ಕಿರುತೆರೆ ಪ್ರೇಕ್ಷಕರನ್ನು ರಂಜಿಸಲು ಬರ್ತಿದೆ 'ರಾಜ-ರಾಣಿ-2'; ಜೋಡಿಗಳ ಬಗ್ಗೆ ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ

Published : Jun 06, 2022, 02:05 PM IST
ಕಿರುತೆರೆ ಪ್ರೇಕ್ಷಕರನ್ನು ರಂಜಿಸಲು ಬರ್ತಿದೆ 'ರಾಜ-ರಾಣಿ-2'; ಜೋಡಿಗಳ ಬಗ್ಗೆ ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ

ಸಾರಾಂಶ

ಬಹುನಿರೀಕ್ಷೆಯ ರಾಜಾ ರಾಣಿ -2 ಮತ್ತೆ ಬರ್ತಿದೆ. ಜೂನ್ 11ರಂದು ರಾಜ ರಾಣಿ-2 ರಿಯಾಲಿಟಿ ಶೋ ಅದ್ದೂರಿಯಾಗಿ ಪ್ರಾರಂಭವಾಗುತ್ತಿದೆ. ಈಗಾಗಲೇ ಅದ್ದೂರಿ ಆರಂಭದ ಪ್ರೋಮೋ ರಿಲೀಸ್ ಆಗಿದ್ದು ಪ್ರೇಕ್ಷಕರು ಕಾತರರಾಗಿದ್ದಾರೆ.

ಕನ್ನಡ ಕಿರುತೆರೆಯಲ್ಲಿ ಅನೇಕ ರಿಯಾಲಿಟಿಗಳು ಪ್ರಸಾರವಾಗುತ್ತಿವೆ. ಒಂದು ಮುಗಿಯುತ್ತಿದ್ದಂತೆ ಮತ್ತೊಂದು ರಿಯಾಲಿಟಿ ಶೋ(Reality Show) ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿರುತ್ತವೆ. ಕಾಮಿಡಿ, ಗಾಯನ, ಡಾನ್ಸ್ ಸೇರಿದಂತೆ ಅನೇಕ ರೀತಿಯ ರಿಯಾಲಿಟಿ ಶೋಗಳು ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತಿವೆ. ಇತ್ತೀಚಿಗೆ ಕನ್ನಡದಲ್ಲಿ ವಿಭಿನ್ನ ರಿಯಾಲಿಟಿ ಶೋಗಳು ಪ್ರಸಾರವಾಗುತ್ತಿವೆ. ಅಂತಹ ರಿಯಾಲಿಟಿ ಶೋಗ ಪೈಕಿ ಕನ್ನಡಿಗರ ಗಮನ ಸೆಳೆದ ಕಾರ್ಯಕ್ರಮ ವೆಂದರೆ ರಾಜ ರಾಣಿ. ಕಲರ್ಸ್ ವಾಹಿನಿಯಲ್ಲಿ(Colors Kannada) ಪ್ರಸಾರವಾಗುತ್ತಿದ್ದ ಈ ಶೋ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು. ಇಷ್ಟು ಬೇಗ ಶೋ ಮುಕ್ತಾಯವಾಯಿತಾ ಎಂದು ಪ್ರೇಕ್ಷಕರು ಬೇಸರಮಾಡಿಕೊಂಡಿದ್ದರು. ಆದರೀಗ ಸಂತಸದ ವಿಚಾರ ಎಂದರೇ ರಾಜಾ ರಾಣಿ 2(Raja Rani 2) ಮತ್ತೆ ಬರ್ತಿದೆ.

ಬಹುನಿರೀಕ್ಷೆಯ ರಾಜಾ ರಾಣಿ -2 ಮತ್ತೆ ಪ್ರಸಾರವಾಗುತ್ತಿದೆ. ಜೂನ್ 11ರಂದು ರಾಜ ರಾಣಿ-2 ರಿಯಾಲಿಟಿ ಶೋ ಅದ್ದೂರಿಯಾಗಿ ಪ್ರಾರಂಭವಾಗುತ್ತಿದೆ. ಈಗಾಗಲೇ ಅದ್ದೂರಿ ಆರಂಭದ ಪ್ರೋಮೋ ರಿಲೀಸ್ ಆಗಿದ್ದು ಪ್ರೇಕ್ಷಕರು ಕಾತರರಾಗಿದ್ದಾರೆ. ಮೊದಲ ಶೋ ದೊಡ್ಡ ಯಶಸ್ಸು ಕಂಡ ಬೆನ್ನಲ್ಲೇ ಅದೇ ಖುಷಿ, ಉತ್ಸಾಹದಿಂದ ರಾಜಾ ರಾಣಿ ಸೀಸನ್ 2 ಮಾಡಲು ವಾಹಿನಿ ನಿರ್ಧರಿಸಿದೆ.

