ಶೇಕ್​ ಇಟ್​ ಪುಷ್ಪವತಿಗೆ ಭರ್ಜರಿಯಾಗಿ ಸೊಂಟ ಬಳುಕಿಸಿದ ಹಿಟ್ಲರ್​ ಕಲ್ಯಾಣದ 'ಎಡವಟ್ಟು ಲೀಲಾ'

By Suvarna News  |  First Published Sep 2, 2023, 11:59 AM IST

ಹಿಟ್ಲರ್​ ಕಲ್ಯಾಣ ಧಾರಾವಾಹಿಯಲ್ಲಿ ಎಡವಟ್ಟು ಲೀಲಾ ಎಂದೇ ಫೇಮಸ್​ ಆಗಿರೋ ನಟಿ ಮಲೈಕಾ ವಸುಪಾಲ್​ ಅವರು, ಶೇಕ್​ ಇಟ್​ ಪುಷ್ಪವತಿ ಹಾಡಿಗೆ ಸೂಪರ್​ ಆಗಿ ಡ್ಯಾನ್ಸ್​ ಮಾಡಿದ್ದಾರೆ. 
 


ಈಗ ಕಿರುತೆರೆ ಜನರಿಗೆ ಅದರಲ್ಲಿಯೂ ಮಹಿಳೆಯರಿಗೆ ಸಿಕ್ಕಾಪಟ್ಟೆ ಹತ್ತಿರವಾಗುತ್ತಿದೆ. ಇದೇ ಕಾರಣಕ್ಕೆ ಬಹುತೇಕ ಎಲ್ಲಾ ಧಾರಾವಾಹಿಗಳಲ್ಲಿ ಮಹಿಳೆಯರೇ ನಾಯಕಿ, ಮಹಿಳೆಯೇ ವಿಲನ್​. ಒಂದು ಕುಟುಂಬದ ಸುತ್ತಲೂ ನಡೆಯುವ ಕಥೆಯೇ ಎಲ್ಲಾ ಧಾರಾವಾಹಿಗಳ ಕಥಾವಸ್ತುವಾಗಿರುತ್ತದೆ. ಒಬ್ಬಾಕೆ ಅತಿ ಎನ್ನುವಷ್ಟು ಮುಗ್ಧೆಯಾಗಿದ್ದರೆ ಇನ್ನೊಬ್ಬಳು ಅತಿ ಎನ್ನುವಷ್ಟು ಕ್ರೂರಿ. ಪ್ರತಿಯೊಂದು ಪಾತ್ರದಲ್ಲಿಯೂ ತಮ್ಮನ್ನೇ ಮಹಿಳೆಯರು ಆಹ್ವಾನಿಸಿಕೊಳ್ಳುವ ಕಾರಣ, ಧಾರಾವಾಹಿಗಳು ಇಂದು ಇಷ್ಟರಮಟ್ಟಿಗೆ ಜನಪ್ರಿಯವಾಗುತ್ತಿದೆ. ಇದೀಗ ಟಿಆರ್​ಪಿಗಾಗಿ ವಿಭಿನ್ನ ಕಥಾವಸ್ತು ಇರುವ ಧಾರಾವಾಹಿಗಳತ್ತ ನಿರ್ಮಾಪಕರು ಮುಂದಾಗುತ್ತಿದ್ದಾರೆ. ಕಥಾವಸ್ತುಗಳಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್​ ಕೊಡುತ್ತಾ ಧಾರಾವಾಹಿ ಪ್ರಿಯರನ್ನು ಹಿಡಿದಿಟ್ಟುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಒಂದು ಧಾರಾವಾಹಿ ಕೆಲ ದಿನ ಚೆನ್ನಾಗಿ ಓಡಿಲ್ಲ ಎಂದರೆ ಅದನ್ನು ಬಿಟ್ಟು ಬೇರೆ ಧಾರಾವಾಹಿಗಳತ್ತ (TV Serials) ಗಮನ ಹರಿಸುವುದು ಮಾಮೂಲು.  ಆದ್ದರಿಂದ ಚ್ಯೂಯಿಂಗ್​ ಗಮ್​ನಂತೆ ಧಾರಾವಾಹಿಗಳನ್ನು ಎಳೆಯುವುದರ ಜೊತೆಜೊತೆಗೇ ಪ್ರತಿಯೊಂದು ಕಂತಿನಲ್ಲಿಯೂ ಕುತೂಹಲ ತಣಿಸುವಂತೆ  ಮಾಡಲೇಬೇಕಾದ ಅನಿವಾರ್ಯತೆಯೂ ಇದೆ.

