ಹೊಸ ಜೀವನಕ್ಕೆ ಕಾಲಿಡಲು ರೆಡಿಯಾದ ಬ್ರೋ ಗೌಡ…ರೀಲ್ಸ್ ಮಾಡ್ತಿದ್ದ ಹುಡುಗಿ ಜೊತೆನೇ ರಿಯಲ್ ಆಗಿ ಲವ್ವಲ್ಲಿ ಬಿದ್ದ ನಟ!

Published : Feb 14, 2025, 06:33 PM ISTUpdated : Feb 14, 2025, 07:36 PM IST
ಹೊಸ ಜೀವನಕ್ಕೆ ಕಾಲಿಡಲು ರೆಡಿಯಾದ ಬ್ರೋ ಗೌಡ…ರೀಲ್ಸ್ ಮಾಡ್ತಿದ್ದ ಹುಡುಗಿ ಜೊತೆನೇ ರಿಯಲ್ ಆಗಿ ಲವ್ವಲ್ಲಿ ಬಿದ್ದ ನಟ!

ಸಾರಾಂಶ

ಬಿಗ್‌ಬಾಸ್‌ ಖ್ಯಾತಿಯ ರ್ಯಾಪರ್ ಬ್ರೋ ಗೌಡ ಅಲಿಯಾಸ್ ಶಮಂತ್ ಗೌಡ, ಮೇಕಪ್ ಆರ್ಟಿಸ್ಟ್ ಮೇಘನಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ನಟಿಸುತ್ತಿರುವ ಶಮಂತ್, ಫೆಬ್ರವರಿ ೧೪ ರಂದು ತಮ್ಮ ಮದುವೆಯ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಮದುವೆ ದಿನಾಂಕವನ್ನು ಇನ್ನೂ ಬಹಿರಂಗಪಡಿಸಿಲ್ಲ.

ಬಿಗ್ ಬಾಸ್ ಸೀಸನ್ 8 ಮೂಲಕ ಕನ್ನಡಿಗರಿಗೆ ಚಿರಪರಿಚಿತರಾದ ಕನ್ನಡದ ರ್ಯಾಪರ್ ಆಗಿದ್ದ ಬ್ರೋ ಗೌಡ ಆಲಿಯಾಸ್ ಶಮಂತ್ ಗೌಡ, ಸದ್ಯ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿಯಲ್ಲಿ ತಾಯಿಯ ತಾಳಕ್ಕೆ ತಕ್ಕಂತೆ ನಡೆಯುವ ವೈಷ್ಣವ್, ಅಮ್ಮನ ಮಾತು ಕೇಳಿ ಪ್ರೀತಿಸಿದ ಹುಡುಗಿಯನ್ನು ಬಿಟ್ಟು, ಅಮ್ಮ ಹೇಳಿದ ಹುಡುಗಿಯನ್ನು ಮದುವೆಯಾದ, ಇನ್ನೇನು ಅವಳ ಜೊತೆ ಸುಂದರವಾಗಿ ಸಂಸಾರ ಆರಂಭಿಸಬೇಕು ಎಂದು ಅಂದುಕೊಳ್ಳುವಾಗಲೇ ಅಮ್ಮನ ಇನ್ನೊಂದು ಕುತಂತ್ರಕ್ಕೆ ಬಲಿಯಾಗಿ ಮತ್ತೆ ಲಕ್ಷ್ಮೀಯಿಂದ ದೂರವಾಗಿದ್ದಾರೆ. ಅಷ್ಟೇ ಅಲ್ಲ ವೈಷ್ಣವ್ ಗೆ ಮತ್ತೊಂದು ಮದುವೆ ಮಾಡಿಸಲು ರೆಡಿಯಾಗಿದ್ದಾಳೆ ಕಾವೇರಿ. 

ಕಿರುತೆರೆಯಿಂದ ಬೆಳ್ಳಿತೆರೆಯತ್ತ ಬ್ರೋ ಗೌಡ: ಕನ್ನಡದ ಮೊದಲ ಜಾಂಬಿ ಚಿತ್ರಕ್ಕೆ ಹೀರೋ ಆದ ಶಮಂತ್

ಇದಿಷ್ಟು ಸೀರಿಯಲ್ ಗೆ ಸಂಬಂಧಿಸಿದ ವಿಷ್ಯ ಆಗಿದ್ರೆ ನಿಜ ಜೀವನದ್ದಲ್ಲೂ ಬ್ರೋ ಗೌಡ ಮದುವೆಯಾಗೋದಕ್ಕೆ ರೆಡಿಯಾಗಿದ್ದಾರೆ. ಇದನ್ನು ಸ್ವತಃ ಶಮಂತ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ತಾವು ಹೊಸ ಜೀವನಕ್ಕೆ ಕಾಲಿಡುವ ಬಗ್ಗೆ ತಿಳಿಸಿದ್ದಾರೆ. ಫೆಬ್ರುವರಿ 14 ರ ವ್ಯಾಲೆಂಟೈನ್ಸ್ ಡೇ ಸಂಭ್ರಮದಂದು ಬ್ರೋ ಗೌಡ ತಮ್ಮ ಇನ್’ಸ್ಟಾಗ್ರಾಂನಲ್ಲಿ New Chapter Unlocked Of #brogram ಎಂದು ಬರೆದುಕೊಂಡು ಒಂದು ಸುಂದರವಾದ ವಿಡಿಯೋ ಹಂಚಿಕೊಂಡಿದ್ದಾರೆ. 

ಹುಟ್ಟು ಹಬ್ಬದ ಸಂಭ್ರಮದಲ್ಲಿ ಲಕ್ಷ್ಮೀ ಬಾರಮ್ಮ ಖ್ಯಾತಿಯ ಶಮಂತ್ ಗೌಡ!

ಬ್ರೋ ಗೌಡ ಮದುವೆಯಾಗುತ್ತಿರುವ ಹುಡುಗಿಯ ಹೆಸರು ಮೇಘನಾ. ಇವರು ಮೇಕಪ್ ಆರ್ಟಿಸ್ಟ್ (Makeup Artist)ಆಗಿದ್ದು,  ಇವರಿಬ್ಬರ ಪ್ರೀತಿಯ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಶಮಂತ್ ಗೌಡ, ಬ್ಲಾಕ್ ಅಂಡ್ ವೈಟ್ ಸೂಟ್ ನಲ್ಲಿ ಕಾಣಿಸಿಕೊಂಡಿದ್ರೆ, ಮೇಘನಾ ವೈಟ್ ಡ್ರೆಸ್ಸಲ್ಲಿ ಕಾಣಿಸಿಕೊಂಡಿದ್ದಾರೆ.  ಮೇಘನಾ ಮತ್ತು ಬ್ರೋ ಗೌಡ ಹಲವಾರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದಾರೆ. ಈ ಹಿಂದೆ ಈ ಜೋಡಿ , ಜೊತೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಗಳನ್ನು ಸಹ ಮಾಡುತ್ತಿದ್ದರು. ಇದೀಗ ಅದೇ ಹುಡುಗಿಯನ್ನು ಪ್ರೀತಿಸಿ, ಹೊಸ ಜೀವನಕ್ಕೆ ಕಾಲಿಡಲು ತಯಾರಿ ನಡೆಸುತ್ತಿದ್ದಾರೆ. ಈ ಜೋಡಿಗೆ ಸೋಶಿಯಲ್ ಮಿಡಿಯಾದಾದ್ಯಂತ ಅಭಿಮಾನಿಗಳು ಹಾಗೂ ಕಲಾವಿದರು, ಶುಭ ಕೋರಿದ್ದಾರೆ. ಇಬ್ಬರ ಮದುವೆ ಯಾವಾಗ ಅನ್ನೋದನ್ನು ಶಮಂತ್ ಇನ್ನೂ ರಿವೀಲ್ ಮಾಡಿಲ್ಲ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?