
ಅಶೋಕ ಈ ಹೆಸರು ಕೇಳಿದರೆ ಸೀರಿಯಲ್ ಪ್ರಿಯರ ಕಣ್ಣಮುಂದೆ ಬರುವುದು ಅಪ್ಪಟ ಅಪರಂಜಿ ಸ್ನೇಹಿತ ಸೀತಾರಾಮ ಸೀರಿಯಲ್ ಅಶೋಕ್. ಸ್ನೇಹಿತ ರಾಮ್‌ಗಾಗಿ ಪ್ರಾಣ ಕೊಡಲೂ ಸಿದ್ಧವಿರುವ ಇಂಥ ಸ್ನೇಹಿತ ನಮಗೂ ಇದ್ದರೆ ಎಷ್ಟು ಚೆನ್ನ ಎನ್ನುವವರೇ ಎಲ್ಲರೂ. ಅದೇ ಪ್ರಿಯಾಳನ್ನು ಮದುವೆಯಾದ ಮೇಲೆ ಆಡಿದ ಒಂದೊಂದು ಮಾತುಗಳಿಗೂ ಮಹಿಳಾ ಫ್ಯಾನ್ಸ್ ಫಿದಾ ಆಗಿಬಿಟ್ಟಿದ್ದಾರೆ. ಇದ್ದರೆ ಇಂಥ ಗಂಡ ಇರಬೇಕು ಎನ್ನುತ್ತಿದ್ದಾರೆ. ಯುವತಿ ಮದ್ವೆಯಾದ ಮೇಲೆ ಗಂಡನಿಗಾಗಿ ಯಾಕೆ ಬದಲಾಗಬೇಕು ಇತ್ಯಾದಿ ಡೈಲಾಗ್‌ಗಳು ಸೀರಿಯಲ್ ಪ್ರೇಮಿಗಳ ಅದರಲ್ಲಿಯೂ ಹೆಚ್ಚಾಗಿ ಮಹಿಳೆಯರ ಹೃದಯಕ್ಕೆ ನೇರವಾಗಿ ನಾಟಿ ಬಿಟ್ಟಿದೆ.
ಅಂದಹಾಗೆ ಸೀತಾರಾಮ ಸೀರಿಯಲ್ ಅಶೋಕ್ ಅವರ ನಿಜಯವಾದ ಹೆಸರು ಕೂಡ ಅಶೋಕ ಶರ್ಮಾ. ಇದೀಗ ಅಶೋಕ್ ಅವರು ಫೇಮಸ್ ಸಖಿಯೇ.. ಸಖಿಯೇ... ಹಾಡಿಗೆ ರೀಲ್ಸ್ ಮಾಡಿದ್ದಾರೆ. ಇದು ಸಕತ್ ವೈರಲ್ ಆಗಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ. ಸಖಿಯೇ... ನನ್ನ ಕಣ್ಣನ್ನು ನೀನಾಗೇ ಓದಿಬಿಡು... ಎಂದರೆ ಯುವತಿಯರು ನಾನ್ ರೆಡಿ ಎನ್ನುತ್ತಿದ್ದಾರೆ. ಇವರ ರೀಲ್ಸ್‌ಗೆ ಸಕತ್ ರಿಸ್‌ಪಾನ್ಸ್ ಬಂದಿದೆ. ಇಷ್ಟು ಸುಂದರವಾಗಿ ಡ್ಯಾನ್ಸ್ ಮಾಡುತ್ತೀರಿ ಎಂದು ಗೊತ್ತೇ ಇರಲಿಲ್ಲ ಎನ್ನುತ್ತಿದ್ದಾರೆ.
Birthday Girl Sanjana Burli: ನಟಿಯಾಗೋದು ಹೇಗೆಂದು ಗೂಗಲ್ನಲ್ಲಿ ಸರ್ಚ್ ಮಾಡ್ತಿದ್ರಂತೆ ಪುಟ್ಟಕ್ಕನ ಮಗಳು!
