The Telgi Story ರಿಲೀಸ್​: 30 ಸಾವಿರ ಕೋಟಿ ಗುಳುಂ ಮಾಡಿದ ಪತಿ- ಪೂರ್ತಿ ಆಸ್ತಿ ದಾನ ಮಾಡಲು ಸಿದ್ಧಳಾದ ಪತ್ನಿ!

By Suvarna News  |  First Published Sep 1, 2023, 2:56 PM IST

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಅಬ್ದುಲ್ ಕರೀಂ ಲಾಲ್​ ತೆಲಗಿ ಕುರಿತ ವೆಬ್​ ಸೀರಿಸ್​ ಇಂದು ಬಿಡುಗಡೆಯಾಗಿದೆ. ಇದರ ವಿವರ ಇಲ್ಲಿದೆ.
 


ಕೆಲ ವರ್ಷಗಳ ಹಿಂದೆ  ಅಬ್ದುಲ್ ಕರೀಂ ಲಾಲ್​ ತೆಲಗಿ (Abdlu Kareem Lal Telgi) ತೆಲಗಿ ಇಡೀ ದೇಶದಲ್ಲಿಯೇ ಭಾರಿ ಸದ್ದು ಮಾಡಿದ್ದ ವ್ಯಕ್ತಿ. ನಕಲಿ ಛಾಪಾ ಕಾಗದದ ಮೂಲಕ ಸರ್ಕಾರಕ್ಕೆ ಸೇರಬೇಕಿದ್ದ 30 ಸಾವಿರ ಕೋಟಿಗೂ ಅಧಿಕ ಹಣವನ್ನು ಗುಳುಂ ಮಾಡಿದ್ದ. 2017ರ ಅಕ್ಟೋಬರ್​ 23ರಂದು ನಿಧನ ಹೊಂದಿದ   ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಕೆಳ ಮಧ್ಯಮ ವರ್ಗದ ಕುಟುಂಬದ ಈ ವ್ಯಕ್ತಿಯ ಜೀವನ ಚರಿತ್ರೆಯೇ ಬಲು ರೋಚಕ. ಈಗ ಅಕ್ರಮ ಹಣ ಸಂಪಾದನೆ ಮಾಡಿದರೆ, ಇವನ ಆಸ್ತಿಯನ್ನೆಲ್ಲಾ ಸರ್ಕಾರಕ್ಕೆ ಬರೆದುಕೊಡಲು ಸಿದ್ಧರಾಗಿದ್ದಾರೆ ಈತನ ಪತ್ನಿ. ಇದೀಗ ಈ ಸ್ಟೋರಿ ವೆಬ್​ಸೀರೀಸ್​ ಆಗಿದ್ದು, ಇದು ಬಿಡುಗಡೆಗೊಂಡಿದೆ. 'Scam 2003: The Telgi Story' ಎಂಬ ಹೆಸರಿನ ವೆಬ್​ ಸೀರಿಸ್​ ಇದಾಗಿದೆ.

