ಪ್ರೇಮಲೋಕ ಸೃಷ್ಟಿಸಿದ ಸೀತಾರಾಮ ಸಿಹಿ- ಅನಿಕೇತ್​: ಪುಟಾಣಿಗಳಿಂದ ಇಂಥ ರೀಲ್ಸಾ? ನೆಟ್ಟಿಗರ ಅಸಮಾಧಾನ

By Suchethana D  |  First Published Jul 23, 2024, 12:44 PM IST

ಸೀತಾರಾಮ ಪಾತ್ರಧಾರಿಗಳಾದ ಸಿಹಿ ಮತ್ತು ಅನಿಕೇತ್​ ಪ್ರೇಮಲೋಕ ಹಾಡಿಗೆ ರೀಲ್ಸ್​ ಮಾಡಿದ್ದಾರೆ. ಮಕ್ಕಳ ಟ್ಯಾಲೆಂಟ್​ಗೆ ಭೇಷ್​ ಎನ್ನುತ್ತಲೇ ನೆಟ್ಟಿಗರು ಅಸಮಾಧಾನವನ್ನೂ ಹೊರಹಾಕುತ್ತಿದ್ದಾರೆ. 
 


ಸದ್ಯ ಸೀತಾರಾಮ ಸೀರಿಯಲ್​ನಲ್ಲಿ ಸೀತಾ ಮತ್ತು ರಾಮರ ಮದುವೆ ನಿರ್ವಿಘ್ನವಾಗಿ ಮುಗಿದಿದ್ದರೂ ಈಗೇನಿದ್ದರೂ ಸಿಹಿಯ ಅಧ್ಯಾಯ ಆರಂಭವಾಗಿದೆ. ಭಾರ್ಗವಿಯ ಮಗ ಅನಿಕೇತ್​ನಿಂದ ಸಿಹಿಯ ಪ್ರಾಣಕ್ಕೆ ಸಂಚಕಾರ ಎದುರಾಗುತ್ತಿದೆ. ಹೆಜ್ಜೆ ಹೆಜ್ಜೆಗೂ ಸಿಹಿ ಅನಿಕೇತ್​ನಿಂದ ಪ್ರಾಣಾಪಾಯ ಎದುರಿಸುತ್ತಿದ್ದಾಳೆ. ಸಿಹಿಯ ಪ್ರಾಣಕ್ಕೆ ಸಾಕಷ್ಟು ಬಾರಿ ಕುತ್ತು ತಂದರೂ ಅನಿಕೇತ್​ ಹೆಸರನ್ನು ಸಿಹಿ ಎಲ್ಲಿಯೂ ಹೇಳದೇ ಆತನನ್ನು ಕಾಪಾಡುತ್ತಿದ್ದಾಳೆ. ಇದು ಮನೆಯಲ್ಲಿ ಕಲಿಸಿದ ಸಂಸ್ಕಾರ. ಮಕ್ಕಳಿಗೆ ಯಾವ ರೀತಿಯ ಸಂಸ್ಕಾರ ಬಿತ್ತಲಾಗುವುದೋ ಅದೇ ಸಂಸ್ಕಾರವನ್ನು ಮಕ್ಕಳು ಕಲಿಯುತ್ತಾರೆ ಎನ್ನುವ ಉದಾಹರಣೆ ಕೂಡ ಇದರಲ್ಲಿ ಅಡಗಿದೆ. ಸಿಹಿಯ ಸೀತಾ ಅಂಥ ಸಂಸ್ಕಾರ ಕೊಟ್ಟಿದ್ದರೆ, ಕುತಂತ್ರಿ ಭಾರ್ಗವಿ ತನ್ನ ಮಗ ಅನಿಕೇತ್​ಗೆ ದುರ್ಬುದ್ಧಿಯ ಸಂಸ್ಕಾರ ನೀಡಿರುವುದರಿಂದ ಆತ ಅಮ್ಮನಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿದ್ದಾನೆ.

