ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮಿ ಸೀರಿಯಲ್ ನಲ್ಲಿ ಶ್ರೇಷ್ಠಾ, ಜೀವ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾಳೆ. ಕಟ್ಟಡದ ಮೇಲೆ ನಿಂತು ತಾಂಡವ್ ಗೆ ಮೆಸ್ಸೇಜ್ ಮಾಡಿದ್ದಾಳೆ. ಇದ್ರಿಂದ ತಾಂಡವ್ ಟೆನ್ಷನ್ ಹೆಚ್ಚಾಗಿದೆ.
ಕಲರ್ಸ್ ಕನ್ನಡ ಭಾಗ್ಯಲಕ್ಷ್ಮೀ ಸೀರಿಯಲ್ (Colors Kannada Bhagyalakshmi Serial) ನಲ್ಲಿ ಶ್ರೇಷ್ಠಾ, ಬ್ಲಾಕ್ಮೇಲ್ ಆಟ ಶುರು ಮಾಡಿದಂತಿದೆ. ಮದುವೆ ಆಗು ಅಂತ ತಾಂಡವ್ ಗೆ ಕಾಟ ಕೊಟ್ಟಿದ್ದ ಶ್ರೇಷ್ಠಾ, ಭಾಗ್ಯಾ ಮುಂದೆ ಸೋತಿದ್ದಾಳೆ. ಈಗ ಜೀವ ತೆಗೆದುಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾಳೆ. ತಾಂಡವ್ ಗೆ ಮೆಸ್ಸೇಜ್ ಕಳುಹಿಸಿರುವ ಶ್ರೇಷ್ಠಾ, ಕಟ್ಟಡದ ಮೇಲೆ ನಿಂತು ಜಿಗಿಯುವ ಯತ್ನ ಮಾಡಿದ್ದಾಳೆ. ತನ್ವಿಗೆ ಕಾಲೇಜಿ (College) ನಲ್ಲಿ ಸೀಟು ಕೊಡಿಸುವ ಪ್ರಯತ್ನದಲ್ಲಿರುವ ಭಾಗ್ಯಾ, ಶ್ರೇಷ್ಠಾಳ ಹುಚ್ಚಾಟಕ್ಕೆ ಮಣಿದು ಮತ್ತೆ ತಾಂಡವ್ ಹಾಗೂ ಶ್ರೇಷ್ಠಾ ಮದುವೆ ಮಾಡಿಸ್ತಾಳಾ ಎಂಬ ಭಯ ವೀಕ್ಷಕರಿಗೆ ಶುರುವಾಗಿದೆ.
ಕಲರ್ಸ್ ಕನ್ನಡ ಇಂದಿನ ಪ್ರೋಮೋ (Promo) ಬಿಡುಗಡೆ ಮಾಡಿದೆ. ಇದ್ರಲ್ಲಿ ಭಾಗ್ಯಾ ಹಾಗೂ ತಾಂಡವ್, ತನ್ವಿ ಕಾಲೇಜಿನಲ್ಲಿದ್ದಾರೆ. ತನ್ವಿಗೆ ಇನ್ನೊಂದು ಅವಕಾಶ ನೀಡುವಂತೆ ಭಾಗ್ಯಾ ಕೈಮುಗಿದು ಕೇಳ್ತಿದ್ದಾಳೆ. ಈ ಸಮಯದಲ್ಲಿ ಶ್ರೇಷ್ಠಾ, ತಾಂಡವ್ ಗೆ ಪದೇ ಪದೇ ಕರೆ ಮಾಡ್ತಾಳೆ. ಎಷ್ಟೇ ಫೋನ್ ಮಾಡಿದ್ರೂ ತಾಂಡವ್ ಕರೆ ಸ್ವೀಕರಿಸೋದಿಲ್ಲ. ಇದ್ರಿಂದ ಬೇಸರಗೊಂಡ ಶ್ರೇಷ್ಠಾ, ಮನೆ ಟೆರೆಸ್ ಏರಿದ್ದಾಳೆ. ತಾಂಡವ್ ಗೆ ಮೆಸ್ಸೇಜ್ ಮಾಡಿ, ತಾನು ಆತ್ಮಹತ್ಯೆ ಮಾಡಿಕೊಳ್ತೇನೆ ಎಂದಿದ್ದಾಳೆ. ನಾಣು ಆತ್ಮಹತ್ಯೆ ಮಾಡಿಕೊಳ್ತಿದ್ದೇನೆ, ನಿಮ್ಮ ಶ್ರೇಷ್ಠಾ ಎಂದು ಮೆಸ್ಸೇಜ್ ಓದಿದ ತಾಂಡವ್ ಬೆವರಿದ್ದಾನೆ. ಕಾಲೇಜಿನಿಂದ ಶ್ರೇಷ್ಠಾ ಮನೆಯತ್ತ ಕಾರ್ ಓಡಿಸ್ತಿದ್ದಾನೆ.
