Latest Videos

ಇಂಥ ಹೆಂಡ್ತಿ ಇದ್ರೆ ಯಾವ ಗಂಡ ತಾನೇ ಸಹಿಸ್ತಾನೆ? ಅಯ್ಯೋ ಪಾಪ ಅಂತಿದ್ದವರೇ ಉಲ್ಟಾ ಹೊಡೆದುಬಿಟ್ರಲ್ಲಾ!

By Suchethana DFirst Published May 27, 2024, 5:22 PM IST
Highlights

ಭಾಗ್ಯಲಕ್ಷ್ಮಿಯ ಭಾಗ್ಯಳ ಪರವಾಗಿದ್ದ ವೀಕ್ಷಕರು ಈಗ ತಿರುಗಿ ಬಿದ್ದಿದ್ದಾರೆ. ಇಂಥ ಹೆಂಡ್ತಿ ಇದ್ರೆ ಯಾವ ಗಂಡ ತಾನೇ ಸಹಿಸ್ತಾನೆ ಅಂತಿದ್ದಾರೆ. ಅಷ್ಟಕ್ಕೂ ಏನಾಯ್ತು?
 

 ಒಬ್ಬಳನ್ನು ಮುಗ್ಧೆ ಎಂದು   ತೋರಿಸಬೇಕು ಎಂದರೆ ಅವಳನ್ನು ಅತೀ ಎನಿಸುವಷ್ಟು ತೋರಿಸುವುದು, ವಿಲನ್‌ ಎಂದು ತೋರಿಸಬೇಕು ಅಂದರೆ ಅಗತ್ಯಕ್ಕಿಂತ ಹೆಚ್ಚಾಗಿ ಕೆಟ್ಟವಳಾಗಿ ತೋರಿಸುವುದು ಬಹುತೇಕ ಎಲ್ಲಾ ಸೀರಿಯಲ್‌ಗಳಲ್ಲಿಯೂ ಸಾಮಾನ್ಯವೇ ಆಗಿಹೋಗಿದೆ. ಆದರೆ ಮುಗ್ಧೆ ಎನ್ನುವ ಹೆಸರಿನಲ್ಲಿ ಅತೀ ಎನಿಸುವಷ್ಟು ಪೆದ್ದು ಎಂದು ತೋರಿಸುವುದು ಕೂಡ ಕೆಲ ಸೀರಿಯಲ್‌ಗಳಲ್ಲಿ ಊಹೆಗೆ ನಿಲುಕದ್ದು. ತುಂಬಾ ಒಳ್ಳೆಯವಳು, ಎಲ್ಲರಿಗೂ ಸಹಾಯ ಮಾಡುತ್ತಾಳೆ, ಯಾರೂ ಮೋಸ ಮಾಡಿದರೂ ಅದರ ಅರಿವೇ ಇರುವುದಿಲ್ಲ... ಹೀಗೆಲ್ಲವೂ ಓಕೆ. ಆದರೆ ಪ್ರತಿ ಹೆಜ್ಜೆಯಲ್ಲಿಯೂ, ಚಿಕ್ಕಪುಟ್ಟ ವಿಷಯಗಳಲ್ಲಿಯೂ ಅತಿಯಾಗಿ ದಡ್ಡರಂತೆ ತೋರಿಸುವುದು ಮಾಮೂಲಾಗಿದೆ. ಇದಕ್ಕೆ ಸಾಕ್ಷಿಯಾಗಿರುವುದು ಭಾಗ್ಯಲಕ್ಷ್ಮಿ ಸೀರಿಯಲ್‌.

