'ಸೆಕೆಂಡ್‌ ಹ್ಯಾಂಡ್‌ನ ಮದ್ವೆಯಾಗಿದ್ದೀರಿ..ಶುಭವಾಗಲಿ..' ಬಿಗ್‌ ಬಾಸ್‌ ಸಿರಿ ಬಗ್ಗೆ ಕಾಮೆಂಟ್‌ ಮಾಡಿದ ಯುವತಿಗೆ ಫುಲ್‌ ಕ್ಲಾಸ್‌!

By Santosh Naik  |  First Published Jun 26, 2024, 4:40 PM IST

Siri second hand Husband Troll ಕಿರುತೆರೆಯಲ್ಲಿ ಹಲವು ಸೂಪರ್‌ಹಿಟ್‌ ಸೀರಿಯಲ್‌ಗಳಲ್ಲಿ ನಟಿಸಿದ್ದ ಬಿಗ್ ಬಾಸ್‌ ಸಿರಿ ಇತ್ತೀಚೆಗೆ ಮದುವೆಯಾಗಿದ್ದಾರೆ. ಮಂಡ್ಯ ಮೂಲದ ಉದ್ಯಮಿ  ಹಾಗೂ ನಟ ಪ್ರಭಾಕರ್‌ ಅನ್ನು ಅವರು ವಿವಾಹವಾಗಿದ್ದಾರೆ. 



ಬೆಂಗಳೂರು (ಜೂ.26): ಹಲವು ಸೂಪರ್‌ಹಿಟ್‌ ಸೀರಿಯಲ್‌ಗಳಲ್ಲಿ ನಟಿಸಿದ್ದ ಕಿರುತೆರೆ ನಟಿ ಹಾಗೂ ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಸ್ಪರ್ಧಿ ಸಿರಿ ಅವರ ಮದುವೆ ಇತ್ತೀಚೆಗೆ ನೆರವೇರಿದೆ. ರಂಗೋಲಿ, ಮನೆಯೊಂದು ಮೂರು ಬಾಗಿಲು, ಬದುಕು, ರಾಮಚಾರಿ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ನಟಿಸಿ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು. ಹಳ ವರ್ಷಗಳ ಕಾಲ ಮದುವೆಯಾಗುವ ವಿಚಾರದಿಂದ ದೂರವೇ ಉಳಿದಿದ್ದ ಸಿರಿ, ಬಿಗ್‌ಬಾಸ್‌ ಮನೆಯಲ್ಲೂ ಇದರ ಬಗ್ಗೆ ಮಾತನಾಡಿದ್ದರು. ಮದುವೆಯಾಗೋಕೆ ತಮಗೆ ಇಷ್ಟವೇ ಇಲ್ಲ ಅಂಥಲ್ಲ. ನನಗೆ ಇಷ್ಟವಾಗುವ ಹುಡುಗ ಸಿಕ್ಕಲ್ಲಿ ಮದುವೆಯಾಗುವುದಾಗಿ ತಿಳಿಸಿದ್ದರು. ಬಿಗ್‌ಬಾಸ್‌ನಿಂದ ಹೊರಬಂದ ಕೆಲವೇ ತಿಂಗಳಲ್ಲಿ ಅವರು ವಿವಾಹವಾಗಿದ್ದಾರೆ. ಚಿಕ್ಕಬಳ್ಳಾಪುರದ ನಂದಿಗ್ರಾಮದಲ್ಲಿ ಅತ್ಯಂತ ಸರಳವಾಗಿ ಅವರ ವಿವಾಹವಾಗಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಫೋಟೋಗಳು ಶೇರ್‌ ಆದ ಬಳಿಕವೇ ಇವರು ಮದುವೆಯಾಗಿದ್ದ ಸುದ್ದಿ ಖಚಿತವಾಗಿತ್ತು. ಪರಭಾಷೆಯ ಸೀರಿಯಲ್‌ಗಳಲ್ಲಿ ನಟಿಸುವ ಮೂಲಕ ಪಕ್ಕದ ರಾಜ್ಯಗಳಲ್ಲೂ ಸಿರಿ ಫೇಮಸ್‌ ಆಗಿದ್ದಾರೆ.

