ನಟಿ ಸುಶ್ಮಿತಾ ಮದುವೆಯಾದ ಬೆನ್ನಲ್ಲಿಯೇ ಹೆಂಡತಿಯ ತ್ಯಾಗ, ಜವಾಬ್ದಾರಿ ಹಾಡಿ ಹೊಗಳಿದ ಜಗಪ್ಪ

Published : May 23, 2024, 05:46 PM IST
ನಟಿ ಸುಶ್ಮಿತಾ ಮದುವೆಯಾದ ಬೆನ್ನಲ್ಲಿಯೇ ಹೆಂಡತಿಯ ತ್ಯಾಗ, ಜವಾಬ್ದಾರಿ ಹಾಡಿ ಹೊಗಳಿದ ಜಗಪ್ಪ

ಸಾರಾಂಶ

ಕಾಮಿಡಿ ಕಿಲಾಡಿ ಖ್ಯಾತಿಯ ನಟ ಜಗಪ್ಪ, ನಟಿ ಸುಶ್ಮಿತಾರನ್ನು ಮದುವೆಯಾದ ಬೆನ್ನಲ್ಲಿಯೇ ಹೆಂಡತಿಯ ತ್ಯಾಗ, ಜವಾಬ್ದಾರಿಯ  ಮಹತ್ವವನ್ನು ಹಾಡಿ ಹೊಗಳಿದ್ದಾರೆ.

ಬೆಂಗಳೂರು (ಮೇ 23): ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಜಗ್ಗಪ್ಪ ಇತ್ತೀಚೆಗೆ ನಟಿ ಸುಶ್ಮಿತಾ ಅವರನ್ನು ಮದುವೆಯಾದ ಬೆನ್ನಲ್ಲಿಯೇ ಹೆಂಡತಿಯ ತ್ಯಾಗ, ಜವಾಬ್ದಾರಿಗಳನ್ನು ಹಾಗೂ ಸ್ರ್ತೀಯರ ಮಹತ್ವವನ್ನು ಹಾಡಿ ಹೊಗಳಿದ್ದಾನೆ. ಇದಕ್ಕೆ ನಿಮ್ಮ ಹೆಂಡತಿ ಸುಶ್ಮಿತಾ ಪುಣ್ಯ ಮಾಡಿದ್ದಾಳೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ನಮ್ಮ ದೇಶದಲ್ಲಿ ಪುರುಷ ಪ್ರಧಾನವೇ ಹೆಚ್ಚಾಗಿದೆ. ಹೀಗಾಗಿ, ಜತನ ಕಾಲದಿಂದಲೂ ಮಹಿಳೆಯನ್ನು ಅಬಲೆಯಾಗಿಯೇ ನೋಡುತ್ತಾ ಬರಲಾಗಿದೆ. ಪ್ರಸ್ತುತ ಸಮಾಜದಲ್ಲಿ ಮಹಿಳೆಯರು ಅಬಲೆಯರಲ್ಲ, ಸಬಲರು ಎಂದು ತೋರಿಸುವ ನಿಟ್ಟಿನಲ್ಲಿ ಪುರುಷರು ಕೆಲಸ ಮಾಡುವ ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರು ಪಾದಾರ್ಪಣೆ ಮಾಡಿ ಯಶಸ್ಸು ಸಾಧಿಸಿದ್ದಾರೆ. ಆದರೂ, ಮಹಿಳೆಯ ಮೇಲೆ ನಡೆಯುವ ದೌರ್ಜನ್ಯ, ಕೀಳಿರಿಮೆ ಮನೋಭಾವ, ಮಹಿಳೆಗೆ ಪೂರ್ಣ ಸ್ವಾತಂತ್ರ್ಯ ನೀಡದಿರುವುದು, ಮನೆಯಲ್ಲಿ ಪುರುಷನ ಅಡಿಯಾಳಾಗಿ ಕೆಲಸ ಮಾಡಿಕೊಂಡಿವ ಕೆಲವು ಕಟ್ಟಳೆಗಳನ್ನುಇ ವಿಧಿಸುತ್ತಲೇ ಬರಲಾಗುತ್ತಿದೆ. ಇದನ್ನು ಮೀರಿ ಹೆಂಡತಿಯಾಗಿ ಮನೆಗೆ ಮರುವ ಮಹಿಳೆಯ ಪಾತ್ರ ಮತ್ತು ಮಹತ್ವವೇನು ಎಂಬುದನ್ನು ಕಾಮಿಡಿ ಸ್ಟಾರ್ ಜಗ್ಗಪ್ಪ ತಿಳಿಸಿಕೊಟ್ಟಿದ್ದಾರೆ.

Bengaluru Rave Party: ಡ್ರಗ್ಸ್ ಸೇವಿಸಿ ಸಿಕ್ಕಿಬಿದ್ದ ನಟಿ ಆಶಿ ರಾಯ್‌ಗೆ ಸಿಸಿಬಿ ನೊಟೀಸ್

ಹೆಣ್ಣು ಮಕ್ಕಳು ಗಂಡನ ಮನೆಗೆ ಬರುವಾಗ ಎಷ್ಟೆಲ್ಲಾ ತ್ಯಾಗ ಮಾಡಿ ಬರುತ್ತಾರೆ ಗೊತ್ತಾ.? 

