ನೀನ್​ ಬಿಡಮ್ಮಾ ರಾಮ್​ನನ್ನೇ ಬುಗುರಿ ಥರ ತಿರುಗಿಸ್ತಿರೋಳು.. ಇದೇನು ಮಹಾ ಎನ್ನೋದಾ ನೆಟ್ಟಿಗರು!

Published : Jun 24, 2024, 08:54 PM ISTUpdated : Jun 24, 2024, 09:10 PM IST
ನೀನ್​ ಬಿಡಮ್ಮಾ ರಾಮ್​ನನ್ನೇ ಬುಗುರಿ ಥರ ತಿರುಗಿಸ್ತಿರೋಳು.. ಇದೇನು ಮಹಾ ಎನ್ನೋದಾ ನೆಟ್ಟಿಗರು!

ಸಾರಾಂಶ

ಸೀತಾ ಮತ್ತು ರಾಮ  ಬುಗುರಿಯಾಡಿದ್ದು ಅದರ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ನೆಟ್ಟಿಗರು ಏನೆಂದ್ರು ನೋಡಿ...  

ಸೀರಿಯಲ್​ ಏನೇ ಇದ್ದರೂ ಸೀರಿಯಲ್​ ತಾರೆಯರು ಬಿಜಿ ಷೆಡ್ಯೂಲ್​ ಮಧ್ಯೆಯೂ ಸೋಷಿಯಲ್​  ಮೀಡಿಯಾಗಳಲ್ಲಿ ಆ್ಯಕ್ಟೀವ್​ ಇರುವುದು ಇದೆ. ರೀಲ್ಸ್​ ಮಾಡುತ್ತಾ ಎಂಜಾಯ್​ ಮಾಡುವ ದೊಡ್ಡ ವರ್ಗವೇ ಇದೆ. ಅದರಲ್ಲಿ ಒಬ್ಬರು ಸೀತಾರಾಮ ಸೀರಿಯಲ್​ ಸೀತಾ. ಇವರ ನಿಜವಾದ ಹೆಸರು ವೈಷ್ಣವಿ ಗೌಡ. ನಟಿ ವೈಷ್ಣವಿ ಗೌಡ ಈ ಹಿಂದೆ ಅಗ್ನಿಸಾಕ್ಷಿ ಸೀರಿಯಲ್​ನಲ್ಲಿ ಸನ್ನಿಧಿ ಎಂದೇ ಫೇಮಸ್​ ಆದವರು. ಇದೀಗ ಸನ್ನಿಧಿಯ ಜಾಗವನ್ನು ಸೀತೆ ಪಡೆದುಕೊಂಡಿದ್ದಾಳೆ. ಸೀತಾರಾಮ ಸೀರಿಯಲ್​ನ ವೈಷ್ಣವಿ ಅವರ ಸೀತಾಳ ಪಾತ್ರ ಮನೆಮಾತಾಗಿದೆ.  ಆಗಾಗ್ಗೆ ಸಕತ್​ ಪೋಸ್​ ಕೊಟ್ಟು ಫೋಟೋ, ವಿಡಿಯೋ ಶೂಟ್​ಗಳನ್ನು ಮಾಡಿಸಿಕೊಳ್ಳುತ್ತಾರೆ. ಸದ್ಯ ಸೀತಾರಾಮ ಸೀರಿಯಲ್​ನಲ್ಲಿ ಕೊನೆಗೂ ವೀಕ್ಷಕರು ಕಾಯುತ್ತಿದ್ದ ಕ್ಷಣಗಳು ಬಂದೇ ಬಿಟ್ಟಿವೆ. ಸೀತೆ ಮತ್ತು ರಾಮ ಮದುವೆಯಾಗುವ ಕಾಲ ಕೂಡಿ ಬಂದಿದ್ದು, ಅದು ಯಾವುದೇ ವಿಘ್ನ ಇಲ್ಲದೆಯೇ ನಡೆಯಲಿ ಎಂದು ಪ್ರೇಕ್ಷಕರು ಹಾರೈಸುತ್ತಿದ್ದಾರೆ. ಅರಿಶಿಣ ಶಾಸ್ತ್ರವೂ ಜೋರಾಗಿ ನಡೆಯುತ್ತಿದೆ.  

