
ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಶ್ರೀರಸ್ತು ಶುಭಮಸ್ತುʼ ಧಾರಾವಾಹಿಯಲ್ಲಿ ಈಗಾಗಲೇ ದೊಡ್ಡ ತಾರಾಬಳಗವೇ ಇದೆ. ಈಗ ಇನ್ನೋರ್ವ ಪಾತ್ರದ ಎಂಟ್ರಿಯಾಗಿದೆ. ಮನೆಗೆ ಬಂದ ದತ್ತನನ್ನು ರೌಡಿಗಳು ಹೊರಗಡೆ ಹಾಕುತ್ತಾರೆ. ಆಗ ಹೊಸ ಪಾತ್ರದ ಎಂಟ್ರಿ ಆಗುವುದು.
ಶ್ರೀರಾಮ್ ದೇಸಾಯಿ ಎಂಟ್ರಿ!
ತರಕಾರಿ ತರಲು ದತ್ತ ಮನೆಯಿಂದ ಹೊರಗಡೆ ಹೋಗುತ್ತಾನೆ. ಆ ನಂತರ ಅವನು ಮನೆಗೆ ಮರಳುತ್ತಾನೆ. ನಿಮ್ಮದು ಹತ್ತು ಲಕ್ಷ ರೂಪಾಯಿ ಸಾಲ ಇದೆ, ಅದನ್ನು ತೀರಿಸಿ ಅಂತ ಸಾಲ ಕೊಟ್ಟವರು ಹೇಳುತ್ತಾರೆ. ಮನೆಯೊಳಗಡೆ ಬರಲು ಪ್ರಯತ್ನಪಟ್ಟ ದತ್ತನನ್ನು ಹೊರಗಡೆ ನೂಕಲಾಗುತ್ತದೆ. ಇನ್ನೇನು ಅವರು ದತ್ತನಿಗೆ ಸಮಸ್ಯೆ ಕೊಡಬೇಕು ಎನ್ನುವಾಗ ಶ್ರೀರಾಮ್ ದೇಸಾಯಿ ಎಂಟ್ರಿ ಆಗುವುದು.
ಏನಾಗುವುದು?
ರೌಡಿಗಳ ಜೊತೆ ʼಸೀತಾರಾಮʼ ಧಾರಾವಾಹಿ ಶ್ರೀರಾಮ್ ದೇಸಾಯಿ ಸಖತ್ ಫೈಟ್ ಮಾಡ್ತಾನೆ. ಕೊನೆಗೂ ಅವನು ದತ್ತನನ್ನು ಕಾಪಾಡುತ್ತಾನೆ. ರೌಡಿಗಳೆಲ್ಲರೂ ಓಡಿಹೋಗುತ್ತಾರೆ. ಆಗ ಶ್ರೀರಾಮ್ ದೇಸಾಯಿ ಹತ್ತು ಲಕ್ಷ ರೂಪಾಯಿ ಕೊಟ್ಟು ಆ ಮನೆಯನ್ನು ದತ್ತನಿಗೆ ಬಿಡಿಸಿಕೊಡ್ತಾನೆ. ಅಷ್ಟೇ ಅಲ್ಲದೆ “ನೀವು ಎಂಥ ಸ್ವಾಭಿಮಾನಿ ಎನ್ನೋದು ಗೊತ್ತಿದೆ. ನಮ್ಮ ಸೂರಿ ತಾತನ ಫ್ರೆಂಡ್” ಎಂದು ಹೇಳುತ್ತಾನೆ. ಶ್ರೀರಾಮ್ ಸಹಾಯ ದತ್ತನಿಗೆ ಖುಷಿ ಕೊಡುವುದು.
ಕಥೆ ಎತ್ತ ಸಾಗುತ್ತಿದೆ?
ಸಿರಿ ತಂದೆಯನ್ನು ಶಾರ್ವರಿಯೇ ಸಾಯಿಸಿದ್ದಾಳೆ. ಈ ವಿಷಯ ತುಳಸಿಗೆ ಗೊತ್ತು. ಇನ್ನು ತುಳಸಿ ಮಗ ಸಮರ್ಥ್ ಹಾಗೂ ಮಾಧವ್ ಮಕ್ಕಳು ಒಂದಾಗಿದ್ದಾರೆ. ಇವರೆಲ್ಲರ ಬಂಧ ಗಟ್ಟಿಯಾಗುತ್ತಿದೆ. ಇನ್ನೊಂದು ಕಡೆ ಶಾರ್ವರಿಯ ಮೋಸ ಎಲ್ಲರೆದುರು ಬಯಲಾಗತ್ತಾ ಅಂತ ಕಾದು ನೋಡಬೇಕಿದೆ. ಪೂರ್ಣಿ ಮನೆ ಬಿಟ್ಟು ಹೋಗಲು ರೆಡಿಯಾಗಿದ್ದು, ನಿಜಕ್ಕೂ ಅವಳು ಅವಿನಾಶ್ ಜೀವನದಿಂದ ದೂರ ಆಗ್ತಾಳಾ? ಇಲ್ಲವಾ ಎಂದು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಈ ಧಾರಾವಾಹಿಯಲ್ಲಿ ರೋಚಕ ಕಥೆ ಸಾಗುತ್ತಿದೆ.