ಅಂಥದ್ದೇ ಒಂದು ಕುತೂಹಲ ಕೆರಳಿಸುತ್ತಿರುವ ಧಾರಾವಾಹಿಗಳಲ್ಲಿ ಒಂದು ಝೀ ಕನ್ನಡದಲ್ಲಿ ಪ್ರಸಾರ ಆಗುತ್ತಿರೋ ಹಿಟ್ಲರ್​ ಕಲ್ಯಾಣ (Hitler Kalyana). ಈ ಧಾರಾವಾಹಿಯಲ್ಲಿ ಹೈಲೈಟ್​ ಆಗ್ತಿರೋದು ಲೀಲಾ. ಈಕೆಯನ್ನು ಲೀಲಾ ಎನ್ನುವ ಬದಲು ಎಡವಟ್ಟು ಲೀಲಾ ಎಂದೇ ಫೇಮಸ್ಸು. ಮಾಡುವುದೆಲ್ಲವೂ ಎಡವಟ್ಟೇ ಆಗಿದ್ದರೂ ಅದೆಲ್ಲವೂ ಪ್ಲಸ್​ ಪಾಯಿಂಟೇ ಆಗಿ ಈಕೆಯ ಮನೆಗೆ ನೆರವಾಗುತ್ತಿರುವುದು ಕೂಡ ಇಂಟರೆಸ್ಟಿಂಗ್​ ವಿಷಯ. ಯಾವುದೋ ಒಂದು ಸಂದರ್ಭದಲ್ಲಿ ವಯಸ್ಸಿನಲ್ಲಿ ತೀರಾ ದೊಡ್ಡವನಾಗಿರುವ ಎಜೆಗೆ ಮದುವೆಯಾಗಿ ತನಗಿಂತಲೂ ದೊಡ್ಡವರಾಗಿರುವ ಸೊಸೆಯಂದಿರಿಗೆ ಅತ್ತೆಯಾಗಿರುವ ಪಾತ್ರ ಲೀಲಂದು.   ಈ ಮೊದಲು ಗಂಡನ ಮನೆಯಲ್ಲಿ ಬಹುತೇಕ ಎಲ್ಲರಿಂದಲೂ ತಿರಸ್ಕಾರಕ್ಕೆ ಒಳಗಾಗಿದ್ದ ಲೀಲಾ ಈಗ ಎಲ್ಲರಿಗೂ ಹತ್ತಿರ. ಆಕೆಯನ್ನು ಬಿಟ್ಟು ಇರುವುದು ಕಷ್ಟ ಎನ್ನುವ ಸ್ಥಿತಿ.

Tap to resize

Latest Videos

ಪುಟ್ಟಕ್ಕನ ಮಗಳು ಸ್ನೇಹಾಳ ಮದುವೆ ಶೂಟಿಂಗ್​ ಹೀಗಿತ್ತು ನೋಡಿ: ಪ್ಲೀಸ್​ ಇಬ್ರೂ ಒಂದಾಗಿ ಅಂತಿದ್ದಾರೆ ಫ್ಯಾನ್ಸ್​

