ಹನಿಮೂನ್​ಗೆ ಹೋಗಲು ಆಗಿಲ್ವಾ? ಇಲ್ಲಿಂದ್ಲೇ ನೋಡಿ ಮನಾಲಿ ಸಿಸ್ಸು ವಾಟರ್​ಫಾಲ್ಸ್​ ಅಂತಿದೆ ಈ ತಾರಾ ಜೋಡಿ!

By Suchethana D  |  First Published Jun 4, 2024, 9:35 PM IST

ಹನಿಮೂನ್​ಗೆ ಹೋಗಿದ್ದ  ಶ್ರೀರಸ್ತು ಶುಭಮಸ್ತು ಸೀರಿಯಲ್​ ಪೂರ್ಣಿ ಅರ್ಥಾತ್​ ಲಾವಣ್ಯ ಭಾರಧ್ವಾಜ ಹಾಗೂ ಅಮೃತಧಾರೆ ಜೀವಾ ಅರ್ಥಾತ್​  ಶಶಿ ಹೆಗ್ಡೆ ಸಿಸ್ಸು ವಾಟರ್​ಫಾಲ್ಸ್​ ದರ್ಶನ ಮಾಡಿಸಿದ್ದಾರೆ ನೋಡಿ..  
 


ಹಿಮಾಚಲ ಪ್ರದೇಶದಲ್ಲಿರುವ ಮನಾಲಿ ಎಂದರೆ ನಿಸರ್ಗ ಪ್ರಿಯರಿಗೆ ಅಚ್ಚುಮೆಚ್ಚು. ಅದರಲ್ಲಿಯೂ ಇಲ್ಲಿ ಹನಿಮೂನ್​ ಸ್ಪಾಟ್​ ಕೂಡ.  ಯಾವ ವಿದೇಶ ತಾಣಗಳಿಗೂ ಕಡಿಮೆ ಇಲ್ಲ ಇಲ್ಲಿಯ ಸೌಂದರ್ಯ. ದಟ್ಟವಾದ ಕಾಡುಗಳು, ದೇವದಾರು ವೃಕ್ಷಗಳು, ಬೃಹದಾಕಾರದ ಬಂಡೆಗಳು ಮನಸ್ಸಿಗೆ ಹಿತವೆನಿಸುತ್ತದೆ. ಇಲ್ಲಿನ ನಿಸರ್ಗ ಮಾತ್ರವಲ್ಲದೇ,.  ಸಾಕಷ್ಟು ಟ್ರೆಕ್ಕಿಂಗ್‌ ಜಾಗಗಳೂ ಇವೆ. ಜೊತೆಗೆ ಇಲ್ಲಿಯ ಪ್ಲಸ್​ ಪಾಯಿಂಟ್​ ಆಹ್ಲಾದಕರವಾದ ಜಲಪಾತಗಳು.  ಇದೇ ಕಾರಣಕ್ಕೆ   ಸಾಕಷ್ಟು ಮಂದಿ ಮನಾಲಿಯ ಸಂಪೂರ್ಣ ಸೌಂದರ್ಯವನ್ನು ಜೀವನದಲ್ಲಿ ನೋಡಬೇಕು ಎಂದು ಆಶಿಸುತ್ತಾರೆ. ಇಲ್ಲಿರುವ ಸಾಕಷ್ಟು ಜಲಪಾತಗಳ ಪೈಕಿ ಸಿಸ್ಸು ಜಲಪಾತವೂ ಒಂದು. ಅದರ ಪರಿಚಯ ಮಾಡಿಸಿದ್ದಾರೆ ಶ್ರೀರಸ್ತು ಶುಭಮಸ್ತು ಪೂರ್ಣಿ, ಅಮೃತಧಾರೆ ಜೀವಾ. 

