5 ಗಂಟೆ ಸರ್ಜರಿ ಮಾಡಲು 12 ಲಕ್ಷ ರೂಪಾಯಿ, ಗರ್ಭಕೋಶ ಇರಲ್ಲ: ಬಿಗ್ ಬಾಸ್ ನೀತು

Published : May 10, 2024, 05:05 PM IST
5 ಗಂಟೆ ಸರ್ಜರಿ ಮಾಡಲು 12 ಲಕ್ಷ ರೂಪಾಯಿ, ಗರ್ಭಕೋಶ ಇರಲ್ಲ: ಬಿಗ್ ಬಾಸ್ ನೀತು

ಸಾರಾಂಶ

ಹೆಣ್ಣಾಗಿ ಪರಿವರ್ತನೆ ಆಗಲು ಮಾಡಿಸಿಕೊಳ್ಳುವ ಸರ್ಜರಿ ಬೆಲೆ ರಿವೀಲ್ ಮಾಡಿದ ನೀತು. ನಿಜಕ್ಕೂ ಇಷ್ಟೋಂದು ಕಷ್ಟನಾ ಎಂದು ಪ್ರಶ್ನೆ ಮಾಡಿದ ನೆಟ್ಟಿಗರು. 

ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿ ನೀತು ವನಜಾಕ್ಷಿ ಮೊದಲ ಸಲ ಹೆಣ್ಣಾಗಿ ಪರಿವರ್ತನೆ ಆಗುವ ಕಷ್ಟಗಳನ್ನು ವಿವರಿಸಿದ್ದಾರೆ. ಯಾವ ರೀತಿ ಸರ್ಜರಿ ಇರುತ್ತದೆ, ಯಾವ ರೀತಿ ಜೀವನ ಮಾಡಬೇಕು ಹಾಗೂ ಎಷ್ಟು ಬೆಲೆ ಇರುತ್ತದೆ ಎಂದು ರಿವೀಲ್ ಮಾಡಿದ್ದಾರೆ. 

'ಹೆಣ್ಣಾಗಿ ಪರಿವರ್ತನೆ ಆಗಲು ಸುಮಾರು 10 ರಿಂದ 12 ಲಕ್ಷ ರೂಪಾಯಿ ಬೇಕಾಗುತ್ತದೆ. ಹಾರ್ಮೋನ್ ಇಂಜೆಕ್ಷನ್‌ಗೆ ಸುಮಾರು ಒಂದೆರಡು ಲಕ್ಷ ಬೇಕಾಗುತ್ತದೆ. ದೊಡ್ಡ ಸರ್ಜರಿಗೆ 6 ಲಕ್ಷ ಆಮೇಲೆ ನಡೆಯುವ ಸಣ್ಣ ಪುಟ್ಟ ಆಪರೇಷನ್‌ಗೆ ಎರಡು ಲಕ್ಷ ಬೇಕಾಗುತ್ತದೆ. ಸರ್ಜರಿ ನಂತರ ನಮ್ಮನ್ನು ಮೇನ್ಟೇನ್ ಮಾಡಿಕೊಳ್ಳಬೇಕು ...ದಿನಕ್ಕೆ ಎರಡು ಏಳೆನೀರು, ಸರಿಯಾದ ಅಂಶದಲ್ಲಿ ಪ್ರೋಟೀನ್‌ ಸೇವಿಸಬೇಕು. ಕೆಲವರು ಸರ್ಜರಿ ಆದ ಮೇಲೆ ದಪ್ಪ ಆಗುತ್ತಾರೆ ಆಗ ಫಿಟ್ ಆಗಿ ನೋಡಿಕೊಳ್ಳಬೇಕು. ನನ್ನ ಸರ್ಜರಿ ಆಗಿದ್ದು ಡೆಲಿಯಲ್ಲಿ. ತುಂಬಾ ಒಳ್ಳೆ ಡಾಕ್ಟರ್ ಸಿಕ್ಕಿದ್ದು, ವಿದೇಶದಿಂದ ಬಂದು ಸರ್ಜರಿ ಮಾಡಿಸುತ್ತಾರೆ' ಎಂದು ಅರ್‌ಜೆ ರಾಜೇಶ್ ಯುಟ್ಯೂಬ್ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. 

