Seetharama: ಲೈಫಲ್ಲಿ ಏನೂ ಇಲ್ಲದಿದ್ದಾಗ ಬದುಕೋದನ್ನ ಕಲೀಬೇಕು! : ಬದುಕಿದ ಪಾಠ ಕಲಿಸಿದ ಸೀತಾ

By Suvarna News  |  First Published Sep 2, 2023, 2:20 PM IST

ಸೀತಾರಾಮ ಸೀರಿಯಲ್‌ನಲ್ಲಿ ನಾಯಕಿ ಸೀತಾ ಲೈಫಿನ ಬಗ್ಗೆ ದೊಡ್ಡ ಪಾಠ ಮಾಡಿದ್ದಾಳೆ. ಏನೂ ಇಲ್ಲದಿದ್ದಾಗ ಬದುಕೋದು ಕಲೀಬೇಕು ಅಂತಿದ್ದಾಳೆ. ಅದು ಹೇಗೆ?


'ಸೀತಾರಾಮ'- ಜೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಸ್ವೀಟ್ ಸೀರಿಯಲ್. ಇದರಲ್ಲಿ ಸ್ವೀಟ್ ಇರೋದಕ್ಕೆ ಕಾರಣ ಇದೆ. ಈ ಸೀರಿಯಲ್‌ನಲ್ಲಿ ಸಿಹಿ ಇದ್ದಾಳೆ. ಈ ಪುಟಾಣಿ ಹುಡುಗಿ ಕಾರಣಕ್ಕೆ ಗಮನ ಸೆಳೀತಿರೋ ಸೀರಿಯಲ್‌ನಲ್ಲಿ ಒಂದು ನವಿರಾದ ಪ್ರೇಮಕಥೆಯೂ ಇದೆ. ಮೇಲ್ನೋಟಕ್ಕೆ ಇದೊಂದು ನಾರ್ಮಲ್ ಕಥೆ ಇರೋ ಸೀರಿಯಲ್. ಆದರೆ ಇದರ ನಿರೂಪಣೆ ಬಹಳ ಚೆನ್ನಾಗಿರೋ ಕಾರಣಕ್ಕೆ ಹೆಚ್ಚು ಜನರಿಗೆ ಇಷ್ಟವಾಗ್ತಿದೆ. ಇದರಲ್ಲಿ ರಾಮ್ ಬಿಲಿಯನೇರ್. ದೊಡ್ಡ ಕಂಪನಿಯ ಮಾಲಿಕ. ವಿದೇಶದಲ್ಲಿದ್ದು ಇಂಡಿಯಾಗೆ ವಾಪಾಸಾಗಿದ್ದಾನೆ. ಕಂಪನಿಯಲ್ಲಿ ಏನು ನಡೀತಿದೆ ಅಂತ ತಿಳಿದುಕೊಳ್ಳೋ ಉದ್ದೇಶದಿಂದ ಆತ ಕಂಪನಿ ಉದ್ಯೋಗಿ ಥರ, ಮಧ್ಯಮ ವರ್ಗದ ಹುಡುಗನ ಥರ ಇರೋದಕ್ಕೆ ಶುರು ಮಾಡಿದ್ದಾನೆ. ಆತನ ಕಂಪನಿಯಲ್ಲಿ ಕೆಲಸ ಮಾಡೋ ಹುಡುಗಿ ಸೀತಾ. ಇವಳು ಸಿಂಗಲ್ ಪೇರೆಂಟ್. ಹೀಗಂದ ಕೂಡಲೇ ಹತ್ತಾರು ಪ್ರಶ್ನೆಗಳು ಬಂದೇ ಬರುತ್ತವೆ. ಅಂಥಾ ಪ್ರಶ್ನೆಗಳನ್ನು ಎದುರಿಸಿ ಬದುಕೋ ಛಲಗಾರ್ತಿ ಈ ಸೀತಾ. ಈ ಸೀತಾಳ ಮಗಳು ಸಿಹಿ. ನಾಲ್ಕೈದು ವರ್ಷದ ಪುಟ್ಟ ಹುಡುಗಿ.

