ಬಾಲ್ಯದಿಂದಲೂ ಕಂಡ ಕನಸನ್ನು ಕುಟುಂಬಕ್ಕಾಗಿ ಹೆಣ್ಣು ತ್ಯಾಗ ಮಾಡೋದು ಸರೀನಾ? ಇದು ಅನಿವಾರ್ಯನಾ?

By Suvarna NewsFirst Published Feb 24, 2024, 12:13 PM IST
Highlights

ಪೊಲೀಸ್​​ ಅಧಿಕಾರಿಯಾಗುವ ಕನಸನ್ನು ಕುಟುಂಬಕ್ಕಾಗಿ ತ್ಯಾಗ ಮಾಡಲೇಬೇಕಾದ ಅನಿವಾರ್ಯತೆ ಸತ್ಯನಿಗೆ ಬಂದಿದೆ. ಸೊಸೆಯೇ ತ್ಯಾಗ ಮಾಡಬೇಕು ಎನ್ನುವ ಮಾತು ಬಂದಿದೆ. ಇದು ಸರಿನಾ?
 

ಆಕೆಗೆ ಬಾಲ್ಯದಿಂದಲೂ ಪೊಲೀಸ್​ ಅಧಿಕಾರಿಯಾಗುವ ಕನಸು. ಇದು ಆಕೆಯ ಅಪ್ಪನ ಕನಸು ಕೂಡ. ಮೊದಲಿನಿಂದಲೂ ಗಂಡು ಮಗನ ರೀತಿಯಲ್ಲಿಯೇ ಬೆಳೆದವಳು ಆಕೆ. ಅಪ್ಪನ ಗ್ಯಾರೆಜ್​ ಕೆಲಸವನ್ನು ನಿಭಾಯಿಸಿ ಮನೆಯ ಜವಾಬ್ದಾರಿ ಹೊತ್ತುಕೊಂಡವಳು ಅವಳು. ಥೇಟ್​ ಗಂಡುಬೀರಿಯಂತೆ ಬೆಳೆದಳು. ಅನ್ಯಾಯ ಎಲ್ಲಿಯೇ ನಡೆದರೂ ಅಂಥವರನ್ನು ಮಟ್ಟಹಾಕುತ್ತಲೇ ಬೆಳೆದಳು. ಕೊನೆಗೊಂದು ದಿನ, ಜೀವನದ ವಿಚಿತ್ರ ತಿರುವಿನಲ್ಲಿ ಅಪ್ಪಟ ಸಂಪ್ರದಾಯಬದ್ಧ ಮನೆಗೆ ಸೊಸೆಯಾಗಿ ಹೋದಳು. ಅಲ್ಲಿ ಗಂಡುಬೀರಿತನವನ್ನು ಬದಿಗಿಟ್ಟು, ಸಂಪ್ರದಾಯಸ್ಥ ಗೃಹಿಣಿಯಾಗಿ ಹೊಂದಿಕೊಳ್ಳಲು ಸಾಕಷ್ಟುಹೆಣಗಾಡಿದಳು. ಚಿಕ್ಕತ್ತೆ, ಮಾವ ಬಿಟ್ಟರೆ ಗಂಡ, ಅತ್ತೆ ಸೇರಿದಂತೆ ಯಾರಿಗೂ ಬೇಡವಾದಳಾಗಿಯೇ ಸಾಗಿದಳು. ಕಾಲಚಕ್ರ ಉರುಳುತ್ತಿದ್ದಂತೆಯೇ ತಾನೂ ಸಂಪ್ರದಾಯಸ್ಥ ಮನೆಗೆ ಗೃಹಿಣಿಯಾಗಿ ಬಾಳಲು ಸಾಧ್ಯ ಎನ್ನುವುದನ್ನು ಸಾಬೀತು ಮಾಡಿ, ಗಂಡ- ಅತ್ತೆ ಸೇರಿದಂತೆ ಎಲ್ಲರ ಪ್ರೀತಿ ಗಳಿಸಿದಳು. ಎಲ್ಲರಿಗೂ ಈಕೆ ಎಂದರೆ ಅಚ್ಚುಮೆಚ್ಚು ಎನ್ನುವಂತಾಯಿತು.