ಅಶೋಕ್ ಅವರು ರೀಲ್ ಲೈಫ್‌ನಲ್ಲಿ ಪ್ರಿಯಾ ಜೊತೆ ಮದ್ವೆಯಾಗಿದ್ದರೂ, ರಿಯಲ್ ಲೈಫ್ ಮದುವೆ ಇನ್ನೂ ಸಸ್ಪೆನ್ಸ್ ಆಗಿದೆ. ಪೂಜಾ ಎನ್ನುವವರ ಜೊತೆ ಮದುವೆಯಾಗಿದೆ ಎನ್ನಲಾಗುತ್ತಿದ್ದರೂ, ಈ ಬಗ್ಗೆ ಅಧಿಕೃತವಾಗಿ ಎಲ್ಲೂ ಗೊತ್ತಿಲ್ಲ, ಈ ಬಗ್ಗೆ ನಟ ಕೂಡ ಎಲ್ಲಿಯೂ ಬಹಿರಂಗಪಡಿಸಲಿಲ್ಲ. ನಟಿಸ್ತಿರೋರು ಅಶೋಕ್ ಶರ್ಮಾ (Ashok Sharma) ಅವರು ಇದಾಗಲೇ ಹಲವಾರು ಸೀರಿಯಲ್, ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅವಲಕ್ಕಿ ಪವಲಕ್ಕಿ, ವಾತ್ಸಲ್ಯ, SSLC ನನ್ ಮಕ್ಕಳು, ಮರಳಿ ಮನಸಾಗಿದೆ ಸೇರಿ ಹಲವು ಸೀರಿಯಲ್ ಗಳಲ್ಲಿ ನಟಿಸಿರುವ ಅಶೋಕ್ ಗೆ ಭರ್ಜರಿ ಜನಪ್ರಿಯತೆ ತಂದುಕೊಟ್ಟಿದ್ದು ಸೀತಾ ರಾಮ ಸೀರಿಯಲ್ ಅಶೋಕ್ ಪಾತ್ರ. ಇವರೊಬ್ಬ ಸಿಂಗರ್ ಕೂಡ ಹೌದು. ಹಲವಾರು ಆಕ್ರೆಸ್ಟ್ರಾ ಕಾರ್ಯಕ್ರಮಗಳಿಗೆ ಹಾಡಿದ್ದಾರೆ. ಕನ್ನಡ ಸಿನಿಮಾಗಳಿಗೂ ಹಿನ್ನೆಲೆ ಗಾಯಕರಾಗಿದ್ದಾರೆ. ಅಲ್ಲದೇ ಭಾರಿ ವೈರಲ್ ಆಗಿದ್ದ ಜಿಂಗ್ ಚಿಕ, ಜಿಂಗ್ ಚಿಕಾ ಹಾಡನ್ನು ಹಾಡಿದ್ದು ಕೂಡ ಇದೇ ಅಶೋಕ್.
ಇಲೆಕ್ಟ್ರಾನಿಕ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಶೋಕ್, ಬಳಿಕ ಹಣಕ್ಕಾಗಿ ಆಕ್ರೆಸ್ಟ್ರಾ ಗಾಯಕರಾದರು, ಬಳಿಕ ಕೀಬೋರ್ಡ್ ಕಲಿತು, ಮಕ್ಕಳಿಗೆ ಹೇಳಿಯೂ ಕೊಡುತ್ತಿದ್ದರು, ಅದಾದ ಬಳಿಕ ನಿರೂಪಕರಾಗಿಯೂ ಅಶೋಕ್ ಗುರುತಿಸಿಕೊಂಡಿದ್ದಾರೆ. ಸುವರ್ಣ, ರಾಜ್ ಮ್ಯೂಸಿಕ್ ನಲ್ಲಿ ಕಾರ್ಯಕ್ರಮಗಳ ನಿರೂಪಣೆ ಮಾಡಿದ ಅನುಭವ ಕೂಡ ಇವರಿಗಿದೆ. ರಾಕಿಂಗ್ ಸ್ಟಾರ್ ಯಶ್ ಅವರ ಖಾಸಾ ದೋಸ್ತ್ ಆಗಿರುವ ಅಶೋಕ್ ಶರ್ಮಾ, ಇವರಿಬ್ಬರ ಸ್ನೇಹ 20 ವರ್ಷಗಳಷ್ಟು ಹಳೆಯದ್ದೆಂದು ಹೇಳುತ್ತಾರೆ. ಯಶ್ ಅಭಿನಯದ ಮಿ, ಆಂಡ್ ಮಿಸಸ್ ರಾಮಾಚಾರಿಯಿಂದ ಹಿಡಿದು ಕೆಜಿಎಫ್ ವರೆಗೂ ಹಲವು ಸಿನಿಮಾಗಳಲ್ಲಿ ಸಹ ಅಶೋಕ್ ನಟಿಸಿದ್ದಾರೆ.
ಮಾಲಾ ಟಮ್ ಟಮ್ ಎಂದ ಸೀತಾರಾಮ ಪ್ರಿಯಾ: ನಿಮ್ ನೋಡಿ ಎದೆ ಡಬ್ ಡಬ್ ಆಯ್ತು ಎಂದ ಫ್ಯಾನ್ಸ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.