ಬೆಳಗಾವಿಯ ಖಾನಾಪುರ ರೈಲು ನಿಲ್ದಾಣದಲ್ಲಿ ಕೂಲಿ ಮಾಡುತ್ತಿದ್ದವರ ಮಗನಾಗಿ ಹುಟ್ಟಿದ್ದ ತೆಲಗಿ  ಚಿಕ್ಕ ವಯಸ್ಸಿನಲ್ಲೇ  ತಂದೆಯನ್ನು ಕಳೆದುಕೊಂಡು  ಕುಟುಂಬದ ಜವಾಬ್ದಾರಿ ಹೊತ್ತವ. ತುತ್ತು ಅನ್ನಕ್ಕಾಗಿ  ಹಣ್ಣು ಮಾರುತ್ತಿದ್ದ ತೆಲಗಿ, ಈ ಪರಿಯ ಅಕ್ರಮ ಸಾಮ್ರಾಜ್ಯ ಕಟ್ಟಿ, ಮೋಸದ ವ್ಯವಹಾರದಲ್ಲಿ ತೊಡಗಿದ್ದೇ ರೋಚಕ.  ಶಿಕ್ಷಣವನ್ನು ಪೂರ್ಣಗೊಳಿಸಲು  ಸೌದಿ ಅರೇಬಿಯಾಕ್ಕೆ (Soudi Arabia) ಹೋಗಿ ಅಲ್ಲಿಂದ  ಬಾಂಬೆಗೆ ಹೋಗಿದ್ದ ಈತ  ತಿನ್ನಲು ಆಹಾರವಿಲ್ಲದೆ ಹಲವು ದಿನ ಪರದಾಡಿದ್ದೂ ಇದೆ. ನಂತರ  ಟ್ರಾವೆಲ್ ಏಜೆಂಟ್ ಒಬ್ಬರ  ಬಳಿ ಕೆಲಸಕ್ಕೆ ಸೇರಿಕೊಂಡು ನಿಧಾನ ಮೇಲಕ್ಕೇರುತ್ತಾ ತಾನೇ ಟ್ರಾವೆಲ್ ಏಜೆನ್ಸಿಯನ್ನು ಪ್ರಾರಂಭಿಸಿ ಗಲ್ಫ್ ದೇಶಗಳಲ್ಲಿ ಕೆಲಸ ಹುಡುಕುತ್ತಿರುವ ಕಾರ್ಮಿಕರಿಗೆ ನಕಲಿ ವಲಸೆ ಕ್ಲಿಯರೆನ್ಸ್ ದಾಖಲೆಗಳನ್ನು ಮಾರಾಟ ಮಾಡಲು ಆರಂಭಿಸಿದ್ದೇ ಈತನ ಅಕ್ರಮಕ್ಕೆ ನಾಂದಿ ಹಾಡಿತು. 1991 ರಲ್ಲಿ, ಅಬ್ದುಲ್ ನನ್ನು ವಂಚನೆ ಮತ್ತು ನಕಲಿ ದಾಖಲೆ ವಿಚಾರವಾಗಿ ಬಂಧಿಸಿ ಅಲ್ಪಾವಧಿಯ ಜೈಲು ಶಿಕ್ಷೆ ವಿಧಿಸಲಾಯಿತು. ಜೈಲಿನಲ್ಲಿ, ಅಬ್ದುಲ್, ಸ್ಟಾಂಪ್ ವೆಂಡರ್ ರಾಮ್ ರತನ್ ಸೋನಿಯನ್ನು ಭೇಟಿಯಾದ. ರಾಮ್ ರತನ್ ಸೋನಿ (Ram Ratan Sony) ಶೇರು ಪತ್ರಗಳನ್ನು ನಕಲಿ ಮಾಡಿದ ಆರೋಪದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ. ಸೋನಿ ಶೇರ್ ಮಾರ್ಕೆಟ್‌ನಲ್ಲಿ ಅಬ್ದುಲ್‌ಗೆ ಈ ದಂಧೆಯಲ್ಲಿ ಆಸಕ್ತಿಯನ್ನು ಹುಟ್ಟುಹಾಕಿದ ಮತ್ತು ಶಿಕ್ಷೆಯನ್ನು ಪೂರ್ಣಗೊಳಿಸಿದ ನಂತರ ಅಬ್ದುಲ್ ದೊಡ್ಡ ಹಗರಣದಲ್ಲಿ ತೊಡಗಿದ. 