ಇದೀಗ ಸೀತಾ ಮತ್ತು ರಾಮ್​ ಜೊತೆಯಲ್ಲಿ ಸಿಹಿ ಕೂಡ ಬುಗುರಿಯಾಡಿರುವ  ರೀಲ್ಸ್​ ಅನ್ನು  ವೈಷ್ಣವಿ ಅವರು ಶೇರ್​ ಮಾಡಿಕೊಂಡಿದ್ದಾರೆ.  ವಿಶೇಷ ಎಂದರೆ ಅದು ಗರಗರನೆ ತಿರುಗಿದೆ. ಈಗಿನ ನಗರದ ಮಕ್ಕಳಿಗೆ ಬುಗುರಿ ಆಟವೆಲ್ಲಾ ದೂರವೆಂದೇ ಹೇಳಬಹುದು. ಪಟ್ಟಣ, ಹಳ್ಳಿಗಳಲ್ಲಿ ಇಂಥ ಆಟಗಳನ್ನು ಇಂದಿಗೂ ಮಕ್ಕಳು ಆಡುವುದು ಇದೆ. ಆದರೆ ನಗರ ಪ್ರದೇಶಗಳಲ್ಲಿ ಇವುಗಳನ್ನು ಆಡುವ ಭಾಗ್ಯದಿಂದ ಹಲವು ಮಕ್ಕಳು ವಂಚಿತರಾಗಿರುವುದಂತೂ ದಿಟ. ಅದರಲ್ಲಿಯೂ ಇದೀಗ ಚಿಕ್ಕಪುಟ್ಟ ಮಕ್ಕಳ ಕೈಯಲ್ಲೂ ಮೊಬೈಲ್​ ಬಂದಿರುವಾಗ ಇಂಥ ಆಟಗಳನ್ನು ಮೊಬೈಲ್​ನಲ್ಲಿ ನೋಡಿ ಖುಷಿಪಡುವುದಷ್ಟೇ ಅವರ ಕೆಲಸವಾಗಿದೆ. ಇದೀಗ ನಟಿ ವೈಷ್ಣವಿ ಅವರು ಬುಗುರಿ ಆಡುವ ಮೂಲಕ ಬಾಲ್ಯದ ನೆನಪು ಮಾಡಿಕೊಂಡಿದ್ದಾರೆ. ಜೊತೆಗೆ ರಾಮ್​ ಕೂಡ ಸಾಥ್​ ನೀಡಿದ್ದಾರೆ.

ಕೋಳಿಯ ಅಪ್ಪ ಯಾರು? ರಾಮ್‌, ಸಿಹಿಗೆ ಸೀತಾ ಪ್ರಶ್ನೆ- ಉತ್ತರ ಕೇಳಿ ಫ್ಯಾನ್ಸ್‌ ಸುಸ್ತು!

ಇದನ್ನು ನೋಡಿದ ನೆಟ್ಟಿಗರು, ರಾಮ್​ಗೆ ಜೋಪಾನ ಕಣೋ... ಈ ಬುಗುರಿಯ ಹಾಗೆ ಮದ್ವೆಯಾದ್ಮೇಲೆ ನಿನ್ನನ್ನೂ ತಿರುಗಿಸಿಯಾಳು ಎನ್ನುತ್ತಿದ್ದಾರೆ. ಹೀಗೆ ಹೇಳಲು ಕಾರಣವೂ ಇದೆ. ರಾಮ್​ ಸೀತಾಳನ್ನು ಬಹಳ ಇಷ್ಟಪಟ್ಟಿದ್ದಾನೆ. ಆದರೆ ಮದುವೆಯಾಗುವುದಿದ್ದರೆ ಒಂದಿಷ್ಟು ಕಂಡೀಷನ್​ ಹಾಕುವ ಮೂಲಕ ಸೀತಾ ತನ್ನೆಲ್ಲಾ ಆಸೆಗಳನ್ನು  ತೀರಿಸಿಕೊಂಡಿದ್ದಾಳೆ. ಒಂದು ಹಂತದಲ್ಲಿ ತಾತ ರಾಮ್​ನಿಂದ ಮಗುವೊಂದನ್ನು ಬಯಸಿದಾಗಲೂ ಸೀತಾ ಸಿಹಿ ಬಿಟ್ಟು ಬೇರೆ ಮಗು ಬೇಡ ಎನ್ನುವ ಮೂಲಕ ನೆಟ್ಟಿಗರಿಂದ ಸಾಕಷ್ಟು ಟೀಕೆಗೂ ಒಳಗಾಗಿದ್ದಾಳೆ. ಸೀತಾಳದ್ದು ಅತಿಯಾಯ್ತು ಎಂದು ಈ ಸೀರಿಯಲ್​  ನೋಡಿ ಬೈದವರೇ ಹೆಚ್ಚು. ಅಷ್ಟೇ ಅಲ್ಲದೇ ಅತಿ ಹಿಂಸೆ ಎನ್ನಿಸುವಷ್ಟು ರೀತಿಯಲ್ಲಿ ರಾಮ್​  ಸೀತಾಳ ಹಿಂದೆ ಹೋಗುತ್ತಿದ್ದಾನೆ ಎಂದೂ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದರು.

