ಹೆಂಡ್ತಿ ಇದ್ದವರ ಸರ್ವೆ ಮಾಡಿದ್ರೆ ಯುದ್ಧ ಶುರುವಾಗತ್ತೆ.. ಯಾಕೆಂದ್ರೆ... ಬಿಗ್‌ಬಾಸ್‌ ಅರ್ಜುನ್‌ ರಮೇಶ್‌ ಮಾತು ಕೇಳಿ..

By Suchethana D  |  First Published Dec 2, 2024, 12:52 PM IST

ಬಿಗ್‌ಬಾಸ್‌ ಖ್ಯಾತಿಯ ಅರ್ಜುನ್‌ ರಮೇಶ್‌ ಅವರು, ವಿವಾಹಿತ ಪುರುಷರ ಸಂಬಂಧಗಳ ಬಗ್ಗೆ ಓಪನ್‌ ಆಗಿ ಮಾತನಾಡಿದ್ದಾರೆ. ಅವರು ಹೇಳಿದ್ದೇನು?
 


ಇಂತಿ ನಿಮ್ಮ ಆಶಾ, ನಾಗಿಣಿ, ಅಗ್ನಿಸಾಕ್ಷಿ ಸೇರಿದಂತೆ ಮುಂತಾದ ಸೀರಿಯಲ್‌ಗಳಿಂದ ಮನೆಮಾತಾದವರು ನಟ ಅರ್ಜುನ್‌ ರಮೇಶ್‌.  ಇವರು ಸಾಕಷ್ಟು ಜನಪ್ರಿಯತೆ ಗಳಿಸಿದ್ದು  ಶನಿ ಮತ್ತು ಮಹಾಕಾಳಿ ಧಾರಾವಾಹಿಗಳಿಂದ. ಅವರು ಈ ಧಾರಾವಾಹಿಗಳಲ್ಲಿ ಮಾಡಿದ  ಶಿವನ ಪಾತ್ರದಿಂದ ವೀಕ್ಷಕರಿಗೆ ಇನ್ನಷ್ಟು ಹತ್ತಿರವಾಗಿದ್ದರು, ಶಿವನನ್ನೇ ನೋಡಿದ ಅನುಭವ ಆಗುತ್ತದೆ ಎಂದು ಎಷ್ಟೋ ವೀಕ್ಷಕರು ಇವರನ್ನೇ ಸಾಕ್ಷಾತ್‌ ಶಿವ ಎಂದುಕೊಂಡಿದ್ದೂ ಆಗಿತ್ತು! ಇನ್ನು ಇವರ ಶಿವನ ಪಾತ್ರದ ಬಗ್ಗೆ ಹೇಳುವುದಾದರೆ,  ಇವರು ಈ ಪಾತ್ರವನ್ನು ಮಾಡುವ ಮುನ್ನ ಶಿವನ ಮೇಲೆ ಅಷ್ಟೊಂದು ನಂಬಿಕೆ ಇರಲಿಲ್ಲ ಎಂದಿದ್ದರು.  ಆದರೆ ಶಿವನ ಪಾತ್ರ ಮಾಡಿದ ಮೇಲೆ ಶಿವಭಕ್ತರಾಗಿ ಬದಲಾಗಿರುವುದಾಗಿ ತಿಳಿಸಿದ್ದರು.   ಹೊರಗಡೆ ಕಾಣಿಸಿಕೊಂಡಾಗ, ಎಷ್ಟೋ ಜನ ತಮ್ಮ ಕಾಲಿಗೆ ಬಿದ್ದಿದ್ದು ಇದೆ ಎಂದೂ ಹೇಳಿದ್ದರು.

