ಮೊದಲು ಸಿಕ್ಕಿದ್ದು 1500 ರೂಪಾಯಿ; ಕೊನೆಗೂ ಸಂಬಳ ರಿವೀಲ್ ಮಾಡಿದ ಬಿಗ್ ಬಾಸ್ ತ್ರಿವಿಕ್ರಮ್

Published : Feb 01, 2025, 11:31 AM IST
ಮೊದಲು ಸಿಕ್ಕಿದ್ದು 1500 ರೂಪಾಯಿ; ಕೊನೆಗೂ ಸಂಬಳ ರಿವೀಲ್ ಮಾಡಿದ ಬಿಗ್ ಬಾಸ್ ತ್ರಿವಿಕ್ರಮ್

ಸಾರಾಂಶ

ಬಿಗ್‌ಬಾಸ್ 11ರಲ್ಲಿ ದ್ವಿತೀಯ ಸ್ಥಾನ ಪಡೆದ ತ್ರಿವಿಕ್ರಮ್, ಹೆಚ್ಚಿನ ಸಂಭಾವನೆ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಚಾನೆಲ್‌ನಲ್ಲಿ ಕೆಲಸ ಮಾಡದ ಕಾರಣ ಕನಿಷ್ಠ ಸಂಭಾವನೆ ಪಡೆದಿದ್ದಾರೆ. ಬಿಗ್‌ಬಾಸ್‌ಗಾಗಿ 15 ದಿನದ ಬಟ್ಟೆಗಳನ್ನು ಮಾತ್ರ ಖರೀದಿಸಿದ್ದರು. ವಾರಾಂತ್ಯದಲ್ಲಿ ವರ್ಷಿಣಿ ಡಿಸೈನ್ ಮಾಡಿದ ಬಟ್ಟೆಗಳನ್ನು ಕಳುಹಿಸುತ್ತಿದ್ದರು.

ಬಿಗ್ ಬಾಸ್ ಸೀಸನ್ 11ರ ಫಸ್ಟ್‌ ರನ್ನರ್‌ ರಪ್ ನಟ ತ್ರಿವಿಕ್ರಮ್. ಕನ್ನಡ ಕಿರುತೆರೆಯಲ್ಲಿ ಸಾಮ್ರಾಟ್ ಅಂತಲೇ ಜನಪ್ರಿಯತೆ ಪಡೆದಿರುವ ವಿಕ್ಕಿ ವಿನ್ನರ್ ಆಗಬೇಕಿತ್ತು ಅನ್ನೋದು ಹಲವರ ಆಸೆ. ಆದರೆ ಹನುಮಂತು ಮುಂದೆ ಯಾರೇ ನಿಂತರೂ ಅವನೇ ಗೆಲ್ಲುವುದು ಅನ್ನೋ ಮಾತನ್ನು ಅವರೇ ಒಪ್ಪಿಕೊಂಡಿದ್ದಾರೆ. ಇನ್ನು ಸಂಭಾವನೆ ವಿಚಾರಕ್ಕೆ ಬಂದರೆ ತ್ರಿವಿಕ್ರಮ್ ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿ ಎಂದು ಸುದ್ದಿ ಹಬ್ಬಿತ್ತು. ಈ ವಿಚಾರದ ಬಗ್ಗೆ ಸ್ವತಃ ತ್ರಿವಿಕ್ರಮ್ ಸ್ಪಷ್ಟನೆ ನೀಡಿದ್ದಾರೆ.

