ತೆಲಗು ಫ್ಯಾನ್ಸ್​ನಿಂದ ಸೀತಾರಾಮ ನಟಿಗೆ ಸಕತ್​ ಡಿಮಾಂಡ್​! ರೀಲ್ಸ್​ ನೋಡಿ ಸಿನಿಮಾಗೆ ಆಫರ್​..

Published : Aug 30, 2024, 04:42 PM IST
ತೆಲಗು ಫ್ಯಾನ್ಸ್​ನಿಂದ ಸೀತಾರಾಮ ನಟಿಗೆ ಸಕತ್​ ಡಿಮಾಂಡ್​! ರೀಲ್ಸ್​ ನೋಡಿ ಸಿನಿಮಾಗೆ ಆಫರ್​..

ಸಾರಾಂಶ

ಸೀತಾರಾಮ ಸೀತಾ ಪಾತ್ರಧಾರಿ ವೈಷ್ಣವಿ ಗೌಡ ತೆಲಗು ಹಾಡಿಗೆ ರೀಲ್ಸ್​ ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಏನೆಲ್ಲಾ ಹೇಳಿದ್ರು ನೋಡಿ...    

ಸೀತಾರಾಮ ಸೀರಿಯಲ್​ ಸೀತಾ ಅರ್ಥಾತ್​ ವೈಷ್ಣವಿ ಗೌಡ ಸೋಷಿಯಲ್​  ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​.  ಸೀತಾರಾಮ ಶೂಟಿಂಗ್​ನ ಬಿಡುವಿನ ಸಮಯದಲ್ಲಿ ಸೋಷಿಯಲ್​ ಮೀಡಿಯಾದಲ್ಲಿ ಹಲವು ವಿಡಿಯೋಗಳನ್ನು ಶೇರ್​ ಮಾಡುವ ವೈಷ್ಣವಿ ಇದೀಗ  ರೀಲ್ಸ್​  ಮಾಡಿದ್ದಾರೆ.  ಯೂಟ್ಯೂಟ್​, ಇನ್​ಸ್ಟಾಗ್ರಾಮ್​ ಸೇರಿದಂತೆ ಎಲ್ಲೆಡೆ ಇವರದ್ದೇ ಹವಾ. ಮೇಲಿಂದ ಮೇಲೆ ರೀಲ್ಸ್​ಗಳನ್ನು ಮಾಡುತ್ತಲೇ ಇರುತ್ತಾರೆ. ಕೆಲವೊಮ್ಮೆ ಸೀತಾರಾಮ ಟೀಂ ಜೊತೆ, ಇನ್ನು ಕೆಲವು ಸಲ ಸೀತಾರಾಮ ಸೀರಿಯಲ್​ ಮಗಳು ಸಿಹಿ ಜೊತೆ ಹಾಗೂ ಹಲವು ಬಾರಿ ಸಿಂಗಲ್​ ಆಗಿ ರೀಲ್ಸ್​ ಮಾಡುತ್ತಾರೆ. ಸೀತಾರಾಮ ಸೀರಿಯಲ್​ನಲ್ಲಿ ಮದುವೆಯ ಸಂಭ್ರಮದ ನಡುವೆಯೇ ಇದೀಗ ರೀಲ್ಸ್​ ಮಾಡಿದ್ದಾರೆ. ತೆಲಗು ಹಾಡಿಗೆ ಭರ್ಜರಿ ಸ್ಟೆಪ್​ ಹಾಕಿದ್ದಾರೆ.  ಈ ರೀಲ್ಸ್​ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.  ಸೀತಾರಾಮ ಸೀರಿಯಲ್​ ಅನ್ನು ತೆಲಗುವಿನಲ್ಲಿಯೂ ಮಾಡಿ ಎಂದು ನಟಿಗೆ ಕೆಲವು ಫ್ಯಾನ್ಸ್​ ಹೇಳುತ್ತಿದ್ದರೆ, ಮತ್ತೆ ಕೆಲವರು ಸಿನಿಮಾದಲ್ಲಿ ನಟಿಸಿ ಎಂದು ಸಲಹೆ ಕೊಟ್ಟಿದ್ದಾರೆ. ಮತ್ತೆ ಕೆಲವರು ನಾವೇ ನಿಮ್ಮ ಹೆಸರನ್ನು ಸಿನಿಮಾಗೆ ಶಿಫಾರಸು ಮಾಡುವುದಾಗಿಯೂ ಆಫರ್​ ಕೊಟ್ಟಿದ್ದಾರೆ! ಕಿರುತೆರೆಗೆ ಮಾತ್ರ ನಿಮ್ಮನ್ನು ಸೀಮಿತ ಮಾಡಿಕೊಳ್ಳಬೇಡಿ, ನಿಮಗೆ ಸಕತ್​ ಟ್ಯಾಲೆಂಟ್​ ಇದೆ. ಸಿನಿಮಾಕ್ಕೂ ಬನ್ನಿ ಎನ್ನುತ್ತಿದ್ದಾರೆ. 

