ಇತ್ತ ಪ್ರಿಯ ಪತ್ನಿ ಕಾಲು, ಅತ್ತ ಮುದ್ದು ನಾಯಿಯ ಕತ್ತು... ಆ್ಯಂಕರ್​ ನಿರಂಜನ್​ ರೀಲ್ಸ್​ ನೋಡಿ ಸುಸ್ತಾದ ಫ್ಯಾನ್ಸ್​!

By Suchethana D  |  First Published Jun 2, 2024, 4:57 PM IST

ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿರುವ ಆ್ಯಂಕರ್​ ನಿರಂಜನ್​ ದೇಶಪಾಂಡೆ ಮತ್ತು ಪತ್ನಿ ಯಶಸ್ವಿನಿ ರೀಲ್ಸ್​ ಶೇರ್​ ಮಾಡಿದ್ದು, ಕಮೆಂಟ್​ಗಳ ಸುರಿಮಳೆಯಾಗಿದೆ.  ಏನದು?
 


ತಮ್ಮ ಮಾತುಗಾರಿಕೆ, ಹಾಸ್ಯದಿಂದಲೇ ಸಖತ್ ಫೇಮಸ್ ಆಗಿರೋ, ತಮ್ಮ ಪಟ್ ಪಟಾಕಿ ಮಾತುಗಳು, ಕಾಮಿಡಿ, ಉತ್ತಮ ನಿರೂಪಣಾ ಶೈಲಿಯಿಂದ ಜನರ ಮನಗೆದ್ದಿರುವ  ಕನ್ನಡ ಕಿರುತೆರೆ ಜನಪ್ರಿಯ ನಿರೂಪಕ ನಿರಂಜನ್ ದೇಶಪಾಂಡೆ ಮತ್ತು ಅವರ ಪತ್ನಿ ಯಶಸ್ವಿನಿ ಅವರದ್ದು ಸಕತ್​ ಜೋಡಿ. ಮದುವೆಯಾಗಿ ಏಳು ವರ್ಷಗಳಾದರೂ ನವ ದಂಪತಿಯಂತೆ ಇಬ್ಬರೂ ಆಗಾಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಹಲವು ವಿಡಿಯೋಗಳನ್ನು ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇವರಿಬ್ಬರೂ  ಸಾಮಾಜಿಕ ಜಾಲತಾಣದಲ್ಲಿ  ಆಕ್ಟಿವ್ ಆಗಿದ್ದಾರೆ.  ಗಿಚ್ಚಿ ಗಿಲಿಗಿಲಿಯಲ್ಲಿ ಷೋನಲ್ಲಿ ಸ್ಪರ್ಧಿಯಾಗಿದ್ದ ಈ ಜೋಡಿ ಶೂಟಿಂಗ್, ಫ್ರೀ ಟೈಂ, ಶಾಪಿಂಗ್, ಅಡುಗೆ ಹೀಗೆ ವಿಭಿನ್ನ ವಿಡಿಯೋಗಳನ್ನು ಅಪ್ಲೋಡ್ ಮಾಡಿ ಫಾಲೋವರ್ಸ್‌ಗೆ ಮನೋರಂಜನೆ ನೀಡುತ್ತಾರೆ. 

ಇದೀಗ ಸೋಫಾದ ಮೇಲೆ ಮಲಗಿರುವ ನಿರಂಜನ್​ ಅವರು ಒಂದು ಕೈಯಲ್ಲಿ ಪತ್ನಿಯ ಕಾಲು ಒತ್ತುತ್ತಿದ್ದರೆ, ಇನ್ನೊಂದು ಕೈಯಲ್ಲಿ ನಾಯಿಯ ಮೈಮೇಲೆ ಪ್ರೀತಿಯಿಂದ ಕೈಯಾಡಿಸುತ್ತ ಮುದ್ದು ಮಾಡುತ್ತಿರುವ  ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಹ್ಯಾಪ್ಪಿ ಫ್ಯಾಮಿಲಿ ಹೆಸರಿನಲ್ಲಿ ಯಶಸ್ವಿನಿಯವರು ಈ ವಿಡಿಯೋ ಶೇರ್​ ಮಾಡಿಕೊಂಡಿದ್ದು, ಇದಕ್ಕೆ ಥಹರೇವಾರಿ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. ಇವರಿಬ್ಬರ ಮುದ್ದಾದ ಜೋಡಿ ನೋಡಿ, ಅಭಿಮಾನಿಗಳು ಯಾರ ದೃಷ್ಟಿಯೂ ಬೀಳದಿರಲಿ, ನಿಬ್ಬಿಬ್ಬರ ಜೋಡಿ ಹೀಗೆ ನೂರ್ಕಾಲ ಬಾಳಿ ಎಂದು ಅಭಿಮಾನಿಗಳು ಕಮೆಂಟ್​ನಲ್ಲಿ ಪ್ರೀತಿಯ ಧಾರೆಯನ್ನೇ ಹರಿಸುತ್ತಿದ್ದಾರೆ. 

