
ಬಿಗ್ ಬಾಸ್ ಒಟಿಟಿ ರಿಯಾಲಿಟಿ ಶೋ (Bigg Boss Reality Show) ಮತ್ತೆ ಸುದ್ದಿ ಮಾಡ್ತಿದೆ. ಜೂನ್ 21ರಿಂದ ಜಿಯೋ ಸಿನಿಮಾದಲ್ಲಿ (Jio Cinema) ರಿಯಾಲಿಟಿ ಶೋ ಶುರುವಾಗಲಿದೆ. ಈ ಬಾರಿ ಬಿಗ್ ಬಾಸ್ ಒಟಿಟಿ ಸಾಕಷ್ಟು ಭಿನ್ನತೆಯನ್ನು ಹೊಂದಿದೆ. ಅನಿಲ್ ಕಪೂರ್ ಈ ಬಾರಿ ಬಿಗ್ ಬಾಸ್ ನೇತೃತ್ವ ವಹಿಸಲಿದ್ದಾರೆ. ಈ ಮಧ್ಯೆ ಬಿಗ್ ಬಾಸ್ ಒಟಿಟಿಯ ಮೊದಲ ಪ್ರೋಮೋ ಬಿಡುಗಡೆಯಾಗಿದೆ. ಆ ಪ್ರೋಮೋ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಸ್ಪರ್ಧಿ ಮತ್ತೆ ಚರ್ಚೆಗೆ ಬಂದಿದ್ದಾರೆ. ವಿಡಿಯೋ ನೋಡಿದ್ರೆ ಅವರು ಮತ್ತ್ಯಾರು ಅಲ್ಲ ವಡಾಪಾವ್ ಹುಡುಗಿ ಅನ್ನೋದು ಸ್ಪಷ್ಟವಾಗುತ್ತದೆ. ಕೆಲಸ ಬಿಟ್ಟು ದೆಹಲಿಯ ಬೀದಿಯಲ್ಲಿ ವಡಾಪಾವ್ ಮಾರಾಟ ಮಾಡ್ತಿದ್ದ ಚಂದ್ರಿಕಾ ದೀಕ್ಷಿತ್ ನೋಡಿದ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ. ವಡಾ ಪಾವ್ ಗರ್ಲ್, ಬಿಗ್ ಬಾಸ್ ಒಟಿಟಿಗೆ ಬರುವ ಕೆಲಸ ಏನು ಮಾಡಿದ್ದಾಳೆ ಎನ್ನುವ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ವಿರೋಧ ವ್ಯಕ್ತವಾಗ್ತಿದೆ. ಅಷ್ಟಕ್ಕೂ ಈ ವಡಾ ಪಾವ್ ಗರ್ಲ್ ಯಾರು ಎನ್ನುವ ವಿವರ ಇಲ್ಲಿದೆ.
ವಡಾ ಪಾವ್ (Vada Pav) ಗರ್ಲ್ ಯಾರು? ವಡಾ ಪಾವ್ ಗರ್ಲ್ ಹೆಸರು ಚಂದ್ರಿಕಾ ದೀಕ್ಷಿತ್ (Chandrika Dixit) . ಅವರು ಮೊದಲು ಹಲ್ದಿರಾಮ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದರು. ಪತಿಯ ಕೆಲಸದ ಒತ್ತಡ ಹಾಗೂ ಮಗನಿಗೆ ಕಾಡಿದ ಡೆಂಗ್ಯೂ ನಂತ್ರ ಕೆಲಸ ತೊರೆದ ಚಂದ್ರಿಕಾ ದೀಕ್ಷಿತ್ ಸ್ವಂತ ಬ್ಯುಸಿನೆಸ್ (Business) ಶುರು ಮಾಡುವ ಆಲೋಚನೆ ಮಾಡಿದ್ರು. ನಂತ್ರ ಚಂದ್ರಿಕಾ ದೆಹಲಿಯ ಬೀದಿ ಬದಿಯಲ್ಲಿ ವಡಾ ಪಾವ್ ಮಾರಾಟ ಮಾಡಲು ಶುರು ಮಾಡಿದ್ದರು. ಯುಟ್ಯೂಬರ್ ನಿಂದ ಚಂದ್ರಿಕಾ ಭವಿಷ್ಯ ಬದಲಾಯ್ತು. ಫುಡ್ ವ್ಲಾಗರ್ ಅಮಿತ್ ಜಿಂದಾಲ್ ತಮ್ಮ ವ್ಲಾಗ್ ನಲ್ಲಿ ವಡಾ ಪಾವ್ ಚಂದ್ರಿಕಾ ದೀಕ್ಷಿತ್ ಅವರನ್ನು ತೋರಿಸಿದ್ದರು. ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಷ್ಟು ವೈರಲ್ ಆಯ್ತು ಅಂದ್ರೆ ಮರುದಿನ ಚಂದ್ರಿಕಾ ಶಾಪ್ ಮುಂದೆ ಜನರ ಗುಂಪೇ ನೆರೆದಿತ್ತು.