ಇದನ್ನೇ ಹೇಳುತ್ತಿರುವ  ನೆಟ್ಟಿಗರು, ಮೊದಲೇ ನಿನ್ನನ್ನು ಬುಗುರಿಯಂತೆ ತಿರುಗಿಸ್ತಿದ್ದಾಳೆ. ದೇವ್ರೇ ನಿನ್ನನ್ನು ಕಾಪಾಡಬೇಕು ಎನ್ನುತ್ತಿದ್ದಾರೆ. ಇನ್ನು ವೈಷ್ಣವಿ ಅವರ ಕುರಿತು ಹೇಳುವುದಾದರೆ,  ವೈಷ್ಣವಿ ಕಿರುತೆರೆ ಕಲಾವಿದೆ ಮಾತ್ರವಲ್ಲದೇ ಹಲವು ಉತ್ಪನ್ನಗಳ ರಾಯಭಾರಿಯೂ ಹೌದು. ಇವರು ಕಿರುತೆರೆ ಪ್ರವೇಶಿಸಿದ್ದರ ಬಗ್ಗೆಯೂ ಹಿಂದೊಮ್ಮೆ ಹೇಳಿಕೊಂಡಿದ್ದರು. ಇವರು ಒಂದು ದಿನ ತಮ್ಮ ತಾಯಿಯೊಂದಿಗೆ ಮಂದಿರಕ್ಕೆ ಹೋದಾಗ ಸಹಾಯಕ ನಿರ್ದೇಶಕರೊಬ್ಬರು ನೋಡಿ ತಮ್ಮ ಸೀರಿಯಲ್‌ ದೇವಿಯಲ್ಲಿ ನಟಿಸಲು ಆಫರ್ ನೀಡಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದರು. ಹೀಗೆ  ಜೀ ಕನ್ನಡದ `ದೇವಿ' ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿರೋ ವೈಷ್ಣವಿ,  `ಪುನರ್‌ವಿವಾಹ'ದಲ್ಲಿ ನಟಿಸಿದರು. `ಅಗ್ನಿಸಾಕ್ಷಿ' ಸೀರಿಯಲ್‌ ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತು. ಇದೀಗ ಸೀತೆಯಾಗಿ ಜನರನ್ನು ರಂಜಿಸುತ್ತಿದ್ದಾರೆ.  

ಅಮ್ಮನ ಕೈಯಲ್ಲಿ ಸಿಕ್ಕಿಬಿದ್ದ ಸೀತಾಗೆ ಈ ಶಿಕ್ಷೆ! ನಿಂಗಿದು ಬೇಕಿತ್ತಾ ಮಗಳೇ ಎಂದ ಫ್ಯಾನ್ಸ್​...
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಪ್ಲ್ಯಾನ್‌ ಬದಲಾಯಿಸಿದ ಜಯದೇವ್;‌ ಇನ್ನೊಂದು ಅವಾಂತರ ಆಗಲಿದೆಯಾ?
ಡೂಡಲ್ ಫೋಟೊ ಮೂಲಕ ಅವಿ ಬರ್ತ್ ಡೇಗೆ ವಿಶ್ ಮಾಡಿದ Divya Uruduga… ಫ್ಯಾನ್ಸ್’ಗೆ ