ಬಿಗ್‌ಬಾಸ್‌ ಖ್ಯಾತಿಯ ಮಂಜು ಪಾವಗಡ ಸದ್ದಿಲ್ಲದೆ ನಿಶ್ಚಿತಾರ್ಥ, ಹುಡುಗಿ ಇವರೇ ನೋಡಿ

By Gowthami K  |  First Published Oct 4, 2024, 7:50 PM IST

ಮಜಾ ಭಾರತ ಮತ್ತು ಗಿಚ್ಚಿ ಗಿಲಿಗಿಲಿ ಖ್ಯಾತಿಯ ನಟ ಮಂಜು ಪಾವಗಡ ಅವರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ನವೆಂಬರ್‌ನಲ್ಲಿ ನಡೆಯಲಿರುವ ಈ ಮದುವೆಗೆ ನಂದಿನಿ ಎಂಬುವವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.


ಬಿಗ್‌ಬಾಸ್‌ ಸೀಸನ್‌ 8 ರ ವಿನ್ನರ್   ಮಜಾ ಭಾರತ, ಗಿಚ್ಚಿ ಗಿಲಿಗಿಲಿ ಖ್ಯಾತಿಯ ಮಂಜು ಪಾವಗಡ, ಅಲಿಯಾಸ್‌ ಲ್ಯಾಗ್ ಮಂಜು ಮನೆಯಲ್ಲಿ ಸಂಭ್ರಮ ಕಳೆಗಟ್ಟಿದೆ. ಶೀಘ್ರದಲ್ಲಿ ಮಂಜು ಹಸೆಮಣೆ ಏರಲಿದ್ದಾರೆ. ಇಷ್ಟು ದಿನ ಮದುವೆಯಾಗಿಲ್ಲ ಎಂದು ಎಲ್ಲರೂ ಮಂಜುವನ್ನು ತಮಾಷೆ ಮಾಡುತ್ತಿದ್ದರು. ಆದರೆ ಇದೀಗ ಸದ್ದಿಲ್ಲದೇ ಮಂಜು ಪಾವಗಡ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.  ಗುರು ಹಿರಿಯರ ಸಮ್ಮುಖದಲ್ಲಿ  ನಂದಿನಿ ಎಂಬುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಇವರು ನೆನಪಿದ್ದರಾ? ಬಿಬಿಕೆ ಮಿನಿ ಸೀಸನ್‌ನಲ್ಲಿ ಭಾಗವಹಿಸಿ ಈಗ ಕನ್ನಡ & ತೆಲುಗು ಬಿಗ್‌ಬಾಸ್‌ ನಲ್ಲಿ ಸ್ಪರ್ಧಿಗಳು!

Tap to resize

Latest Videos

undefined

 ಸದ್ಯ ಮಂಜು ಬಾಳಿಗೆ ಬೆಳಕಾಗಿ ಬರಲಿರುವ ಮದರಸಿ ಹೆಸರು ನಂದಿನಿ, ಇವರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಗುರು ಹಿರಿಯರ ಸಮ್ಮುಖದಲ್ಲಿ ಮಂಜು ಪಾವಗಡ ಮತ್ತು ನಂದಿನಿ ವಿವಾಹ ನಿಶ್ಚಿತಾರ್ಥ ನಡೆದಿದೆ. ತೀರಾ ಖಾಸಗಿಯಾಗಿ ನಡೆದ ಕಾರ್ಯಕ್ರಮದಲ್ಲಿ ಆಪ್ತರಷ್ಟೇ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ. 

ಮಂಜು ಪಾವಗಡ ಹಾಗೂ ನಂದಿನಿ ಅವರ ವಿವಾಹ ಮಹೋತ್ಸವವು ನವೆಂಬರ್ 13 ಹಾಗೂ 14ರಂದು ತುಮಕೂರು ಜಿಲ್ಲೆಯ ಪಾವಗಡದಲ್ಲಿರುವ ಮದುವೆ ನಡೆಯಲಿದೆ ಎಂದು ತಿಳಿದುಬಂದಿದೆ. ಬಿಗ್‌ಬಾಸ್‌ ವಿನ್ನರ್ ಆಗಿ,  ನಟನಾಗಿ ಮಂಜು ಪಾವಗಡ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಆಸ್ಪತ್ರೆಯಿಂದ ಬಿಡುಗಡೆಯಾದ ಬೆನ್ನಲ್ಲೇ ಪ್ರಧಾನಿ ಮೋದಿಗೆ ಧನ್ಯವಾದ ಸಲ್ಲಿಸಿದ ರಜನಿಕಾಂತ್

ಇನ್ನು ಇತ್ತೀಚೆಗೆ ಮಂಜು ಪಾವಗಡ ಅವರು ಬೆಂಗಳೂರಿನಲ್ಲಿ ತಮ್ಮ ಹೊಸ ಮನೆಗೆ ಪ್ರವೇಶಿಸಿದ್ದರು.  ಸಾಮಾಜಿಕ ಜಾಲತಾಣದಲ್ಲಿ ಹೊಸ ಮನೆಯ ಫೋಟೋ ವೈರಲ್ ಆಗಿತ್ತು. ಈ ಮನೆಗೆ  ನಟ ರಾಜೀವ್, ಅಂಕಿತಾ, ಗಿಚ್ಚಿಗಿಲಿ ಗಿಲಿ ಕಲಾವಿದರು ಸೇರಿ ಹಲವು   ಮಂದಿ ಆಗಮಿಸಿ ಶುಭ ಹಾರೈಸಿದ್ದರು. ಮಂಜು ಪಾವಗಡ ಅವರು ಅಂತರಪಟ ಧಾರಾವಾಹಿಯಲ್ಲಿ ನೆಗೆಟಿವ್ ರೋಲ್‌ ನಲ್ಲಿ ತನ್ನ ವಯಸ್ಸಿಗೂ ಮಿರಿದ ಪಾತ್ರದಲ್ಲಿ ನಟಿಸಿದ್ದರು.

click me!