ಗಿಚ್ಚಿ ಗಿಲಿಗಿಲಿ ಜಡ್ಜ್ ಆಗಿರುವ ನಟಿ ಶ್ರುತಿ ನೇರಪ್ರಸಾರದಲ್ಲಿ ಕಾಣಿಸಿಕೊಂಡು ವೀಕ್ಷಕರ ಜೊತೆ ನಡೆಸಿದ ಸಂವಾದದಲ್ಲಿ ಹೇಳಿದ್ದೇನು?
ಸ್ಯಾಂಡಲ್ವುಟ್ ತಾರೆ ಶ್ರುತಿ ಸದ್ಯ ರಿಯಾಲಿಟಿ ಷೋಗಳಲ್ಲಿ ಬಿಜಿಯಾಗಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಗಿಚ್ಚಿ ಗಿಲಿಗಿಲಿ ಹಾಸ್ಯ ಕಾರ್ಯಕ್ರದಲ್ಲಿ ಜಡ್ಜ್ ಆಗಿದ್ದಾರೆ. ಅದೇ ಇನ್ನೊಂದೆಡೆ ರಾಜಾ ರಾಣಿ ರೀಲೋಡೆಡ್ ರಿಯಾಲಿಟಿ ಷೋ ಕೂಡ ಇದೇ ವಾಹಿನಿಯಲ್ಲಿ ಪ್ರಸಾರ ಆಗುತ್ತಿದೆ. ಕಳೆದ ಶನಿವಾರ ಮತ್ತು ಭಾನುವಾರ ಈ ಎರಡು ರಿಯಾಲಿಟಿ ಷೋಗಳ ಮಹಾಸಂಗಮವಿತ್ತು. ಇದರ ಕುರಿತು ನಟಿ ಶ್ರುತಿ ಅವರು ನೇರಪ್ರಸಾರದಲ್ಲಿ ಕಾಣಿಸಿಕೊಂಡು ಮಾತನಾಡಿದ್ದಾರೆ. ಎರಡೂ ಷೋಗಳಲ್ಲಿ ಕಲಾವಿದರು ಹೇಗೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ, ಮೊದಲ ಬಾರಿಗೆ ಗೃಹಿಣಿಯರು ವೇದಿಕೆಯ ಮೇಲೆ ಹತ್ತಿದ್ದು, ಗಿಚ್ಚಿ ಗಿಲಿಗಿಲಿಯಲ್ಲಿ ಹೇಗೆ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಎಂಬೆಲ್ಲಾ ಕುರಿತು ನಟಿ ಮಾತನಾಡಿದ್ದಾರೆ.
ಗಿಚ್ಚಿ ಗಿಲಿಗಿಲಿಯ ಕುರಿತು ಹೇಳಿದ ನಟಿ, ಇಲ್ಲಿ ಇರುವವರು ಅಪರೂಪದ ಕಲಾವಿದರು. ಎಲ್ಲರದ್ದೂ ಅವರದ್ದೇ ಸ್ಟೈಲ್ನಲ್ಲಿ ಎಂಟರ್ಟೇನ್ ಮಾಡ್ತಾ ಇದ್ದಾರೆ. ಆರು ತಿಂಗಳುಗಳಿಂದ ಒಂದು ರಿಯಾಲಿಟಿ ಷೋ ನಡೆಯುವುದು ಹಾಗೂ ಅಷ್ಟೇ ರೀತಿಯ ಮನೋರಂಜನೆ ನೀಡುವುದು ಸುಲಭದ ಮಾತಲ್ಲ. ಆದರೆ ಗಿಚ್ಚಿ ಗಿಲಿಗಿಲಿಯ ಕುರಿತು ವೀಕ್ಷಕರು ತೋರಿಸುತ್ತಿರುವ ಪ್ರೀತಿಯಿಂದ ಈ ಷೋ ಇನ್ನಷ್ಟು ಕಳೆಗಟ್ಟುತ್ತಲೇ ಸಾಗುತ್ತಿದೆ ಎಂದಿರುವ ನಟಿ, ಗಿಚ್ಚಿ ಗಿಲಿಗಿಲಿಯನ್ನು ನೀವು ಇಷ್ಟಪಡುತ್ತಿರುವುದು ತುಂಬಾ ಖುಷಿ. ದೀರ್ಘವಾಗಿ ನಡೆದ ಸೀಸನ್ ಇದು. ಒಳ್ಳೊಳ್ಳೆ ಕಲಾವಿದರಿಗೆ ವಾಹಿನಿ ಒಳ್ಳೆಯ ಅವಕಾಶ ನೀಡುತ್ತಿದೆ. ಇದೀಗ ಇದೇ ಕಲಾವಿದರೆ ಒಳ್ಳೆಯ ಆಫರ್ ಸಿನಿಮಾಗಳಲ್ಲಿಯೂ ಸಿಕ್ತಾ ಇವೆ. ಇದಕ್ಕೆ ಕಾರಣ ನೀವು, ನಿಮ್ಮ ಪ್ರೀತಿ ಎಂದು ನಟಿ ಶ್ರುತಿ ಹೇಳಿದ್ದಾರೆ. ಮಜಾ ಭಾರತದಲ್ಲಿ ಕಲಾವಿದರನ್ನು ನೀವು ಎನ್ಕರೇಜ್ ಮಾಡಿದ್ದೀರಿ, ಅವರೀಗ ಗಿಚ್ಚಿ ಗಿಲಿಗಿಲಿಯಲ್ಲಿ ಕಾಣಿಸಿಕೊಳ್ಳಲು ನೆರವಾಗಿದ್ದೀರಿ, ಕಲಾವಿದರು ಬದುಕು ಕಟ್ಟಿಕೊಳ್ಳಲು ಸಹಾಯ ಮಾಡ್ತಾ ಇದ್ದೀರಿ, ತುಂಬಾ ಧನ್ಯವಾದ ಎಂದು ತಿಳಿಸಿದ್ದಾರೆ.
ಮದ್ವೆಯಾದ ತಕ್ಷಣ ಮಗುವಾಗಿದ್ದು ಇದ್ಕೇ ಅಂತೆ! ನಟಿ ಅದಿತಿ ಮಾತಿಗೆ ತಾರಾ, ಶ್ರುತಿನೇ ನಾಚಿಕೊಂಡುಬಿಟ್ರು...
ಗಿಚ್ಚಿ ಗಿಲಿಗಿಲಿ ಮತ್ತು ರಾಜಾ ರಾಣಿ ರೀಲೋಡೆಡ್ ಮಹಾಸಂಗಮದ ಕುರಿತು ಮಾತನಾಡಿದ ಶ್ರುತಿ, ಈ ಮಹಾಸಂಗಮ ತುಂಬಾ ಖುಷಿಕೊಟ್ಟಿತು. ನನಗೆ ತುಂಬಾ ಇಷ್ಟವಾಗಿದ್ದು, ಸ್ವಾತಿ ಮುತ್ತಿನ ಹಾಡಿಗೆ ರಾಘು-ಚಂದ್ರಪ್ರಭಾ ಡಾನ್ಸ್ ಮಾಡಿದ್ದು ಎಂದರು. ಮಹಾಮಿಲನದಲ್ಲಿ ತುಂಬಾ ವಿಶೇಷತೆ ಇತ್ತು. ನನಗೆ ಸಾರ್ಥಕತೆ ಎನ್ನಿಸಿದ್ದು, ನಟಿ, ಆ್ಯಂಕರ್ ಅಪರ್ಣಾ ಅವರನ್ನು ಸ್ಮರಿಸಿಕೊಂಡ ಕ್ಷಣ ಎಂದರು. ಆರ್ಟಿಸ್ಟ್ಗಳಾಗಿರುವವರ ಪತ್ನಿಯನ್ನು ವೇದಿಕೆಯ ಮೇಲೆ ಮೊದಲ ಬಾರಿಗೆ ಯಾವುದೇ ಅಳುಕು ಇಲ್ಲದೇ ಕಾಣಿಸಿಕೊಂಡಿರುವುದು ಖುಷಿ ಕೊಟ್ಟಿದೆ. ತುಂಬಾ ವರ್ಷ ಇಂಡಸ್ಟ್ರಿಯಲ್ಲಿ ಇದ್ದು ವೇದಿಕೆ ಫೇಸ್ ಮಾಡುವಾಗ ಕಷ್ಟವಾಗುತ್ತದೆ. ಆದರೆ ಗೃಹಿಣಿಯರು ಕಾನ್ಫಿಡೆನ್ಸ್ನಿಂದ ವೇದಿಕೆ ಫೇಸ್ ಮಾಡಿದ್ದು, ತುಂಬಾ ಖುಷಿಯಾಯಿತು ಎಂದಿದ್ದಾರೆ. ಇದೇ ವೇಳೆ ಈ ಷೋಗಳನ್ನು ಮಿಸ್ ಮಾಡಿಕೊಂಡಿದ್ದರೆ ಜಿಯೋ ಸಿನಿಮಾದಲ್ಲಿ ನೋಡುವಂತೆ ನಟಿ ಮನವಿ ಮಾಡಿಕೊಂಡಿದ್ದಾರೆ.