ಇತ್ತೀಚೆಗೆ ತಮ್ಮ ಮದುವೆಗೆ ನೇಲ್‌ ಆರ್ಟ್‌ ಮಾಡಿದ್ದ ಆರ್‌ಆರ್‌ ನಗರದ ಕಂಪನಿಯನ್ನು ಮೆಚ್ಚಿ ಅವರು ವಿಡಿಯೋ ಮಾಡಿದ್ದರು. ಮದುವೆಗಾಗಿ ಅವರು ಮಾಡಿದ್ದ ನೇಲ್‌ ಆರ್ಟ್‌ ಬಹಳ ಉತ್ತಮವಾಗಿತ್ತು ಎಂದು ಶ್ಲಾಘನೆ ಮಾಡಿದ್ದರು. ಈ ವಿಡಿಯೋವನ್ನು ಕ್ಲಾಸಿಕ್‌ ಕರ್ಲ್ಸ್‌ ತನ್ನ ಇನ್ಸ್‌ಟಾಗ್ರಾಮ್‌ ಪೇಜ್‌ನಲ್ಲಿ ಅಪ್‌ಲೋಡ್‌ ಮಾಡಿದೆ. ಇದಕ್ಕೆ ಕಾಮೆಂಟ್‌ ಮಾಡಿದ ಯುವತಿಯೊಬ್ಬಳು, ಸಿರಿ ಅವರಿಗೆ ನೀವು ಸೆಕೆಂಡ್‌ ಹ್ಯಾಂಡ್‌ ಹಸ್ಬಂಡ್‌ನ ಮದುವೆಯಾಗಿದ್ದೀರಿ.. ನಿಮಗೆ ಶುಭಾಶಯಗಳು' ಎಂದು ಆರತಿ ಎನ್ನುವವರು ಕಾಮೆಂಟ್‌ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಹಲವರು ಆರತಿ ಅವರ ಕಾಮೆಂಟ್‌ಅನ್ನು ಟೀಕೆ ಮಾಡಿದ್ದಾರೆ.  'ನೀವು ಬಾಯಿ ಮುಚ್ಚಿಕೊಂಡು ಇದ್ದರೆ ಒಳ್ಳೆಯದು. ಆಕೆಯ ಬಗ್ಗೆ ನಿಮಗೆ ಖುಷಿ ಇದ್ದರೆ ಸಾಕು..' ಎಂದು ವಿಘ್ನೇಶ್ ಕುಮಾರ್‌ ಎನ್ನುವವರು ಬರೆದಿದ್ದಾರೆ.

'ನಾಚಿಕೆ ಆಗಬೇಕು ನಿನ್ನಂಥ ಅನ್‌ಎಜುಕೇಟೆಡ್‌ನ ನಿಮ್ಮ ಅಪ್ಪ ಅಪ್ಪ ಹೆತ್ತು ಬೀದಿ ಬಿಡ್ತಾರೆ. ಅದಕ್ಕೆ ಸ್ಲಮ್‌ ಜನರು ಮಾತನಾಡೋತರ ಮಾತನಾಡ್ತಾ ಇದ್ದೀಯ. ಒಬ್ಬರ ಬಗ್ಗೆ ಈ ರೀತಿ ಕಾಮೆಂಟ್‌ ಹಾಕ್ತೀಯಲ್ಲ ನಿನ್ನ ಜನ್ಮಕ್ಕೆ ಯಾರೂ ಕೂಡ ಬಾಳು ಕೊಡೋದಿಲ್ಲ. ಕಚಡಾಗಳು. ನಿಮ್ಮ ಅಪ್ಪ ಸೆಕೆಂಡ್‌ ಹ್ಯಾಂಡಾ ಅಥವಾ ಫರ್ಸ್ಟ್‌ ಹ್ಯಾಂಡಾ ಅನ್ನೋದನ್ನ ನೋಡು ಮೊದಲು..' ಎಂದು ಟೀಕೆ ಮಾಡಿದ್ದಾರೆ.

