ಬಿಗ್ ಬಾಸ್‌ ಮನೆಯಲ್ಲಿ ರೊಮ್ಯಾನ್ಸ್; ಸೆಕ್ಸ್‌ ವಿಡಿಯೋ ವೈರಲ್ ಬೆನ್ನಲೆ ಅರೆಸ್ಟ್‌ಗೆ ಮನವಿ ಮಾಡಿದ ಶಿವಸೇನಾ ಕಾರ್ಯದರ್ಶಿ!

By Vaishnavi Chandrashekar  |  First Published Jul 23, 2024, 10:17 AM IST

ಬಿಗ್ ಬಾಸ್‌ ಮನೆಯಲ್ಲಿ ಅರ್ಮಾನ್‌- ಕೃತಿಕಾ ರೊಮ್ಯಾನ್ಸ್‌ ಸೀನ್.  ವೈರಲ್ ಆಗುತ್ತಿದ್ದಂತೆ ಶಿವಸೇನಾ ಕಾರ್ಯದರ್ಶಿಯಿಂದ ಅರೆಸ್ಟ್‌ಗೆ ಮನವಿ....


ಬಾಲಿವುಡ್ ನಟ ಅನಿಲ್ ಕಪೂರ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಬಿಗ್ ಬಾಸ್ ಓಟಿಟಿ ಸೀಸನ್ 3 ದಿನೇ ದಿನೇ ಕಾಂಟ್ರವರ್ಸಿಗಳಿಂದ ಸುದ್ದಿಯಾಗುತ್ತಿದೆ. ಸ್ನೇಹಿತರಾಗ ಪಾಯಲ್ ಮಲ್ಲಿಕ್ ಮತ್ತು ಕೃತಿಕಾ ಮಲ್ಲಿಕ್‌ರನ್ನು ಮದುವೆ ಮಾಡಿಕೊಂಡಿರುವ ಯೂಟ್ಯೂಬರ್ ಅರ್ಮಾನ್ ಮಲ್ಲಿಕ್‌  ಕೂಡ ಈ ಕಾರ್ಯಕ್ರಮದಲ್ಲಿ ಸ್ಪರ್ಧಿಸುತ್ತಿದ್ದಾರೆ. ಆದರೆ ಈಗ ಸೋಷಿಯಲ್ ಮೀಡಿಯಾದಲ್ಲಿ ಅರ್ಮಾನ್ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ, ಇದಕ್ಕೆ ಕಾರಣವೇ ಎರಡನೇ ಪತ್ನಿ ಕೃತಿಕಾ ಜೊತೆಗಿರುವ ಸೆಕ್ಸ್ ವಿಡಿಯೋ. 

ಹೌದು! ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಶಿವಸೇನಾ ಕಾರ್ಯದರ್ಶಿ ಮತ್ತು ವಕ್ತಾರರಾದ ಶಾಸಕಿ ಡಾ. ಮನೀಶಾ ಕಯಾಂಡೆ ಖಂಡಿಸಿದ್ದಾರೆ. ಈ ಕಾರ್ಯಕ್ರಮವು ಅಸಭ್ಯತೆಯನ್ನು ಉತ್ತೇಜಿಸುತ್ತದೆ ಎಂದು ಟೀಕಿಸಿದ್ದಾರೆ. 'ಅಶ್ಲೀಲತೆಯನ್ನು ತೋರಿಸುತ್ತಿದ್ದರೂ ಯಾವದಕ್ಕೂ ಚಿಂತಿಸದೆ ಶೂಟಿಂಗ್ ಮುಂದುವರೆಸುತ್ತಿದ್ದಾರೆ. ಮುಂಬೈ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದೀವಿ ಹಾಗೂ ಅವರಿಗೆ ಪತ್ರ ಬರೆಯುತ್ತೀವಿ. ರಿಯಾಲಿಟಿ ಶೋನಲ್ಲಿ ಈ ರೀತಿ ಅಶ್ಲೀಲ ದೃಶ್ಯ ತೋರಿಸಬಾರದು...ಯುವಕರ ಮನಸ್ಥಿತಿಯನ್ನು ಬದಲಾಯಿಸುತ್ತದೆ' ಎಂದು ಮಾತನಾಡಿದ್ದಾರೆ.

