ರೈಲಿನ ಸ್ಲೀಪರ್ ಟಿಕೆಟ್ ಹಿಡಿದು ಎಸಿ ಕೋಚ್‌ನಲ್ಲಿ ಕುಳಿತು ರಂಪಾಟ, ಸಿರಿಯಲ್ ನಟಿ ಅಂತರಾ ಅರೆಸ್ಟ್

Published : Aug 16, 2026, 03:22 PM IST
Actress Antara banerjee Arrested

ಸಾರಾಂಶ

ಸ್ಲೀಪರ್ ಟಿಕೆಟ್ ಬುಕ್ ಮಾಡಿದ ನಟಿ ಕಮ್ ಮಾಡೆಲ್ ಅಂತರಾ ಎಸಿ ಕೋಚ್‌ನಲ್ಲಿ ಪ್ರಯಾಣಿಸುವ ಪ್ರಯತ್ನ ಮಾಡಿದ್ದಾರೆ. ಇಷ್ಟೇ ಆಗಿದ್ದರೆ ನಟಿ ಅರೆಸ್ಟ್ ಆಗುತ್ತಿರಲಿಲ್ಲ. ನಕಲಿ ನಾಟಕ ಮಾಡಿ ಕೋಲಾಹಲ ಎಬ್ಬಿಸಲು ಯತ್ನಿಸಿದ ನಟಿಯನ್ನು ರೈಲ್ವೇ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಮುಂಬೈ (ಆ.16) ಸೀರಿಯಲ್ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ನಟಿ ಹಾಗೂ ಮಾಡೆಲ್ ಅಂತರಾ ಅರೆಸ್ಟ್ ಆಗಿದ್ದಾರೆ. ಸ್ಲೀಪರ್ ಕೋಚ್ ರೈಲಿನ ಟಿಕೆಟ್ ಹಿಡಿದು ಎಸಿ ಕೋಚ್ ಹತ್ತಿದ ನಟಿ ಇದೀಗ ಪೊಲೀಸರು ಅತಿಥಿಯಾಗಿದ್ದಾರೆ. 31ರ ಹರೆಯದ ನಟಿ ಅಂತರಾಳನ್ನು ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ಅರಾವಳಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ. ಸದ್ಯ ಅಂತರಾ ಜಾಮೀನು ಪಡೆದು ಹೊರಬಂದಿದ್ದಾರೆ.

ಏನಿದು ಘಟನೆ?

ಹಿಂದಿ ಸಿರೀಯಲ್ ಮೂಲಕ ಜನಪ್ರಿಯವಾಗಿರುವ ಅಂತರಾ ಬ್ಯಾನರ್ಜಿ ಸಂಕಷ್ಟಗಳ ಸರಮಾಲೆಯನ್ನೇ ಮೈಮೇಲೆ ಎಳೆದುಕೊಂಡಿದ್ದಾರೆ. ಅಂತರಾ ಬ್ಯಾನರ್ಜಿ ಶೂಟಿಂಗ್‌ಗಾಗಿ ಬಾಂದ್ರಾ ಗಂಗಾನಗರ ಅರಾವಳಿ ಎಕ್ಸ್‌ಪ್ರೆಸ್ ರೈಲಿಗೆ ಹತ್ತಿದ್ದಾರೆ. ಮುಂಬೈನಿಂದ ಗುಜರಾತ್‌ಗೆ ಪ್ರಯಾಣ ಬೆಳೆಸಿದ್ದರು. ಆದರೆ ಅಂತರಾ ಸ್ಲೀಪರ್ ಟಿಕೆಟ್ ಬುಕ್ ಮಾಡಿದ್ದಾರೆ. ಈ ಸ್ಲೀಪರ್ ಟಿಕೆಟ್ ಹಿಡಿದು ಎಸಿ ಕೋಚ್‌ ಹತ್ತಿದ್ದಾರೆ. ತಪ್ಪಿ ಎಸಿ ಕೋಚ್ ಹತ್ತಿದ್ದರೆ ಪರ್ವಾಗಿರಲಿಲ್ಲ. ಖಾಲಿ ಇರೋ ಸೀಟು ನೋಡಿ ಕುಳಿತುಕೊಂಡಿದ್ದಾರೆ. ಇತ್ತ ಎಸಿ ಕೋಚ್ ಬುಕ್ ಮಾಡಿದ ಪ್ರಯಾಣಿಕ ಆಗಮಿಸಿದ್ದಾನೆ. ತಾನು ರಿಸರ್ವ್ ಮಾಡಿರುವ ಸೀಟಿನಲ್ಲಿ ಮಹಿಳೆ ಕುಳಿತುಕೊಂಡಿರುವುದು ಗಮನಿಸಿದ ಪ್ರಯಾಣಿಕ ಇದು ತಾನು ರಿಸರ್ವ್ ಮಾಡಿದ ಸೀಟು ಬಿಟ್ಟುಕೊಡಲು ಮನವಿ ಮಾಡಿದ್ದಾರೆ.