ಇದರ ನಡುವೆಯೇ ಸಿಹಿ ಮತ್ತು ಅನಿಕೇತ್​ ಅವರು ಪ್ರೇಮಲೋಕ ಚಿತ್ರದ ಹಾಡಿಗೆ ರೀಲ್ಸ್​ ಮಾಡಿದ್ದಾರೆ. ಹಲ್ಲೋ ಮೈ ಲವ್ಲಿ ಲೇಡಿ... ಹಾಡಿಗೆ ಇಬ್ಬರೂ ರೀಲ್ಸ್​ ಮಾಡಿದ್ದಾರೆ. ಸಿಹಿ ಪಾತ್ರಧಾರಿ ರೀತು ಸಿಂಗ್​ ಮತ್ತು ಅನಿಕೇತ್​ ಪಾತ್ರಧಾರಿ ಭಾರ್ಗವ್​ ಗೌಡ ​ ಇಬ್ಬರೂ ನಟನೆಯಲ್ಲಿ ಫಂಟರು. ಸಿಹಿ ಮುಗ್ಧತೆಯಲ್ಲಿ ಪ್ರೇಕ್ಷಕರನ್ನು ಗೆದ್ದಿದ್ದರೆ, ಅನಿಕೇತ್​ ಕೂಡ ಯಾವುದಕ್ಕೂ ಕಮ್ಮಿ ಇಲ್ಲ. ವಿಲನ್​ ರೋಲ್​ ಅನ್ನು ಬಾಲಕ ಅನಿಕೇತ್​ ಚೆನ್ನಾಗಿಯೇ ನಿಭಾಯಿಸುತ್ತಿದ್ದಾರೆ. ಈ ರೀಲ್ಸ್​ನಲ್ಲಿ ಕೂಡ ಇಬ್ಬರೂ ಮಕ್ಕಳು ಚೆನ್ನಾಗಿ ನಟನೆ ಮಾಡಿದ್ದಾರೆ. ಈ ಇಬ್ಬರ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದರೂ, ಚಿಕ್ಕಮಕ್ಕಳ ಕೈಯಲ್ಲಿ ಇಂಥ ರೀಲ್ಸ್​ ಮಾಡಿಸುವುದು ಸರಿಯಾದ ಕ್ರಮವಲ್ಲ ಎಂದು ವೀಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. 

Tap to resize

Latest Videos

ನಿಮ್ಮನೆ ಮಕ್ಕಳಲ್ಲೂ ವಿಷಬೀಜ ಬಿತ್ತಬೇಕಾ? ಅಮ್ಮಂದಿರೇ ಆಯ್ಕೆ ನಿಮಗೆ ಬಿಟ್ಟಿದ್ದು.. ಸೀತಾರಾಮ ಸೀರಿಯಲ್​ ನೋಡಿ. ಏನಿದು ನೆಟ್ಟಿಗರ ಮಾತು?