Tap to resize

Latest Videos

ಹೆಂಡತಿ ಸ್ನೇಹಿತೆಯನ್ನೇ ಮದುವೆಯಾದ ಯೂಟ್ಯೂಬರ್; ಖಾತೆಯಲ್ಲಿ ಕೋಟಿ ಕೋಟಿ ಹಣ ಹೇಗೆ ಬಂತು?

'ನಾವು ಮಾಹಿತಿ ಮತ್ತು ಪ್ರಸಾರದ ಬಗ್ಗೆ ಕೇಂದ್ರ ಸಚಿವರ ಬಳಿ ಹೋಗುತ್ತೇವೆ ಹಾಗೂ ಒಟಿಟಿ ವೇದಿಕೆಳ ಬಗ್ಗೆ ಸಂಸತ್ತಿನ ಅಧಿವೇಶನದಲ್ಲಿ ಕಾನೂನನ್ನು ತರಲು ನಾವು ಅವರ ಬಳಿ ಮನವಿ ಮಾಡುತ್ತೇವೆ. ಕಾರ್ಯಕ್ರಮದ CEO ಮತ್ತು ನಟರನ್ನು ಬಂಧಿಸುವಂತೆ ಹೇಳಿದ್ದೀವಿ' ಎಂದಿದ್ದಾರೆ. 

'ಅರ್ಮಾನ್ ಮಲ್ಲಿಕ್ ಮತ್ತು ಪಾಯಲ್ ವಿಡಿಯೋ ಎಂದು ವಿಡಿಯೋ ವೈರಲ್ ಮಾಡುತ್ತಿರುವವರ ಬಳಿ ಕೈ ಮುಗಿದು ಮನವಿ ಮಾಡಿಕೊಳ್ಳುತ್ತೀನಿ ದಯವಿಟ್ಟು ಇದನ್ನು ಇಲ್ಲಿಗೆ ನಿಲ್ಲಿಸಿ. ಈ ವಿಡಿಯೋವನ್ನು ಎಡಿಟ್ ಮಾಡಲಾಗಿದೆ. ನಾನು ಬಿಗ್ ಬಾಸ್ ಮನೆಯಲ್ಲಿ ಇದ್ದವಳು ವಿಡಿಯೋದಲ್ಲಿ ತೋರಿಸುತ್ತಿರುವಂತೆ ದೀಪಗಳು ಅಲ್ಲಿ ಇಲ್ಲ ಅಲ್ಲದೆ ಬೆಡ್‌ಶೀಟ್‌ ಕೂಡ ವಿಭಿನ್ನವಾಗಿದೆ. ಯಾರೇ ಬಿಗ್ ಬಾಸ್ ಮನೆಯಲ್ಲಿ ಉಳಿದವರು ಇದನ್ನು ನೋಡಿದಾಗ ನಂಬುವುದಿಲ್ಲ' ಎಂದು ಮೊದಲನೇ ಪತ್ನಿ ಪಾಯಲ್ ವಿಡಿಯೋ ಮಾಡಿದ್ದಾರೆ. 

ಲೇಟ್ ಮದುವೆ ನಿರ್ಧಾರ ತೆಗೆದುಕೊಳ್ಳುವ ಯುವತಿಯರಿಗೆ ಬಿಗ್ ಬಾಸ್ ಸಿರಿ ಕಿವಿ ಮಾತು; ಬೇಗ ಆದ್ರೆ ಈ ಸಮಸ್ಯೆ

2011ರಲ್ಲಿ ಅರ್ಮಾನ್ ಮಲ್ಲಿಕ್ ಮತ್ತು ಪಾಯಲ್ ಮದುವೆ ಮಾಡಿಕೊಂಡರು ಅದಾದ ಮೇಲೆ ಮುದ್ದಾಗ ಮಗುವನ್ನು ಬರ ಮಾಡಿಕೊಂಡರು. 2018ರಲ್ಲಿ ಪಾಯಲ್ ಬೆಸ್ಟ್‌ ಫ್ರೆಂಡ್‌ ಆಗಿದ್ದ ಕೃತಿಕಾಳನ್ನು ಅರ್ಮಾನ್ ಮದುವೆ ಮಾಡಿಕೊಂಡರು. ಈ ಜೋಡಿಗೂ ಮಕ್ಕಳಿದ್ದಾರೆ. 

click me!