ಸೀಟು ಬಿಡದೆ ಜಗಳಕ್ಕಿಳಿದ ಅಂತರಾ

ಎಸಿ ಸೀಟು ಬುಕ್ ಮಾಡಿದ ಪ್ರಯಾಣಿಕನಿಗೆ ಜಾಗ ಬಿಡದ ಅಂತರಾ ಜಗಳ ಶುರುಮಾಡಿದ್ದಾರೆ. ಖಾಲಿ ಇರೋ ಸೀಟಿನಲ್ಲಿ ಕುಳಿತುಕೊಳ್ಳಲು ಸೂಚಿಸಿದ್ದಾರೆ. ತನ್ನ ಸೀಟು ತನಗೆ ನೀಡುವಂತೆ ಸೂಚಿಸಿದ್ದಾರೆ. ಇಲ್ಲಿಂದ ವಾಗ್ವಾದ ಶುರುವಾಗಿದೆ. ಹೀಗಾಗಿ ಪ್ರಯಾಣಿಕ ನೇರವಾಗಿ ರೈಲ್ವೇ ಟಿಸಿ ಹರಿಕೇಶ್ ತ್ರಿಪಾಠಿಗೆ ದೂರು ನೀಡಿದ್ದಾರೆ. ಟಿಸಿ ಸೂಚನೆ ನೀಡಿದರೂ ನಟಿ ಅಂತರಾ ಮಾತ್ರ ಯಾರ ಮಾತು ಕೇಳಲಿಲ್ಲ. ಹೀಗಾಗಿ ಟಿಸಿ ನೇರವಾಗಿ ಆರ್‌ಪಿಎಫ್ (ರೈಲ್ವೇ ಪ್ರೊಟೆಕ್ಷನ್ ಫೋರ್ಸ್) ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.

ರೈಲ್ವೇ ಸಿಬ್ಬಂದಿ ಮೇಲೆ ರೇಜರ್‌ನಿಂದ ಹಲ್ಲೆ

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆರ್‌ಪಿಎಫ್ ಮಹಿಳಾ ಸಿಬ್ಬಂದಿ ಯಾಮಿನಿಕಾಂತ್ ಮಿಶ್ರಾ ಹಾಗೂ ಪೇದೆ ರಾಜೇಶ್ ಕುಮಾರ್ ಆಗಮಿಸಿದ್ದಾರೆ. ನಟಿ ಅಂತರಾ ವಿಚಾರಿಸುತ್ತಿದ್ದಂತೆ ಜಗಳ ತೀವ್ರಗೊಂಡಿದೆ. ತನ್ನ ಬ್ಯಾಗ್‌ನಲ್ಲಿದ್ದ ರೇಜರ್ ಬ್ಲೇಡ್ ತೆಗೆದ ಅಂತರಾ ಮಹಳಾ ಆರ್‌ಪಿಎಫ್ ಸಿಬ್ಬಂದಿ ಯಾಮಿನಿಕಾಂತ್ ಮೇಲೆ ದಾಳಿ ಮಾಡಿದ್ದಾರೆ. ಬಟ್ಟೆ ಹರಿದು ಗಾಯಗೊಳಿಸಿದ್ದಾರೆ. ಸಿಬ್ಬಂದಿಯ ಸಮವಸ್ತ್ರ, ಮೊಬೈಲ್ ಫೋನ್ ಹಾನಿಮಾಡಿದ್ದಾರೆ. ಘಟನೆ ತೀವ್ರ ಪರಿಸ್ಥಿತಿಗೆ ತಲಪುತ್ತಿದ್ದಂತೆ ನಟಿ ಅಂತರಾ ಸ್ವತಃ ರೇಜರ್ ಬ್ಲೇಡ್‌ನಿಂದ ಗಾಯಮಾಡಿಕೊಂಡು ರೈಲ್ವೇ ಸಿಬ್ಬಂದಿಗಳ ಮೇಲೆ ಹಾಕುವ ಪ್ರಯತ್ನ ಮಾಡಿದ್ದಾಳೆ. ಎಲ್ಲವೂ ಸಿಸಿಟಿವಿಯಲ್ಲಿ ದಾಖಲಾಗಿದೆ ಅನ್ನೋದು ಗೊತ್ತಾಗುತ್ತಿದ್ದಂತೆ ಎಸಿ ಕೋಚ್‌ನಿಂದ ಓಡಿ ಹೋಗಲು ಯತ್ನಿಸಿದ್ದಾಳೆ.

ರೈಲ್ವೇ ಪೊಲೀಸರಿಂದ ಬಂಧನ

ರಂಪಾಟ ತೀವ್ರಗೊಳ್ಳುತ್ತಿದ್ದಂತೆ ಬೋಗಿಯ ಬಾಗಿಲು ಕ್ಲೋಸ್ ಮಾಡಲಾಗಿದೆ. ರೈಲು ದಹಾನು ನಿಲುಗಡೆ ತಲಪುತ್ತಿದ್ದಂತೆ ರೈಲ್ವೇ ಪೊಲೀಸರು ಆಗಮಿಸಿ ನಟಿ ಅಂತರಾ ಬ್ಯಾನರ್ಜಿಯನ್ನು ಅರೆಸ್ಟ್ ಮಾಡಿದ್ದಾರೆ. ಅರೆಸ್ಟ್ ಆದ ನಟಿ ಸಹಾಯಕ್ಕಾಗಿ ಆಪ್ತರಿಗೆ ಕರೆ ಮಾಡಿದ್ದಾರೆ. ಬಳಿಕ ಜಾಮೀನು ಪಡೆದು ಹೊರಬಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಎಲ್ಲರೂ ಕಾರ್ ತಗೊಳ್ತಿದ್ರೆ ಕನ್ನಡಿಗರ ನೆಚ್ಚಿನ ಗಾಯಕಿ ತಗೊಂಡ್ರು ಎಲೆಕ್ಟ್ರಿಕ್ ಬೈಕ್: ಅರ್ಚನಾ ಉಡುಪ ಬಾಲ್ಯದ ಕನಸು ನನಸು!
Amruthadhaare Serial: ಲಗ್ಗೇಜ್​ ಜೊತೆ ಜೈದೇವನ ಮನೆಗೇ ಉಳಿಯಲು ಬಂದಳು ಮಧುರಾ- ಮುಂದಿರೋದೇ ರೋಚಕ ಟ್ವಿಸ್ಟ್​