Tap to resize

Latest Videos

 ದೇಶ ಕಂಡ ಬಹುದೊಡ್ಡ ಹಗರಣದ ರೂವಾರಿ ಕರ್ನಾಟಕದವ, ಹಣ್ಣು ವ್ಯಾಪಾರಿ ಬಹುಕೋಟಿ ದಂಧೆಗಿಳಿದ ಕಥೆ

ಈ ಹಗರಣ ಪುಣೆ ಪೊಲೀಸರ ಗಮನಕ್ಕೆ ಬಂದು  ಅಬ್ದುಲ್ ಅವರನ್ನು 2001 ರಲ್ಲಿ ಬೆಂಗಳೂರಿನಲ್ಲಿ ಬಂಧಿಸಲಾಯಿತು ಮತ್ತು 2007 ರಲ್ಲಿ ಅತನಿಗೆ 30 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. 2002 ರ ಹೊತ್ತಿಗೆ, ಹಲವಾರು ಪ್ರಕರಣಗಳು ತನಿಖೆಯಾಗುತ್ತಿರುವಾಗ ಅಬ್ದುಲ್ HIV ಪಾಸಿಟಿವ್ ಎಂದು ಪರೀಕ್ಷಿಸಿದರು. 2013ರಲ್ಲಿ 17 ಲಕ್ಷ ರೂಪಾಯಿ ಮೌಲ್ಯದ ನಕಲಿ ಸ್ಟಾಂಪ್ ಪೇಪರ್‌ಗಳನ್ನು ಮಾರಾಟ ಮಾಡಿದ್ದಕ್ಕಾಗಿ ಅಬ್ದುಲ್‌ಗೆ ಶಿಕ್ಷೆ ವಿಧಿಸಲಾಗಿತ್ತು. ಹೀಗೆ ಈತನ ವಿರುದ್ಧ ಹಲವಾರು ಕೇಸ್​ಗಳು ದಾಖಲಾದವು. ಆಗಿನಿಂದ ಸುಮಾರು 17 ವರ್ಷ ಜೈಲಿನಲ್ಲೇ ಕಳೆದ ತೆಲಗಿ, 2017ರಲ್ಲಿ ಬಹುಅಂಗಾಂಗ ವೈಫಲ್ಯಕ್ಕೊಳಗಾಗಿ ಸಾವನ್ನಪ್ಪಿದ. ಅಬ್ದುಲ್ ಕರೀಂ ಲಾಲಾ ತೆಲಗಿನಿಧನದ ಒಂದು ವರ್ಷದ ನಂತರ ನಾಸಿಕ್ ಸೆಷನ್ಸ್ ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪ್ರಕರಣವನ್ನು ಖುಲಾಸೆಗೊಳಿಸಿದೆ.  

undefined

ಇವರ ಪತ್ನಿ ಪುಣೆ ಸೆಷನ್ ಕೋರ್ಟ್ ನಲ್ಲಿ ಕೇಸ್ ಫೈಲ್ ಮಾಡುವ ಮುಂಚೆಯೇ ಸ್ವಪ್ರೇರಿತವಾಗಿ 100 ಕೋಟಿಯ ಆಸ್ತಿಯನ್ನು ಸರ್ಕಾರದ ವಶಕ್ಕೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.  ಶಹಿದಾ ಅವರು ದಾನ ನೀಡಲಿರುವ ಆಸ್ತಿಗಳಲ್ಲಿ 9 ಪ್ರಾಪರ್ಟಿಗಳು ಕರ್ನಾಟಕದಲ್ಲಿವೆ. ಕೋಟ್ಯಂತರ ರೂಪಾಯಿ ಮೌಲ್ಯದ ಛಾಪಾಕಾಗದ ಹಗರಣದಲ್ಲಿ ಸಿಬಿಐ, ತೆಲಗಿಯ ಕೋಟ್ಯಾಂತರ ರೂ. ಆಸ್ತಿಯನ್ನು ವಶಕ್ಕೆ ಪಡೆದುಕೊಂಡಿತ್ತು. ಆದರೆ ಕರ್ನಾಟಕದಲ್ಲಿರುವ 9 ಪ್ರಾಪರ್ಟಿಗಳು ಶಹಿದಾ ಒಡೆತನದಲ್ಲಿದ್ದು, ಪೊಲೀಸರು ಅವುಗಳನ್ನು ವಶಪಡಿಸಿಕೊಂಡಿಲ್ಲ. ಕೃಷಿ ಭೂಮಿ, ವಾಣಿಜ್ಯ ಮಳಿಗೆಗಳು, ಫ್ಲ್ಯಾಟ್ ಗಳು ಸೇರಿದಂತೆ ಒಟ್ಟು 9 ಆಸ್ತಿಗಳು ಕರ್ನಾಟಕದಲ್ಲಿದ್ದು, ಅವೆಲ್ಲವನ್ನೂ ಪತ್ನಿ ನೀಡಲಿದ್ದಾರೆ ಎನ್ನಲಾಗಿದೆ. ಈ ವೆಬ್​ ಸೀರಿಸ್​ನ ಟ್ರೇಲರ್​ ಕೆಲ ತಿಂಗಳ ಹಿಂದೆ ಬಿಡುಗಡೆಯಾಗಿದ್ದು, ಇಂದು ವೆಬ್​ ಸೀರಿಸ್​ ಬಿಡುಗಡೆಯಾಗಿದೆ. 

ಮರು ಜನ್ಮವಿದ್ದರೆ ನನಗಿರುವ ಒಂದೇ ಆಸೆ ಎಂದರೆ... 80 ವರ್ಷದ ಅಮಿತಾಭ್ ಹೇಳಿದ್ದೇನು?

click me!