ಇದೇ ವೇಳೆ, ಶ್ರುತಿ ಅವರು ರಾಜಾ ರಾಣಿಯಲ್ಲಿ ತೀರ್ಪುಗಾರರಾಗಿರುವ ನಟಿ ಅದಿತಿ ಪ್ರಭುದೇವ್ ಮತ್ತು ಆ್ಯಂಕರ್ ಸೃಜನ್ ಲೋಕೇಶ್ ಅವರನ್ನು ಹಾಡಿ ಹೊಗಳಿದ್ದಾರೆ. ಷೋ ಪ್ರಸಾರ ಆಗುವುದು ಒಂದೂವರೆ ಗಂಟೆಯಾದರೂ, ಇದರ ಶೂಟಿಂಗ್ ದಿನಪೂರ್ತಿ ನಡೆಯುತ್ತದೆ. ಅದಿತಿ ಅವರಿಗೆ ಮೂರು ತಿಂಗಳ ಮಗು ಇದೆ. ಆ ಮಗುವನ್ನೂ ನಿಭಾಯಿಸಿಕೊಂಡು ತೀರ್ಪುಗಾರರ ಕೆಲಸಕ್ಕೂ ನ್ಯಾಯ ಒದಗಿಸಿಕೊಡುವುದು ಸುಲಭದ ಮಾತಲ್ಲ. ಆದರೆ ದೇವರು ಹೆಣ್ಣುಮಕ್ಕಳಿಗೆ ಮಾತ್ರ ಇಂಥ ಶಕ್ತಿ ಕೊಟ್ಟಿದ್ದಾನೆ ಎನ್ನಿಸುತ್ತದೆ. ಮಲ್ಟಿ ಟಾಸ್ಕಿಂಗ್ ಶಕ್ತಿ ಕೊಟ್ಟಿದ್ದಾನೆ ಎನ್ನುತ್ತಲೇ ಅದಿತಿ ಅವರಿಗೆ ಶುಭ ಹಾರೈಸಿದ್ದಾರೆ. ಹಾಗೆನೇ, ಸೃಜನ್ ಲೋಕೇಶ್ ಅವರ ಕಾಮಿಡಿ ಸೆನ್ಸ್ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ನಟಿ, ವಸ್ಕಿಟ್ ಎಷ್ಟು ತಮಾಷೆ ಇರುತ್ತೋ ಅಷ್ಟೇ ತಮಾಷೆ ಸೃಜನ್ ಮಾಡುತ್ತಾರೆ. ಅವರ ಕಾಮಿಡಿ ಸೆನ್ಸ್ ನೆಕ್ಸ್ಟ್ ಲೆವೆಲ್ನಲ್ಲಿ ಇದೆ ಎಂದಿದ್ದಾರೆ. ಅದೇ ರೀತಿ ಎಲ್ಲಾ ಷೋಗಳಿಗೆ ಇನ್ನಷ್ಟು ಉತ್ತೇಜನ ನೀಡುವಂತೆ ವೀಕ್ಷಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನಿರ್ಬಂಧಿತ ಪ್ರದೇಶದಲ್ಲಿ ಅದಿತಿ ಪ್ರಭುದೇವ ಫೋಟೋಶೂಟ್! ನಟಿಯ ಕಾಲೆಳೆಯುತ್ತಿರೋ ನೆಟ್ಟಿಗರು