
ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಸೀತಾರಾಮ ಸೀರಿಯಲ್ ನಾಯಕ, ನಾಯಕಿ ತಮ್ಮ ಕ್ಯೂಟ್‌ನೆಸ್‌ನಿಂದಲೂ ಸಖತ್ ಪಾಪ್ಯುಲರ್. ಗಗನ್ ಚಿನ್ನಪ್ಪ ಹಾಗೂ ವೈಷ್ಣವಿ ಈ ಕ್ಯೂಟ್ ಹೀರೋ ಹೀರೋಯಿನ್. ಇವರಿಬ್ಬರ ಕೆಮೆಸ್ಟ್ರಿ ಚೆನ್ನಾಗಿ ವರ್ಕೌಟ್ ಆಗ್ತಾ ಇದೆ. ಇಬ್ರೂ ಈ ಪಾತ್ರಕ್ಕೆ ಹೇಳಿ ಮಾಡಿಸಿದ ಹಾಗಿದ್ದಾರೆ ಅಂತ ಎಲ್ಲರೂ ಕಮೆಂಟ್ ಮಾಡ್ತಾರೆ. ಆಗಾಗ್ಗೆ ಇವರು ಸೇರಿ ರೀಲ್ಸ್ ಮಾಡುತ್ತಲೇ ಇರುತ್ತಾರೆ. ಇದನ್ನು ನೋಡಿದವರು, ಇವರಿಬ್ಬರ ಮಧ್ಯೆ ಖಂಡಿತಾ ಕುಚ್ ಕುಚ್ ನಡೆಯುತ್ತಿದೆ ಎಂದೇ ಹೇಳುತ್ತಾ ಬಂದಿದ್ದಾರೆ. ಇವರಿಬ್ಬರೂ ಅವಿವಾಹಿತರಾಗಿರುವ ಹಿನ್ನೆಲೆಯಲ್ಲಿ ಈ ಜೋಡಿಯ ಮದುವೆ ಮಾಡಿಸಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ನಂತರ ರೊಮಾಂಟಿಕ್ ಸಾಂಗ್ನ ವಿಡಿಯೋ ನೋಡಿದ ಮೇಲಂತೂ ಮದುವೆ ಆಗ್ಲಿ ಅನ್ನೋ ಫ್ಯಾನ್ಸ್ ಒತ್ತಡ ಮತ್ತಷ್ಟು ಹೆಚ್ಚಾಗಿದೆ.
ಇದೀಗ ನಟಿ ವೈಷ್ಣವಿ ಗೌಡ ಅವರು ಜಂಟಲ್‌ಮ್ಯಾನ್ ಚಿತ್ರದ ಒಟ್ಟಗಥೈ ಕಟ್ಟಿಕೋ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಬೆಲ್ಲಿ ಡಾನ್ಸ್ ಕಲಾವಿದೆಯೂ ಆಗಿರುವ ನಟಿ ಇದರಲ್ಲಿ ಸಕತ್ ಆಗಿ ಸೊಂಟ ಬಳಕಿಸಿದ್ದಾರೆ. ನಟಿ ವೈಷ್ಣವಿ ಅವರ ಮದುವೆಗಾಗಿ ಕಾತರದಿಂದ ಕಾಯ್ತಿರೋ ಫ್ಯಾನ್ಸ್, ಮದ್ವೆ ಫಿಕ್ಸ್ ಆಗಿರೊ ಕುಷಿಗೆ ಹೆಜ್ಜೆ ಹಾಕುತ್ತಿದ್ದೀರಾ ಎಂದು ಪ್ರಶ್ನಿಸುತ್ತಿದ್ದಾರೆ. ಅದಕ್ಕೆ ಕಾರಣವೂ ಇದೆ. ಕಳೆದ ಕೆಲ ದಿನಗಲ ಹಿಂದೆ ವೈಷ್ಣವಿ ಗೌಡ ಅವರಿಗೆ ರಾಮ್ ಪಾತ್ರಧಾರಿ ಗಗನ್ ಅವರು, ಪ್ರೇಮಿಗಳ ದಿನಕ್ಕೆ ಗಿಫ್ಟ್ ಕೊಟ್ಟಿದ್ದರು. ಅದೂ ಸಾಧಾರಣ ಗಿಫ್ಟ್ ಅಲ್ಲ, ಬದಲಿಗೆ ವಜ್ರಾಭರಣ. ಜ್ಯೂವೆಲ್ಲರಿ ಷಾಪ್ಗೆ ಹೋಗಿರುವ ಈ ಜೋಡಿ ಅಲ್ಲಿಯ ಆಭರಣಗಳನ್ನು ನೋಡಿದೆ. ಆಗ ರಾಮ್ ವಜ್ರದ ನೆಕ್ಲೆಸ್ ಸೇರಿದಂತೆ ಕೆಲವೊಂದು ಆಭರಣಗಳನ್ನು ಗಿಫ್ಟ್ ನೀಡಿದ್ದಾರೆ. ಆದ್ದರಿಂದ ಮೊದಲೇ ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎನ್ನುತ್ತಿರುವ ಅಭಿಮಾನಿಗಳು ಈಗ ತಾವು ಅಂದುಕೊಂಡದ್ದು ನಿಜವಾಯ್ತು. ಇವರಿಬ್ಬರೂ ಲವ್ನಲ್ಲಿ ಬಿದ್ದಿದ್ದಾರೆ ಎಂದೇ ಬಣ್ಣಿಸುತ್ತಿದ್ದರು. ಆದರೆ ಅಸಲಿಗೆ ಇದು ಜ್ಯುವೆಲ್ಲರಿ ಷಾಪ್ನ ಜಾಹಿರಾತು ಅಷ್ಟೇ.
