ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ ಮತ್ತು ಕಂಠಿ ಮದುವೆಯ ಶೂಟಿಂಗ್ ಹೇಗಿತ್ತು? ಅಲ್ಲಿ ನಡೆದದ್ದೇನು? ವಿಡಿಯೋ ಶೇರ್ ಮಾಡಿದ್ದಾರೆ ಸ್ನೇಹಾ ಪಾತ್ರಧಾರಿ ಸಂಜನಾ ಬುರ್ಲಿ.
ಧಾರಾವಾಹಿ ಪ್ರಿಯರ ಮನಸ್ಸನ್ನು ಗೆದ್ದು, ಕದ್ದು ಬೀಗುತ್ತಿರೋ ನಟಿಯರಲ್ಲಿ ಒಬ್ಬರು ಸಂಜನಾ ಬುರ್ಲಿ. ಸಂಜನಾ ಬುರ್ಲಿ ಎಂದರೆ ಬಹುಶಃ ಯಾರಿಗೂ ಅರ್ಥವಾಗಲಿಕ್ಕಿಲ್ಲ. ಅದೇ ಸ್ನೇಹಾ ಎಂದರೆ ಸಾಕು, ತಮ್ಮ ಪರಿಚಯಸ್ಥರಲ್ಲಿ ಸ್ನೇಹಾ ಎನ್ನುವ ಹೆಸರು ಇದ್ದವರಿದ್ದರೂ ಮೊದಲಿಗೆ ನೆನಪಿಗೆ ಬರುವುದು ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿ ಖ್ಯಾತಿಯ ಸ್ನೇಹಾ ಅಲ್ಲವೆ? ಸದಾ ಟಿಆರ್ಪಿಯಲ್ಲಿ ಮುಂದೆ ಇರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾಳೇ ಹೈಲೈಟ್. ಎಷ್ಟೋ ಮಂದಿಗೆ ಮಾದರಿ ಹೆಣ್ಣೀಕೆ. ರೌಡಿ ಕಂಠಿಯ ಜೊತೆಗಿನ ಸಂಪ್ರದಾಯಸ್ಥ ಹೆಣ್ಣುಮಗಳು ಸ್ನೇಹಾಳ ಲವ್ ಸ್ಟೋರಿಯೇ ಈ ಧಾರಾವಾಹಿಯ ಬಂಡವಾಳ. ಇದರಲ್ಲಿ ಸ್ನೇಹಾಳ ಅಸಲಿ ಹೆಸರೇ ಸಂಜನಾ ಬುರ್ಲಿ. ಕಂಠಿ ಪಾತ್ರಧಾರಿ ಧನುಷ್ ಎನ್ ಎಸ್. ಧಾರಾವಾಹಿಯ ಈ ಕ್ಯೂಟ್ ಜೋಡಿ ಅದೆಷ್ಟು ಫೇಮಸ್ ಎಂದರೆ, ಇಬ್ಬರೂ ನಿಜ ಜೀವನದಲ್ಲಿಯೂ ಮದ್ವೆಯಾಗಲಿ ಅಂತಿದ್ದಾರೆ ಫ್ಯಾನ್ಸ್! ಈ ಬಗ್ಗೆ ಕೇಳಿದ್ದ ಪ್ರಶ್ನೆಯೊಂದಕ್ಕೆ ಸಂಜನಾ ಅವರು, , 'ಸ್ಕ್ರೀನ್ ಮೇಲಷ್ಟೇ ನಾವಿಬ್ರೂ ಲವರ್ಸ್. ಸ್ಕ್ರೀನ್ ಮೇಲಿನ ಸಂಗತಿಗಳನ್ನು ಸ್ಕ್ರೀನ್‌ನ ಆಚೆನೂ ಅದೇ ರೀತಿ ನೋಡಬೇಡಿ ಪ್ಲೀಸ್' ಎಂದು ಅವಲತ್ತುಕೊಂಡಿದ್ದೂ ಇದೆ.