  • ಯಾವುದೇ ಕಚೇರಿಯಲ್ಲಿ ಹತ್ತಾರು ಜನರ ಮುಂದೆ ಜವಾನನಾಗಿ ಕೆಲಸ ಮಾಡುವ ಗಂಡನಿಗೆ ಯಜಮಾನ ಎಂದು ಕರೆಯುವ ಒಂದೇ ಜೀವ ಎಂದರೆ ಅದು ಹೆಂಡತಿ. 
  • ಒಂದು ಹೆಣ್ಣನ್ನು ನೋಡುವುದಕ್ಕೆ ನಾವು 100 ಜನ ಹೋಗುತ್ತೇವೆ. ಆದರೆ, ಆ ನೂರು ಜನರನ್ನು ಸಾಕುವುದಕ್ಕಾಗಿ ಹೆಣ್ಣು ಇಡೀ ತನ್ನೂರಿನ ಜನರನ್ನು ಬಿಟ್ಟು ಬರುವವಳು ಹೆಂಡತಿ.
  • ಒಬ್ಬ ತಾಯಿ ನನಗೆ ಜನ್ಮ ಕೊಡುತ್ತಾಳೆ. ಆದರೆ ನನ್ನ ಮಕ್ಕಳಿಗೂ ಜನ್ಮ ಕೊಟ್ಟು, ನನ್ನ ಮನೆಯ ನಂದಾ ದೀಪ ಬೆಳಗುವ ಎರಡನೇ ತಾಯಿ ಹೆಂಡತಿ..
  • ಅತ್ತೆ, ಮಾವ, ಗಂಡ, ಮೈದುನ, ಮಕ್ಕಳು ಎಲ್ಲರೂ ಅನಾರೋಗ್ಯದಿಂದ ಹಾಸಿಗೆ ಹಿಡಿದಾಗ ತನ್ನ ಎಲ್ಲ ಸುಖವನ್ನು ತ್ಯಜಿಸಿ ನಮ್ಮನ್ನು ಆರೈಕೆ ಮಾಡುವ ಲಕ್ಷ್ಮೀ ಈ ಹೆಂಡತಿ..
  • ಗಂಡ, ಕುಂಟ, ಕುರುಡ, ಕಳ್ಳ, ವಂಚಕ, ಮೋಸಗಾರ ಏನೇ ಆಗಿದ್ದರೂ ಅದನ್ನು ಕ್ಷಮಿಸಿ ತಿದ್ದುವ ಒಂದೇ ಒಂದು ಜೀವ ಎಂದರೆ ಹೆಂಡತಿ...
  • ಈ ಪ್ರಪಂಚದಲ್ಲಿ ನೆಮ್ಮದಿ ಸಿಗುವ ಎರಡೇ ಎರಡು ಜಾಗ ಎಂದರೆ ಒಂದು ತಾಯಿಯ ಒಡಲು ಆದರೆ, ಇನ್ನೊಂದು ಹೆಂಡತಿಯ ಮಡಿಲು...

ಅಪರಿಚಿತ ಕೊಟ್ಟ ಪೆನ್​ಡ್ರೈವ್​ ನೋಡಿ ನಟ ರಮೇಶ್​ ಅರವಿಂದ್​ಗೆ ಫುಲ್​ ಶಾಕ್​- ಮುಂದೇನಾಯ್ತು ನೋಡಿ...

ಹೀಗೆ ಹೆಂಡತಿಯ ಮಹತ್ವವನ್ನು ತನ್ನದೇ ಶೈಲಿಯ ಡೈಲಾಗ್ ಮೂಲಕ ಹೇಳಿದ್ದಾನೆ. ಜಗ್ಗಪ್ಪನ ಈ ಡೈಲಾಗ್‌ಗೆ ಕಾಮಿಡಿ ಕಿಲಾಡಿಗಳು ಪ್ರೀಯಿಯರ್ ಲೀಗ್ ವೇದಿಕೆಯ ಬಳಿಯಿದ್ದ ಜಡ್ಜಸ್‌ಗಳು, ಕೋ ಕಂಟೆಸ್ಟೆಂಟ್‌ಗಳು, ವೀಕ್ಷಕರು ಕೂಡ ಭರಪೂರ ಚಪ್ಪಾಳೆ ತಟ್ಟಿ, ಶಿಳ್ಳೆ ಹೊಡೆದಿದ್ದಾರೆ. ಆದರೆ, ಈ ಡೈಲಾಗ್‌ಗಳನ್ನು ಒಂದು ಕಿರುನಾಟಕ (ಸ್ಕಿಟ್) ಮಾಡುವಾಗ ಹೇಳಿದ್ದಾರೆ. ನಿಜ ಜೀವನದಲ್ಲಿಯೂ ಜಗ್ಗಪ್ಪ ಮಹಿಳೆಯರ ಮೇಲೆ ಹೀಗೆಯೇ ಗೌರವ ಹೊಂದಿದ್ದಾನಾ ಎಂಬುದು ಎಲ್ಲರ ಪ್ರಶ್ನೆಯಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ನೀನು ಫ್ರೀ ಪ್ರೊಡಕ್ಟ್‌, ಏನೂ ಮಾಡದೆ ಇಲ್ಲಿದ್ದೀಯಾ? ಕೊನೆಗೂ ಕಾವ್ಯ ವಿರುದ್ಧ ತಿರುಗಿಬಿದ್ದ ಗಿಲ್ಲಿ ನಟ
Bigg Boss: ರೊಮ್ಯಾನ್ಸ್‌ ಎಂದ ರಜತ್;‌ ಎಪಿಸೋಡ್‌ನಲ್ಲಿ ಇಲ್ಲ ಅಂತ ವೀಕ್ಷಕರು ಅಂದ್ಕೊಂಡ್ರೆ ಏನ್‌ ಮಾಡಲಿ?: ರಾಶಿಕಾ