ಪ್ರೇಮಿಗಳ ದಿನಕ್ಕಾಗಿ ವೈಷ್ಣವಿಗೆ ವಜ್ರಾಭರಣ ಗಿಫ್ಟ್! ಮದ್ವೆಗೆ ಸಜ್ಜಾಗ್ತಿದ್ಯಾ ಸೀತಾ-ರಾಮ ಜೋಡಿ? ಇಲ್ಲಿದೆ ಡಿಟೇಲ್ಸ್
ಕೆಲ ದಿನಗಳ ಹಿಂದೆ, ವೈಷ್ಣವಿಯೇ ಗಗನ್ ಬಳಿ ಮದುವೆ, ಮಕ್ಕಳ ವಿಷಯ ತೆಗೆದಿದ್ದು, ಇವರಿಬ್ಬರ ನಡುವೆ ಏನೋ ಇದೆ ಎನ್ನುವ ಎಂದೇ ಅಭಿಮಾನಿಗಳು ಅಂದುಕೊಂಡಿದ್ದರು. ಪ್ರಸಿದ್ಧ ವ್ಯಕ್ತಿಯೊಂದಿಗೆ ಊಟ ಮಾಡುವುದಾದರೆ ಯಾರ ಜೊತೆ ಎಂದು ವೈಷ್ಣವಿ ಅವರನ್ನು ಕೇಳಿದಾಗ ಕೂಡಲೇ ಗಗನ್ ನನ್ನ ಜೊತೆ ಎಂದಿದ್ದರು. ವೈಷ್ಣವಿ ಖಂಡಿತಾ ಇಲ್ಲ, ನಾನು ಓಡಿ ಹೋಗ್ತೀನಿ ಎಂದಿದ್ದಾರೆ. ನಿಮ್ಮ ಹೆಸರನ್ನು ಬದಲಾಯಿಸಿಕೊಳ್ಳುವುದಿದ್ದರೆ ಏನಂತ ಇಟ್ಟುಕೊಳ್ತೀರಾ ಕೇಳಿದಾಗ, ಕೂಡಲೇ ಗಗನ್ ಅವ್ರು ವನಜಾಕ್ಷಿ ಎಂದಿದ್ದರು. ಆಗ ವೈಷ್ಣವಿ, ಇಲ್ಲ ವೈಷ್ಣೋದೇವಿಯಿಂದ ಈ ಹೆಸರು ಬಂದಿದ್ದು, ಹೆಸರು ಬದಲಾಯಿಸಿಕೊಳ್ಳಲ್ಲ ಎಂದಿದ್ದರು.
ಲಾಟರಿ ಬಂದರೆ ಏನು ಮಾಡುತ್ತೀರಿ ಕೇಳಿದಾಗ, ಅಮ್ಮನ ಕೈಗೆ ಕೊಡುತ್ತೇನೆ ಎಂದರು ವೈಷ್ಣವಿ. ಆಗ ಗಗನ್ ಎಲ್ಲಾ ಸುಳ್ಳು ಎಂದರು. ಆಗ ವೈಷ್ಣವಿ ಮಕ್ಕಳನ್ನು ಸಾಕುವ ಕಷ್ಟ ನಿಮಗೇನು ಗೊತ್ತು ಮದ್ವೆಯಾಗಿ ಮಕ್ಳು ಮಾಡಿಕೊಳ್ಳಿ ಎಂದಾಗ ಕೂಡಲೇ ಗಗನ್ ನನ್ನ ಮನೆಯಲ್ಲಿ ಯಾರೂ ಹೆಣ್ಣೇ ನೋಡ್ತಾ ಇಲ್ವಲ್ಲಪ್ಪಾ ಅಯ್ಯೋ ಎಂದರು. ಅದಕ್ಕೆ ನೆಟ್ಟಿಗರು ಪಕ್ಕದಲ್ಲೇ ಇದ್ದಾಳಲ್ಲ ಅಂದಿದ್ದರು. ಒಟ್ಟಿನಲ್ಲಿ ಇವರಿಬ್ಬರ ಮದುವೆ ಮಾಡಿಸದೇ ಅಭಿಮಾನಿಗಳು ಬಿಡುವಂತೆ ಕಾಣಿಸುತ್ತಿಲ್ಲ.
ವೈಷ್ಣವಿ ಗೌಡ ಬಾಲಿವುಡ್‌ಗೆ ಎಂಟ್ರಿ? ತೂಕ ಇಳಿಸೋ ಟಿಪ್ಸ್ ಕೊಡುತ್ತಲೇ ಮನದ ಮಾತು ತೆರೆದಿಟ್ಟ 'ಸೀತಾ'
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.