ಆದರೆ ಇವರಿಗೆ ಬ್ರೇಕ್‌ ಕೊಟ್ಟಿದ್ದು ಬಿಗ್‌ಬಾಸ್‌ನ ಓಟಿಟಿ. ಸಾಮಾನ್ಯವಾಗಿ ಬಿಗ್‌ಬಾಸ್‌ಗೆ ಹೋದವರೆಲ್ಲವೂ ಸಕತ್‌ ಫೇಮಸ್‌ ಆಗಿಯೇ ಆಗುತ್ತಾರೆ. ಹಿಂದೆ ಅವರು ಎಷ್ಟೇ ಸೀರಿಯಲ್‌, ಸಿನಿಮಾಗಳಲ್ಲಿ ನಟಿಸಿದ್ದರೂ, ಬಿಗ್‌ಬಾಸ್‌ನಿಂದ ಹೊರಕ್ಕೆ ಬಂದು ಎಷ್ಟೇ ಗುರುತಿಸಿಕೊಂಡರೂ, ಅವರನ್ನು ಬಿಗ್‌ಬಾಸ್‌ನಿಂದಲೇ ಗುರುತಿಸುವುದು ಸಾಮಾನ್ಯ. ಅದೇ ರೀತಿ ಅರ್ಜುನ್‌ ರಮೇಶ್‌ ಕೂಡ. ಇದೀಗ ಇವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಯೂಟ್ಯೂಬ್‌ ಚಾನೆಲ್‌ ಒಂದಕ್ಕೆ ಅವರು ನೀಡಿದ್ದ ಸಂದರ್ಶನದಲ್ಲಿ, ಅವರು ತಮ್ಮ ಇಬ್ಬರು ಪತ್ನಿಯರ ಬಗ್ಗೆ ಓಪನ್‌ ಆಗಿ ಮಾತನಾಡಿದ್ದಾರೆ. ಅಷ್ಟಕ್ಕೂ ಬಿಗ್‌ಬಾಸ್‌ನಲ್ಲಿ ಕೂಡ ಇವರ ಸದ್ದು ಮಾಡಿದ್ದು ಕೂಡ ತಮ್ಮ ಇಬ್ಬರು ಪತ್ನಿಯರ ಬಗ್ಗೆ ಮಾತನಾಡಿರುವುದಕ್ಕೆ ಆಗಿತ್ತು. ಈ ಹಿನ್ನೆಲೆಯಲ್ಲಿ, ಇದೇ ಪ್ರಶ್ನೆಯನ್ನು ಅವರಿಗೆ ಕೇಳಿದಾಗ, ಅವರು ಯಾವ ಮುಚ್ಚುಮರೆಯೂ ಇಲ್ಲದೇ ಎಲ್ಲ ಸತ್ಯವನ್ನೂ ಒಪ್ಪಿಕೊಂಡಿದ್ದಾರೆ. 

Latest Videos

undefined

ತುಂತುರು ಅಲ್ಲಿ ನೀರ ಹಾಡು... ಎಂದ ಅಮೃತಧಾರೆ ಮಲ್ಲಿ ಕಂಠಕ್ಕೆ ಫ್ಯಾನ್ಸ್‌ ಫಿದಾ! ವಿಡಿಯೋ ವೈರಲ್‌