ಈ ಶೋನಲ್ಲಿ 12 ಪ್ರಸಿದ್ಧ ಜೋಡಿಗಳು ಭಾಗಿಯಾಗಲಿದ್ದಾರೆ. ವಾರಾಂತ್ಯದಲ್ಲಿ ರಾತ್ರಿ 7.30ಕ್ಕೆ ರಾಜ-ರಾಣಿ-2 ಪ್ರಸಾರವಾಗಲಿದೆ. ಮೊದಲ ಸೀಸನ್ ಗಿಂತ 2ನೇ ಸೀಸನ್ ನಲ್ಲಿ ಮನರಂಜನೆ ಮತ್ತಷ್ಟು ಹೆಚ್ಚಾಗಿ ಇರಲಿದೆ ಎನ್ನಲಾಗುತ್ತಿದೆ. ಅಂದಹಾಗೆ ಈಗಾಗಲೇ ಸ್ಪರ್ಧಿಗಳ ಲಿಸ್ಟ್ ರಿಲೀಸ್ ಆಗಿದ್ದು ಸ್ಪರ್ಧಿಗಳ ಪುಟ್ಟ ಪರಿಚಯದ ವಿಡಿಯೋವನ್ನು ಕಲರ್ಸ್ ವಾಹಿನಿ ಬಿಡುಗಡೆ ಮಾಡಿದೆ. ಈ ಬಾರಿ ಕೂಡ ಅನೇಕ ಸೆಲೆಬ್ರಿಟಿ ಜೋಡಿಗಳು ರಾಜ-ರಾಣಿ-2 ಶೋನಲ್ಲಿ ಭಾಗಿಯಾಗುತ್ತಿದ್ದಾರೆ.

ಡ್ಯಾನ್ಸಿಂಗ್ ಚಾಂಪಿಯನ್ 'ಅಪ್ಪು' ಟ್ರೋಫಿ ಪಡೆದ ಅದಿತ್ಯ,ಅನ್ಮೋಲ್; ಕೈ ಸೇರಿದ ಹಣ ಎಷ್ಟು?

ರಾಜ-ರಾಣಿ-2ನಲ್ಲಿ ತಾರಾಜೋಡಿಗಳು

ವೀಣಾ ಸುಂದರ್ ಮತ್ತು ಸುಂದರ್, ಅರುಣ್ ಮಾಧುರ್ಯ, ಸಂದೇಶ್ ಮನೇಶಾ, ಕಾವ್ಯ ಮತ್ತು ಕುಮಾರ್, ಸುಜಾತಾ ಮತ್ತು ಅಕ್ಷಯ್ ದಂಪತಿ ಸೇರಿದಂತೆ ಇನ್ನು ಅನೇಕ ಜೋಡಿಗಳು ರಾಜ-ರಾಣಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ರಾಜಾ ರಾಣಿ ಮದುವೆಯಾದ ಹೊಸ ಜೋಡಿಗಳು, ವೈವಾಹಿಕ ಜೀವನದಲ್ಲಿ ಅನೇಕ ಅಡೆತಡೆಗಳನ್ನು ಎದುರಿಸಿ ಸುಖಿಸಂಸಾರ ನಡೆಸುವ ಜೋಡಿಗಳ ಗೇಮ್ ಶೋ ಆಗಿದೆ. ಈ ಶೋನಲ್ಲಿ ಜೋಡಿಗಳ ನಡುವಿನ ಬಾಂಧವ್ಯ ಮತ್ತಷ್ಟು ಹೆಚ್ಚಾಗುವ ಜೊತೆಗೆ ಅನೇಕರಿಗೆ ಸ್ಫೂರ್ತಿಯಾಗಲಿದೆ. ರಾಜಾ ರಾಣಿ ಸೀಸನ್ 1ರಲ್ಲಿ ಸೃಜನ್ ಲೋಕೇಶ್ ಮತ್ತು ನಟಿ ತಾರಾ ಜಡ್ಜ್ ಆಗಿದ್ದರು. ಅನುಪಮಾ ಗೌಡ ನಿರೂಪಣೆಯ ಜವಾಬ್ದಾರಿ ವಹಿಸಿಕೊಂಡಿದ್ದರು. ಈ ಬಾರಿ ಸೃಜನ್ ಮತ್ತು ತಾರಾ ಜಡ್ಡ್ ಸ್ಥಾನ ಅಲಂಕರಿಸಿದ್ದಾರೆ.

ಅನುಪಮಾ ಗೌಡ ಈಗ ಓಪನ್ ವಾಟರ್ ಡೈವರ್! ಸಾಹಸಕ್ಕೆ ಸಿಗ್ತು ಸರ್ಟಿಫಿಕೇಟ್‌

ರಾಜಾ ರಾಣಿ ಸೀಸನ್ 1 ವಿನ್ನರ್ ನೇಹಾ-ಚಂದನ್

ರಾಜ- ರಾಣಿ ಮೊದಲ ಸೀಸನ್‌ನಲ್ಲಿ ಕಿರುತೆರೆಯ ಖ್ಯಾತ ನಟಿ ನೇಹಾ ಗೌಡ ಮತ್ತು ಚಂದನ್ ದಂಪತಿ ವಿನ್ನರ್ ಆಗಿ ಹೊರಹೊಮ್ಮಿದ್ದರು. 2ನೇ ಸೀಸನ್ ಯಾರು ವಿನ್ನರ್ ಆಗಿ ಟ್ರೋಫಿ ಎತ್ತಿ ಹಿಡಿಯುತ್ತಾರೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?