ರೊಮ್ಯಾಂಟಿಕ್ ಮೂಡ್ನಲ್ಲಿ ಶ್ರೀರಸ್ತು ಶುಭಮಸ್ತು ಪೂರ್ಣಿ ಪತಿಯ ಜೊತೆ ರೀಲ್ಸ್ ಮಾಡಿದರೆ, ಹನಿಮೂನ್ ಮೂಡ್ ಮುಗಿದಿಲ್ವಾ ಕೇಳ್ತಿದ್ದಾರೆ ಫ್ಯಾನ್ಸ್
ಪೂರ್ಣಿ ಎಂದರೆ ಸಾಕು, ಶ್ರೀರಸ್ತು ಶುಭಮಸ್ತುವಿನ ಒಳ್ಳೆಯ, ಮುಗ್ಧ ಸೊಸೆಯೇ ನೆನಪಾಗುತ್ತಾಳೆ. ಇವರ ನಿಜವಾದ ಹೆಸರು ಲಾವಣ್ಯ ಭಾರಧ್ವಜ್. ಸೀರಿಯಲ್ನಲ್ಲಿ ಅವಿ ಪತಿಯಾದ್ರೆ ನಿಜ ಜೀವನದಲ್ಲಿ ಇವರ ಪತಿ ಶಶಿಧರ್ ಹೆಗ್ಡೆ. ಶಶಿಧರ್ ಅವರು ಅಮೃತಧಾರೆ ಸೀರಿಯಲ್ನಲ್ಲಿ ಮಹಿಮಾ ಪತಿಯಾಗಿ ಆ್ಯಕ್ಟ್ ಮಾಡುತ್ತಿದ್ದಾರೆ. ಇದೀಗ ಲಾವಣ್ಯ ಮತ್ತು ಶಶಿಧರ್ ಅವರು ಕೆಲ ದಿನಗಳ ಹಿಂದಷ್ಟೇ ಹನಿಮೂನ್ ಮುಗಿಸಿದ್ದಾರೆ. ತಮ್ಮ ಎರಡನೇ ವಿವಾಹ ವಾರ್ಷಿಕೊತ್ಸವದ ಸಂಭ್ರಮದಲ್ಲಿರೋ ಈ ತಾರಾ ಜೋಡಿ ಕಾಶ್ಮೀರಕ್ಕೆ ತೆರಳಿ ಎಂಜಾಯ್ ಮಾಡಿದ್ದಾರೆ.
ಮನಾಲಿಗೆ ಹೋಗಬೇಕೆನ್ನೋದು ಲಾವಣ್ಯ ಅವರ ಬಹುದಿನಗಳ ಕನಸು. ಮದುವೆಯಾಗೋ ಮೊದಲೇ ಹನಿಮೂನ್ ಗೆ ಮನಾಲಿ ಹೋಗಬೇಕೆಂದು ಪ್ಲ್ಯಾನ್ ಮಾಡಿದ್ದ ಲಾವಣ್ಯ, ಆದ್ರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಲಾವಣ್ಯ ಮಗು ಬೇಕಂದ್ರೆ ಮನಾಲಿ ಮತ್ತೊಂದು ಫಾರಿನ್ ಟ್ರಿಪ್ ಮಾಡ್ಲೇಬೇಕು ಎಂದಿದ್ದರು. ಶಶಿ ಮತ್ತು ಲಾವಣ್ಯ ಇಬ್ಬರೂ ನಟರೇ ಇಬ್ಬರೂ ರಾಜಾ ರಾಣಿ ಸೀರಿಯಲ್ ನಲ್ಲಿ ಜೊತೆಯಾಗಿ ಅಣ್ಣ ತಂಗಿಯಾಗಿ ನಟಿಸುತ್ತಿದ್ದ ಸಮಯದಲ್ಲಿ ಲವ್ವಲ್ಲಿ ಬಿದ್ದಿದ್ದ ಈ ಜೋಡಿ, ನಂತರ ಪೋಷಕರ ಒಪ್ಪಿಗೆ ಪಡೆದು 2022 ರಲ್ಲಿ ಇಬ್ಬರೂ ಮದುವೆನೂ ಆದ್ರು. ಇದೀಗ ಎರಡನೇ ವರ್ಷದ ಸಂಭ್ರಮದಲ್ಲಿದ್ದಾರೆ ಜೋಡಿ. ಸೋಷಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟೀವ್ ಆಗಿರುವ ಲಾವಣ್ಯ ಅವರು ಪತಿಯ ಜೊತೆ ಇಂಗ್ಲಿಷ್ ಹಾಡಿಗೆ ರೀಲ್ಸ್ ಮಾಡಿದ್ದಾರೆ. ರೊಮ್ಯಾಂಟಿಕ್ ಮೂಡ್ ಇನ್ನೂ ಮುಗಿದಿಲ್ವಾ ಕೇಳ್ತಿದ್ದಾರೆ ಫ್ಯಾನ್ಸ್. ಇವರಿಬ್ಬರ ಜೋಡಿಗೆ ಭೇಷ್ ಭೇಷ್ ಎನ್ನುತ್ತಿದ್ದಾರೆ. ಲವ್ ಡೇಟಿಂಗ್ ಮಾಡಿ 4 ವರ್ಷ ಮತ್ತು ಮದುವೆಯಾಗಿ ಎರಡು ವರ್ಷ ಪೂರ್ಣಗೊಳಿಸಿರುವ ಈ ಜೋಡಿ ಝೀ ಕನ್ನಡದ ಜೋಡಿ ನಂ 1 ಸೀಸನ್ 2ನಲ್ಲೂ ಸಹ ಭಾಗವಹಿಸಿದ್ದು, ವಿಜೇತರಾಗಿ ಹೊರಹೊಮ್ಮಿದ್ದರು. ಇದೀಗ ವಾರ್ಷಿಕೋತ್ಸವ ಸಂಭ್ರಮಿಸುತ್ತಿರುವ ಈ ಜೋಡಿಗೆ ಯಾವುದೇ ದೃಷ್ಟಿ ಬೀಳದೆ, ನೂರಾರು ಕಾಲ ಸುಖವಾಗಿ ಬಾಳಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.
