ಜೀವನದಲ್ಲಿ ನನಗೆ ರೀಲ್ಸ್ ಮಾಡುವುದನ್ನು ಬಿಟ್ಟರೆ ಬೇರೇನೂ ಬೇಡವೆಂದು ಗಂಡನಿಗೆ ಡಿವೋರ್ಸ್ ನೀಡಿದ ಮೊಟ್ಟ ಮೊದಲ ನಟಿ ನಮ್ಮ ಕನ್ನಡತಿ ಎಂದು ಅಭಿಮಾನಿಗಳು ಈ ನಟಿಗೆ ಬಿರುದು ನೀಡಿದ್ದಾರೆ.
ಬೆಂಗಳೂರು (ಸೆ.10): ಸಾಮಾಜಿಕ ಜಾಲತಾಣದಲ್ಲಿ ಅತ್ಯಧಿಕ ಫಾಲೋವರ್ಸ್‌ಗಳನ್ನು ಹೊಂದುವ ಮೂಲಕ ಅತ್ಯಧಿಕ ಹಣವನ್ನು ಗಳಿಕೆ ಮಾಡಲು ಮುಂದಾಗಿರುವ ಹಲವು ಸೋಶಿಯಲ್ ಮೀಡಿಯಾ ಇನ್ಲ್ಪುಯೆನ್ಸರ್‌ಗಳು ಇದ್ದಾರೆ. ಅವರು ಜೀವನ ಪೂರ್ತಿ ವಿಡಿಯೋ ಕ್ರಿಯೇಟ್ ಮಾಡುತ್ತಾ, ರೀಲ್ಸ್ ಮಾಡುತ್ತಿದ್ದಾರೆ. ಇಲ್ಲಿ ಕನ್ನಡ ಚಿತ್ರರಂಗದ ನಟಿಯೊಬ್ಬರು ಕೂಡ ತಾವು ರೀಲ್ಸ್ ಮಾಡುವುದಕ್ಕೆಂದೇ ಗಂಡನಿಗೆ ಡಿವೋರ್ಸ್ ಕೊಟ್ಟಿದ್ದಾರೆ ಎಂದು ಅವರ ಅಭಿಮಾನಿಗಳು ಹೇಳಿಕೊಂಡಿದ್ದಾರೆ.
ದೇಶದಲ್ಲಿ ಟಿಕ್ ಟಾಕ್ ಇದ್ದ ಕಾಲದಲ್ಲಿ ರೀಲ್ಸ್ ಮಾಡುತ್ತಲೇ ಮುನ್ನೆಲೆಗೆ ಬಂದ ಹಲವು ಸೋಶಿಯಲ್ ಮೀಡಿಯಾ ರೀಲ್ಸ್ ಸ್ಟಾರ್‌ಗಳ ಪೈಕಿ ನಟಿ ನಿವೇದಿತಾ ಗೌಡ ಕೂಡ ಒಬ್ಬರಾಗಿದ್ದಾರೆ. ನಿವೇದಿತಾ ಗೌಡ ಚಿಕ್ಕ ವಯಸ್ಸಿನಲ್ಲಿ ಬಾರ್ಬಿಡಾಲ್‌ನಂತೆ ಸಿಂಗರಿಸಿಕೊಂಡು, ಉದ್ದನೆಯ ಕೂದಲು ಬಿಟ್ಟುಕೊಂಡು ರೀಲ್ಸ್ ಮಾಡಿ ಪೋಸ್ಟ್ ಮಾಡುತ್ತಿದ್ದರು. ಇದರಿಂದ ಅವರ ಅಭಿಮಾನಿಗಳ ಸಂಖ್ಯೆಗೇನೂ ಕಡಿಮೆ ಇರಲಿಲ್ಲ. ಹೀಗಾಗಿ, ನಿವೇದಿತಾ ಗೌಡ ಒಂದು ಅವಧಿಯಲ್ಲಿ ಭಾರತೀಯ ಟಿಕ್ ಟಾಕ್‌ನ ಜೀವಂತ ಬಾರ್ಬಿಡಾಲ್ ಎಂಬ ಖ್ಯಾತಿಯನ್ನು ಹೊಂದಿದ್ದರು. ಇನ್ನು ಟಿಕ್‌ಟಾಕ್‌ನಿಂದ ತಮಗೆ ಆದಾಯ ಬರಲು ಆರಂಭವಾಯಿತು ಎಂದು ಖುಷಿಯಾಗಿರುವಾಗಲೇ ಕೇಂದ್ರ ಸರ್ಕಾರದಿಂದ ಟಿಕ್ ಟಾಕ್ ಆಪ್ ಅನ್ನು ನಿಷೇಧಿಸಿ ಆದೇಶ ಹೊರಡಿಸಲಾಯಿತು. ಇದರಿಂದ ತುಂಬಾ ಜನರು ಟಿಕ್ ಟಾಕ್ ಮಾಡಲಾಗದೇ ಭಾರೀ ನಿರಾಸೆ ಹೊಂದಿದ್ದರು. ಆದರೆ, ಇವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಮಾಡುವ ಅವಕಾಶ ಬಂದಿದ್ದರಿಂದ ಬಹುತೇಕ ಟಿಕ್ ಟಾಕ್ ರೀಲ್ಸ್ ಸ್ಟಾರ್‌ಗಳೆಲ್ಲರೂ ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬರ್‌ಗಳಾಗಿ ಮಾರ್ಪಾಡಾದರು.
