
ಕಿರುತೆರೆ ಅನ್ನೋದು ಒಂಥರಾ ಮಾಯಾಜಾಲ ಅನ್ನಬಹುದು. ಈ ಒಮ್ಮೆ ಈ ಜಗತ್ತಿನೊಳಗೆ ಕಾಲಿಟ್ಟರೆ ಸಾಕು, ಆಮೇಲೆ ಹೊರಬರಬೇಕು ಅಂದರೂ ಹೊರಬರೋದಕ್ಕಾಗಲ್ಲ. ನಮಗೆ ಇಷ್ಟ ಇರಲಿ, ಇಲ್ಲದೇ ಇರಲಿ ಅಲ್ಲೇ ಗೂಟ ಹೊಡ್ಕೊಂಡು ಬಿದ್ದಿರಬೇಕಾಗುತ್ತೆ. ಅಷ್ಟೇ ಆದ್ರೆ ಪರ್ವಾಗಿಲ್ಲ, ಇನ್‌ಸ್ಟಾದಲ್ಲಿ ಆ ಸೀರಿಯಲ್ ಅಪ್‌ಡೇಟ್ಸ್ ಅನ್ನೇ ಎದುರು ನೋಡೋ ವರ್ಗ ಮತ್ತೊಂದು. ಇದೆಲ್ಲ ಸೀರಿಯಲ್‌ಗಳಿಗೆ ಪಾಸಿಟಿವ್ ಆಗಿಯೇ ಪರಿಣಾಮ ಬೀರುತ್ತಿದೆ. ಸದ್ಯ ಒಂದಿಷ್ಟು ಸೀರಿಯಲ್‌ಗಳು ವೀಕ್ಷಕರಿಗೆ ಇಷ್ಟವಾಗಿವೆ. ಇನ್ನೊಂದಿಷ್ಟು ಇಷ್ಟ ಆಗಿಲ್ಲ. ಇಷ್ಟ ಆಗಿರೋದಕ್ಕೆ ಟಿಆರ್‌ಪಿಯನ್ನು ಭರ್ಜರಿಯಾಗಿಯೇ ನೀಡ್ತಾರೆ, ದಿನಾ ಸೀರಿಯಲ್ ನೋಡುವ ಮೂಲಕ. ಇದೀಗ ಸೀರಿಯಲ್ ನೋಡುವವರಿಗೆ ಒಂದಿಷ್ಟು ಸೀರಿಯಲ್‌ಗಳು ಹುಚ್ಚೇ ಹಿಡಿಸಿಬಿಟ್ಟಿವೆ. ಒಬ್ಬರಂತೂ, 'ಹುಚ್ಚು ಹಿಡೀಬೇಕು ಅಂದರೆ ಈ ಸೀರಿಯಲ್ ನೋಡಿ' ಅಂತ ಕಾಮೆಂಟ್ ಮಾಡಿದ್ದಾರೆ. ಅದು ಯಾವ ಸೀರಿಯಲ್? ಅದನ್ನು ನೋಡಿದರೆ ಯಾಕೆ ಹುಚ್ಚು ಹಿಡೀಬೇಕು?
ನೀವು ಜೀ ಕನ್ನಡದ ಸೀರಿಯಲ್ ನೋಡ್ತಿದ್ರೆ ಅದರಲ್ಲಿ ಡಿಫರೆಂಟ್ ಸಬ್ಜೆಕ್ಟ್‌ನ ಸೀರಿಯಲ್‌ಗಳು ಬರ್ತಾ ಇವೆ. ಪುಟ್ಟಕ್ಕನ ಮಕ್ಕಳು ಸೀರಿಯಲ್ ಟಿಆರ್‌ಪಿಯಲ್ಲಿ ನಂ.1 ಸ್ಥಾನದಲ್ಲಿದೆ. ಇದರಲ್ಲಿ ಪುಟ್ಟಕ್ಕ ಎಂಬ ಗಟ್ಟಿಗಿತ್ತಿ ಹೆಣ್ಣುಮಗಳು ತನ್ನ ಮೂವರು ಹೆಣ್ಣುಮಕ್ಕಳನ್ನು ಸಮರ್ಥವಾಗಿ ಬೆಳೆಸಿ ಮಾದರಿಯಾಗಿ ನಿಲ್ಲೋದೇ ಈ ಸೀರಿಯಲ್ ಕಥೆ. ಇನ್ನೊಂದು ಅಮೃತಧಾರೆ. ಗೌತಮ್ ದಿವಾನ್ ಅನ್ನೋ ಮಧ್ಯ ವಯಸ್ಸಿನ ಶ್ರೀಮಂತ ಅನಿವಾರ್ಯತೆಗೆ ಬಿದ್ದು ಮಿಡಲ್ ಕ್ಲಾಸ್‌ನ ಮಧ್ಯ ವಯಸ್ಸಿನ ಹೆಣ್ಣುಮಗಳು ಭೂಮಿಕಾ ಕೈ ಹಿಡಿಯುತ್ತಾನೆ. ಒತ್ತಡಕ್ಕೆ ಒಳಗಾಗಿ ಮದುವೆ ಮಾಡಿಕೊಂಡ ಇವರು ಪ್ರೇಮದ ಬಲೆಯಲ್ಲಿ ಬೀಳೋ ಕಥೆ ಈ ಸೀರಿಯಲ್‌ನದು.