 
ನಟಿ ವೈಷ್ಣವಿ ಗೌಡ ಈ ಹಿಂದೆ ಅಗ್ನಿಸಾಕ್ಷಿ ಸೀರಿಯಲ್​ನಲ್ಲಿ ಸನ್ನಿಧಿ ಎಂದೇ ಫೇಮಸ್​ ಆದವರು. ಇದೀಗ ಸನ್ನಿಧಿಯ ಜಾಗವನ್ನು ಸೀತೆ ಪಡೆದುಕೊಂಡಿದ್ದಾಳೆ. ಸೀತಾರಾಮ ಸೀರಿಯಲ್​ನ ವೈಷ್ಣವಿ ಅವರ ಸೀತಾಳ ಪಾತ್ರ ಮನೆಮಾತಾಗಿದೆ. ನಿಜ ಜೀವನದಲ್ಲಿ ಮದ್ವೆಯಾಗದಿದ್ರೂ ಸೀರಿಯಲ್​ನಲ್ಲಿ ಸಿಹಿ ಎಂಬ ಪುಟಾಣಿಯ ತಾಯಿಯಾಗಿರುವ ಸೀತೆಯ ಪಾತ್ರಧಾರಿ ವೈಷ್ಣವಿ ಅವರು ಸೋಷಿಯಲ್​  ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​. ಆಗಾಗ್ಗೆ ಸಕತ್​ ಪೋಸ್​ ಕೊಟ್ಟು ಫೋಟೋ, ವಿಡಿಯೋ ಶೂಟ್​ಗಳನ್ನು ಮಾಡಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಟ್ರೋಲ್​ ಕೂಡ ಆಗುತ್ತಾರೆ. ಸೀತಾ ಪಾತ್ರಕ್ಕೆ ಅದರದ್ದೇ ಆದ ಗಾಂಭೀರ್ಯ ಇರುವ ಹಿನ್ನೆಲೆಯಲ್ಲಿ, ಮಿನಿ, ಷಾರ್ಟ್ಸ್​, ಅರೆಬರೆ ಡ್ರೆಸ್​ ಇಂಥವುಗಳಲ್ಲಿ ಕೆಲವು ಅಭಿಮಾನಿಗಳು ವೈಷ್ಣವಿ ಅವರನ್ನು ನೋಡಲು ಇಷ್ಟಪಡುವುದಿಲ್ಲ. ಅದಕ್ಕಾಗಿಯೇ ಬೇಸರವನ್ನೂ ವ್ಯಕ್ತಪಡಿಸುವುದು ಇದೆ.

ಸೀತಾರಾಮ ಸೀತಾ ಮದ್ವೆ ಯಾವಾಗ? ಹುಡುಗ ಯಾರು? ಸಂಪೂರ್ಣ ಡಿಟೇಲ್ಸ್​ ಕೊಟ್ಟ ನಟಿ ವೈಷ್ಣವಿ ಗೌಡ

ಇನ್ನು ವೈಷ್ಣವಿ ಅವರ ಕುರಿತು ಹೇಳುವುದಾದರೆ,  ವೈಷ್ಣವಿ ಕಿರುತೆರೆ ಕಲಾವಿದೆ ಮಾತ್ರವಲ್ಲದೇ ಹಲವು ಉತ್ಪನ್ನಗಳ ರಾಯಭಾರಿಯೂ ಹೌದು. ಇವರು ಕಿರುತೆರೆ ಪ್ರವೇಶಿಸಿದ್ದರ ಬಗ್ಗೆಯೂ ಹಿಂದೊಮ್ಮೆ ಹೇಳಿಕೊಂಡಿದ್ದರು. ಇವರು ಒಂದು ದಿನ ತಮ್ಮ ತಾಯಿಯೊಂದಿಗೆ ಮಂದಿರಕ್ಕೆ ಹೋದಾಗ ಸಹಾಯಕ ನಿರ್ದೇಶಕರೊಬ್ಬರು ನೋಡಿ ತಮ್ಮ ಸೀರಿಯಲ್‌ ದೇವಿಯಲ್ಲಿ ನಟಿಸಲು ಆಫರ್ ನೀಡಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದರು. ಹೀಗೆ  ಜೀ ಕನ್ನಡದ `ದೇವಿ' ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿರೋ ವೈಷ್ಣವಿ,  `ಪುನರ್‌ವಿವಾಹ'ದಲ್ಲಿ ನಟಿಸಿದರು. `ಅಗ್ನಿಸಾಕ್ಷಿ' ಸೀರಿಯಲ್‌ ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತು. ಇದೀಗ ಸೀತೆಯಾಗಿ ಜನರನ್ನು ರಂಜಿಸುತ್ತಿದ್ದಾರೆ.  