ಇಲ್ಲಿಯವರೆಗೆ ಭಾಗ್ಯಳಿಗೆ ಬಂದಿರುವ ಸಂಕಷ್ಟವನ್ನು ನೋಡಿ ನೆಟ್ಟಿಗರು ಅಯ್ಯೋ ಪಾಪ ಎನ್ನುತ್ತಿದ್ದರು. ಆದರೆ ಯಾಕೋ ಇತ್ತೀಚಿನ ಕೆಲವು ಎಪಿಸೋಡ್‌ಗಳನ್ನು ನೋಡಿದ ಮೇಲೆ ಭಾಗ್ಯಳ ವಿರುದ್ಧವೇ ಸೀರಿಯಲ್‌ ಫ್ಯಾನ್ಸ್‌ ತಿರುಗಿ ಬಿದ್ದಿದ್ದಾರೆ. ಭಾಗ್ಯಳದ್ದು ಮುಗ್ಧತೆ ಅಲ್ಲ, ಇದು ಪೆದ್ದು, ದಡ್ಡತನದ ಪರಮಾವಧಿ ಎಂದಿರುವ ಸೀರಿಯಲ್‌ ಪ್ರೇಮಿಗಳು, ಇಂಥ ಪತ್ನಿಯ ಜೊತೆ ಯಾವ ಗಂಡ ತಾನೆ ಸಂಸಾರ ಮಾಡುತ್ತಾನೆ, ಅದಕ್ಕೇ ತಾಂಡವ್‌ ಇನ್ನೊಬ್ಬಳನ್ನು ಹುಡುಕಿಕೊಂಡು ಹೋಗಿರುವುದು ಎನ್ನುತ್ತಿದ್ದಾರೆ. ಇನ್ನು ಕೆಲವರು ಈ ಕಮೆಂಟಿಗೆ ತಿರುಗೇಟು ನೀಡಿದ್ದು, ಎರಡು ಮಕ್ಕಳಾದ ಮೇಲೆ, 16 ವರ್ಷ ಸಂಸಾರ ಮಾಡಿದ ಮೇಲೆ ಇದು ಗೊತ್ತಾಯ್ತಾ ಎಂದು ಕೇಳುತ್ತಿದ್ದಾರೆ.

ಮಾಲಾ ಟಮ್​ ಟಮ್​ ಎಂದ ಸೀತಾರಾಮ ಪ್ರಿಯಾ: ನಿಮ್​ ನೋಡಿ ಎದೆ ಡಬ್​ ಡಬ್​ ಆಯ್ತು ಎಂದ ಫ್ಯಾನ್ಸ್​

ಅಷ್ಟಕ್ಕೂ ಆಗಿದ್ದೇನೆಂದರೆ,  ವೇಟ್ರೆಸ್​ ಕೆಲಸವನ್ನು ಭಾಗ್ಯಳಿಗೆ ನೀಡಲಾಗಿದೆ. ಬರುವ ಗ್ರಾಹಕರು ಇಂಗ್ಲಿಷ್​ನಲ್ಲಿ ಮಾತನಾಡುತ್ತಿದ್ದಾರೆ. ಅವರು ಆರ್ಡರ್​ ಮಾಡುವ ತಿನಿಸು ಯಾವುದು ಎಂದು ಭಾಗ್ಯಳಿಗೆ ತಿಳಿಯುವುದಿಲ್ಲ. ಇದರಿಂದ ಪರದಾಡುತ್ತಿದ್ದಾಳೆ ಭಾಗ್ಯ. ನನಗೆ ಆರ್ಡರ್‌ ತೆಗೆದುಕೊಳ್ಳುವುದಕ್ಕಿಂತ ಅಡುಗೆ ಮಾಡುವುದು ಚೆನ್ನಾಗಿ ಬರುತ್ತದೆ. ಅದನ್ನೇ ಮಾಡುತ್ತೇನೆ ಎಂದು ಶೆಫ್​ಗೆ ಹೇಳುತ್ತಾಳೆ. ಅವನು ಈಕೆಯನ್ನು ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಳ್ಳುತ್ತಾನೆ. ಒಟ್ಟಿನಲ್ಲಿ ಕೆಲಸವಂತೂ ಭಾಗ್ಯಳಿಗೆ ಬೇಕೇ ಬೇಕು. ಏಕೆಂದರೆ, ಗಂಡ- ಹೆಂಡತಿ ನಡುವೆ ಬಿರುಕು ಮೂಡಿದೆ. ಮನೆ ಎರಡು ಭಾಗವಾಗಿದೆ. ಅಷ್ಟಕ್ಕೂ ಈಗ ಭಾಗ್ಯಳ ಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ. ಮನೆಯ ಅರ್ಧ ಇಎಂಐ ನಾನೇ ಕಟ್ಟುತ್ತೇನೆ ಎಂದು ಪತಿ ತಾಂಡವ್​ ಎದುರು ಭಾಗ್ಯ ಒಪ್ಪಿಕೊಂಡು ಬಂದಿದ್ದಾಳೆ. ಈಕೆ ಹೇಗಾದರೂ ಮಾಡಿ ದುಡಿಯಲೇಬೇಕು. ಹೇಗೆ ದುಡಿಯುವುದು ಎನ್ನುತ್ತಿರುವಾಗಲೇ ಅಚಾನಕ್​ ಆಗಿ ಸ್ಟಾರ್​ ಹೋಟೆಲ್​ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾಳೆ. ಆದರೆ ಅಲ್ಲಿ ಪರದಾಡುತ್ತಿದ್ದಾಳೆ. 

