
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ವೀಕೆಂಡ್ ವಿತ್ ರಮೇಶ್ ಸೀಸನ್ 5 ಪ್ರಾರಂಭವಾಗಿದ್ದು ಈಗಾಗಲೇ 7 ಅತಿಥಿಗಳು ಕೆಂಪು ಕುರ್ಚಿಯಲ್ಲಿ ಕುಳಿತಿದ್ದಾರೆ. ಕಳೆದ ವಾರ ಖ್ಯಾತ ನಟರಾದ ಅವಿನಾಶ್ ಮತ್ತು ಮಂಡ್ಯ ರಮೇಶ್ ಕಾಣಿಸಿಕೊಂಡಿದ್ದರು. ಈ ವಾರದ ಆತಿಥಿ ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಇದೀಗ ಆ ಕುತೂಹಲಕ್ಕೆ ತೆರೆಬಿದ್ದಿದೆ. ಸದ್ಯ ಜೀ ಕನ್ನಡ ವಾಹಿನಿ ಈ ವಾರ ಸಾಧಕರ ಕುರ್ಚಿ ಏರುವ ಅತಿಥಿಗಳು ಯಾರು ಎಂದು ಗೆಸ್ಟ್ ಮಾಡಿ ಅಂತ ಪೋಸ್ಟ್ ಶೇರ್ ಮಾಡಿದೆ. ಅಂದಹಾಗೆ ಈ ವಾರ ಕೂಡ ಇಬ್ಬರೂ ಅತಿಥಿಗಳು ಕಾಣಿಸಿಕೊಂಡಿದ್ದಾರೆ. ಸದ್ಯ ಅತಿಥಿಗಳು ಯಾರು ಗೆಸ್ ಮಾಡಿ ಎಂದು ಇಬ್ಬರು ಸಾಧಕರ ಬ್ಲರ್ ಫೋಟೋ ರಿಲೀಸ್ ಮಾಡಿದೆ.
ಈ ವಾರ ಪ್ರಸಾರವಾಗುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿರುವುದು ಒಬ್ಬರು ಸಿಹಿಕಹಿಯ ಸೊಗಡು ಮತ್ತೊಬ್ಬರು ಶಿಕ್ಷಣದ ಸೊಬಗು. ಸಿಹಿಕಹಿಯ ಸೊಗಡು ಮತ್ಯಾರು ಅಲ್ಲ ಖ್ಯಾತ ನಟ ಸಿಹಿ ಕಹಿ ಚಂದ್ರು. ಮತ್ತೊಬ್ಬರು ಡಾ. ಗುರುರಾಜ ಕರಜಗಿ. ಸದ್ಯ ಶೇರ್ ಮಾಡಿರುವ ಪೋಸ್ಟ್ಗೆ ನೆಟ್ಟಿಗರು ಕಾಮೆಂಟ್ ಮಾಡಿ ಗೆಸ್ಟ್ ಯಾರು ಎಂದು ಹೇಳುತ್ತಿದ್ದಾರೆ. ಅನೇಕರು ಸಿಹಿಕಹಿ ಚಂದ್ರು ಮತ್ತು ಗುರುರಾಜ ಕರಜಗಿ ಹೆಸರನ್ನು ಹೇಳುತ್ತಿದ್ದಾರೆ.