undefined
ಸೀನಿಯರ್ಸ್ ಯಾವತ್ತಿಗೂ ಸೀನಿಯರ್ಸೇ, ಜೂನಿಯರ್ ಯಶ್‌ಗೆ ಬುದ್ಧಿ ಹೇಳಿದ್ದ ಸೀನಿಯರ್ ಸುದೀಪ್!
ತಾಂಡವ್ ಪಡೆಯಲು ಶ್ರೇಷ್ಠಾ ಕೊನೆ ಪ್ರಯತ್ನ ಇದು. ಇಷ್ಟು ದಿನ ಒಂದಲ್ಲ ಒಂದು ನಾಟಕ ಆಡಿ, ತಾಂಡವ್ ಮದುವೆ ಆಗುವ ಎಲ್ಲ ಪ್ರಯತ್ನ ನಡೆಸಿದ್ದ ಶ್ರೇಷ್ಠಾ ವಿಫಲವಾಗಿದ್ದಾಳೆ. ಈಗ ಆತ್ಮಹತ್ಯೆ ನಾಟಕ ಶುರು ಮಾಡಿದಂತಿದೆ. ಒಂದ್ವೇಳೆ ಶ್ರೇಷ್ಠಾ ನಿಜವಾಗ್ಲೂ ಆತ್ಮಹತ್ಯೆ ಮಾಡ್ಕೊಂಡ್ರೆ ತಾಂಡವ್ ಮತ್ತೆ ಜೈಲು ಸೇರಬೇಕಾಗುತ್ತೆ. ಒಂದ್ಕಡೆ ಹೆಂಡತಿ ಇನ್ನೊಂದು ಕಡೆ ಶ್ರೇಷ್ಠಾ ಕಾಟಕ್ಕೆ ತಾಂಡವ್ ಸುಸ್ತಾಗಿದ್ದಾನೆ. ಇಷ್ಟಾದ್ರೂ ಶ್ರೇಷ್ಠಾ ಬಿಡಲು ತಾಂಡವ್ ಮನಸ್ಸು ಮಾಡ್ತಿಲ್ಲ. ಭಾಗ್ಯಾಗೆ ಬುದ್ಧಿ ಕಲಿಸುವ ಆತುರದಲ್ಲಿ ತಾಂಡವ್ ಇದ್ದಾನೆ. ಶ್ರೇಷ್ಠಾ ಈ ಪ್ರೀತಿಗೆ ಭಾಗ್ಯಾ ಕರಗಿ, ತ್ಯಾಗಮಯಿ ಆಗಿ, ತಾಂಡವ್ ಹಾಗೂ ಶ್ರೇಷ್ಠಾ ಮದುವೆ ಮಾಡಿಸುವ ಸಾಧ್ಯತೆಯನ್ನೂ ಅಲ್ಲಗಳೆಯಲು ಸಾಧ್ಯವಿಲ್ಲ.