ಇದು ಹೆಣ್ಣಿನ ಒಂದು ಹಂತ. ಅತ್ತೆಯ  ಮನೆಯ ಸಂಪ್ರದಾಯಕ್ಕೆ ಹೊಂದಿಕೊಳ್ಳಲು ಇಷ್ಟುವರ್ಷ ತನ್ನತನವನ್ನು ಬಿಟ್ಟು ಹೋರಾಡಿದ ಈ ಹೆಣ್ಣುಮಗಳಿಗೆ ಈಗ ಇನ್ನೊಂದು ಅಗ್ನಿ ಪರೀಕ್ಷೆ. ಓದುವುದನ್ನು ಅರ್ಧಕ್ಕೆ ನಿಲ್ಲಿಸಿದ್ದ ಈಕೆ, ಈಗ ಓದಿ, ಪೊಲೀಸ್​ ಪರೀಕ್ಷೆಯನ್ನೂ ಬರೆದು, ಅದರಲ್ಲಿ ಪಾಸ್​ ಆಗಿದ್ದಾಳೆ. ಪೊಲೀಸ್​ ಕೆಲಸಕ್ಕೆ ಅರ್ಹತೆಯೂ ಸಿಕ್ಕಿದೆ. ಒಂದು ವರ್ಷದ ತರಬೇತಿಗಾಗಿ ಆಕೆಗೆ ಕರೆ ಬಂದಿದೆ. ಆದರೆ? ಇಲ್ಲೂ ಆಕೆ ತ್ಯಾಗ ಮಾಡಬೇಕಾದ ಅನಿವಾರ್ಯತೆ. ಪೊಲೀಸ್​ ಕೆಲಸಕ್ಕೆ ತನ್ನ ಮುದ್ದು ಸೊಸೆಯನ್ನು ಕಳುಹಿಸಲು ಅತ್ತೆಗೆ ಇಷ್ಟವಿಲ್ಲ. ಇದು ಸಿಕ್ಕಾಪಟ್ಟೆ ಟೆನ್ಷನ್​ ಕೆಲಸ ಮಾತ್ರವಲ್ಲದೇ ಸದಾ ಮನೆಯಿಂದ ಹೊರಕ್ಕೆ ಇರಬೇಕು ಎನ್ನುವ ಕಾರಣಕ್ಕೆ, ಬೇರೆ ಏನಾದ್ರೂ ಕೆಲಸ ಮಾಡು ಓಕೆ, ಆದರೆ ಪೊಲೀಸ್​ ಕೆಲ್ಸ ಬೇಡ ಅನ್ನುತ್ತಿದ್ದಾಳೆ. ಇವಳ ಅಮ್ಮನೋ ಅತ್ತೆ ಮಾತನ್ನು ಕೇಳು ಅಂತಿದ್ದಾಳೆ. 

ಸತ್ಯ ಸೀರಿಯಲ್​ನಲ್ಲಿ ಪೊಲೀಸ್​ ಪಾತ್ರಕ್ಕೆ ಇಷ್ಟು ಕಷ್ಟಪಟ್ಟಿದ್ದಾರಾ ನಟಿ? ತೆರೆಯ ಹಿಂದಿನ ವಿಡಿಯೋ ರಿಲೀಸ್​