ನಿವೇದಿತಾ ಗೌಡ: ಗಂಡ ಬಿಟ್ಟರೆ ಜೀವನವೇ ಮುಗಿತು ಅಂತಾರೆ, ನೀವು ತುಂಬಾ ಖುಷಿಯಾಗಿದ್ದೀರಿ!
ಕರ್ನಾಟಕದ ಬಾರ್ಬಿಡಾಲ್ ಖ್ಯಾತಿಯ ನಿವೇದಿತಾ ಗೌಡ ಕೂಡ ಟಿಕ್‌ಟಾಕ್ ಬ್ಯಾನ್ ಆದ ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ಬಂದು ತಮ್ಮ ರೀಲ್ಸ್ ಪೋಸ್ಟ್ ಮಾಡುತ್ತಾ ಲಕ್ಷಾಂತರ ಫಾಲೋವರ್ಸ್‌ಗಳನ್ನು ಗಳಿಸಿದರು. ಇದರಿಂದ ಹೆಚ್ಚು ಜನಮನ್ನಣೆ ಗಳಿಸಿದ್ದ ನಿವೇದಿತಾಗೌಡಗೆ ಕನ್ನಡ ಖ್ಯಾತ ಕಿರಿತೆರೆ ಕಲರ್ಸ್ ಕನ್ನಡ ವಾಹಿನಿಯಿಂದ ನಡೆಸಿಕೊಡಲಾಗುವ ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸರ್ಪರ್ಧಿಸಲು ಅವಕಾಶ ಸಿಗುತ್ತದೆ. ಇದರಿಂದ ಟಿವಿಗೆ ಟಿಆರ್‌ಪಿಯೂ ಸಿಕ್ಕಿತ್ತು. ನಿವೇದಿತಾ ಗೌಡಳನ್ನು ಮೇಕಪ್ ಹೊರತಾಗಿ ಜೀವನ ಶೈಲಿ ಹಾಗೂ ಆಕೆಯ ಗುಣಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹಾತೊರೆಯುತ್ತಿದ್ದ ಅಭಿಮಾನಿಗಳಿಗೆ ಬಿಗ್‌ಬಾಸ್ ಶೋ ಒಂದು ವೇದಿಕೆ ಕಲ್ಪಿಸಿತು.
