ಅಪರಿಚಿತ ವ್ಯಕ್ತಿಯೊಬ್ಬರು ನಟ ರಮೇಶ್ ಅರವಿಂದ್ ಕೈಗೆ ಪೆನ್ಡ್ರೈವ್ ಕೊಟ್ಟಾಗ ನಟ ಫುಲ್ ಶಾಕ್ ಆದರು. ಅಸಲಿಗೆ ಆಗಿದ್ದೇನು?
ಈಗ ರಾಜ್ಯ ಮಾತ್ರವಲ್ಲ ರಾಜಕಾರಣದಲ್ಲಿಯೂ ಪೆನ್ಡ್ರೈವ್ದೇ ಸದ್ದು. ಪೆನ್ಡ್ರೈವ್ ಹೆಸರು ಕೇಳಿದರೆ ಸಾಕು, ಯೋಚನೆ ಹೋಗುವುದು ಒಂದೇ ಕಡೆ. ಇದೀಗ ನಟ ರಮೇಶ್ ಅರವಿಂದ್ ಅವರಿಗೂ ಹಾಗೆಯೇ ಆದಂತಿದೆ. ಅಪರಿಚತರೊಬ್ಬರು ನಟನಿಗೆ ಪೆನ್ಡ್ರೈವ್ ಕೊಡಲು ಬಂದಿದ್ದು, ಅದನ್ನು ನೋಡಿ ರಮೇಶ್ ಅವರು ಬೆಚ್ಚಿಬಿದ್ದಿದ್ದಾರೆ. ಮೊದಲು ಅದನ್ನು ಇಲ್ಲಿಂದ ಬೀಸಾಕಿ ಎಂದು ಹೇಳಿದ್ದಾರೆ. ಅಷ್ಟಕ್ಕೂ ಆಗಿದ್ದೇನು?
ರಮೇಶ್ ಅರವಿಂದ್ ಅವರು ಕಾರ್ಯಕ್ರಮದಿಂದ ಹೊರಕ್ಕೆ ಬರುತ್ತಿದ್ದಂತೆಯೇ ವ್ಯಕ್ತಿಯೊಬ್ಬ ಪೆನ್ಡ್ರೈವ್ ತಂದು ಅದನ್ನು ರಮೇಶ್ ಅವರ ಕೈಗೆ ಕೊಡಲು ಮುಂದಾಗಿದ್ದಾರೆ. ಪೆನ್ಡ್ರೈವ್ ನೋಡುತ್ತಿದ್ದಂತೆಯೇ ರಮೇಶ್ ಬೆಚ್ಚಿಬಿದ್ದಿದ್ದಾರೆ. ಏನ್ರಿ ಇದು, ಮೊದಲು ಇದನ್ನು ಈ ಫ್ರೇಮ್ನಿಂದ ಆಚೆಗೆ ತೆಗೀರಿ ಎಂದಿದ್ದಾರೆ. ಆಗ ಅಲ್ಲಿಗೆ ಬಂದ ವ್ಯಕ್ತಿ, ಸರ್ ನಾನು ಒಂದು ಷಾರ್ಟ್ ಫಿಲ್ಮ್ ಡೈರೆಕ್ಟ್ ಮಾಡಿದ್ದೆ. ಅದನ್ನು ಕೊಡೋಣ ಎಂದು ಬಂದೆ ಎನ್ನುತ್ತಾರೆ. ಆಗ ರಮೇಶ್ ಅವರು ಓಕೆ ಓಕೆ ಹಾಗೆ ಹೇಳಿ... ಇದು ಜೀ ಪಿಕ್ಚರ್ಸ್ ಅವರ ಷಾರ್ಟ್ ಫಿಲ್ಮ್ ಸ್ಪರ್ಧೆಗಾ ಎನ್ನುತ್ತಲೇ ಇಲ್ಲೊಂದು ಕ್ಯೂಆರ್ ಕೋಡ್ ಇದೆ. ಅದನ್ನು ಸ್ಕ್ಯಾನ್ ಮಾಡಿ. ಏನು ಮಾಡಬೇಕು ಎಂದು ತಿಳಿಯುತ್ತದೆ, ಹೀಗೆಲ್ಲಾ ಪೆನ್ಡ್ರೈವ್ ಕೊಡಬೇಡಿ ಎಂದಿದ್ದಾರೆ. ಇದು ತಮಾಷೆಯ ವಿಡಿಯೋ ಆದರೂ, ವೀಕ್ಷಕರು ಇದಕ್ಕೆ ಥಹರೇವಾರಿ ಕಮೆಂಟ್ ಹಾಕುತ್ತಿದ್ದಾರೆ.