ಎಲ್ಲರ ಜೊತೆ ಬೆರೆಯೋ ಮುದ್ದಿನ ಮಗು ಸಿಹಿ ಕಾರಣಕ್ಕೆ ರಾಮ ಸಿಹಿಯ ಬೆಸ್ಟ್ ಫ್ರೆಂಡ್ ಆಗಿದ್ದಾನೆ. ಹಾಗೇ ಸೀತಾಗೂ ಫ್ರೆಂಡ್ ಆಗಿದ್ದಾನೆ. ಸ್ವಲ್ಪ ಸಮಯದಲ್ಲೇ ಇವರ ನಡುವೆ ಸ್ನೇಹಲೋಕ ಶುರುವಾಗಿದೆ. ಈಗ ರಾಮ್ ಟೈಮ್ ಇದ್ದಾಗಲೆಲ್ಲ ಸಿಹಿಯನ್ನು ಹುಡುಕಿಕೊಂಡು ಬರುತ್ತಾನೆ. ಅವಳ ಜೊತೆ ಆಟ ಆಡ್ತಾ, ಅವಳ ತುಂಟಾಟಗಳನ್ನು ನೋಡ್ತಾ ಅವನಿಗೆ ಜಗತ್ತು ಸುಂದರವಾಗಿದೆ ಅನಿಸಲಾರಂಭಿಸಿದೆ. ರಾಮ ಹಾಗೂ ಸೀತಾ ನಡುವೆ ಶುರುವಲ್ಲಿ ಬರೀ ಕೊಲೀಗ್ ಗಳ ನಡುವೆ ಇರುವ ಸಂಬಂಧ ಮಾತ್ರ ಇತ್ತು. ಈಗ ಸಿಹಿ ಕಾರಣಕ್ಕೆ ಇದು ಸ್ನೇಹಕ್ಕೆ ತಿರುಗಿದೆ. ಒಂದು ಟೈಮಲ್ಲಿ ರಾಮ್ ಸೀತಾ ಬಳಿ ಒಂದು ಪ್ರಶ್ನೆ ಕೇಳ್ತಾನೆ.

Latest Videos

undefined

ಶೇಕ್​ ಇಟ್​ ಪುಷ್ಪವತಿಗೆ ಭರ್ಜರಿಯಾಗಿ ಸೊಂಟ ಬಳುಕಿಸಿದ ಹಿಟ್ಲರ್​ ಕಲ್ಯಾಣದ 'ಎಡವಟ್ಟು ಲೀಲಾ'

ಆ ಪ್ರಶ್ನೆ ಮತ್ತೇನೂ ಅಲ್ಲ ಹತ್ತಾರು ಜನ ಅವಳ ಬಳಿ ಈಗ ಕೇಳಿರೋದೇ. ಅವಳ ಗಂಡ (Husband)  ಯಾರು ಅನ್ನೋ ಪ್ರಶ್ನೆ. ಇಷ್ಟೂ ದಿನ ಆತನ ಮನಸ್ಸಲ್ಲಿದ್ದ ಈ ಸಂದೇಹವನ್ನು ಇದೀಗ ನೇರವಾಗಿ ಸೀತಾ ಮುಂದೆ ಕೇಳಿದ್ದಾನೆ. ಆಗ ಸೀತಾ ಒಂದು ಸತ್ಯದ ಮಾತು ಹೇಳಿದ್ದಾಳೆ. ಅದು ಸಿಂಗಲ್ ಪೇರೆಂಟ್‌ಗಳಿಗೆಲ್ಲ ಅನ್ವಯವಾಗೋ ಮಾತು. 'ಸಿಂಗಲ್ ಪೇರೆಂಟ್ ಅಂದಕೂಡಲೇ ಬಹಳ ಮಂದಿಯ ತಲೆಯಲ್ಲಿ ಏನೇನೋ ಪ್ರಶ್ನೆಗಳು ಓಡುತ್ತಿರುತ್ತವೆ. ಅದನ್ನು ಅವರು ಯಾವ್ಯಾವುದೋ ರೀತಿಯಲ್ಲಿ ಹೊರಗೆ ಹಾಗ್ತಾರೆ. ಆದರೆ ಸ್ನೇಹ ಅನ್ನೋದು ನಿನ್ನೆ, ನಾಳೆಗಳಿಗಿಂತ ಇಂದಿನಲ್ಲೇ ಇರುತ್ತೆ. ಹಾಗಿರುವಾಗ ನಿನ್ನೆಯ ಕಹಿ, ನಾಳಿನ ಒಗರನ್ನು ನೆನೆಸಿಕೊಂಡು ಇವತ್ತಿನ ಖುಷಿಯನ್ನ (Hppiness)  ಯಾಕೆ ಹಾಳು ಮಾಡಬೇಕು?' ಈ ಮಾತು ಸಿಂಗಲ್ ಪೇರೆಂಟ್ ಮಾತ್ರ ಅಲ್ಲ, ನಿಜ ಸ್ನೇಹ ಹೇಗಿರಬೇಕು ಅನ್ನೋದನ್ನೂ ಹೇಳುತ್ತೆ.