ಕನ್ನಡ ಬಿಗ್ ಬಾಸ್ ಸೀಸನ್ 5ರ ಸ್ಪರ್ಧಿಯಾಗಿ ಬಂದ (Bigg Boss season 5) ನಿವೇದಿತಾ ಗೌಡ ಅವರಿಗೆ ಅಲ್ಲಿ ಎಲ್ಲ ಕಂಟೆಸ್ಟ್‌ಗಳಂತೆ ರ್ಯಾಪರ್ ಚಂದನ್ ಶೆಟ್ಟಿ ಪರಿಚಯವಾಗುತ್ತಾರೆ. ಅಲ್ಲಿ ಇಬ್ಬರ ನಡುವಿನ ಒಡನಾಟ ತುಂಬಾ ಚೆನ್ನಾಗಿರುತ್ತದೆ. ಇನ್ನು ಬಿಗ್ ಬಾಸ್ ಕನ್ನಡ ಸೀಸನ್ 5ರ ವಿಜೇತರಾಗಿ ರ್ಯಾಪರ್ ಚಂದನ್ ಶೆಟ್ಟಿ (Chandan Shetty won season 5 of Bigg Boss Kannada) ಹೊರ ಹೊಮ್ಮುತ್ತಾರೆ. ಬಿಗ್ ಬಾಸ್ ಮನೆಯಿಂದ ಹೊರಬಂದ ಚಂದನ್ ಶೆಟ್ಟಿ ಮೈಸೂರು ದಸರಾ ಮಹೋತ್ಸವದಲ್ಲಿ ಹಾಡನ್ನು ಹಾಡುತ್ತಲೇ ದೊಡ್ಡ ವೇದಿಕೆಯಲ್ಲಿ ನಿವೇದಿತಾ ಗೌಡಗೆ (Chandan Shetty Love proposed to Niveditha Gowda on Mysuru Dasara programme stage) ಪ್ರೇಮ ನಿವೇದನೆ ಮಾಡುತ್ತಾರೆ. ಇದಾದ ಬಳಿಕ ಈ ವಿಚಾರ ತಿಳಿದು ಇಬ್ಬರ ಮನೆಯರು ಒಪ್ಪಿಕೊಂಡು ಅವರಿಗೆ ಮದುವೆ ಮಾಡುತ್ತಾರೆ.
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಮದುವೆಯಾದ ನಂತರ ಸುಮಾರು ನಾಲ್ಕೂವರೆ ವರ್ಷಗಳ ಕಾಲ ಸಂಸಾರ ಮಾಡಿ ನಮ್ಮಿಬ್ಬರಿಗೂ ಜೀವನ ಮಾಡಲು ಹೊಂದಾಣಿಕೆ ಆಗುತ್ತಿಲ್ಲವೆಂದು ಪರಸ್ಪರ ಸಮ್ಮತಿಯ ಮೇರೆಗೆ ಡಿವೋರ್ಸ್ ಪಡೆದುಕೊಳ್ಳುತ್ತಾರೆ. ಇದಕ್ಕೆ ಕಾರಣ ನಿವೇದಿತಾ ಗೌಡಗೆ ಮಗು ಮಾಡಿಕೊಳ್ಳಲು ಇಷ್ಟವಿಲ್ಲ ಎಂಬ ಕಾರಣವೂ ಒಂದಾಗಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ, ಇಬ್ಬರೂ ಸಿನಿಮಾ, ರಿಯಾಲಿಟಿ ಶೋಗಳು, ಇತರೆ ಟಿವಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದು, ಸಮಯದ ಹೊಂದಾಣಿಕೆ ಆಗುತ್ತಿಲ್ಲ ಎಂಬ ಕಾರಣವೂ ಕೇಳಿಬಂದಿದೆ. ಇನ್ನೊಂದು ಮುಖ್ಯ ಕಾರಣ ನಿವೇದಿತಾ ಗೌಡಗೆ ರೀಲ್ಸ್ ಮಾಡುವುದಕ್ಕೆ ಮನೆಯವರಿಂದ ನಿರ್ಬಂಧವಿದೆ ಎಂಬ ಮಾತುಗಳೂ ಕೇಳಿಬಂದಿದ್ದವು. ಆದರೆ, ಇದು ಎಷ್ಟು ಸತ್ಯ ಎಂಬುದು ಗೊತ್ತಿಲ್ಲ. ಆದರೆ, ಇಬ್ಬರೂ ಒಂದೇ ವೇದಿಕೆಯಲ್ಲಿ ಸುದ್ದಿಗೋಷ್ಠಿಗೆ ಕುಳಿತು ಮಾತನಾಡುವಾಗ ಚಂದನ್‌ಗೆ ಕಾಫಿ ಇಷ್ಟವಾದರೆ, ನನಗೆ ಟೀ ಇಷ್ಟ. ಇದೇ ರೀತಿ ಹಲವು ವಿಚಾರಗಳಲ್ಲಿ ನಮ್ಮಿಬ್ಬರ ನಡುವೆ ಸಾಮ್ಯತೆ ಕಂಡುಬರುತ್ತಿಲ್ಲ ಎಂಬ ಕಾರಣಕ್ಕೆ ಡಿವೋರ್ಸ್ ಪಡೆದು ಬೇರೆ ಬೇರೆ ಆಗುತ್ತಿರುವುದಾಗಿ ತಿಳಿಸಿದ್ದರು.