ನೋಡಿ ಸಮಾಜ ಏನು ಹೇಳುತ್ತದೆ ಎನ್ನುವುದು ನನಗೆ ಮುಖ್ಯವಲ್ಲ. ಇಬ್ಬರು ಪತ್ನಿಯರು ನನ್ನ ಎರಡು ಕಣ್ಣುಗಳಿದ್ದಂತೆಯೇ, ಇದನ್ನು ಬೇರೆಯವರಿಗೆ ಮೆಚ್ಚಿಸಲು ನಾನು ಹೇಳ್ತಾ ಇಲ್ಲ. ಒಂದು ಕಣ್ಣು ಹೋದರೂ ನನಗೇ ಕಷ್ಟವಾಗುತ್ತದೆ.  ಸಮಾಜ ಏನು ಮಾಡಿದರೂ ನಗುತ್ತೆ,  ತಪ್ಪು ಹುಡುಕತ್ತೆ. ಆದ್ದರಿಂದ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಿಮಗೆ ಒಂದು ವಿಷಯ ಗೊತ್ತಾ? ನೀವೇನಾದ್ರೂ ಮದುವೆಯಾದವರ ಸರ್ವೇ ಮಾಡಿದ್ರೆ ಮನೆಯಲ್ಲಿ ಪತ್ನಿ, ಹೊರಗಡೆ ಅಕ್ರಮ ಸಂಬಂಧ ಇರುವ ವಿಷಯದ ಸತ್ಯ ಗೊತ್ತಾದ್ರೆ ಮಹಾಯುದ್ಧನೇ ಆಗುತ್ತೆ. ಹಾಗಿದೆ ಪ್ರಪಂಚ. ಅಂಥ ಕದ್ದುಮುಚ್ಚುವ ಜೀವನ ನನಗೆ ಇಷ್ಟವಿಲ್ಲ. ಹೌದು. ನನಗೆ ಇಬ್ಬರುಪತ್ನಿಯರು, ಅದನ್ನು ಓಪನ್‌ ಆಗಿಯೇ ಹೇಳುತ್ತೇನೆ. ನನಗೆ ಎಥಿಕ್ಸ್‌ ಮುಖ್ಯ. ಹೆಂಡ್ತಿ ಬಿಟ್ಟು ಇನ್ನೊಬ್ಬಳ ಜೊತೆ ಸಂಬಂಧ ಇಟ್ಟುಕೊಂಡು ಆ ಹೆಣ್ಣನ್ನು ಹೊರ ಜಗತ್ತಿಗೆ ತೋರಿಸದೇ ಕತ್ತಲಲ್ಲಿ ಇಡುವ ಮನುಷ್ಯ ನಾನಲ್ಲ. ಅಂಥ ಸಂಬಂಧ ನನಗೆ ಬೇಡ ಎಂದಿದ್ದರು ಈ ಸಂದರ್ಶನದಲ್ಲಿ! 

 ಅರ್ಜುನ್ ರಮೇಶ್  ಜೆಂಟಲ್ ಮ್ಯಾನ್, ಕೌಟಿಲ್ಯ, ದೇವರ ಆಟ ಬಲ್ಲವರಾರು ಸಿನಿಮಾಗಳಲ್ಲೂ ನಟಿಸಿದ್ದಾರೆ. ಇವರು ರಾಜಕಾರಣಿಯೂ ಹೌದು. ಇನ್ನೊಂದು ಕುತೂಹಲದ ವಿಷಯ ಏನೆಂದರೆ,  ದೇವರ ಆಟ ಬಲ್ಲವರಾರು ಸಿನಿಮಾ 36 ಗಂಟೆಗಳ ಸತತ ಶೂಟಿಂಗ್ ಮಾಡಿ ಮುಗಿಸುವ ಮೂಲಕ ಗಿನ್ನೆಲ್ ದಾಖಲೆ ಬರೆಯುವ ಪ್ರಯತ್ನವನ್ನೂ ಮಾಡಿತ್ತು. ಆದರೆ, ಸಂಬಂಧಗಳ ವಿಷಯ ಬಂದಾಗ, ಉಳಿದೆಲ್ಲವೂ ಗೌಣವಾಗುತ್ತದೆ ಎನ್ನುವ ಹಾಗೆ, ಮೊದಲೇ ಹೇಳಿದ ಹಾಗೆ,  ಇಬ್ಬರು ಹೆಂಡ್ತಿಯರ ಮೂಲಕ ಫೇಮಸ್‌ ಆದವರು.  ಇಬ್ಬರು ಪತ್ನಿಯರು ಮತ್ತು  ಇಬ್ಬರು ಮಕ್ಕಳ ಜೊತೆಗೆ ನಟ  ಜೀವನ ನಡೆಸುತ್ತಿದ್ದಾರೆ. ಕೆಲವೊಮ್ಮೆ ಎಲ್ಲರ ಫೋಟೋಗಳನ್ನೂ ಇವರು ಶೇರ್‍‌ ಮಾಡುತ್ತಾರೆ.  

ಮದ್ವೆಯಾದ ವಿಷಯ ತಿಳಿಸಿ ಶಾಕ್‌ ನೀಡಿದ್ದ ನಟಿ ಅಶ್ವಿನಿ ಕಾಶ್ಮೀರದಲ್ಲಿ ಜಾಲಿ ಮೂಡ್‌: ವಿಡಿಯೋ ವೈರಲ್‌
 

click me!