ಏನಿದು ಖರ್ಜೂರ ರಹಸ್ಯ? ಮಹೇಶ್ ಮಾತಿನಿಂದ ಶಾರ್ವರಿಯ ಹೃದಯವೇ ಕಿತ್ತು ಬಂತಲ್ಲ!
ಜೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಮತ್ತೊಂದು ಜನಪ್ರಿಯ ಸೀರಿಯಲ್ 'ಸೀತಾರಾಮ'. ಇದರಲ್ಲಿ ಸೀತಾ ಎಂಬ ಐದಾರು ವರ್ಷದ ಮಗುವಿನ ತಾಯಿ ಹಾಗೂ ಶ್ರೀರಾಮ ದೇಸಾಯಿ ಎಂಬ ಆಗರ್ಭ ಶ್ರೀಮಂತನ ನಡುವಿನ ಪ್ರೇಮದ ಕಥೆ ಇದೆ. ಸದ್ಯ, 'ಹುಚ್ಚು ಹಿಡೀಬೇಕು ಅಂದ್ರೆ ಈ ಸೀರಿಯಲ್ ನೋಡಿ' ಅಂತ ವೀಕ್ಷಕರು ಕಾಮೆಂಟ್ ಮಾಡಿರೋದು ಈ ಸೀರಿಯಲ್‌ಗೇ. ಅವರು ಪಾಸಿಟಿವ್ ಆಗಿ ಕಾಮೆಂಟ್ ಮಾಡಿದ್ದಾರೋ, ನೆಗೆಟಿವ್ ಆಗಿ ಈ ಮಾತನ್ನು ಹೇಳಿದ್ದಾರೋ ಗೊತ್ತಿಲ್ಲ, ಆದರೆ ಈ ಸೀರಿಯಲ್ ಸಖತ್ ಹೈಪ್ ಕ್ರಿಯೇಟ್ ಮಾಡಿರೋದಂತೂ ನಿಜ. ಇದರಲ್ಲಿ ಮಿಡಲ್ ಕ್ಲಾಸ್ ಲೈಫಿನ ಸೊಗಸನ್ನು, ಆ ಲೈಫಿನ ಕಷ್ಟ ಸುಖಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.
ಪುಟಾಣಿ ಹುಡುಗಿ ಸಿಹಿ ಈ ಸೀರಿಯಲ್‌ನ ಸೆಂಟರ್ ಆಫ್ ಅಟ್ರಾಕ್ಷನ್ (Center of Attraction). ಆಕೆಯ ಮುದ್ದು ಮಾತು, ಆಟ ತುಂಟಾಟ, ಒಳ್ಳೆತನದ ಜೊತೆಗೆ ಚೆಂದದ ಎಕ್ಸ್‌ಪ್ರೆಶನ್‌ಗಳು ಈ ಸೀರಿಯಲ್‌ಗೆ ಪಾಸಿಟಿವ್ ಆಗಿದೆ. ಇದರ ಜೊತೆಗೆ ಸೀತಾ ಮತ್ತು ರಾಮರ ಜೋಡಿಯೂ ಸಖತ್ ಕ್ಯೂಟ್ ಆಗಿದ್ದು ವೀಕ್ಷಕರು ಈ ಜೋಡಿಯನ್ನು ಮನಸಾರೆ ಮೆಚ್ಚಿಕೊಂಡಿದ್ದಾರೆ. ಈ ಸೀರಿಯಲ್ಲಿನಲ್ಲಿ ಇರುವ ಇನ್ನೊಂದು ಕ್ಯೂಟ್ ಜೋಡಿ ಅಂದರೆ ಪ್ರಿಯಾ ಮತ್ತು ಅಶೋಕ್. ಈ ತರಲೆ ಜೋಡಿಯನ್ನೂ ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಈ ಸೀರಿಯಲ್ ಅನ್ನು ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕು ಅನಿಸೋದು ಸುಳ್ಳಲ್ಲ. ಸದ್ಯ ಸೀತೆ ತಾನು ಸಿಹಿಯ ತಾಯಿ ಎನ್ನುತ್ತಿದ್ದಾಳೆ, ಹಾಗಿದ್ದರೆ ಸಿಹಿಯ ತಂದೆ ಯಾರು ಎಂದು ಗೊತ್ತಿಲ್ಲ. ಅದನ್ನು ರಿವೀಲ್ ಮಾಡಲು ವಿಲನ್ ಭಾರ್ಗವಿ ಹೊರಟಿದ್ದಾಳೆ.
ಒಂದು ಕಡೆ ಸೀರಿಯಲ್‌ನಲ್ಲಿ ರಾಮ ಸೀತೆಯರ ಲವ್ ಸ್ಟೋರಿ ಟ್ರಾಕ್ ಹೋಗುತ್ತಿದ್ದರೆ ಇನ್ನೊಂದು ಟ್ರಾಕ್‌ನಲ್ಲಿ ಸಿಹಿಯ ತಂದೆ ಯಾರು ಅನ್ನೋದು ಗೊತ್ತಾಗಲಿದೆ. ಅದು ಗೊತ್ತಾದರೆ ಸೀತೆ ಮತ್ತು ರಾಮರ ಸಂಬಂಧ ಹೇಗೆ ಮುಂದುವರಿಯುತ್ತೆ ಅನ್ನೋದು ಟ್ವಿಸ್ಟ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.