ಬೇರೆ ಹೆಣ್ಣುಮಕ್ಕಳಂತೆಯೇ ಮನೆ ಮತ್ತು ಉದ್ಯೋಗವನ್ನು ಸಂಭಾಳಿಸುತ್ತೇನೆ ಎನ್ನುತ್ತಿದ್ದಾಳೆ ಸೊಸೆ. ಆದರೆ ಒಂದು ವರ್ಷ ಮನೆಯಿಂದ ಹೊರಕ್ಕೆ ಇರಬೇಕಾದ ಸ್ಥಿತಿಯಲ್ಲಿ ಮನೆಯನ್ನು ಹೇಗೆ ಸಂಭಾಳಿಸಲು ಸಾಧ್ಯ ಎನ್ನುವುದು ಪ್ರಶ್ನೆ. ಅತ್ತೆ ಅಥವಾ ಸೊಸೆ ಇಬ್ಬರಲ್ಲಿ ಒಬ್ಬರು ತ್ಯಾಗ ಮಾಡಲೇಬೇಕಾದ ಸ್ಥಿತಿ. ಅದಕ್ಕಾಗಿ ಸೊಸೆಯೇ ತ್ಯಾಗ ಮಾಡಬೇಕು ಎಂಬ ಮಾತು ಎದುರಾಗಿದೆ. ಹಾಗಿದ್ದರೆ ಹೆಣ್ಣಿನ ಜನ್ಮ ಇಷ್ಟೆನಾ? ಬಾಲ್ಯದಲ್ಲಿ ಕಂಡ ಕನಸು ನನಸಾಗುವ ಹೊತ್ತಿನಲ್ಲಿ, ಕುಟುಂಬಕ್ಕಾಗಿ ತ್ಯಾಗ ಅನಿವಾರ್ಯನಾ? 

ಇದು ಸತ್ಯ ಸೀರಿಯಲ್​ ಕಥೆ. ಇದೀಗ ಸತ್ಯ ಮತ್ತು ಅತ್ತೆ ಸೀತಾಳ ನಡುವೆ ಬಿರುಕು ಬಂದಿರುವ ಸಮಯ. ಇದೇ ಸಮಯಕ್ಕೆ ಪಾರು ಸೀರಿಯಲ್​ ಅತ್ತೆ ಅಖಿಲಾಂಡೇಶ್ವರಿ ಎಂಟ್ರಿ ಆಗಿದ್ದು, ಸೊಸೆಯೇ ತ್ಯಾಗ ಮಾಡಬೇಕು ಎನ್ನುತ್ತಿದ್ದಾಳೆ. ಸೀತಾಳಿಗೆ ಸೊಸೆಯನ್ನು ಬಿಟ್ಟು ಇರುವುದು ಕಷ್ಟ ಜೊತೆಗೆ ಪೊಲೀಸ್​ ಕೆಲಸದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವ ಚಿಂತೆ. ಅಖಿಲಾಂಡೇಶ್ವರಿಗೆ ಈಕೆ ಒಂದು ವರ್ಷ ಮನೆ ಬಿಟ್ಟು ಇದ್ದರೆ ಅವಳ ಕರ್ತವ್ಯ ಯಾರು ನಿಭಾಯಿಸುತ್ತಾರೆ ಎನ್ನುವ ಪ್ರಶ್ನೆ. ಒಟ್ಟಿನಲ್ಲಿ ಸತ್ಯಳಿಗೆ ಅತ್ತೆಯ ಸಪೋರ್ಟ್​ ಇಲ್ಲವಾಗಿದೆ. ಕನಸನ್ನು ನೀನೇ ನುಚ್ಚು ನೂರು ಮಾಡು ಎಂದು ಅಖಿಲಾಂಡೇಶ್ವರಿ ಹೇಳಿದ್ದಾಳೆ. ಹಾಗಿದ್ದರೆ ಹೆಣ್ಣಿನ ಬಾಳು ಇಷ್ಟೆನಾ ಎಂದು ಪ್ರೊಮೋ ನೋಡಿದ ನೆಟ್ಟಿಗರು ಕೇಳ್ತಿದ್ದಾರೆ. ನಿಮಗೇನು ಅನ್ನಿಸತ್ತೆ? 

ಪ್ರೀತಿನಾ? ಮನೆಯವರಾ? ನಿಮ್ಮ ಆಯ್ಕೆ ಯಾವುದು? ಪ್ರೇಕ್ಷಕರು ಹೇಳಿದ್ದೇನು, ನಿಮ್ಮ ನಿಲುವೇನು?

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!