ಪೂರ್ಣಿಯನ್ನು ಅನಾಥಾಶ್ರಮಕ್ಕೆ ಸೇರಿಸಿದ್ದು ಮಾಧವನಾ? ತುಳಸಿಗೆ ಗೊತ್ತಾದ ಸತ್ಯವೇನು?

By Suvarna NewsFirst Published Apr 4, 2024, 11:40 AM IST
Highlights

ಪೂರ್ಣಿಯನ್ನು ಅನಾಥಾಶ್ರಮಕ್ಕೆ ಸೇರಿಸಿದ್ದು ಮಾಧವನಾ? ಹಾಗಿದ್ದರೆ ಅವಳ ಹುಟ್ಟಿನ ರಹಸ್ಯವೇನು? ಮಾಧವ್​ ಯಾಕೆ ಹೀಗೆ ಮಾಡಿದ? 
 

ಶ್ರೀರಸ್ತು ಶುಭಮಸ್ತು ಪೂರ್ಣಿ ಅನಾಥೆ ಎಂದೇ ಇಲ್ಲಿಯವರೆಗೆ ತೋರಿಸುತ್ತಾ ಬರಲಾಗಿದೆ. ಅವಳು ತನ್ನನ್ನು ತಾನು ಅನಾಥೆ ಎಂದುಕೊಂಡಿದ್ದಾಳೆ. ಅನಾಥಾಶ್ರಾಮದಲ್ಲಿಯೇ ಬೆಳೆದಿರುವ ಪೂರ್ಣಿಗೆ ತನ್ನ ಹುಟ್ಟಿನ ಬಗ್ಗೆಯೂ ಗೊತ್ತಿಲ್ಲ. ಅದರ ಬಗ್ಗೆ ಆಕೆ ಹೆಚ್ಚಿಗೆ ತಲೆಕೆಡಿಸಿಕೊಂಡೂ ಇಲ್ಲ. ಮಾಧವನ ಮನೆಯಲ್ಲಿ ಎಲ್ಲರೂ ಆಕೆಯನ್ನು ಅನಾಥೆ ಎಂದುಕೊಂಡಿದ್ದಾರೆ. ಮಾಧವನ ಮಗ ಅವಿಯ ಸೊಸೆಯಾಗಿ ಬಂದಿದ್ದಾಳೆ. ಅವಿ ಕೂಡ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ, ತುಂಬಾ  ಪ್ರೀತಿ ಮಾಡುತ್ತಿದ್ದಾನೆ. ಇನ್ನು ತುಳಸಿಗೋ ಆ ಮನೆಯಲ್ಲಿ ಮಾಧವ್​ನನ್ನು ಬಿಟ್ಟರೆ ತುಂಬಾ ಪ್ರೀತಿ, ಅಕ್ಕರೆಯಿಂದ ನೋಡಿಕೊಳ್ಳುವವಳು ಇದೇ ಪೂರ್ಣಿ. ಈಕೆಗೂ ತುಳಸಿಯೇ ಅಮ್ಮ. ಆದರೆ ಈಕೆ ಅನಾಥಾಶ್ರಮದಿಂದ ಬಂದವಳು ಎನ್ನುವ ಕಾರಣಕ್ಕೆ ದೀಪಿಕಾ ಆಗ್ಗಾಗ್ಗೆ ಚುಚ್ಚುವುದು ಉಂಟು.

ಆದರೆ ಈ ಪೂರ್ಣಿ ಯಾರು ಎಂಬ ಬಗ್ಗೆ ಇದೀಗ ಸೀರಿಯಲ್​ನಲ್ಲಿ ಟ್ವಿಸ್ಟ್​ ಮೂಡಿದೆ. ಅನಾಥಾಶ್ರಮದವರು ಮನೆಗೆ ಬಂದಾಗ, ಅವರು ಪೂರ್ಣಿಯ ಅನಾಥಾಶ್ರಮದವರು ಎಂದು ಅರಿಯದ ತುಳಸಿ ದೀಪಿಕಾ ಮಾತು ಕೇಳಿ ಅವರನ್ನು ಪ್ರಶ್ನೆ ಮಾಡುತ್ತಾಳೆ.  ಅವರು ಹಣಕ್ಕಾಗಿ ಮನೆಗೆ ಬಂದಿರುತ್ತಾರೆ, ಇದರಿಂದ ತುಳಸಿ ಅವರನ್ನು ಪ್ರಶ್ನೆ ಮಾಡುತ್ತಾಳೆ. ಇದರಿಂದ ಸಿಟ್ಟುಗೊಂಡ ಅವರು ಅಲ್ಲಿಂದ ಹೊರಟುಹೋಗುತ್ತಾರೆ. ಬಳಿಕ ಎಲ್ಲರೂ ತುಳಸಿಗೆ ಬೈಯುತ್ತಾರೆ. ತನ್ನ ತಪ್ಪಿನ ಅರಿವಾಗಿ ತುಳಸಿ ಆ ಅನಾಥಾಶ್ರಮವವನ್ನು ಹುಡುಕಿ ಹೋಗಿ ಕ್ಷಮೆ ಕೋರಿ ಹಣ ಕೊಟ್ಟು ಬರುತ್ತಾಳೆ.

ಯುವಕನ ಕೈ ನೋಡಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಭಾವುಕ: ಆತನ ಅಭಿಮಾನಕ್ಕೆ ನಟಿಯ ಕಣ್ಣೀರು

ಈ ಸಮಯದಲ್ಲಿ ಅವರ ದೃಷ್ಟಿ ಅಲ್ಲಿರುವ ಪೂರ್ಣಿಯ ಡ್ಯಾನ್ಸ್​ ಫೋಟೋದ ಮೇಲೆ ಬೀಳುತ್ತದೆ. ಇವಳು ಇಲ್ಲೇ ಬೆಳೆದದ್ದಾ ಕೇಳಿದಾಗ, ಅವರು ಹೌದು ಎನ್ನುತ್ತಾರೆ. ನಂತರ ಖುಷಿಯಿಂದ ಈ ವಿಷಯವನ್ನು ಮಾಧವ್​ ಬಳಿ ಹೇಳುತ್ತಾಳೆ ತುಳಸಿ. ಅನಾಥಾಶ್ರಮಕ್ಕೆ ತುಳಸಿ ಕೇಳದೇ ಹೋದ ಬಗ್ಗೆ ಮಾಧವ್​ ಸಿಟ್ಟಾಗುತ್ತಾನೆ, ಪೂರ್ಣಿ, ಅನಾಥೆ ಹಾಗೆಲ್ಲಾ ಹೇಳಬೇಡಿ ಎಂದು ತುಳಸಿಗೆ ಬೈದಾಗ ಅವಳಿಗೆ ವಿಚಿತ್ರ ಎನಿಸುತ್ತದೆ. ಬಳಿಕ ತುಳಸಿ ಪೂರ್ಣಿ ಮತ್ತು ಅವಿಯನ್ನು ಕರೆದುಕೊಂಡು ಆಶ್ರಮಕ್ಕೆ ಹೋಗುತ್ತಾಳೆ. ಅಲ್ಲಿ ಆಶ್ರಮದವರು ಇಬ್ಬರಿಗೂ ಉಡುಗೊರೆ ಕೊಟ್ಟು ಸತ್ಕರಿಸುತ್ತಾಳೆ.

ಈ ಸಂದರ್ಭದಲ್ಲಿ ತುಳಸಿ ಪೂರ್ಣಿಯ ಹಿನ್ನೆಲೆ ಏನು, ಯಾರು ಸೇರಿಸಿದ್ದು ಎಂದು ಸಹಜವಾಗಿ ಆಶ್ರಮದವರನ್ನು ಕೇಳುತ್ತಾಳೆ. ಅಷ್ಟರಲ್ಲಿಯೇ ಮಧ್ಯೆ ಪ್ರವೇಶಿಸುವ ಮಾಧವ್​, ಪೂರ್ಣಿ ಹುಟ್ಟಿನ ಕುರಿತು ಇವರಿಗೆ ಹೇಗೆ ಗೊತ್ತಿರುತ್ತದೆ ಎಂದು ಮಾತನ್ನು ಅಲ್ಲಿಯೇ ನಿಲ್ಲಿಸಿ ಏನೂ ಹೇಳಬೇಡಿ ಎಂದು ಸನ್ನೆ ಮಾಡುತ್ತಾನೆ. ಅಷ್ಟರಲ್ಲಿ ತುಳಸಿ ಮಾಧವ್​ನನ್ನು ನೋಡುತ್ತಾಳೆ. ಅವಳ ಅನುಮಾನ ನಿಜವಾಗುತ್ತದೆ. ಮಾಧವ್​ಗೂ ಪೂರ್ಣಿಗೂ ಏನೋ ಸಂಬಂಧವಿದೆ, ಪೂರ್ಣಿಯ ಹುಟ್ಟಿನ ರಹಸ್ಯ ಆತನಿಗೆ ಗೊತ್ತಿದೆ ಎಂಬ ಅನುಮಾನ ಮೂಡುತ್ತದೆ. ಹಾಗಿದ್ದರೆ ಯಾರೀ ಪೂರ್ಣಿ? ಮಾಧವ್​ನ ಮಗಳಾಗಲಂತೂ ಸಾಧ್ಯವಿಲ್ಲ. ಏಕೆಂದರೆ, ಅವಳಿಗೆ ಮಗನ ಸೊಸೆ. ಇನ್ನು ಅಕ್ಕ-ತಂಗಿಯ ಮಗಳಾಗಿರಬಹುದೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ಪೂರ್ಣಿಯ ಜನ್ಮರಹಸ್ಯ ಮಾಧವ್​ಗೆ ಗೊತ್ತಿದೆ. ಇದರ ಬಗ್ಗೆ ತುಳಸಿಗೂ ತಿಳಿಯಬೇಕಿದೆ. 

ಫ್ಲಾಪ್​ ಚಿತ್ರಗಳನ್ನು ಕೊಟ್ಟು, 6 ವರ್ಷ ಸಿನಿಮಾದಿಂದ ದೂರವಿದ್ದರೂ ಅಮಿತಾಭ್​, ಶಾರುಖ್​ಗಿಂತಲೂ ಫೇಮಸ್​ ಈಕೆ!

click me!