ಇನ್ನು ಸೀತಾರಾಮ ಸೀರಿಯಲ್​ಗೆ ಬರುವುದಾದರೆ, ಸೀತಾರಾಮ ಸೀರಿಯಲ್​ನಲ್ಲಿ ಸೀತಾ  ಮತ್ತು ರಾಮನ ಮದುವೆಯಾಗಿದ್ದು, ಮದುವೆ ಲೈಫ್​ ಎಂಜಾಯ್​ ಮಾಡುತ್ತಿದ್ದಾರೆ. ಇನ್ನೊಂದು ಮಗುವಿಗಾಗಿ ಮನೆಯಲ್ಲಿ ಬಹಳ ಮಾತುಕತೆ ನಡೆಯುತ್ತಿದೆ. ಅದೇ ಇನ್ನೊಂದೆಡೆ ಮಗಳು ಸಿಹಿ ಬೋರ್ಡಿಂಗ್​ ಸ್ಕೂಲ್​ ಸೇರಿದ್ದು, ಅಲ್ಲಿ ಡಾ.ಮೇಘಶ್ಯಾಮ್​ ಹತ್ತಿರ ಆಗಿದ್ದಾಳೆ. ಡಾ.ಮೇಘಶ್ಯಾಮನೇ ಸಿಹಿಯ ಅಪ್ಪ ಇರಬಹುದಾ ಎನ್ನುವ ಕುತೂಹಲವಿದೆ. ಇದು ಸೀರಿಯಲ್ ಕಥೆಯಾದ್ರೆ, ನಿಜ ಜೀವನದಲ್ಲಿ ಸೀತಾಳ ಮದ್ವೆ ಯಾವಾಗ? ಹುಡುಗ ಯಾರು ಎಂಬುದು ಹಲವರ ಪ್ರಶ್ನೆ. ಸೀತಾ ಮತ್ತು ರಾಮ್​ ಅಂದ್ರೆ ವೈಷ್ಣವಿ ಗೌಡ ಮತ್ತು ಗಗನ್​ ಅವರ ಕೆಮೆಸ್ಟ್ರಿ ಮೆಚ್ಚಿಕೊಂಡಿರೋ ಅಭಿಮಾನಿಗಳು ನೀವಿಬ್ಬರೂ ನಿಜ ಜೀವನದಲ್ಲಿಯೂ ಮದ್ವೆಯಾಗಿ ಅನ್ನುತ್ತಿದ್ದಾರೆ. ಆದರೆ ನಿಜ ಜೀವನ ಹಾಗಲ್ವಲ್ಲಾ? ಸೀರಿಯಲ್​ಗಳಲ್ಲಿ ಇವತ್ತು ಒಬ್ಬರು, ಮತ್ತೊಂದು ಸೀರಿಯಲ್​ನಲ್ಲಿ ಮತ್ತೊಬ್ಬರು. ಫ್ಯಾನ್ಸ್​ಗೇನು? ಏನೇನೋ ಹೇಳ್ತಾರೆ. ಆದ್ರೆ ರಿಯಲ್​ ಲೈಫ್​ನಲ್ಲಿ ಸೀತಾ ಭವಿಷ್ಯ ಏನು? 

ಸೊಂಟ ಬಳಕಿಸುತ್ತಲೇ ಮೋಡಿ ಮಾಡಿದ 'ಸೀತಾ': ಬೆಲ್ಲಿ ಡಾನ್ಸ್​ಗೆ ಉಫ್​ ಬಿದ್ದೋದೆ ಅಂತಿರೋ ಫ್ಯಾನ್ಸ್​


PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ನೀವಂದುಕೊಂಡಂತಲ್ಲ ಎನ್ನುತ್ತಲೇ ಬಹು ದೊಡ್ಡ ಸತ್ಯ ತೆರೆದಿಟ್ಟ ನಟ ವಿಜಯ ರಾಘವೇಂದ್ರ!
Bigg Boss: ಮೊಟ್ಟೆಗಾಗಿ ನಿದ್ದೆಗೆಟ್ಟ ಕಾವ್ಯಾ- ಕಾವ್ಯಾರ ಮೊಟ್ಟೆ ಬಾತ್​ರೂಮ್​ ಕೊಂಡೊಯ್ದ ರಜತ್​ ಹೀಗೇ ಮಾಡೋದಾ?