ಇಂತಿಪ್ಪ ಸ್ನೇಹಾ ಅಲಿಯಾ ಸಂಜನಾ ಅವರು ಸೋಷಿಯಲ್ ಮೀಡಿಯಾದಲ್ಲಿಯೂ ಸಕತ್ ಆ್ಯಕ್ಟೀವ್ ಆಗಿದ್ದಾರೆ. ಇತ್ತೀಚೆಗೆ ಅವರು, ಜೈಲರ್ ಚಿತ್ರದ ಕಾವಾಲಯ್ಯ ಹಾಡಿಗೆ ಡ್ಯಾನ್ಸ್ ಮಾಡಿದ್ದು, ಅದರನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಮಿನಿ ಸ್ಕರ್ಟ್ (Mini skirt) ಧರಿಸಿ ಅವರು ಸಕತ್ ಸ್ಟೆಪ್ ಹಾಕಿದ್ದಕ್ಕೆ ಮೆಚ್ಚುಗೆಗಳ ಮಹಾಪೂರವೇ ಹರಿದುಬಂದಿತ್ತು. ಇದೇ ರೀತಿ ಹಲವಾರು ವಿಡಿಯೋ, ಫೋಟೋಗಳನ್ನು ಅವರು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇನ್ನು ಧಾರಾವಾಹಿಯಲ್ಲಿ ಸ್ನೇಹಾ ಮತ್ತು ಕಂಠಿ ಮದುವೆಯ ವಿಷಯದ ಕುರಿತೂ ಇದಾಗಲೇ ಸಾಕಷ್ಟು ಬಾರಿ ಸಂಜನಾ ಮಾತನಾಡಿದ್ದು ಇದೆ. ಅದರಲ್ಲಿಯೂ ಕೆಲ ತಿಂಗಳ ಹಿಂದೆ ಸ್ನೇಹಾ ಮತ್ತು ಕಂಠಿ ದೂರ ದೂರ ಆಗಿದ್ದು, ಇಬ್ಬರು ಬೇರೆಯವರನ್ನು ಮದುವೆಯಾಗಲು ಸಿದ್ಧತೆ ನಡೆಸಿದ್ದಾಗಲಂತೂ ದೊಡ್ಡ ಹಂಗಾಮಾ ಸೃಷ್ಟಿಯಾಗಿತ್ತು. ಇನ್ನೇನು ಕಂಠಿ ಮತ್ತು ಸ್ನೇಹಾ ಮದ್ವೆ ಆಗ್ತಾರೆ ಎಂದು ಪ್ರೇಕ್ಷಕರು ಅಂದುಕೊಂಡಿರುವಾಗಲೇ, ಅಮ್ಮನ ಆಸೆಯಂತೆ ಸ್ನೇಹಾ ಕಂಠಿಯನ್ನು ದೂರ ಮಾಡಿ, ಇನ್ನೊಬ್ಬರನ್ನು ಮದುವೆಯಾಗಲು ಒಪ್ಪಿರೋದು ಪ್ರೇಕ್ಷಕರಿಗೆ ಸಹಿಸಲು ಸಾಧ್ಯವಾಗಿರಲಿಲ್ಲ.
ಉಂಗುರ ಹಾಕ್ಬೇಕಾದ್ರೆ ನಡಗ್ತಿದ್ದೆ, ತಾಳಿ ಕಟ್ಬೇಕಾದ್ರೆ ಬಿಂದಾಸ್: ಅದಿತಿ-ಯಶಸ್ ಕೌತುಕ ಸ್ಟೋರಿ
ಕಳೆದ ಹಲವು ದಿನಗಳಿಂದ ಇದನ್ನೆ ನೋಡಿ ನೋಡಿ ಬೇಸತ್ತ ಪ್ರೇಕ್ಷಕರು, ಬೇಗ ಕಂಠಿ ಮತ್ತು ಸ್ನೇಹಾನ ಒಂದು ಮಾಡಿ, ಅವರಿಬ್ಬರನ್ನು ಬೇರೆ ಮಾಡಿ ಮೋಸ ಮಾಡಬೇಡಿ ಎಂದು ತಮ್ಮ ಬೇಸರ ವ್ಯಕ್ತಪಡಿಸಿದ್ದೂ ನಡೆದಿತ್ತು. ಆಗ ಸಂಜನಾ ಬುರ್ಲಿ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ (social media) ರೀಲ್ಸ್ ಒಂದು ಶೇರ್ ಮಾಡಿದ್ದು, ಅದಕ್ಕೆ ಅಭಿಮಾನಿಯೊಬ್ಬರು ಸೀರಿಯಲ್ ನಿಲ್ಸುವಂತೆ ನಿಮ್ಮ ನಿರ್ದೇಶಕರಿಗೆ ಹೇಳಿ, ಹೀಗೆ ಹೋದ್ರೆ ಇನ್ನು ಮುಂದೆ ಸೀರಿಯಲ್ ನೋಡೋರು ಯಾರು ಇರಲ್ಲ ಎಂದು ಕಮೆಂಟ್ ಕೂಡ ಮಾಡಿದ್ದರು. ಇದಕ್ಕೆ ಉತ್ತರಿಸಿದ್ದ ಸಂಜನಾ ಬುರ್ಲಿ (Sanjana Burli) ಸ್ವಲ್ಪ ತಾಳ್ಮೆ ಇಟ್ಕೊಳಿ ಎಲ್ಲಾನು ಸರಿಯಾಗುತ್ತೆ ಎಂದು ತುಂಬಾನೆ ತಾಳ್ಮೆಯಿಂದಲೇ ಉತ್ತರಿಸಿದ್ದರು. ಈಗ ಅವರ ಫ್ಯಾನ್ಸ್ ನಿರೀಕ್ಷೆಯಂತೆ ಸಂಜನಾ-ಕಂಠಿ ಮದುವೆಯೇನೋ ಆಗಿದೆ. ಆದರೆ ಕಂಠಿ ತಮ್ಮ ಕಡು ವೈರಿ ಬಂಗಾರಮ್ಮ ಅವರ ಮಗನೆನ್ನುವ ಸತ್ಯವನ್ನು ಮುಚ್ಚಿಟ್ಟಿದ್ದರಿಂದ ಸ್ನೇಹಾ ಪತಿ ಸೇರಿ ಎಲ್ಲರನ್ನೂ ವಿರೋಧಿಸುತ್ತಿದ್ದಾಳೆ.
ಇವುಗಳ ನಡುವೆಯೇ ಸ್ನೇಹಾ-ಕಂಠಿ (Sneha- Kanthi) ನಡುವೆ ಇನ್ನೇನು ಪ್ರೀತಿ ಮೂಡಬಹುದು ಎಂದಾಗಲೇ ಪುಟ್ಟಕ್ಕನ ಮೆಸ್ಗೆ ಬೆಂಕಿ ಬಿದ್ದು ಸುಟ್ಟು ಕರಕಲಾಗಿದೆ. ಪುಟ್ಟಕ್ಕ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ಬೆಂಕಿ ಹಾಕಿದ ಆಪಾದನೆ ಕಂಠಿ ಅಮ್ಮ ಬಂಗಾರಮ್ಮನ ಮೇಲೆ ಬಂದಿದೆ. ಇಷ್ಟೆಲ್ಲಾ ಕುತೂಹಲದ ತಿರುವಿನ ನಡುವೆಯೇ ಸಂಜನಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಧಾರಾವಾಹಿಯಲ್ಲಿನ ಮದುವೆಯ ಮೇಕಿಂಗ್ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಸ್ಕೂಟರ್ನಲ್ಲಿ ಮದುಮಗಳ ವೇಷದಲ್ಲಿ ಗಂಡನ ಮನೆಗೆ ಬರುವ ವಿಡಿಯೋ ಹಾಗೂ ಅದರ ಮೇಕಿಂಗ್ ಹೇಗಿತ್ತು ಎನ್ನುವುದನ್ನು ಶೇರ್ ಮಾಡಿದ್ದಾರೆ. ಇದಾದ ಬಳಿಕ ಸ್ನೇಹಾ ಹಾಗೂ ಕಂಠಿ ಅದ್ಭುತ ನೃತ್ಯ ಮಾಡಿದ್ದನ್ನೂ ಅದರಲ್ಲಿ ತೋರಿಸಿದ್ದಾರೆ. ಇವರಿಬ್ಬರ ಕೆಮೆಸ್ಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ದು, ಇಬ್ಬರೂ ಜಗಳವಾಡದೇ ಒಳ್ಳೆಯ ರೀತಿಯಲ್ಲಿ ಸಂಸಾರ ನಡೆಸಿಕೊಂಡು ಹೋಗಿ ಅಂತಿದ್ದಾರೆ.
ಬಾರ್ಬಿಡಾಲ್ ರೂಪದಲ್ಲಿ ನಿವೇದಿತಾ ವಿಡಿಯೋ! ಹಾರ್ಟ್ ಬೀಟ್ ಹೆಚ್ತಿದೆ ಗೊಂಬೆ ಅಂತಿದ್ದಾರೆ ಫ್ಯಾನ್ಸ್