ಖ್ಯಾತ ನಟ, ರಂಗಭೂಮಿ ಕಲಾವಿದ ಸಿಹಿ ಕಹಿ ಚಂದ್ರು ಈ ವಾರದ ಸಾಧಕರ ಕುರ್ಚಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಜೊತೆಗೆ ಕಿರುತೆರೆಯಲ್ಲೂ ಖ್ಯಾತಿಗಳಿಸಿರುವ ಸಿಹಿ ಕಹಿ ಚಂದ್ರು ನಟನೆ ಜೊತೆಗೆ ಅಡುಗೆ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. 1990ರಿಂದ ಸಿನಿಮಾರಂಗದಲ್ಲಿ ಸಕ್ರೀಯರಾಗಿರುವ ಸಿಹಿ ಕಹಿ ಚಂದ್ರು ಇತ್ತೀಚಿಗೆ ಬೆಳ್ಳಿ ಪರದೆಯಲ್ಲಿ ಕಾಣಿಸಿಕೊಂಡಿದ್ದು ತೀರಾ ಕಡಿಮೆ. ಸಿನಿಮಾಗಿಂತ ಹೆಚ್ಚಾಗಿ ಸದ್ಯ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಧಾರಾವಾಹಿ ಜೊತೆಗೆ ಬಿಗ್ ಬಾಸ್ ನಲ್ಲೂ ಸ್ಪರ್ಧಿಯಾಗಿ ಭಾಗಿಯಾಗಿದ್ದರು.
ದೇವರ ಮನೆಯಲ್ಲಿ ವಿಷ್ಣುವರ್ಧನ್ ಫೋಟೋ; ಆಪ್ತಮಿತ್ರನ ಮೇಲಿನ ಅಪಾರ ಪ್ರೀತಿ ಬಿಚ್ಚಿಟ್ಟ ಮಾಳವಿಕಾ-ಅವಿನಾಶ್
ಡಾ.ಗುರುರಾಜ ಕರಜಗಿ
ಖ್ಯಾತ ಶಿಕ್ಷಣ ತಜ್ಞರು, ಉನ್ನತ ಮಟ್ಟದ ವಿದ್ಯಾಸಂಸ್ಥೆ ಕಟ್ಟಿ, ಬೆಳೆಸಿ, ಪ್ರಾಧ್ಯಾಪಕರಾಗಿ, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ಜಲವಾಗಿಸಿ ಮಹಾನ್ ವ್ಯಕ್ತಿ ಗುರುರಾಜ ಕರಜಗಿ. ಈ ವಿಶೇಷ ಸಾಧಕರನ್ನು ಈ ಬಾರಿಯ ವೀಕೆಂಡ್ ಕುರ್ಚಿಯಲ್ಲಿ ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ.
ಮಗನ ಜೊತೆ ದೇವರಿದ್ದಾನೆ; ವೀಕೆಂಡ್ ವಿತ್ ರಮೇಶ್‌ನಲ್ಲಿ ಅವಿನಾಶ್- ಮಾಳವಿಕಾ ವಿಶೇಷಚೇತನ ಪುತ್ರ
22 ಕ್ಕೂಹೆಚ್ಚು ಸಂಶೋಧನಾ ಲೇಖನಗಳನ್ನು ದೇಶ-ವಿದೇಶಗಳ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದಾರೆ. ಸೃಜನ ಶೀಲತೆ, ಸಂವಹನಕಲೆ ಮುಂತಾದದುಗಳಲಿ ಆಸಕ್ತಿ ಹೊಂದಿರುವ ಡಾ.ಕರಜಗಿ ತಮ್ಮ ಕಾರ್ಯಕ್ಷಮತೆ ಹಾಗೂ ಮಾನವೀಯ ಮೌಲ್ಯಗಳಿಗಾಗಿ ಚಿರಪರಿಚಿತರು. ವಿ.ವಿ.ಎಸ್.ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ16 ವರ್ಷಗಳು ಪ್ರಾಂಶುಪಾಲರಾಗಿ, ಜೈನ್ ಅಂತರರಾಷ್ಟ್ರೀಯ ವಸತಿ ಶಾಲೆಯ ಸ್ಥಾಪಕ ಪ್ರಾಂಶುಪಾಲರಾಗಿ ಹಾಗು ನಿರ್ದೇಶಕರಾಗಿ, ಅಂತಾರಾಷ್ಟ್ರೀಯ ಸೃಜನಶೀಲ ಅಧ್ಯಾಪನ ಕೇಂದ್ರದ (iACT) ಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.