ಮದುವೆಯ ಎರಡನೆಯ ವಾರ್ಷಿಕೋತ್ಸವದಂದು ಮತ್ತೊಮ್ಮೆ ಹನಿಮೂನ್​ ಮೂಡ್​ನಲ್ಲಿರುವ ಈ ಜೋಡಿ, ಇಲ್ಲಿಯ ಸೌಂದರ್ಯ ಅದರಲ್ಲಿಯೂ ವಿಶೇಷವಾಗಿ ಹೆಲಿಕಾಪ್ಟರ್​  ಪ್ರಯಾಣ ಮತ್ತು ಜಲಪಾತಗಳ ಸೌಂದರ್ಯವನ್ನು ತೋರಿಸಿವೆ. ಅಷ್ಟಕ್ಕೂ  ಶ್ರೀರಸ್ತು ಶುಭಮಸ್ತು ಪೂರ್ಣಿ, ಅಮೃತಧಾರೆ ಜೀವಾ ಸೀರಿಯಲ್​ಗಳಲ್ಲಿ ಬೇರೆ ಬೇರೆಯವರ ಪತಿ-ಪತ್ನಿ. ಆದರೆ ರಿಯಲ್​ ಲೈಫ್​ನಲ್ಲಿ ಇವರು ದಂಪತಿ. ಪೂರ್ಣಿಯವರ ನಿಜವಾದ ಹೆಸರು ಲಾವಣ್ಯ ಭಾರಧ್ವಾಜ ಹಾಗೂ ಜೀವಾ ಅವರ ನಿಜವಾದ ಹೆಸರು ಶಶಿ ಹೆಗ್ಡೆ. ಕೆಲ ದಿನಗಳ ಹಿಂದೆ ತಮ್ಮ ಮದುವೆ ವಾರ್ಷಿಕೋತ್ಸವದ ಸಂದರ್ಭದಲ್ಲಿ ಲಾವಣ್ಯ ಅವರ ಬಹು ದಿನಗಳ ಕನಸಾಗಿದ್ದ ಮನಾಲಿಗೆ ಹೋಗಿದ್ದಾರೆ. ಬೆಂಗಳೂರಿನಿಂದ ಮನಾಲಿಗೆ ಹೋಗುವ ದಾರಿಯಲ್ಲಿನ ಕೆಲವು ವಿಡಿಯೋಗಳನ್ನು ಮಾಡಿರುವ ಜೋಡಿ, ತಮ್ಮ ಹನಿಮೂನ್​ ಪಯಣ ಹೇಗಿತ್ತು ಎಂಬುದನ್ನು ಶೇರ್​ ಮಾಡಿಕೊಂಡಿದ್ದಾರೆ. 

Tap to resize

Latest Videos

ಶ್ರೀರಸ್ತು ಶುಭಮಸ್ತು ಪೂರ್ಣಿ, ಅಮೃತಧಾರೆ ಜೀವಾ ಹನಿಮೂನ್​ ಹೇಗಿತ್ತು? ಫುಲ್​ ಡಿಟೇಲ್ಸ್​ ಹಂಚಿಕೊಂಡ ದಂಪತಿ

ಈ ಜೋಡಿ ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿದ್ದು, ಇದೀಗ ಹನಿಮೂನ್​ ಡಿಟೇಲ್ಸ್​ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಮನಾಲಿಯಲ್ಲಿನ ಮೊದಲ ದಿನದ ಎಕ್ಸ್​ಪೀರಿಯನ್ಸ್​ ಕೂಡ ಶೇರ್​ ಮಾಡಿಕೊಂಡಿದ್ದಾರೆ. ಇದರಲ್ಲಿ ಈಗ ಸಿಸ್ಸು ಜಲಪಾತದ ಸೌಂದರ್ಯವನ್ನು ಹೇಳಿದೆ ಜೋಡಿ. ಸಿಸ್ಸು ಜಲಪಾತವು ಹಿಮಾಚಲ ಪ್ರದೇಶದ ಲಾಹೌಲ್ ಮತ್ತು ಸ್ಪಿತಿ ಜಿಲ್ಲೆಯ ಲೇಹ್-ಮನಾಲಿ ಹೆದ್ದಾರಿಯಲ್ಲಿ ಒಂದು ತಿರುವುದಲ್ಲಿದೆ. ನೀರಿನ ಮೂಲವು ಹಿಮಾಲಯ ಶ್ರೇಣಿಯಲ್ಲಿನ  ಹಿಮನದಿಗಳಾಗಿವೆ. ಸಿಸ್ಸು ಜಲಪಾತವು ಚಂದ್ರ ನದಿಯ ದಡದಲ್ಲಿದೆ ಮತ್ತು ಇದನ್ನು ಖಗ್ಲಿಂಗ್ ಎಂದು ಕರೆಯಲಾಗುತ್ತದೆ. ಹಿಮಾಚಲ ಪ್ರದೇಶದ ಲಾಹುವಲ್ ಕಣಿವೆಯಲ್ಲಿ ನೆಲೆಗೊಂಡಿರುವ ಇದು ಜಲಪಾತಗಳ ಸುತ್ತಲೂ ಹಸಿರಿನಿಂದ ಕೂಡಿದ್ದು, ಸುಂದರವಾದ ಸನ್ನಿವೇಶವನ್ನು ಸೃಷ್ಟಿಸುತ್ತದೆ.  ಜಲಪಾತವು ನೈಸರ್ಗಿಕ ಪರಿಸರದ ಹಸಿರಿನ ನಡುವೆ ಕೂಡಿದೆ.  ಜಲಪಾತದ ಕೆಳಭಾಗಕ್ಕೆ ನಿಮ್ಮನ್ನು ಕರೆದೊಯ್ಯುವ ಟ್ರೆಕ್ಕಿಂಗ್ ಮಾರ್ಗವಿದೆ. ಇವುಗಳ ಪರಿಚಯ ಮಾಡಿಸಿದೆ ಜೋಡಿ.
 