'ನಟನೆ ಕ್ಷೇತ್ರದಲ್ಲಿ ನನಗೆ ಮೊದಲು ಸಿಕ್ಕ ಸಂಬಳ 1500 ರೂಪಾಯಿ. 2016ರಲ್ಲಿ ನವರಾತ್ರಿ ಅನ್ನೋ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದೆ ದಿನಕ್ಕೆ 1500 ರೂಪಾಯಿ ಕೊಡುತ್ತಿದ್ದರು. ಮೊದಲು ಸಿಕ್ಕ ಸಂಬಳದಲ್ಲಿ ಸಂಜೆ ಬಂದು ಪಾರ್ಟಿ ಮಾಡಿದ್ದೀನಿ. ಫಸ್ಟ್‌ ಸಂಬಳ ಬಂತು ಅಪ್ಪ ಅಮ್ಮಂಗೆ ಏನಾದರೂ ಕೊಡಿಸಬೇಕು ಅನ್ನೋದು ಏನೂ ಇಲ್ಲ...ದುಡ್ಡು ಇದ್ದಾಗ ಕರ್ಕೊಂಡು ಹೋಗಿ ಕೊಡಿಸುತ್ತಿದ್ದೆ ದುಡ್ಡು ಇಲ್ಲದಿದ್ದಾಗ ಇಲ್ಲ ಅಂತಿದ್ದೆ. ಒಂದಿಷ್ಟು ವರ್ಷಗಳಿಂದ ಚಾನೆಲ್‌ನಲ್ಲಿ ಕೆಲಸ ಮಾಡದೆ ಇರುವ ಕಾರಣ ನನಗೆ ಏನು ಕನಿಷ್ಠ ಪೇಮೆಂಟ್ ಕೊಡಬಹುದು ಅದನ್ನು ಕೊಟ್ಟಿದ್ದಾರೆ. ಸಂಬಳ ಬರಬೇಕು ಇನ್ನೂ ಬಂದಿಲ್ಲ ಬರುತ್ತೆ. ಎಲ್ಲರೂ ಹೇಳುವಂತೆ ಜಾಸ್ತಿ ಕೊಟ್ಟರು ಅಂತ ಏನೂ ಇಲ್ಲ' ಎಂದು ತ್ರಿವಿಕ್ರಮ್ ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ದೀಪಕ್ ನಾನು Hi bye ಸ್ನೇಹಿತರಾಗಿದ್ವಿ ಅಷ್ಟೇ; ಕೊನೆಗೂ ಪತಿ ಬಗ್ಗೆ ರಿವೀಲ್ ಮಾಡಿದ ದೀಪಿಕಾ ದಾಸ್

'ಬಿಗ್ ಬಾಸ್ ಮನೆಗೆ ಹೋಗಲು ಯಾವ ಶಾಪಿಂಗ್ ಮಾಡಿಕೊಂಡಿರಲಿಲ್ಲ..ನನ್ನ ಪಿಆರ್‌ ನಯನ್‌ ಅಂತ ಇದ್ದಾರೆ ಅವನೊಟ್ಟಿಗೆ 15 ದಿನಕ್ಕೆ ಆಗುವಷ್ಟು ಶಾಪಿಂಗ್ ಮಾಡಿದ್ದೆ. ಅದಾದ ಮೇಲೆ ಪ್ರತಿ ವೀಕೆಂಡ್ ವರ್ಷಿಣಿ ಅನ್ನೋದರು ಡಿಸೈನ್ ಮಾಡಿ ಕಳುಹಿಸುತ್ತಿದ್ದರು. ನಾನು ಯಾವ ನಿರ್ಧಾರ ತೆಗೆದುಕೊಂಡಿಲ್ಲ. ದುಡ್ಡು ಇರುವವರು ಲಕ್ಷಗಟ್ಟಲೆ ಖರ್ಚು ಮಾಡಿ ಶಾಪಿಂಗ್ ಮಾಡಿರುತ್ತಾರೆ ನನ್ನ ಬಳಿ ಹಣ ಇರಲಿಲ್ಲ ನಾನು ದಿನನಿತ್ಯಕ್ಕೆ ಏನು ಬೇಕು ಅದನ್ನು ಮಾತ್ರ ಖರೀದಿಸಿರುವುದು. ಈಗ ಬಿಲ್ ಎಷ್ಟು ಆಗಿದೆ ಅಂತ ಚೆಕ್ ಮಾಡಬೇಕು. ನನಗೆ ಒಂದು ಟ್ರಾಕ್ ಪ್ಯಾಂಟ್, ಟೀ-ಶರ್ಟ್ ಮತ್ತು ಜಾಕೆಟ್‌ ಇದ್ದರೆ ಅದೇ ನನಗೆ ಕಂಫರ್ಟ್ ಬಟ್ಟೆ' ಎಂದು ತ್ರಿವಿಕ್ರಮ್ ಹೇಳಿದ್ದಾರೆ. 

ಯಾರಿಗೂ ತೊಂದರೆ ಆಗಿಲ್ಲ, ತಪ್ಪಾಗಿ ವೈರಲ್ ಮಾಡ್ಬೇಡಿ; ಜನರಿಗೆ ಕ್ಷಮೆ ಕೇಳಿ ತುಕಾಲಿ ಸಂತೋಷ್- ಮಾನಸ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!