ನಟ ಪ್ರಥಮ್‌ಗೆ ಜೀವ ಬೆದರಿಕೆ ಹಾಕಿದ ದರ್ಶನ್ ಅಭಿಮಾನಿಗಳು; 500ಕ್ಕೂ ಅಧಿಕ ಕಾಲ್, ಮೆಸೇಜ್
ಬರೀ ವಡಾ ಪಾವ್ ಮಾಡಿ ಮಾತ್ರವಲ್ಲ ಚಂದ್ರಿಕಾ ಕೆಲ ವಿವಾದದಿಂದ ಫೇಮಸ್ ಆದ್ರು. ಚಂದ್ರಿಕಾ ಅಂಗಡಿ ಮುಂದೆ ಜನ ಬರ್ತಿದ್ದಂತೆ ಕೆಲ ಸಮಸ್ಯೆ ಅವರನ್ನು ಬೆನ್ನು ಹತ್ತಿತ್ತು. ದೆಹಲಿ ಕಾರ್ಪೋರೇಷನ್ (Delhi Coroporation) ಲಂಚ ಕೇಳ್ತಿದೆ ಎಂದು ಚಂದ್ರಿಕಾ ಆರೋಪ ಮಾಡಿದ್ದರು. ಇಷ್ಟೆ ಅಲ್ಲದೆ ಕೆಲವರು ಅವರ ಅಂಗಡಿ ಬದಿಯಲ್ಲೇ ಅಂಗಡಿ ತೆರೆದು ಕಾಂಪಿಟೇಷನ್ ನೀಡಲು ಶುರು ಮಾಡಿದ್ದರು. ಈ ಮಧ್ಯೆ ಅನೇಕ ವ್ಲಾಗ್ ನಲ್ಲಿ ಚಂದ್ರಿಕಾ ಕಾಣಿಸಿಕೊಂಡಿದ್ದರು. ವಡಾ ಪಾವ್ ಗರ್ಲ್ ಎಂದೇ ಚಂದ್ರಿಕಾಗೆ ಹೆಸರು ಬಂತು. ಸಾಮಾಜಿಕ ಜಾಲತಾಣದಲ್ಲಿ ಸದಾ ಸುದ್ದಿಯಲ್ಲಿರುವವರಲ್ಲಿ ಚಂದ್ರಿಕಾ ಕೂಡ ಒಬ್ಬರು.
ರೋಬೋಟ್ ತರ ಕೆಲಸ ಮಾಡಬೇಡಿ, ಫ್ಯಾಷನ್ ಇರಲಿ; ಪ್ರಿಯಾಂಕಾ ಚೋಪ್ರಾ ಕಿವಿ ಮಾತು!
ಈಗ ಚಂದ್ರಿಕಾ ದೀಕ್ಷಿತ್ ಗೆ ಬಿಗ್ ಬಾಸ್ ಒಟಿಟಿ 3ಗೆ ಆಯ್ಕೆ ಮಾಡಲಾಗಿದೆ. ವಿಡಿಯೋದಲ್ಲಿ ಚಂದ್ರಿಕಾ ವಡಾ ಪಾವ್ ಬಗ್ಗೆ, ತನಗೆ ನೀಡಿದ ಕಾಂಪಿಟೇಷನ್ ಬಗ್ಗೆ ಹೇಳ್ತಾರೆ. ಅವರ ಮುಖ ಅಸ್ಪಷ್ಟವಾಗಿದ್ರೂ ಅದು ಚಂದ್ರಿಕಾ ಎಂದೇ ನೆಟ್ಟಿಗರು ನಂಬಿದ್ದಾರೆ. ಚಂದ್ರಿಕಾ, ಬಿಗ್ ಬಾಸ್ ಒಟಿಟಿಗೆ ಬರುವಂತಹ ಎಂಥ ಕೆಲಸ ಮಾಡಿದ್ದಾರೆ ಎಂಬ ಪ್ರಶ್ನೆಯನ್ನು ನೆಟ್ಟಿಗರು ಎತ್ತಿದ್ದಾರೆ. ನಿಜವಾಗಿಯೂ ಇವಳು ಬರ್ತಿದ್ದಾಳಾ ಎಂದು ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಏನಾದ್ರೂ ಮಾಡಿ, ಪ್ರಸಿದ್ಧಿ ಪಡೆಯಿರಿ ಎಂದು ಕಮೆಂಟ್ ಮಾಡಿದ್ದಾರೆ. ಬಿಗ್ ಬಾಸ್ ನ ಕೆಟ್ಟ ಸ್ಪರ್ಧಿ ಇವರು ಎಂದು ಮತ್ತೊಬ್ಬರು ಕೋಪ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.