 

ಇಲ್ಲಿ ಬರೋ ಇನ್ನೊಂದು ವಿಚಾರ ಲೈಫಿನದು. ಸದ್ಯಕ್ಕೆ ಸೀತಾ ಲೈಫು (life) ಕಷ್ಟದಲ್ಲಿದೆ. ಸಾಲ ತೀರಿಸಲಾಗದೇ ಅವಳ ಪುಟ್ಟ ಮನೆಯನ್ನು ಇನ್ನೇನು ಹರಾಜು ಹಾಕುತ್ತಾರೆ. ಇನ್ನೊಂದು ಕಡೆ ಅವಳ ಮೇಲೆ ಕಣ್ಣು ಹಾಕಿರುವ ಲಾಯರ್ (lawyer) ಕುತಂತ್ರವೂ ಇದರ ಹಿಂದೆ ಕೆಲಸ ಮಾಡ್ತಾ ಇದೆ. ಮತ್ತೊಂದು ಕಡೆ ರಾಮ್ ತನ್ನ ಆಫೀಸಿನ ಅಡ್ವಾನ್ಸ್ ಸಾಲರಿ ನೆವದಲ್ಲಿ ಸೀತಾಗೆ ಸಹಾಯ ಮಾಡೋದಕ್ಕೆ ಮುಂದಾಗ್ತಾನೆ. ಆದರೆ ಸೀತಾ ಅದನ್ನು ಕೇಳೋದಕ್ಕೂ ಆಸಕ್ತಿ ತೋರಿಸುತ್ತಿಲ್ಲ. ತಾನು ಮನೆಯನ್ನು ಮಾರುವ ನಿರ್ಧಾರಕ್ಕೆ ಬಂದಿದ್ದಾಳೆ. ಆ ಬಗ್ಗೆ ಅವಳಲ್ಲೊಂದು ಸಮಾಧಾನ ಇದೆ. ಇದೇ ಹೊತ್ತಲ್ಲಿ ಅವಳು ಹೇಳೋ ಮಾತು - 'ಲೈಫಲ್ಲಿ ಏನೂ ಇಲ್ಲದಾಗ ಬದುಕೋದು ಕಲೀಬೇಕು. ನಾವು ಇಂಥ ಕಷ್ಟದಲ್ಲಿ ಬದುಕೋದು ಕಲಿತಾಗ ಲೈಫಲ್ಲಿ ಏನು ಕಷ್ಟ ಬಂದರೂ ಅದನ್ನು ಎದುರಿಸೋದು ಸಾಧ್ಯವಾಗುತ್ತೆ. ಅಂಥಾ ಸಾಮರ್ಥ್ಯವನ್ನು ಲೈಫು ನಮಗೆ ಕಲಿಸಿಕೊಡುತ್ತೆ ಅಂತ. ಈ ಮಾತಿಗೆ ವೀಕ್ಷಕರೂ ಭೇಷ್ ಅಂದಿದ್ದಾರೆ.

ಪುಟ್ಟಕ್ಕನ ಮಗಳು ಸ್ನೇಹಾಳ ಮದುವೆ ಶೂಟಿಂಗ್​ ಹೀಗಿತ್ತು ನೋಡಿ: ಪ್ಲೀಸ್​ ಇಬ್ರೂ ಒಂದಾಗಿ ಅಂತಿದ್ದಾರೆ ಫ್ಯಾನ್ಸ್​

click me!