ಬಿಗ್ ಬಾಸ್ ನೀತು ವನಜಾಕ್ಷಿ ಸಖತ್ ಗ್ರ್ಯಾಂಡ್‌ ಬರ್ತಡೇ; ಪಾರ್ಟಿಯಲ್ಲಿ ಯಾರೆಲ್ಲಾ ಇದ್ರು?

ಈಗ ಟೆಕ್ನಾಲಜಿ ತುಂಬಾ ಮುಂದೆ ಬಂದಿದೆ. ಸಂಪೂರ್ಣ ಹೆಣ್ಣಾಗಿ ಪರಿವರ್ತನೆ ಆಗಿರುತ್ತೀವಿ ಆದರೆ ಗರ್ಭಕೋಶ ಇರುವುದಿಲ್ಲ. ಸರ್ಜರಿ ಅಂದ್ರೆ ಸುಮ್ಮನೆ ಅಲ್ಲ ತುಂಬಾ ಕಷ್ಟ ಇರುತ್ತದೆ. ಸರ್ಜರಿ ಮಾಡಿಸಿಕೊಳ್ಳುವ ಸಮಯದಲ್ಲಿ ನಾನು ಒಂಟಿಯಾಗಿ ಪ್ರಯಾಣ ಮಾಡುತ್ತಿದ್ದೆ ಅಲ್ಲಿನ ಡಾಕ್ಟರ್ ಜೊತೆ ಕೌನ್ಸಲಿಂಗ್ ಮುಗಿಸಿಕೊಂಡ ನಂತರ ಸರ್ಜರಿ ಮಾಡುತ್ತಾರೆ. ನಾವು ಸತ್ತರೆ ಅದಕ್ಕೆ ನಾವೇ ಹೊಣೆ ಎಂದು ಪೇಪರ್ ಸಹಿ ಮಾಡಿಸಿಕೊಳ್ಳುತ್ತಾರೆ ಏಕೆಂದರೆ ಆಪರೇಷನ್‌ ಅಷ್ಟು ರಿಸ್ಕ್‌ ಇರುತ್ತದೆ. ಆ ಪೇಪರ್ ಸಹಿ ಮಾಡುವಾಗ ಕಣ್ಣೀರು ಹಾಕುತ್ತಿದ್ದೆ.. ಖುಷಿ ಕಣ್ಣೀರು ನಾನು ಹೆಣ್ಣಾಗಿದ್ದೀನಿ ಅಂತ ಎಂದು ನೀತು ಹೇಳುತ್ತಾರೆ. 

ತಿದ್ದಿಕೊಂಡು ಸರಿ ದಾರಿಯಲ್ಲಿ ನಡೆಯಬೇಕು; ರಕ್ಷಕ್‌ ಟಾಂಗ್‌ಗಳ ಬಗ್ಗೆ ನೀತು ಕಿವಿ ಮಾತು

ಸುಮಾರು 5 ಗಂಟೆಗಳ ಕಾಲ ಸರ್ಜರಿ ಮಾಡುತ್ತಾರೆ. ಅಲ್ಲಿ ದಿನಕ್ಕೆ ಒಬ್ಬರಿಗೆ ಒಂದೇ ಸರ್ಜರಿ ಮಾಡುವುದು. ಒಂದುವರೆ ದಿನ ಆದ್ಮೇಲೆ ನೋವು ಹೆಚ್ಚಾಗುತ್ತದೆ. ಆ ನೋವನ್ನು ತಡೆದುಕೊಂಡಿರುವೆ ಏಕೆಂದರೆ ಅದರಲ್ಲೂ ಒಂದು ಸುಖ ಇರುತ್ತದೆ ಎಂದಿದ್ದಾರೆ ನೀತು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಡ್ದು ಬಾಯಿಗೆ ಹಾಕೊಂಡು ತೇಗಿದ ಮಂಜ; ಟಾಸ್ಕ್ ಬಳಿಕ ಭುಗಿಲೆದ್ದ ಬೇಸ್‌ ವಾಯ್ಸ್‌ ಜಗಳ!
Bigg Boss: ಪತ್ನಿ ಬಳಿ ಮಾತ್ರ ಇದನ್ನು ಟ್ರೈ ಮಾಡ್ಲೇ ಬೇಡಿ: ಸ್ಪರ್ಧಿಗಳಿಗೆ ಓಂ ಪ್ರಕಾಶ್​ ಕಿವಿಮಾತು