ಯಾರೋ ಭಗಾಯಾ ಎಂಬಾಕೆಯ ಸಿವಿ ನೋಡಿ ಭಾಗ್ಯಳಿಗೆ ಕೆಲಸ ಸಿಕ್ಕಿತ್ತು. ಅಲ್ಲಿರುವವರು ಎಲ್ಲರೂ ಭಗಾಯಾ ಭಗಾಯಾ ಎನ್ನುತ್ತಲೇ ಇದ್ದರು. ಸಾಲದು ಎನ್ನುವುದಕ್ಕೆ ಕಾಲೇಜಿನ ಬಗ್ಗೆ, ಹೋಟೆಲ್‌ ಮ್ಯಾನೇಜ್‌ಮೆಂಟ್‌ ಬಗ್ಗೆ ಎಲ್ಲಾ ಮಾತನಾಡಿದ್ದರು. ಎಲ್ಲರೂ ತನ್ನಲ್ಲಿ ಇವುಗಳನ್ನು ಕೇಳುತ್ತಿದ್ದರೂ ಈ ಭಾಗ್ಯಳಿಗೆ ಸ್ವಲ್ಪವೂ ಡೌಟ್‌ ಬಂದಿಲ್ಲ ಎಂದರೆ ಅವಳು ಯಾವ ಪರಿಯ ದಡ್ಡಿ ಇರಬಹುದು ಎನ್ನುವುದು ವೀಕ್ಷಕರ ಪ್ರಶ್ನೆ. ದಡ್ಡತನಕ್ಕೂ ಒಂದು ಮಿತಿ ಇದೆ. ಎಲ್ಲರೂ ತನ್ನ ಬಗ್ಗೆ ಹಾಗೂ ಸಿವಿಯ ಬಗ್ಗೆ ಓಪನ್‌ ಆಗಿ ಮಾತನಾಡಿದಾಗಲಾದರೂ ತನ್ನನ್ನು ಬೇರೆ ಯಾರೋ ಎಂದು ಅಂದುಕೊಳ್ಳುತ್ತಿದ್ದಾರೆ ಎನ್ನುವ ಸಣ್ಣ ಸುಳಿವೂ ಭಾಗ್ಯಳಿಗೆ ಸಿಕ್ಕಿಲ್ಲ ಎಂದರೆ ಇದು ಪೆದ್ದುತನದ ಪರಮಾವಧಿ ಅಲ್ಲವೇ ಎಂಬುದು ನೆಟ್ಟಿಗರ ಪ್ರಶ್ನೆ. ಇದೀಗ ಇದೇ ಪೆದ್ದುತನದಿಂದ ಭಾಗ್ಯ ಕೆಲಸ ಕಳೆದುಕೊಳ್ಳುವಂತಾಗಿದೆ. ಹಿತಾಳಿಗೆ ಅಸಲಿಯತ್ತು ಗೊತ್ತಾಗಿ, ಭಾಗ್ಯಳಿಗೆ ಛೀಮಾರಿ ಹಾಕಿ ಕಳಿಸಿದ್ದಾಳೆ. ಅತ್ತ ಅತ್ತೆಯೂ ಕೆಲಸ ಕಳೆದುಕೊಂಡಿದ್ದಾಳೆ. ಇತ್ತ ಭಾಗ್ಯಳಿಗೂ ಕೆಲಸವಿಲ್ಲ. ಆದರೆ ಸೀರಿಯಲ್‌ ಕಥೆಯನ್ನು ಬಿಟ್ಟು ಇದೀಗ ಭಾಗ್ಯಳ ವಿರುದ್ಧ ತಿರುಗಿ ಬಿದ್ದಿರುವ ಸೀರಿಯಲ್‌ ಪ್ರೇಮಿಗಳು ತಾಂಡವ್‌ ಪರ ವಹಿಸಿಕೊಳ್ಳುತ್ತಿದ್ದಾರೆ! 

ಸಖಿಯೇ, ನನ್ನ ಕಣ್ಣನ್ನು ನೀನಾಗೇ ಓದಿಬಿಡು.. ಎಂದ ಸೀತಾರಾಮ ಅಶೋಕ: ನಾನ್‌ ರೆಡಿ ಅಂತಿದ್ದಾರೆ ಲಲನೆಯರು...
 

click me!