ಭೂಮಿ ಮಿಸ್ ಬದ್ಲು ಗೌತಮ್ಗೆ ಜೋಡಿಯಾಗ್ತಾಳಾ ರಾಧಾ ಮಿಸ್ಸು? ಇದೇನಿದು ಅಮೃತಧಾರೆ ಟ್ವಿಸ್ಟು?
ಪಾತ್ರಧಾರಿಗಳು
ಶಾರ್ವರಿ ಪಾತ್ರದಲ್ಲಿ ಸಪ್ನಾ ದೀಕ್ಷಿತ್, ಮಾಧವ್ ಪಾತ್ರದಲ್ಲಿ ಅಜಿತ್ ಹಂದೆ, ತುಳಸಿ ಪಾತ್ರದಲ್ಲಿ ಸುಧಾರಾಣಿ, ಪೂರ್ಣಿ ಪಾತ್ರದಲ್ಲಿ ಲಾವಣ್ಯಾ ಭಾರದ್ವಾಜ್, ಸಮರ್ಥ್ ಪಾತ್ರದಲ್ಲಿ ದರ್ಶಿತ್ ಗೌಡ, ಸಿರಿ ಪಾತ್ರದಲ್ಲಿ ಚಂದನಾ ರಾಘವೇಂದ್ರ ಅವರು ನಟಿಸುತ್ತಿದ್ದಾರೆ.
ಒಂದು ಧಾರಾವಾಹಿಯಲ್ಲಿ ನಟಿಸುವ ಕಲಾವಿದರು ಇನ್ನೊಂದು ಧಾರಾವಾಹಿಯಲ್ಲಿ ಅತಿಥಿ ಪಾತ್ರ ಮಾಡೋದು ಹೊಸತೇನಲ್ಲ. ಸೀತಾರಾಮ ಧಾರಾವಾಹಿಯಲ್ಲಿ ಅಮೃತಧಾರೆ ಧಾರಾವಾಹಿಯ ಭೂಮಿಕಾ, ಅಮೃತಧಾರೆ ಧಾರಾವಾಹಿಯಲ್ಲಿ ಸೀತಾರಾಮ ಧಾರಾವಾಹಿ ಸೀತಾ, ಸಿಹಿ ಇನ್ನು ಅಣ್ಣಯ್ಯ ಧಾರಾವಾಹಿಯಲ್ಲಿ ಅಮೃತಧಾರೆ ಧಾರಾವಾಹಿ ಭೂಮಿಕಾ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯಲ್ಲಿ ಸೀತಾರಾಮ ಧಾರಾವಾಹಿ ಶ್ರೀರಾಮ್ ದೇಸಾಯಿ ಕಾಣಿಸಿಕೊಂಡಿದ್ದರು. ಸೀತಾರಾಮ ಧಾರಾವಾಹಿಯಲ್ಲಿ ಸಿಹಿ ಸತ್ತು ಗಂಧರ್ವ ದೇವತೆ ಆಗಿದ್ದಾಳೆ. ಮಗಳು ಸತ್ತಿರೋ ವಿಷಯ ಸೀತಾಗೆ ಗೊತ್ತಿಲ್ಲ. ಸಿಹಿ ಥರ ಇರೋ ಸುಬ್ಬಿ ಈ ಮನೆ ಸೇರಿದ್ದಾಳೆ. ಸುಬ್ಬಿ ಸತ್ಯವನ್ನು ಕೆದಕುತ್ತಿರುವ ಭಾರ್ಗವಿಯೇ ಸಿಹಿ ಕೊಲೆ ಮಾಡಿರೋದು ಎನ್ನುವ ವಿಚಾರ ಯಾವಾಗ ರಿವೀಲ್ ಆಗತ್ತೆ ಅಂತ ಕಾದು ನೋಡಬೇಕಿದೆ. ಒಟ್ಟಿನಲ್ಲಿ ಸೀರಿಯಲ್ ಸಾಕಷ್ಟು ಕುತೂಹಲ ಕಾದುಕೊಂಡು ಸಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.