undefined
ನೋಡಿ ಫ್ರೆಂಡ್ಸ್... ರಾತ್ರಿ ನಿದ್ದೆ ಮಾಡಲೂ ಬಿಡಲಿಲ್ಲ... ಸೀತಾರಾಮ ಸಿಹಿಯಿಂದ ಹೀಗೊಂದು ಕಂಪ್ಲೇಂಟ್...
ಅಂದಹಾಗೆ ಜೀ ಟೀವಿಯವರ ಟೀ ಫಿಲಮ್ಸ್ ಷಾರ್ಟ್ಫಿಲ್ಮ್ಂ ಸ್ಪರ್ಧೆಯನ್ನು ಆಯೋಜಿಸಿದೆ. ನಿರ್ದೇಶಕರಾಗಲು ಕನಸು ಕಾಣುತ್ತಿರುವ ಪ್ರತಿಭೆಗಳಿಗೆ ಇಲ್ಲಿದೆ ಗೋಲ್ಡನ್ ಚಾನ್ಸ್. ಫಿಲ್ಮ್ ನಿಮ್ದು, ಸ್ಕ್ರೀನ್ ನಮ್ದು ಎನ್ನುವ ಹೆಸರಿನಲ್ಲಿ ಈ ಸ್ಪರ್ಧೆ ಶೀಘ್ರದಲ್ಲಿ ಶುರುವಾಗಲಿದೆ. ಇದಕ್ಕೆ ಕೆಲವೊಂದು ಷರತ್ತುಗಳನ್ನು ಜೀ ಚಾನೆಲ್ ವಿಧಿಸಿದ್ದು, ನಿರ್ದೇಶಕರಾಗಲು ಕನಸು ಕಾಣುತ್ತಿರುವವರಿಗೆ ಇದು ಒಳ್ಳೆಯ ಅವಕಾಶವಾಗಿದೆ.
ಜೀ ಪಿಚ್ಚರ್ಸ್ ಹೇಳಿರುವ ಪ್ರಕಾರ, ನಿಮ್ಮ ಕಿರುಚಿತ್ರಗಳನ್ನು ನೋಂದಣಿ ಇದಾಗಲೇ ಶುರುವಾಗಿದ್ದು, ಜೂನ್ 8ರವರೆಗೆ ಇರಲಿದೆ. ZEE APP ನಲ್ಲಿ ಲಿಂಕ್ ಓಪನ್ ಆಗಿರುತ್ತದೆ. ಒ ಂದು ಅಥವಾ ಹಲವು ಕಿರುಚಿತ್ರದ ಲಿಂಕ್ ಸ್ವೀಕರಸಲಾಗುವುದು. ನಿಮ್ಮ ಕಿರುಚಿತ್ರ ಕನ್ನಡ ಭಾಷೆಯಲ್ಲಿ ಇರಬೇಕು ಎಂದಿದೆ. www.Zee5.com/ZeepiccharShortFilmContest ಇಲ್ಲಿ ಹೋದರೂ ಇದರ ಬಗ್ಗೆ ಹೆಚ್ಚಿನ ವಿಷಯ ತಿಳಿದುಕೊಳ್ಳಬಹುದು. ಇದರ ಬಗ್ಗೆ ತಿಳಿಸಲು ಬಿಡುಗಡೆ ಮಾಡಲಾಗಿರುವ ಪ್ರೊಮೋದಲ್ಲಿ ರಮೇಶ್ ಅರವಿಂದ್ ಅವರ ಪೆನ್ಡ್ರೈವ್ ಹಾಸ್ಯ ಮಾಡಲಾಗಿದೆ.