಿಳಿಸಿದ್ದಾರೆ. ಲಿರಿಕಲ್​ ವಿಡಿಯೋ ಸಾಂಗ್​ ಶೂಟ್​ ಮಾಡಿದ್ವಿ ಎಂದ ಸುಧಾರಾಣಿಯವರು, ಸೀರಿಯಲ್​ಗೆ ಒಂದು ಸಾಂಗ್​ ಶೂಟ್​ ಮಾಡ್ತಿರೋದು ಇದೇ ಮೊದಲ ಸಲ ಎಂದು ಹೇಳಿದರು. ಇದನ್ನು ಶೂಟಿಂಗ್​ ಮಾಡುವಾಗ ತುಂಬಾ ಖುಷಿ ಇತ್ತು ಎಂದು ಅವರು ಹೇಳಿದರು. ರೆಗ್ಯಲರ್​ ಕ್ಯಾರೆಕ್ಟರ್​ಗಿಂತ ವಿಭಿನ್ನ ಶೂಟಿಂಗ್​ ಇದು ಎಂದು ಅಜಿತ್​ ಹಂದೆಯವರು ಹೇಳಿದ್ದು, ವಿಭಿನ್ನ ರೀತಿಯಲ್ಲಿ ಶೂಟ್​ ಮಾಡಿರುವ ಇದರ ಹಾಡನ್ನು ಕೇಳುವಂತೆ ಪ್ರೇಕ್ಷಕರಿಗೆ ಮನವಿ ಮಾಡಿಕೊಂಡಿದ್ದಾರೆ. 

ಅಮೃತಧಾರೆ ಭೂಮಿಕಾ ಫುಲ್​ ಟೈಟ್​! ಈ ಕ್ಯಾರೆಕ್ಟರ್​ಗೆ ಇದೆಲ್ಲಾ ಬೇಕಿತ್ತಾ- ಫ್ಯಾನ್ಸ್​ ಆಕ್ರೋಶ

ಇದರ ವಿಡಿಯೋ ಈ ಹಿಂದೆಯೇ ವಾಹಿನಿ ರಿಲೀಸ್​ ಮಾಡಿತ್ತು. ಈ ಪ್ರೋಮೋದಲ್ಲಿ ನಾಯಕ ಮತ್ತು ನಾಯಕಿ ಅರ್ಥಾತ್​ ತುಳಸಿ ಮತ್ತು ಮಾಧವ್​ ಬೇರೆ ಮನೆಯಲ್ಲಿ ಕಾಣಿಸುತ್ತಿದ್ದಾರೆ. ಇವರಿಬ್ಬರ ನಡುವೆ ಅಗಾಧ ಪ್ರೀತಿಯುಂಟಾಗಿದೆ. ತುಳಸಿ ತನ್ನ ಹೆಸರನ್ನು ಇದೇ ಮೊದಲ ಬಾರಿಗೆ ತುಳಸಿ ಮಾಧವ್​ ಎಂದು ಹೇಳಿದ್ದಾಳೆ. ಇಬ್ಬರೂ ಸೇರಿ ದೀಪಾವಳಿ ಆಚರಿಸುತ್ತಿದ್ದಾರೆ. ಒಟ್ಟಿಗೇ ಅಡುಗೆ ಮಾಡುತ್ತಿದ್ದಾರೆ, ಒಟ್ಟಿಗೇ ಟೂರ್​ಗೆ ಹೋಗುತ್ತಿದ್ದಾರೆ. ಈ ಪ್ರೊಮೋ ನೋಡಿದ ಧಾರಾವಾಹಿ ಪ್ರಿಯರು ಇದು ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಇಂಥ ಸಣ್ಣಬುದ್ಧಿ ಸರಿನಾ? ಗಿಲ್ಲಿ ನಟ ಬೇಡಿದರೂ, ಗೋಗರೆದರೂ ಕೇಳಲಿಲ್ಲ: ರಘು ವಿರುದ್ಧ ರೊಚ್ಚಿಗೆದ್ದ ಜನತೆ
BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?