Tap to resize

Latest Videos

undefined

ಒಂದು ಮಹಿಳೆಯಾಗಿ ನೀನು ಮಾಡಿರುವ ಕಾಮೆಂಟ್‌ ಸರಿಯಲ್ಲ. ನೀನೂ ಕೂಡ ಮುಂದೆ ಸೆಕೆಂಡ್‌ ಹ್ಯಾಂಡ್‌ ಹಸ್ಬಂಡ್‌ಅನ್ನೇ ಪಡೆಯಬಹುದು ಯಾರಿಗೆ ಗೊತ್ತು. ಬಟ್‌ ಸಿಕ್ಕಿದ್ದಕ್ಕೆ ಖುಷಿಯಾಗಿರಬೇಕು ಎಂದು ಬುದ್ಧಿವಾದ ಹೇಳಿದ್ದಾರೆ. ಬೇರೆಯವರ ಬಗ್ಗೆ ಕೆಟ್ಟದಾಗಿ ಹಾಗೂ ನೆಗೆಟಿವ್‌ ಆಗಿ ಕಾಮೆಂಟ್‌ ಮಾಡೋದರಿಂದ ಖುಷಿ ಪಡಬೇಡಿ. ನೀವು ಕೂಡ ಮನುಷ್ಯರು ಅನ್ನೋದು ನೆನಪಿರಲಿ ಎಂದು ಕಾಮೆಂಟ್‌ ಮಾಡಿದ್ದಾರೆ. ನೀವು ಫರ್ಸ್ಟ್‌ ಹ್ಯಾಂಡ್‌ ಆಗಿದ್ದೀರಾ? ಎಂದು ಇನ್ನೊಬ್ಬರು ಪ್ರಶ್ನೆ ಮಾಡಿದ್ದಾರೆ.

ಸಿರಿ ಮತ್ತು ಪ್ರಭಾಕರ್‌ ಅವರ ವಿವಾಹ ಜೂನ್‌ 13ರಂದು ನಡೆದಿದೆ. ಸಿರಿ ಅವರ ಪತಿ ಮಂಡ್ಯ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.ಸದ್ಯ ಇವರ ಮದುವೆ ಫೋಟೋಸ್‌, ವಿಡಿಯೋಸ್‌ ನೋಡಿ ಸೋಷಿಯಲ್‌ ಮೀಡಿಯಾದಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದು ನಿಜಕ್ಕೂ ಇವರ ಮದುವೆಯಾ? ಯಾವುದೋ ಸೀರಿಯಲ್‌ ಶೂಟಿಂಗ್‌ ಇರಬೇಕು? ಎಂದೆಲ್ಲ ಕಾಮೆಂಟ್‌ ಮಾಡಿದ್ದಾರೆ. ಸಿರಿ ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ವಿವಾಹದ ಫೋಟೋ ಹಾಕಿ ಮದುವೆಯಾಗಿರುವುದನ್ನು ಖಚಿತಪಡಿಸಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಸಿರಿ; ಯಾರು ಆ ನಟ?

ಸುಮಾರು 40 ವರ್ಷ ವಯಸ್ಸಿನ ಕನ್ನಡದ ಜನಪ್ರಿಯ ನಟಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಸಿರಿ ಅವರು ಕನ್ನಡ ಕಿರುತೆರೆಯಲ್ಲಿ ಸುಮಾರು 30 ವರ್ಷಕ್ಕೂ ಹೆಚ್ಚು ಕಾಲದಿಂದ ನಟಿಸುತ್ತಿದ್ದಾರೆ. 

ಬದುಕು ಸೀರಿಯಲ್‌ನಲ್ಲಿ ಗಂಡನಾಗಿದ್ದವನನ್ನೇ ರಿಯಲ್‌ ಲೈಫ್ ನಲ್ಲಿ ಕೈ ಹಿಡಿದ ನಟಿ ಸಿರಿ!

 

click me!