
ಕನ್ನಡ ಕಿರುತೆರೆ ನಾಗಿಣಿ, ಬಿಗ್ ಬಾಸ್ ಸ್ಪರ್ಧಿ ದೀಪಿಕಾ ದಾಸ್ ನಟನೆಯ ಪಾರು ಪಾರ್ವತಿ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ದೀಪಿಕಾ ದಾಸ್ ಮೊದಲ ಸಲ ಪತಿ ದೀಪಕ್ ಬಗ್ಗೆ ರಿವೀಲ್ ಮಾಡಿದ್ದಾರೆ. ರ್ಯಾಪಿಡ್ ರಶ್ಮಿ ಯುಟ್ಯೂಬ್ ಚಾನೆಲ್‌ನಲ್ಲಿ ಜೀವನದ ಬಗ್ಗೆ ಮಾತನಾಡಿರುವ ದೀಪಿಕಾ ದಾಸ್ ವಿಡಿಯೋಗಳು ಸಖತ್ ವೈರಲ್ ಆಗುತ್ತಿದೆ.
'ದೀಪಕ್ ಮತ್ತು ನಾನು ಹಾಯ್ ಬೈ ಸ್ನೇಹಿತರ ರೀತಿ ಇದ್ವಿ. ಒಂದು ಕಾರ್ಯಕ್ರಮದಲ್ಲಿ ಭೇಟಿ ಮಾಡಿದ್ದು. ಒಂದೆರಡು ಕಾರ್ಪೋರೆಟ್ ಕಾರ್ಯಕ್ರಮದಲ್ಲಿ ಭೇಟಿ ಮಾಡುತ್ತಿದ್ದಾಗ ಸ್ನೇಹ ಬೆಳೆಯಿತ್ತು. ಕೆಲ ವರ್ಷ ಕಳೆದ ನಂತರ ಮದುವೆ ಸ್ಟೇಜ್‌ಗೆ ಬಂತು. ನಮ್ಮ ಮನೆಯಲ್ಲಿ ಮದುವೆ ಮಾಡಿಕೊಳ್ಳಲ್ವಾ ಅನ್ನೋ ಪ್ರಶ್ನೆಗಳು ಬಂದಿತ್ತು, ಅವರ ಮನೆಯಲ್ಲಿ ಕೂಡ ಮದುವೆ ಮಾಡಿಕೊಳ್ಳಬೇಕು ಅನ್ನೋ ವಿಚಾರ ಬಂದಿತ್ತು. ಎಷ್ಟೋ ವಿಚಾರಗಳಲ್ಲಿ ನಾವು ಒಂದೇ ರೀತಿ ಯೋಚನೆ ಮಾಡುವುದು...ಸರಿಯಾದ ಸಮಯ ಬಂದಿದೆ ಎಂದು ಮದುವೆ ಮಾಡಿಕೊಳ್ಳಲು ನಾವು ನಿರ್ಧಾರ ಮಾಡಿದ್ವಿ. ಡೆಸ್ಟಿನೇಶನ್ ಮದುವೆ ಮಾಡಿಕೊಂಡಾಗ ಕೇವಲ 10-15 ಜನರು ಮಾತ್ರ ಇರಬೇಕು ಅಂತ ಆಸೆ ಇತ್ತು. ನನಗೆ ತುಂಬಾ ಜನರು ಇರುವುದು ಇಷ್ಟ ಆಗುವುದಿಲ್ಲ ಚಿಕ್ಕ ಸರ್ಕಲ್ ಆಗಿದ್ದರೂ ನನ್ನ ಸರ್ಕಲ್ ನನ್ನ ಜನರು ಆಗಿರಬೇಕು. ಈಗ ಮದುವೆಯಾಗಿ ತಿಂಗಳುಗಳು ಕಳೆದಿದೆ' ಎಂದು ದೀಪಿಕಾ ದಾಸ್ ಮಾತನಾಡಿದ್ದಾರೆ.
ನನ್ನ ಮದುವೆ ಜೀವನ ತುಂಬಾ ಚೆನ್ನಾಗಿದೆ ಯಾಕೆ ಎಲ್ಲರೂ ಪದೇ ಪದೇ ಪ್ರಶ್ನೆ ಮಾಡ್ತಿದ್ದೀರಾ?: ದೀಪಿಕಾ ದಾಸ್ ಗರಂ
ಮದುವೆ ಆದ ಮೇಲೆ ಜೀವನ ಬದಲಾಗಿದೆ. ಮೊದಲು ಇದ್ದಿದ್ದಕ್ಕೂ ಈಗ ಸಮಯ ಇರುವುದಕ್ಕೂ ವ್ಯತ್ಯಾಸ ಇರುತ್ತದೆ. ಫ್ಯಾಮಿಲಿ ಟೈಮ್, ಮೀ ಟೈಮ್ ಮತ್ತು ಕೆಲಸಕ್ಕೆ ಟೈಮ್...ಪ್ರತಿಯೊಂದು ಮ್ಯಾನೇಜ್ ಮಾಡಬೇಕು. ಮೊದಲಿನಂತೆ ಇರಬಹುದು ಅಂದುಕೊಳ್ಳುತ್ತೀವಿ ಆದರೆ ಬದಲಾಗುತ್ತದೆ, ಜವಾಬ್ದಾರಿ ಅಂತ ಬಂದಾಗ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕು. ಪ್ರತಿಯೊಂದಕ್ಕೂ ದಾರಿ ಇದೆ ಆದರೆ ನಾವು ಮನಸ್ಸು ಮಾಡಬೇಕು. ಸಂಬಂಧದಲ್ಲಿ ನಂಬಿಕೆ ತುಂಬಾನೇ ಮುಖ್ಯ. ಹುಡುಗ ಆಗಿರಲಿ ಹುಡುಗಿ ಆಗಿರಲಿ ನಾನು ಇದೇ ನಾನು ಇರುವುದೇ ಹೀಗೆ ಅಂತ ಕೂರಬಾರದು. ನಾವು ನಾವಾಗಿ ಇರಬೇಕು ಆದರೆ ಯೋಚನೆ ಮಾಡಿ ಹೆಜ್ಜೆ ಇಡಬೇಕು. ಕ್ಯಾರೆಕ್ಟರ್ ಬದಲಾಯಿಸಿಕೊಂಡರೆ ನೀನು ಹಾಗೆ ಇರಲಿಲ್ಲ ಹೀಗೆ ಇರಲಿಲ್ಲ ಅನ್ನೋ ಮಾತುಗಳು ಬರುತ್ತದೆ. ನಾವು ಕೊಡುವ ಪ್ರಾಮಿಸ್‌ಗಳನ್ನು ಉಳಿಸಿಕೊಳ್ಳಬೇಕು ಎಂದು ದೀಪಿಕಾ ದಾಸ್ ಹೇಳಿದ್ದಾರೆ.
ದೇವಸ್ಥಾನದಲ್ಲಿ ಬ್ಲೌಸ್ ಹಾಕದೆ ಸೀರೆ ಧರಿಸುವುದು ಯಾವ ಶೋಕಿ; ದೀಪಿಕಾ ದಾಸ್ ವಿರುದ್ಧ ನೆಟ್ಟಿಗರು ಗರಂ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.