ಪ್ರೊಮೋ ನೋಡಿದ ವೀಕ್ಷಕರು ಮಾತ್ರ ಶ್ರೇಷ್ಠಾ ಸತ್ತೋಗು ಎನ್ನುತ್ತಿದ್ದಾರೆ. ತಾಂಡವ್ ಗೆ ಭಾಗ್ಯಾ ಹಾಗೂ ಶ್ರೇಷ್ಠಾ ಎರಡೂ ಕಡೆಯಿಂದ ಪೊಲೀಸ್ ಠಾಣೆ ಏರುವ ಭಾಗ್ಯ ಬಂದಿದೆ ಎಂದು ಕಮೆಂಟ್ ಮಾಡಿದ್ದಾರೆ. ಮಕ್ಕಳ ಪ್ರೀತಿಗೂ ತಾಂಡವ್ ಕರಗುತ್ತಿಲ್ಲ. ಅವನಿಗೆ ಈ ಜನ್ಮದಲ್ಲಿ ಬುದ್ದಿ ಬರೋದಿಲ್ಲ ಎನ್ನುತ್ತಿದ್ದಾರೆ. ತನ್ವಿ ಸಮಸ್ಯೆಯೊಂದು ಮುಗಿದ್ರೆ ಭಾಗ್ಯಾ, ಇಬ್ಬರಿಗೂ ಸರಿಯಾಗಿ ಪಾಠ ಕಲಿಸ್ತಾಳೆ ನೋಡ್ತಾ ಇರಿ ಎನ್ನುತ್ತಿದ್ದಾರೆ ವೀಕ್ಷಕರು.
ಫ್ಯಾನ್ಸ್ಗೆ ಸಿಕ್ಕಾಪಟ್ಟೆ ಟೆನ್ಷನ್ ಕೊಟ್ಟ ಭಾಗ್ಯ-ತಾಂಡವ್ ಒಂದಾಗಿ ಬಿಟ್ರಾ? ಕುಣಿದು ಕುಪ್ಪಳಿಸಿದ
ಭಾಗ್ಯಾ ಹಾಗೂ ತಾಂಡವ್ ಬೇರೆಯಾದ್ಮೇಲೆ ಕಾಲೇಜಿನಲ್ಲಿ ಗಲಾಟೆ ಮಾಡ್ಕೊಂಡಿದ್ದ ತನ್ವಿಯನ್ನು ಕಾಲೇಜಿನಿಂದ ಹೊರಗೆ ಹಾಕಲಾಗಿದೆ. ತನ್ವಿಯನ್ನು ಮತ್ತೆ ಕಾಲೇಜಿಗೆ ಸೇರಿಸುವ ಪ್ರಯತ್ನವನ್ನು ಭಾಗ್ಯಾ ಮಾಡ್ತಿದ್ದಾಳೆ. ಆದ್ರೆ ತಾಂಡವ್ ಇದಕ್ಕೆ ಸಾಥ್ ನೀಡ್ತಿಲ್ಲ. ನಾನು ಕಾಲೇಜಿಗೆ ಬರೋದಿಲ್ಲ ಎಂದಿದ್ದ ತಾಂಡವ್ ಗೆ ಮಕ್ಕಳ ಜೀವನ ಹಾಳು ಮಾಡಬಾರದು ಎಂದು ಬುದ್ಧಿ ಹೇಳಿರುವ ಭಾಗ್ಯಾ, ಅಂತೂ ಇಂತೂ ಕಾಲೇಜಿಗೆ ಕರೆದುಕೊಂಡು ಬಂದಿದ್ದಾಳೆ. ಆದ್ರೆ ಅಲ್ಲಿಯೂ ತಾಂಡವ್ ತನ್ನ ಬುದ್ಧಿ ಬಿಟ್ಟಿಲ್ಲ. ಅವನ ಮಾತಿಗೆ ಭಾಗ್ಯಾ ಶಾಕ್ ಆಗಿದ್ದಾಳೆ. ಹೇಗಾದ್ರೂ ಮಾಡಿ ತನ್ವಿಯನ್ನು ಕಾಲೇಜಿಗೆ ಸೇರಿಸಬೇಕು ಎಂಬುದೇ ಭಾಗ್ಯಾಳ ಸದ್ಯದ ಗುರಿ. ಈ ಮಧ್ಯೆ ಶ್ರೇಷ್ಠಾ ಹೊಸ ನಾಟಕ ಸೀರಿಯಲ್ ಗೆ ಯಾವ ತಿರುವು ನೀಡುತ್ತೆ ಕಾದು ನೋಡ್ಬೇಕಿದೆ.