Tap to resize

Latest Videos

ಬಿಗ್​ಬಾಸ್​ ನೀತು ವನಜಾಕ್ಷಿ ಲವ್​ ಮಾಡ್ತಿದ್ದಾರಾ? ಮದ್ವೆಯಾಗೋ ಯೋಚ್ನೆ ಇದ್ಯಾ? ನಟಿಯ ಮನದಾಳದ ಮಾತು ಇಲ್ಲಿದೆ...

 
ಇನ್ನು ಈ ಜೋಡಿಯ ಮದುವೆಯ ವಿಷಯವೂ ಸಕತ್​ ಇಂಟರೆಸ್ಟಿಂಗ್​ ಆಗಿಯೇ  ಇದೆ. 2017ರಲ್ಲಿ ನಡೆದ 'ಬಿಗ್ ಬಾಸ್ ಕನ್ನಡ ಸೀಸನ್ 4'  ಮೂಲಕ ಜನಪ್ರಿಯತೆ ಗಳಿಸಿದ್ದ ನಿರಂಜನ್ ಈ ಷೋದಿಂದ ಹೊರಬಂದ ಬಳಿಕ  ಯಶಸ್ವಿನಿ ಜೊತೆ ಮದುವೆಯಾಗಿದ್ದಾರೆ. ಮದುವೆಯ ಬಗ್ಗೆ ಮೊದಲೇ ಡಿಸೈಡ್​ ಆಗಿತ್ತು. ಆದರೆ ಮದುವೆ ಫಿಕ್ಸ್​ ಆಗುತ್ತಲೇ ಬಿಗ್​ಬಾಸ್​ನಿಂದ ಆಫರ್​ ಬಂದಿತ್ತು. ಆದ್ದರಿಂದ ಮದುವೆ ಡೇಟ್​ ಮುಂದಕ್ಕೆ ಹಾಕಿದ್ದರು.  ಬಳಿಕ ಇವರು ಇಬ್ಬರ ಪ್ರೀತಿಗೆ ಕಾರಣವಾದ ಮಜಾ ಭಾರತ ಶೂಟಿಂಗ್ ಸೆಟ್ ನಲ್ಲೇ ಮದ್ವೆಯಾಗಿದ್ದರು. ಇಷ್ಟ ವರ್ಷಗಳಾದರೂ ದಂಪತಿ ಕಾಲೆಳೆದುಕೊಳ್ಳುತ್ತಾ ಎಂಜಾಯ್​ ಮಾಡುತ್ತಿದ್ದಾರೆ.
  
 ಇನ್ನು ಆ್ಯಂಕರ್​ ನಿರಂಜನ್​ ಅವರ ಕುರಿತು ಹೇಳುವುದಾದರೆ, ಇವರು ಸೀರಿಯಲ್​​ ಹಾಗೂ ಸಿನಿಮಾ ನಟರೂ ಹೌದು. 'ಮಿಲನ' ಧಾರಾವಾಹಿ, 'ಬೊಂಬೆ ಮಿಠಾಯಿ' ಸಿನಿಮಾದಲ್ಲಿಯೂ ನಿರಂಜನ್ ನಟಿಸಿದ್ದಾರೆ. ಪತ್ನಿ ಯಶಸ್ವಿನಿ ಅವರು ಡಾನ್ಸರ್​.  
ಮದುಮಗಳಾದ ಆ್ಯಂಕರ್​ ಅನುಶ್ರೀ ವಿಡಿಯೋ ವೈರಲ್​! ಗುಟ್ಟಾಗಿ ಮದುವೆ ನಡೆದೋಯ್ತಾ ಕೇಳ್ತಿದ್ದಾರೆ ಫ್ಯಾನ್ಸ್​...

click me!