ಚೆನ್ನಾಗಿಯೇ ಇದ್ದ ನಿವೇದಿತಾಗೆ ಇದ್ದಕ್ಕಿದ್ದಂಗೆ ಇದೇನಾಯ್ತು? ವಿಡಿಯೋ ನೋಡಿ ಚಿಂತೆಗೀಡಾದ ಫ್ಯಾನ್ಸ್!
ಡಿವೋರ್ಸ್ ಪಡೆದ ನಂತರ ಹಲ್ ಚಲ್ ರೀಲ್ಸ್!
ನಿವೇದಿತಾ ಗೌಡ ಡಿವೋರ್ಸ್ ಪಡೆದ ನಂತರ ಅತಿಹೆಚ್ಚು ರೀಲ್ಸ್ ಮಾಡಿ ಪೋಸ್ಟ್ ಮಾಡುತ್ತಿದ್ದಾಳೆ. ಅದರಲ್ಲಿಯೂ ಕೆಲವು ರೀಲ್ಸ್‌ಗಳಲ್ಲಿ ತುಂಡು ಬಟ್ಟೆಗಳನ್ನು ತೊಟ್ಟು ಪೋಸ್ಟ್ ಮಾಡಿಕೊಂಡಿ ಅಭಿಮಾನಿಗಳಿಗೆ ಮಾದಕತೆಯ ರಸದೌತಣವನ್ನೇ ನೀಡುತ್ತಾರೆ. ಆದರೆ, ಇದನ್ನು ನೋಡಿದ ನೆಟ್ಟಿಗರ ಪೈಕಿ ಸಾಕಷ್ಟು ಜನರು ಲೈಕ್ ಮಾಡಿ ಸುಮ್ಮನಾಗುತ್ತಾರೆ. ಇನ್ನು ಕಾಮೆಂಟ್ ಮಾಡಿದವರ ಪೈಕಿ ಬಹುತೇಕರು ಕಟ್ಟದಾಗಿ ಮಾತನಾಡಿದವರೇ ಹೆಚ್ಚಾಗಿರುತ್ತಾರೆ. ಅದರಲ್ಲೊಬ್ಬ (pandu_druva_2863) ಎನ್ನುವ ವ್ಯಕ್ತಿ, ನಿವೇದಿತಾ ಗೌಡ ಅವರು ನಿನ್ನೆ ಮಾಡಿದ ಮಾದಕ ರೀಲ್ಸ್ ಪೋಸ್ಟ್‌ಗೆ 'ಇಲ್ಲಿ ಸ್ಪಷ್ಟ ಏನು ಅನಿಸುತ್ತೆ ಅಂದ್ರೆ ಇವರು ರೀಲ್ಸ್ ಮಾಡೋಕೆ ವಿಚ್ಚೇದನ ಪಡೆದ ಮೊದಲ ನಟಿ ಎಂಬ ಪಾತ್ರಕ್ಕೆ ಹೆಗ್ಗಳಿಕೆ ಪಡೆಯುತ್ತಾರೆ' ಎಂದು ಕಾಮೆಂಟ್ ಮಾಡಿದ್ದಾನೆ. ಇನ್ನು ಕೆಲವರು ಆ ರೂಮು... ಆ ಬಾಗಿಲು ಬಿಟ್ಟು ಆಚೆ ಬರಬೇಡ.ಅಲ್ಲೇ ಇರು ರೀಲ್ಸ್ ಮಾಡ್ಕೊಂಡು. yesvikranth: ಅದ್ಯಾಕೆ ಇತ್ತೀಚೆಗೆ ಡಿವರ್ಸ್ ಆದಂತ ಕೆಲವು ಟಿವಿ ಸಿನಿಮಾ ದವರು ಗಂಡನ ಬಿಟ್ಟಮೇಲೆ ಈ ರೀತಿ ಆಡ್ತಾ ಇದ್ದಾರೆ. nageshwar90: ಹಣೆಬೊಟ್ಟು ಇಟ್ಟಿರೋದನ್ನು ಎಷ್ಟು ಜನ ನೋಡಿದೀರಿ? shashidharjkkammar: 'ಆಡೋ ಮಕ್ಕಳಿಗೆ ಮದುವೆ ಮಾಡಿದರೆ ಮಾಡೋ ಜಾಗದಲ್ಲಿ ಮಣ್ಣು ಹಾಕಿದರಂತೆ..... ಹಂಗಾಯ್ತು ಇವಳುದು.. ಎಂದು ಕಾಮೆಂಟ್‌ಗಳನ್ನು ಮಾಡಿದ್ದಾರೆ.