ಈ ಏಳು ಗುಣವಿದ್ದರೆ ಸುಹಾನಾ ಖಾನ್ ಜೊತೆ ಡೇಟಿಂಗ್ ಮಾಡಲು ಅಪ್ಪ ಶಾರುಖ್ ಗ್ರೀನ್ ಸಿಗ್ನಲ್!
ಕೆಲ ದಿನಗಳ ಹಿಂದೆ ಶಶಿ ಮತ್ತು ಲಾವಣ್ಯ ದಂಪತಿ ಜೋಡಿ ನಂಬರ್ 1 ವೇದಿಕೆ ಮೇಲೆ ಪ್ರೇಮದ ಕಿಚ್ಚು ಹೊತ್ತಿಸಿದ್ದರು. ನಂತರ ರಾಗಿ ಹೊಲದಲ್ಲಿ ಜೋಡಿ ಡ್ಯಾನ್ಸ್ ಮಾಡಿತ್ತು. ರಾಗಿ ಹೊಲದಾಗೆ ಕಾಲಿ ಗುಡಿಸಲು ಹಾಡಿಗೆ ಸಕತ್ ರೊಮ್ಯಾಂಟಿಕ್ ಮೂಡ್ನಲ್ಲಿ ಜೋಡಿ ಕಂಡು ಬಂದಿತ್ತು. ಅಣ್ಣಯ್ಯ ಚಿತ್ರದ ಈ ಹಾಡಿಗೆ ಶಶಿ ಮತ್ತು ಲಾವಣ್ಯ ದಂಪತಿ ಹೆಜ್ಜೆ ಹಾಕಿದ್ದು, ಫ್ಯಾನ್ಸ್ ಭೇಷ್ ಭೇಷ್ ಎಂದಿದ್ದರು. ನಂತರ ಈ ಜೋಡಿ ಸಕತ್ ರೊಮ್ಯಾನ್ಸ್ ಮಾಡಿದ್ದು, ಈ ರೊಮ್ಯಾನ್ಸ್ಗೆ ಅಭಿಮಾನಿಗಳು ಫಿದಾ ಆಗಿದ್ದರೆ, ಕೆಲವರು ಇಂಥದ್ದೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಬೇಕಾ ಅಂತನೂ ಕೇಳಿದ್ದರು.
ಇದೇ ವೇದಿಕೆಯಲ್ಲಿ ಶಶಿ-ಲಾವಣ್ಯ ದಂಪತಿ ತಮ್ಮ ಹಲವು ಪರ್ಸನಲ್ ವಿಷಯಗಳನ್ನು ಶೇರ್ ಮಾಡಿಕೊಂಡಿದ್ದರು. ಮದುವೆ ಮತ್ತು ಫಸ್ಟ್ನೈಟ್ ಬಗ್ಗೆ ಶಶಿ ಅವರು ಮಾತನಾಡಿದ್ದರು. ಫಸ್ಟ್ ನೈಟ್‌ನಲ್ಲಿ ಈಕೆಯ ಕಸಿನ್ಸ್ ನನ್ನನ್ನು ಅಡ್ಡಗಟ್ಟಿ ಒಳಗೆ ಹೆಂಡತಿಯನ್ನ ಬಿಡಬೇಕೆಂದರೆ ಒಬ್ಬೊಬ್ಬರಿಗೆ 4 ಸಾವಿರ ಕೊಡಬೇಕು ಅಂತ ಕೇಳಿದ್ದರು, ಆಮೇಲೆ ಸೆಟಲ್‌ಮೆಂಟ್ ಮಾಡಿಕೊಂಡಿದ್ದರು. ನಾನು ಒಳಗೆ ಹೋದ್ಮೇಲೆ ಅಲ್ಲಿ ಬೆಡ್ ಬದಲು ಥರ್ಮೊಕಾಲ್ ಬಬಲ್ಸ್ ಹಾಕಿದ್ದರು. ಕೂತಾಗ ಬಬಲ್ಸ್ ಹಾರಿಬಿಡ್ತು. ಮಧ್ಯರಾತ್ರಿ 3 ಗಂಟೆವರೆಗೂ ಅದನ್ನೆಲ್ಲಾ ಕ್ಲೀನ್ ಮಾಡ್ತಿದ್ವಿ ಎಂದು ನೆನಪಿಸಿಕೊಂಡಿದ್ದರು. ಅದೇ ರೀತಿ ಹನಿಮೂನ್‌ಗೆ ಮಾಲ್ದೀವ್ಸ್ ಹೋಗುವ ಕನಸನ್ನು ಇನ್ನೂ ಪತಿ ನೆರವೇರಿಸಿಲ್ಲ ಎಂದು ಲಾವಣ್ಯ ವೇದಿಕೆಯ ಮೇಲೆ ಬೇಸರ ವ್ಯಕ್ತಪಡಿಸಿದ್ದರು.
ಅಬ್ಬಬ್ಬಾ.. ಈ ಪರಿ ರೊಮ್ಯಾನ್ಸಾ? ವಿಡಿಯೋ ನೋಡಿ ಕಂಟ್ರೋಲ್.. ಕಂಟ್ರೋಲ್ ಅಂತಿದ್ದಾರೆ ಫ್ಯಾನ್ಸ್!