ಅಷ್ಟಕ್ಕೂ ಇದೀಗ ಅನಿಕೇತ್​ ಕ್ಯಾರೆಕ್ಟರ್​ ಬಗ್ಗೆ ವೀಕ್ಷಕರು ಅಸಮಾಧಾನ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಸಿಹಿ ಆತನ ಫ್ರೆಂಡ್​ಷಿಪ್​ ಮಾಡಿಕೊಳ್ಳಲು ಹವಣಿಸುತ್ತಿದ್ದಾಳೆ. ಅದರೆ ಅನಿ ಮಾತ್ರ ಸಿಹಿ ಬರುವ ಜಾಗದಲ್ಲಿ ಗೋಲಿ ಇಟ್ಟು ಅವಳನ್ನು ಬೀಳಿಸಿದ್ದಾನೆ. ಈಗ ಇಬ್ಬರೂ ಸ್ನೇಹಿತರಾಗಬೇಕು ಎಂದರೆ ನಾನು ಹೇಳಿದ ಹಾಗೆ ನೀನು ಮಾಡಬೇಕು ಎಂದಿದ್ದಾನೆ. ಅದಕ್ಕೆ ಸಿಹಿ ಒಪ್ಪಿದ್ದಾಳೆ. ಬಾಲಕ ಟೆರೇಸ್​ ಮೇಲೆ ಏಣಿ ಮೂಲಕ ಕರೆದುಕೊಂಡು ಹೋಗಿ ತಾನು ಕೆಳಕ್ಕೆ ಇಳಿದು, ಏಣಿಯನ್ನು ಅಲ್ಲಿಂದ ತೆಗೆದಿದ್ದಾನೆ. ಸಿಹಿ ಕೆಳಗೆ ಬರಲಾಗದೇ ಒದ್ದಾಡುತ್ತಿದ್ದಾಳೆ. ಇದರ ಪ್ರೊಮೋ ಈಗ ಬಿಡುಗಡೆಯಾಗಿದೆ. ಎಲ್ಲವೂ ಭಾರ್ಗವಿ ಪ್ಲ್ಯಾನ್​ನಂತೆಯೇ ನಡೆಯುತ್ತಿದೆ. ದೊಡ್ಡವರು ಏನಾದರೂ ಮಾಡಿ ಹಾಳಾಗಿ ಹೋಗಲಿ, ಆದರೆ ಚಿಕ್ಕ ಮಕ್ಕಳ ಮನಸ್ಸಿನ ಮೇಲೆ ಇಂಥ ದುಷ್ಕೃತ್ಯಗಳು ಅದೆಂಥ ಪರಿಣಾಮ ಬೀರಬಲ್ಲುದು ಎಂಬ ಅರಿವು ನಿರ್ದೇಶಕರಿಗೆ ಇದೆಯಾ ಎಂದು ವೀಕ್ಷಕರು ಕಿಡಿ ಕಾರುತ್ತಿದ್ದಾರೆ. ಟಿಆರ್​ಪಿಗೋಸ್ಕರ ಹೀಗೆ ಮಾಡಬಹುದು, ಆದರೆ ಇಂಥ ದೃಶ್ಯಗಳನ್ನು ಮಕ್ಕಳ ಜೊತೆ ಕುಳಿತು ವೀಕ್ಷಿಸುವ ಅಪ್ಪ-ಅಮ್ಮಂದಿರ ಬಗ್ಗೆ ಅಸಮಾಧಾನ ಹೊರಹಾಕುತ್ತಿರುವ ನೆಟ್ಟಿಗರು, ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲಿದೆ ಎನ್ನುತ್ತಿದ್ದಾರೆ. 

ಇನ್ನು ಸೀರಿಯಲ್​ ವಿಷಯಕ್ಕೆ ಬರುವುದಾದರೆ, ಸಿಹಿಗೆ ಕಂಟಕ ಇರುವ ಬಗ್ಗೆ ಜ್ಯೋತಿಷಿಗಳು ಹೇಳುತ್ತಲೇ ಮನೆ ಬದಲಾಯಿಸುವ ಪ್ಲ್ಯಾನ್​ ಮಾಡಿದ್ದಾನೆ ರಾಮ್​. ಇದೇ ವೇಳೆ ನೀವು ಮೂರು ಜನ ಬೇರೆ ಮನೆಗೆ ಹೋಗಿ, ನಿಮಗೂ ಪ್ರೈವೆಸಿ ಇರುತ್ತೆ. ನಾವೂ ಆಗಾಗ ಬಂದು ಹೋಗುತ್ತೇವೆ ಎಂದು ಭಾರ್ಗವಿ ಹೇಳಿದ್ದು, ಇದರ ಬೆನ್ನಲ್ಲೇ ಯಾವುದೋ ದಾಖಲೆಗೆ ಸಹಿ ಹಾಕಿಸಿಕೊಂಡಿದ್ದಾಳೆ. ಸೀತಾ ಅದನ್ನು ಓದಿ ಎಂದರೂ ರಾಮ್​ ಚಿಕ್ಕಮ್ಮನ ಮೇಲಿನ ವಿಶ್ವಾಸದಿಂದ ಓದದೇ ಸಹಿ ಹಾಕಿದ್ದಾನೆ. ಮುಂದೇನಾಗುತ್ತದೆಯೋ ಕಾದು ನೋಡಬೇಕಿದೆ. 

ಇನ್​ಸ್ಟಾ ಲೈವ್​ನಲ್ಲಿ ನಟಿ ಶ್ರುತಿ: ಸೃಜನ್​ ಲೋಕೇಶ್​, ಅದಿತಿ ಪ್ರಭುದೇವ್​​, ರಿಯಾಲಿಟಿ ಷೋ ಕುರಿತು ಹೇಳಿದ್ದೇನು?
 

 
 
 
 
 
 
 
 
 
 
 
 
 
 
 

A post shared by Ritu Singh (@ritusinghnepal)

click me!