ಅಮೃತಧಾರೆ ಸೀರಿಯಲ್ ಮಹಿಮಾ ಮತ್ತು ಜೀವನ್ ರೀಲ್ಸ್ ಮಾಡಿದ್ದು, ಇದಕ್ಕೆ ಸಕತ್ ಕಮೆಂಟ್ಸ್ ಬರುತ್ತಿವೆ. ಏನಿದು ರೀಲ್ಸ್?
ಅಮೃತಧಾರೆ ಸೀರಿಯಲ್ ಮಹಿಮಾ ಪಾತ್ರದಲ್ಲಿ, ನಟಿ ಸಾರಾ ಅಣ್ಣಯ್ಯ ಕಾಣಿಸಿಕೊಂಡಿದ್ದಾರೆ. ಇವರ ಪತಿಯ ಪಾತ್ರದಲ್ಲಿ ಶಶಿ ಹೆಗಡೆ ಕಾಣಿಸಿಕೊಂಡಿದ್ದಾರೆ. ಅಸಲಿಗೆ ಶಶಿ ಹೆಗಡೆ ಅವರು ಶ್ರೀರಸ್ತು ಶುಭಮಸ್ತು ಸೀರಿಯಲ್‌ನಲ್ಲಿ ಪೂರ್ಣಿ ಪಾತ್ರ ಮಾಡುತ್ತಿರುವ ಲಾವಣ್ಯಾ ಭಾರದ್ವಾಜ್ ಅವರ ಪತಿ. ಇದೀಗ ಅಮೃತಧಾರೆ ಮಹಿಮಾ ಮತ್ತು ಪತಿ ಜೀವನ್, ರೀಲ್ಸ್ ಮಾಡಿದ್ದಾರೆ. ಅದರಲ್ಲಿ ಮಹಿಮಾ ನಾನು ಮನಸ್ಸು ಮಾಡಿದ್ರೆ ಏರೋಪ್ಲೇನ್ ಬೇಕಾದ್ರೂ ತಗೋಬೋದು, ಆದ್ರೆ ಇವ್ರು ಬೇಜಾರು ಮಾಡ್ಕೋತಾರೆ. ಮನೆ ಮೇಲಿಂದ ಹೋದ್ಲು, ಮನೆಗೆ ಬರಲಿಲ್ಲ ಅಂತ ಅದಕ್ಕಾಗಿಯೇ ತಗೋಳೋಲ್ಲ ಎಂದಿದ್ದಾರೆ. ಅಷ್ಟೊತ್ತಿಗೆ ಪತಿ ಮಹಾಶಯ ಬಂದು ನೆಲ ಒರೆಸೋ ಮಾಪ್ ಕೊಟ್ಟಿದ್ದಾನೆ. ಇದರ ತಮಾಷೆಯ ರೀಲ್ಸ್ ಅನ್ನು ಸಾರಾ ಅವರು ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ ಥಹರೇವಾರಿ ಕಮೆಂಟ್ಸ್ ಬಂದಿವೆ.
ಅಷ್ಟಕ್ಕೂ ಸಾರಾ ಕುರಿತು ಹೇಳುವುದಾದರೆ, ಕನ್ನಡತಿ ಧಾರಾವಾಹಿ ಮೂಲಕ ಖ್ಯಾತಿ ಗಳಿಸಿದವರು ಇವರು. ನಂತರ ಲಚ್ಚಿ ಸೀರಿಯಲ್‌ನಲ್ಲಿ ರಿಯಾಳ ತಾಯಿ ದೀಪಿಕಾರ ಪಾತ್ರವನ್ನು ನಿಭಾಯಿಸುತ್ತಿದ್ದರು. ಆದರೆ ಮಧ್ಯೆಯೇ ಹೊರ ಬಂದರು. ಇದೀಗ ಅಮೃತಧಾರೆಯಲ್ಲಿ ನಟಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಆಗಿರೋ ಸಾರಾ ಅವರು ಆಗಾಗ್ಗೆ ವಿಭಿನ್ನ ರೀತಿಯ ಫೋಟೋ ಶೂಟ್ ಮಾಡಿಸಿಕೊಂಡು ಸದ್ದು ಮಾಡುತ್ತಿರುತ್ತಾರೆ. ಟೂ ಪೀಸ್, ಬಿಕಿನಿ ಡ್ರೆಸ್ನಿಂದ ಹಿಡಿದು ಸೀರೆಯವರೆಗೂ ಎಲ್ಲಾ ವೆರೈಟಿಗಳ ಫೋಟೋ ಶೂಟ್ ಮಾಡಿಸಿಕೊಳ್ಳುವುದು ಇದೆ. ಕನ್ನಡ ಕಿರುತೆರೆಗೆ ಆಗಮಿಸುವ ಮೊದಲು ಸಾರಾ ಅವರು ನಮ್ಮೂರ ಹೈಕ್ಲು ಎಂಬ ಸಿನಿಮಾದಲ್ಲಿ ನಟಿಸಿದ್ದರು. ಬಳಿಕ ಕಲರ್ಸ್ ಕನ್ನಡದ ಕನ್ನಡತಿ ಸೀರಿಯಲ್‌ನಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡರು. ನಮ್ಮ ಲಚ್ಚಿ ಸೀರಿಯಲ್ ಬಳಿಕ ಇದೀಗ ಅಮೃತಧಾರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಎಲ್ಲಾ ಆ್ಯಂಕರ್ಗಳನ್ನು ರಿಜೆಕ್ಟ್ ಮಾಡಿ ಶಾಕ್ ಕೊಟ್ಟ ನಟ ಜಗ್ಗೇಶ್: ಕಾಮಿಡಿ ಕಿಲಾಡಿಯಲ್ಲಿ ಏನಿದು ಹೊಸ ವಿಷ್ಯ?
