ಖ್ಯಾತ ಚಿತ್ರನಟಿ ಅಪರ್ಣಾ ಶವವಾಗಿ ಪತ್ತೆ, ಸಾವಿನ ಕಾರಣ ನಿಗೂಢ

By Gowthami K  |  First Published Sep 1, 2023, 1:40 PM IST

ಖ್ಯಾತ ನಟಿ ಅಪರ್ಣಾ ಪಿ ನಾಯರ್ ಅವರು ಆಗಸ್ಟ್ 31 ರ ಗುರುವಾರ ಸಂಜೆ  ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.


ತಿರುವನಂತಪುರಂ (ಸೆ.1): ಮಲಯಾಳಂನ ಖ್ಯಾತ ನಟಿ ಅಪರ್ಣಾ ಪಿ ನಾಯರ್ ಅವರು ಆಗಸ್ಟ್ 31 ರ ಗುರುವಾರ ಸಂಜೆ ತಿರುವನಂತಪುರಂನ ಕರಮಾನದಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಪೊಲೀಸ್ ವರದಿಗಳ ಪ್ರಕಾರ, ಗುರುವಾರ ಸಂಜೆ 7 ಗಂಟೆ ಸುಮಾರಿಗೆ ನಟಿ ಅಪರ್ಣಾ ತನ್ನ ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅಪರ್ಣಾಳನ್ನು ಆಸ್ಪತ್ರೆಗೆ ಕರೆದೊಯ್ದಾಗ ಆಕೆ ಮೃತಪಟ್ಟಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ಸಾವಿನ ಬಗ್ಗೆ ಕಿಲ್ಲಿಪಾಲಂನ ಖಾಸಗಿ ಆಸ್ಪತ್ರೆ ಸ್ಪಷ್ಟನೆ ನೀಡಿತು ಎಂದು ತಿಳಿದುಬಂದಿದೆ.

Tap to resize

Latest Videos

ಕೇವಲ 9 ಗಂಟೆಗಳಲ್ಲಿ 1 ಮಿಲಿಯನ್ ಇನ್‌ಸ್ಟಾಗ್ರಾಮ್ ಹಿಂಬಾಲಕರನ್ನು ಹೊಂದಿ ದಾಖಲೆ ಬರೆದ ಜನಪ್ರಿಯ

ಕರಮಾನ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ನಟಿಯ ಸಾವಿಗೆ ಕಾರಣವನ್ನು ಹುಡುಕುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಹೆಚ್ಚಿನ ವಿವರ ಹೊರಬರಬೇಕಿದೆ.

ಅಪರ್ಣಾ ಪಿ ನಾಯರ್ ಅವರು  ದೂರದರ್ಶನ ಧಾರಾವಾಹಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಮತ್ತು ಚಲನಚಿತ್ರೋದ್ಯಮದಲ್ಲೂ ಗಮನಾರ್ಹವಾಗಿ ಗುರುತಿಸಿಕೊಂಡಿದ್ದರು. ಅವರ ಚಿತ್ರಗಳೆಂದರೆ ಮೇಘತೀರ್ಥಂ (2009),  ಮುಧುಗೌವ್ (2016),  ಮೈಥಿಲಿ ವೀಂದುಂ ವರುನ್ನು  (2017),  ಅಚಾಯನ್ಸ್  (2017),  ನೀರಂಜನ ಪೂಕ್ಕಲ್  (2017),  ದೇವಸ್ಪರ್ಶಂ   (2018),  ಪೆನ್ ಮಸಾಲಾ  (2018),  ಕೊಡತಿ ಸಮಕ್ಷಮ್ ಬಾಲನ್ ವಕೀಲ್  (2019),  ಬ್ರಿಟಿಷ್ ಬಂಗಲೆ  (2019),  ನಲ್ಲ ವಿಶೇಷಂ (2019),  ಕಲ್ಕಿ  (2019), ಮತ್ತು  ಕಡಲು ಪರಾಂಜ ಕಧಾ  (2022)  ನಂತಹ ವೈವಿಧ್ಯಮಯ ಚಲನಚಿತ್ರಗಳನ್ನು ಒಳಗೊಂಡಿದೆ.

ಭಾರತದ ಶ್ರೀಮಂತ ನಟಿ, ಯಶಸ್ವಿ ಉದ್ಯಮಿ ಬಳಿ ಇದೆ 3 ಮನೆ, 25 ಕೋಟಿ ರೂ ಬೆಲೆ ಬಾಳುವ 

ಅವರ ದೂರದರ್ಶನ ಧಾರಾವಾಹಿಗಳಲ್ಲಿ ಗಮನಾರ್ಹವಾದವು 'ಚಂದನಮಜ' ಮತ್ತು 'ಆತ್ಮಸಖಿ', ಇದು ವೀಕ್ಷಕರ ಹೃದಯದಲ್ಲಿ ಅವರ ಉಪಸ್ಥಿತಿಯನ್ನು ಮತ್ತಷ್ಟು ಗಟ್ಟಿಗೊಳಿಸಿತು. ಮಾಧ್ಯಮ ವರದಿಗಳ ಪ್ರಕಾರ ಅಪರ್ಣಾ ಅವರಿಗೆ ಪತಿ ಸಂಜಿತ್ ಮತ್ತು  ತ್ರಯಾ ಮತ್ತು ಕೃತಿಕಾ  ಎಂಬ ಇಬ್ಬರು ಮಕ್ಕಳಿದ್ದಾರೆ. ಚಿತ್ರೋದ್ಯಮದ ಮಂದಿಗೆ ಮತ್ತು ನಟಿಯ ಅಭಿಮಾನಿಗಳಿಗೆ ಈ ಹಠಾತ್ ಸುದ್ದಿ ಶಾಕಿಂಗ್ ತಂದಿದೆ.

 

click me!