ಬೆಂಗಳೂರಿನಿಂದ ಹೊರಟಾಗ ದಾರಿಮಧ್ಯೆ ಸಿಕ್ಕ ಸ್ಥಳಗಳು, ಅಲ್ಲಿ ಅನುಭವಿಸಿದ ಬಿಸಿಲಿನ ತಾಪ, ಕೂಲ್​ ಕೂಲ್ ಅನುಭವ ಎಲ್ಲವನ್ನೂ ಜೋಡಿ ಶೇರ್ ಮಾಡಿಕೊಂಡಿದೆ. ಇದಾಗಲೇ ಲಾವಣ್ಯ ಅವರು ಮನಾಲಿಯ ಕೆಲವೊಂದು ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದರು.  ಹೀಗೆ ಅಜ್ಜಿ, ತಾತ ಆಗೋಣ ಎಂದು ಕ್ಯಾಪ್ಶನ್ ಹಾಕಿದ್ದಾರೆ. ವಿಡಿಯೋದಲ್ಲಿ ಲಾವಣ್ಯ ವಿಂಟರ್ ವೇರ್, ವೂಲನ್ ಕ್ಯಾಪ್ ಧರಿಸಿ, ಹಿಮದ ಮೇಲೆ ಮಲಗಿ ತುಂಬಾ ಖುಷಿಯಾಗ್ತಿದೆ ಇವತ್ತು, ಹ್ಯಾಪಿ ಆನಿವರ್ಸರಿ (Anniversary) ಚಿನ್ನ ಎಂದಿದ್ದರು. ಶಶಿ ಲಾವಣ್ಯ ಹತ್ತಿರ ಬಂದು ಐ ಲವ್ ಯೂ ಎಂದು ಮಂಜನ್ನು ಲಾವಣ್ಯ ಮೇಲೆ ಎಸೆದಿದ್ದು, ಲಾವಣ್ಯ ಕೂಡ ಲವ್ ಯು ಟೂ ಎಂದಿದ್ದರು. ಹಿನ್ನೆಲೆಯಲ್ಲಿ ಏನೇ ಬರಲಿ ಜೊತೆಯಾಗಿ, ನೀನೆ ನನ್ನ ಕಥೆಯಾಗಿ ನೀಡುವ ಬಂಧನ ಎನ್ನುವ ಹಾಡು ಪ್ಲೇ ಆಗುತ್ತಿದ್ದು, ಇಬ್ಬರ ಮದುವೆ ಮತ್ತು ಪ್ರಿವೆಡ್ಡಿಂಗ್ ವಿಡಿಯೋ, ಜೊತೆಗೆ ಮಂಜಿನಲ್ಲಿ ಎಂಜಾಯ್ ಮಾಡ್ತಿರೋ ವಿಡಿಯೋ ಕೂಡ ಹಂಚಿಕೊಂಡಿದ್ದರು. ಇದೀಗ ಹನಿಮೂನ್​ ಟೂರ್​ ಪೂರ್ವದ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. 

ನಿಖಿಲ್​ ಎಲ್ಲಿದ್ದೀಯಪ್ಪ... ಡೈಲಾಗ್​ ರೂವಾರಿ ಇವ್ರೇ ನೋಡಿ... ಅಂದು ನಡೆದ ಘಟನೆ ವಿವರಿಸಿದ ನಟಿ ಶಾಲಿನಿ...


click me!