Reels: ಹವಿ ಮದ್ವೆ ನಿಲ್ಲಿಸಿದ ಖುಷಿಗೆ ರಾ ರಾ ರಕ್ಕಮ್ಮ ಸಾಂಗ್ ಗೆ ಡ್ಯಾನ್ಸ್ ಮಾಡ್ತಿದ್ದಾರಾ ಮಂಗಳಜ್ಜಿ, ವರೂ?

Published : Jun 07, 2022, 12:42 PM IST
Reels: ಹವಿ ಮದ್ವೆ ನಿಲ್ಲಿಸಿದ ಖುಷಿಗೆ ರಾ ರಾ ರಕ್ಕಮ್ಮ ಸಾಂಗ್ ಗೆ ಡ್ಯಾನ್ಸ್ ಮಾಡ್ತಿದ್ದಾರಾ ಮಂಗಳಜ್ಜಿ, ವರೂ?

ಸಾರಾಂಶ

ಕನ್ನಡತಿಯಲ್ಲಿ ಹರ್ಷ ಭುವಿ ಮದ್ವೆಗೆ ಅಡ್ಡಗಾಲು ಹಾಕೋಕೆ ರೆಡಿ ಇರೋ ವರೂ ಮತ್ತು ಮಂಗಳಜ್ಜಿ ಇನ್ನೊಂದು ಕಡೆ ಜೊತೆಯಾಗಿ ಸ್ಟೆಪ್ ಹಾಕಿ ಡ್ಯಾನ್ಸ್ ಮಾಡ್ತಿದ್ದಾರೆ. ವರೂ ಪಾತ್ರಧಾರಿ ಸಾರಾ ಅಣ್ಣಯ್ಯ ಮಾಡಿರೋ ರೀಲ್ಸ್‌ಏನ್ ಮಜವಾಗಿದೆ ಅಂತೀರ..

ಕನ್ನಡತಿ ಸೀರಿಯಲ್(Kannadathi serial) ನಲ್ಲಿ ಸದ್ಯಕ್ಕೆ ಎಲ್ಲರ ಕೆಂಗಣ್ಣಿಗೆ ತುತ್ತಾಗಿರೋರು ವರೂ ಮತ್ತು ಮಂಗಳಜ್ಜಿ, ಇವರಾದ ಮೇಲೆ ಸಾನಿಯಾ. ನೀವು ಕನ್ನಡತಿ ಸೀರಿಯಲ್ ನೋಡ್ತಿದ್ರೆ ಈ ಮಾತು ಯಾಕೆ ಹೇಳ್ತಿದ್ದೀವಿ ಅಂತ ಅರ್ಥ ಆಗುತ್ತೆ. ಈ ಸೀರಿಯಲ್‌ನ ಫ್ಯಾನ್ಸ್(Fans) ವರೂ ಮೇಲಂತೂ ಯಾವ ಲೆವೆಲ್‌(Level)ಗೆ ರೊಚ್ಚಿಗೆದ್ದಿದ್ದಾರೆ ಅಂದರೆ ಅವಳ ಪಾತ್ರನ ತೋರಿಸಿದ್ರೆ ಚಾನೆಲ್(Channel) ಚೇಂಜ್ ಮಾಡ್ತೀವಿ ಅಂತ ಧಮ್ಕಿ ಹಾಕ್ತಿದ್ದಾರೆ. ಆದರೆ ವರೂ ಮಾತ್ರ ತಣ್ಣಗೆ ಮಂಗಳಜ್ಜಿ ಜೊತೆ ಡ್ಯಾನ್ಸ್(Dance) ಮಾಡ್ತಿದ್ದಾಳೆ. ಅದೂ ಯಾವ ಹಾಡಿಗೆ ಗೊತ್ತಾ? ರಾ ರಾ ರಕ್ಕಮ್ಮ ಹಾಡಿಗೆ. ಅಷ್ಟಕ್ಕೂ ಇಲ್ಲಿ ಏನ್ ನಡೀತಿದೆ, ಹರ್ಷ ಭುವಿ ಮದ್ವೆ ನಿಲ್ಲಿಸಿದ ಖುಷಿಗೆ ಇವ್ರಿಬ್ರೂ ಈ ಪಾಟಿ ರಾ ರಾ ರಕ್ಕಮ್ಮ ಹಾಡಿಗೆ ಡ್ಯಾನ್ಸ್ ಮಾಡ್ತಿದ್ದಾರಾ?