ಇನ್ನು ಇವರು ಸಿಕ್ಕಾಪಟ್ಟೆ ಬೋಲ್ಡ್ ಕೂಡ ಹೌದು. ಮೊದಲೇ ಹೇಳಿದ ಹಾಗೆ ಟೂ ಪೀಸ್ಗಳಲ್ಲಿಯೂ ಕಾಣಿಸಿಕೊಳ್ಳುತ್ತಾರೆ. ಆಗ ಸಾಕಷ್ಟು ಬಾರಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಕೂಡ ಆಗುತ್ತಿರುತ್ತಾರೆ. ಈ ಕುರಿತು ಸಂದರ್ಶನದಲ್ಲಿ ಮಾತನಾಡಿರುವ ಸಾರಾ, ನೆಗೆಟಿವ್ ಕಾಮೆಂಟ್ಸ್ ಬಗ್ಗೆ ನಾನೀಗ ಕೇರ್ ಮಾಡುವುದಿಲ್ಲ. ನೆಗೆಟಿವ್ ಕಾಮೆಂಟ್ಸ್ ಮಾಡುವ ಬಹುತೇಕ ಅಕೌಂಟ್‌ಗಳು ಫೇಕ್. ನಾನು ಯಾವುದೇ ಉಡುಪು ತೊಟ್ಟರೂ, ಎಲ್ಲದರ ಬಗ್ಗೆಯೂ ನೆಗೆಟಿವ್ ಕಾಮೆಂಟ್ ಮಾಡೋರು ಇದ್ದಾರೆ. ಮೊದಮೊದಲು ನೆಗೆಟಿವಿಟಿ ಬಗ್ಗೆ ತುಂಬಾ ಕಿರಿಕಿರಿ ಆಗುತ್ತಿತ್ತು. ಆದರೆ ಈಗ ಅವನ್ನೆಲ್ಲಾ ಅವಾಯ್ಡ್ ಮಾಡೋದನ್ನ ಕಲಿತಿದ್ದೇನೆ ಎನ್ನುತ್ತಾರೆ. ನನಗೆ ಕಮ್ಫರ್ಟ್ ಎನಿಸುವ ಬಟ್ಟೆಗಳನ್ನ ಖರೀದಿ ಮಾಡುತ್ತೇನೆ. ನನಗೆ ಅದರ ಬಗ್ಗೆ ಖುಷಿ ಇದೆ. ಯಾರಿಗೆ ಏನು ಇಷ್ಟವೋ, ಅದನ್ನ ಧರಿಸುತ್ತಾರೆ. ಇನ್ನೊಬ್ಬರ ಆಯ್ಕೆ, ಕಮ್ಫರ್ಟ್ ಬಗ್ಗೆ ಯಾಕೆ ಕಾಮೆಂಟ್ ಮಾಡಬೇಕು ಎನ್ನುವುದು ಇವರ ಮಾತು.
ಅಂದಹಾಗೆ ನಟಿಗೆ ಈಗ 29 ವರ್ಷ ವಯಸ್ಸು. ಶೂಟಿಂಗ್ ಮಧ್ಯೆ ಅವರು ಆಗಾಗ ಪ್ರವಾಸ ಮಾಡುವುದುಂಟು. ಕಿರುತೆರೆ ನಟಿ ಕಾವ್ಯಾ ಗೌಡ ಜೊತೆಗೆ ಅವರು ಪ್ರವಾಸ ಮಾಡುತ್ತಿರುತ್ತಾರೆ. ಈಗ ಕಡಲ ತೀರದಲ್ಲಿ ಬಿಕಿನಿ ತೊಟ್ಟು ಬೋಲ್ಡ್ ಲುಕ್‌ನಲ್ಲಿ ಫೋಟೋಗೆ ಪೋಸ್ ನೀಡುತ್ತಲೇ ಇರುತ್ತಾರೆ. ಕೆಟ್ಟ ಕಮೆಂಟ್ಸ್ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ.
ಅಮೃತಧಾರೆಯ ಮುಗ್ಧ, ಪೆದ್ದಿ ಮಲ್ಲಿ ಇಷ್ಟೊಂದು ಕ್ಯೂಟಾ? ನಟಿಯ ಕುರಿತು ಒಂದಿಷ್ಟು ಇಂಟರೆಸ್ಟಿಂಗ್ ಮಾಹಿತಿ...