ಇಂಥದ್ದೊಂದು ಎಡವಟ್ಟು ಜೊತೆಗೆ ಅಷ್ಟೇ ಮುಗ್ಧ ಹಾಗೂ  ಸ್ವಲ್ಪ ಅತಿ ಎನಿಸುವಷ್ಟು ಒಳ್ಳೆಯತನದ ಪಾತ್ರಧಾರಿಯಾಗಿರುವ ಲೀಲಾಳ ನಿಜವಾದ ಹೆಸರು ಮಲೈಕಾ ಟಿ ವಸುಪಾಲ್.  'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಲೀಲಾ ಆಗಿರುವ ಮಲೈಕಾ,  ಪಟ ಪಟಾ ಅಂತ ಮಾತಾಡುತ್ತಾ, ನೇರವಾಗಿ ಪ್ರೇಕ್ಷಕರ ಮನಸ್ಸಿಗೆ ಲಗ್ಗೆ ಇಡುತ್ತಾರೆ. ಧಾರಾವಾಹಿಯಲ್ಲಿ ಈಕೆ ಎಡವಟ್ಟು ಅನಿಸಿಕೊಂಡರೂ, ಅಭಿಮಾನಿಗಳಿಗೆ ಅಚ್ಚು ಮೆಚ್ಚು. ಆಗಾಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ರೀಲ್ಸ್​ ಮಾಡುತ್ತಾ ಜನರಿಗೆ ಹತ್ತಿರವಾಗುತ್ತಿದ್ದಾರೆ. ಧಾರಾವಾಹಿಯಲ್ಲಿ ಸೀರೆಯಲ್ಲಿಯೇ ಮಿಂಚುವ ಲೀಲಾ ಎಂಬ ಮುಗ್ಧ ಚೆಲುವೆ, ನಿಜ ಜೀವನದಲ್ಲಿ ಡ್ಯಾಷಿಂಗ್​ ಮಲೈಕಾ. ಹಾಟ್​ ಫೋಟೋಗಳನ್ನು ಶೇರ್​ ಮಾಡುತ್ತಾ ಯುವಕರ ಹೃದಯ ಕದಿಯುವ ಚೆಲುವೆ ಈಕೆ. ಇವರು ಸಿಕ್ಕಾಪಟ್ಟೆ ಗ್ಲ್ಯಾಮರಸ್ ಬೆಡಗಿ. ಯಾವ ಸಿನಿಮಾ ತಾರೆಗೂ ಈಕೆ ಕಡಿಮೆ ಇಲ್ಲ ಎನ್ನುವಂತೆ ಮಾಡರ್ನ್​ ಡ್ರೆಸ್​ನಲ್ಲಿಯೂ (Modern dress) ಮಿಂಚಿ ಫೋಟೋ ಶೇರ್​ ಮಾಡಿಕೊಳ್ಳುತ್ತಾರೆ.  ಇನ್ನು ಸೀರೆಯಲ್ಲಿ ಈಕೆ ಕಣ್ಣುಕುಕ್ಕಿಸುವುದು ಧಾರಾವಾಹಿಗಳಲ್ಲಿ ಪ್ರೇಕ್ಷಕರು ನೋಡಿಯೇ ಇರುತ್ತಾರೆ.

ಇಂತಿಪ್ಪ ಲೀಲಾ ಅಂದರೆ ಮಲೈಕಾ ಟಿ. ವಸುಪಾಲ್ (Malaika T.Vasupal) ಅವರು, ಕ್ರಾಂತಿಯ ಸಕತ್​ ಫೇಮಸ್​ ಹಾಡಾಗಿರುವ ಶೇಕ್​ ಇಟ್​ ಪುಷ್ಪವತಿಗೆ ಮೈ ಬಳುಕಿಸಿದ್ದಾರೆ. ಇದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್​  ಮಾಡಿಕೊಂಡಿದ್ದಾರೆ.  ಇದನ್ನು ನೋಡಿ ಫ್ಯಾನ್ಸ್​ ಫಿದಾ ಆಗಿದ್ದಾರೆ. ಅಂದಹಾಗೆ ಮಲೈಕಾ ವಸುಪಾಲ್ ಅವರು  ದಾವಣಗೆರೆಯವರು.  ಇಂಜಿನಿಯರಿಂಗ್ ಪದವಿ ಕೂಡ ಪಡೆದಿದ್ದಾರೆ.  ಸದ್ಯ ಕಲಾವಿದೆಯಾಗಿ ಫುಲ್​ಟೈಮ್​ ತೊಡಗಿಸಿಕೊಂಡಿದ್ದಾರೆ.

ಎರಡೇ ಎರಡು ದೊಡ್ಡಪತ್ರೆ- ಹತ್ತಾರು ಮಾತ್ರೆಗಳು ಮನೆಯಿಂದ ​ಔಟ್​: ನಟಿ ಅದಿತಿ ಅಮ್ಮನ ಟಿಪ್ಸ್​
 

https://www.facebook.com/reel/811614066965413

click me!