ಕಿಚ್ಚ ಸುದೀಪ್(Kichcha Sudeep)  ನಟನೆಯ 'ವಿಕ್ರಾಂತ್ ರೋಣ'(Vikranth Rona) ಸಿನಿಮಾದ 'ರಾ ರಾ ರಕ್ಕಮ್ಮ'(Ra Ra Rakkamma) ಹಾಡು ಬಿಡುಗಡೆಯಾದ ದಿನದಿಂದ ಇಲ್ಲೀವರೆಗೆ ಕ್ರಿಯೇಟ್(Create) ಮಾಡಿರೋ ಸೆನ್ಸೇಶನ್‌ ಯಾವ ಲೆವೆಲ್‌ನದು ಅಂತ ನಿಮಗೆಲ್ಲ ಗೊತ್ತೇ ಇರುತ್ತೆ. ಇದರಲ್ಲಿ ಜಾಕ್ವೆಲಿನ್(Jaquelin Fernadis) ಮೈ ಬಳುಕಿಸಿದ ರೀತಿ, ಸುದೀಪ್ ಹಾಕಿದ ಸ್ಟೆಪ್‌ ಗೆ ಎಂಥಾ ಅರಸಿಕರೂ ಕಾಲು ಕುಣಿಸಬೇಕು, ಆ ಥರ ಇತ್ತು ಈ ಹಾಡಿನ ಮೋಡಿ. ಈ ಹಾಡು ರಿಲೀಸ್ ಆಗಿ ಒಂದು ಲೆವೆಲ್‌ನ ಹೈಪ್ ಸೃಷ್ಟಿಸಿದ್ರೆ, ಕಿಚ್ಚ ಸುದೀಪ್ ಅವರು ಮಾಡಿದ ರೀಲ್ಸ್(Reels) ಈ ಹಾಡನ್ನು ಇನ್ನೊಂದು ಲೆವೆಲ್‌ಗೇ ಕರೆದೊಯ್ಯಿತು. ಇದು ಸುದೀಪ್‌ ಅವರ ಮೊಟ್ಟ ಮೊದಲನೇ ರೀಲ್ಸ್. ಅದನ್ನು ಅವರು ಮಾಡಿರೋದು ಕ್ವೀನ್ ಆಫ್ ಗುಡ್ ಟೈಮ್ಸ್ ಜಾಕ್ವೆಲಿನ್ ಫೆರ್ನಾಂಡಿಸ್ ಅನ್ನೋ ಸಿಂಹಳೀಯ ಸುಂದರಿಗಾಗಿ. ಅಷ್ಟಕ್ಕೂ ಅವರು ಹಾಕಿದ ಸವಾಲನ್ನು ಜಯಿಸಿದ್ದಕ್ಕೆ ಸುದೀಪ್ ಮಾಡಿರೋ ರೀಲ್ಸ್ ಇದು. ಈ ಕಾರಣಕ್ಕೆ ಜಾಕ್ವೆಲಿನ್ ಕನ್ನಡ ಮಾತಾಡಿದ್ರು. ಇರಲಿ, ಕಾರಣ ಏನೇ ಇರಬಹುದು, ಆದರೆ ಈ ರೀಲ್ಸ್‌ ಗೆ ಸಿಕ್ಕಿರೋದು ಮಾತ್ರ ಅಮೇಜಿಂಗ್ ರೆಸ್ಪಾನ್ಸ್. ಬಹುಶಃ ಈ ಹಾಡಿಗೆ ರೀಲ್ಸ್ ಮಾಡದೇ ಇರೋರೆ ಇಲ್ಲ ಅನ್ಸುತ್ತೆ. ಸ್ಮಾಲ್ ಸ್ಕ್ರೀನ್, ಬಿಗ್ ಸ್ಕ್ರೀನ್ ನಟ ನಟಿಯರೆಲ್ಲ ಸೊಂಟ ಬಳುಕಿಸಿ ಕುಣಿದಿದ್ದೇ ಕುಣಿದಿದ್ದು. ಬಾಲಿವುಡ್‌ ನಟಿಯರೂ ಈ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಕ್ರಿಕೆಟ್‌(Cricket)ನವರೂ ಸ್ಟೆಪ್ಸ್ ಹಾಕಿದ್ದಾರೆ. ಇನ್ ಸ್ಟಾದಲ್ಲಿ ಎಲ್ ನೋಡಿದ್ರೂ ಇದೇ ರೀಲ್ಸ್.

ನಾಗಿಣಿ ಅವತಾರದಲ್ಲಿ 'ಬಿಗ್ ಬಾಸ್' ಖ್ಯಾತಿಯ ದಿವ್ಯಾ ಸುರೇಶ್; ಹೊಸ ಧಾರಾವಾಹಿ ಲುಕ್ ವೈರಲ್

ಸೋ ನಮ್ ಕನ್ನಡತಿ ಮದ್ವೆ ಗಲಾಟೆಲಿ ಎಲ್ಲರೂ ಓಡಾಡ್ತಾ ಇದ್ರೆ ಈ ವರೂ ಮತ್ತು ಅಜ್ಜಿ ಮಾತ್ರ ಎಸ್ಕೇಪ್ ಆಗಿದ್ದಾರೆ. ಮದ್ವೆ ನಿಲ್ಸೋದಕ್ಕೆ ಅವರಿಬ್ಬರ ತಲೆಯಲ್ಲಿ ಏನೇನೋ ಐಡಿಯಾಗಳು ಓಡ್ತಾ ಇವೆ. ಒಂದು ಕಡೆ ವರೂ ಈ ಮದುವೆ ನಡೆಸೋ ಆಕೆಯ ಕಂಪನಿ 'ಸಪ್ತಪದಿ'ಯ ಟೀಮ್‌ನವ್ರಿಗೆ ಮೊದಲೇ ಹೇಳಿ ಬಿಟ್ಟಿದ್ದಾಳೆ. 'ಮದ್ವೆಲಿ ನಾನಿರಲ್ಲ, ನಾನಿಲ್ಲದೇ ನಿಮ್ಮಿಂದ ಇದನ್ನು ನಿಭಾಯಿಸೋದಕ್ಕಾಗುತ್ತಲ್ವಾ?' ಅಂತ. ಟೀಮ್ ನವರು ಎಸ್ ಅಂದಿದ್ದಾರೆ. ಇನ್ನೊಂದೆಡೆ ಭುವಿಯ ಖುಷಿಯನ್ನು ಸಹಿಸದ ಮಂಗಳಜ್ಜಿ ಈ ಮದ್ವೆಗೆ ತಾನಿರಲ್ಲ ಅಂತ ಘೋಷಿಸಿ ಬಿಟ್ಟಿದ್ದಾರೆ.

Kannadathi: ವರೂ ಇನ್ನೂ ಬದಲಾಗಿಲ್ಲವೆಂದರೆ ಸೀರಿಯಲ್ ನೋಡೋಲ್ಲ ಅಂತಿದ್ದಾರೆ ವೀಕ್ಷಕರು!

ಸೋ ಹೀಗೆ ಮದ್ವೆಯಿಂದ ಎಸ್ಕೇಪ್ ಆಗಿರೋ ಈ ಇಬ್ರೂ 'ರಾ ರಾ ರಕ್ಕಮ್ಮ' ಹಾಡಿಗೆ ಸಖತ್ತಾಗಿ ಸ್ಟೆಪ್ಸ್ ಹಾಕಿದ್ದಾರೆ. ವರೂ ಮೈ ಬಳುಕಿಸಿ ಕರೆಕ್ಟಾಗಿ ಸ್ಟೆಪ್ಸ್ ಹಾಕಿದ್ರೆ ಮಂಗಳಜ್ಜಿ ಹೆಂಗೆಂಗೋ ಕುಣ್ದಿದ್ದಾರೆ. ಎಷ್ಟಾದ್ರೂ ಅಜ್ಜಿ ಅಲ್ವಾ, ಮಕ್ಕಳ ಥರ. ಅವ್ರು ಹೇಗೆ ಕುಣಿದರೂ ಚೆಂದವೇ. ಈ ವರೂ ಮತ್ತು ಮಂಗಳಜ್ಜಿಯನ್ನು ಸೀರಿಯಲ್‌ನಲ್ಲಿ ದ್ವೇಷಿಸುವವರೂ ಈ ರೀಲ್ಸ್‌ಗೆ ಶಭಾಷ್ ಅಂದಿದ್ದಾರೆ. ವರೂ ಅಲ್ಲಲ್ಲ ಸಾರಾ ಅಣ್ಣಯ್ಯ ತಮ್ಮ ಇನ್‌ಸ್ಟಾದಲ್ಲಿ ಈ ರೀಲ್ಸ್ ಪೋಸ್ಟ್ ಮಾಡಿದ್ದಾರೆ. ಕನ್ನಡತಿ ಫ್ಯಾನ್ಸ್ ಸಿಟ್ಟೆಲ್ಲ ಮರೆತು 'ವೆರಿಗುಡ್ ' ಅಂದಿದ್ದಾರೆ.

 

ಮಂಗಳಜ್ಜಿ ಪಾತ್ರ ಮಾಡ್ತಿರೋ ಆರ್‌ ಟಿ ರಮಾ(R T Rama) ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿ. ರಾಜ್ ಕುಮಾರ್, ಉದಯ ಕುಮಾರ್ ಆರಂಭ ಕಾಲದ ಚಿತ್ರಗಳಲ್ಲೆಲ್ಲ ನಟಿಸಿರುವ ಅವರು ದೆಹಲಿಯ ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾ(NSD) ದ ಪದವೀಧರೆ. ಸದ್ಯಕ್ಕಂತೂ 'ಕನ್ನಡತಿ' ಸೀರಿಯಲ್‌ನಲ್ಲಿ ಭುವಿಗೆ ಕಾಟ ಕೊಡೋ ಮಂಗಳಜ್ಜಿಯಾಗಿ ಮಿಂಚುತ್ತಿದ್ದಾರೆ. ಇದೀಗ ರೀಲ್ಸ್‌ಗೂ ಸ್ಟೆಪ್ಸ್ ಹಾಕಿ ತಾನೇನೂ ಕಡಿಮೆ ಅಲ್ಲ ಅಂತ ತೋರಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?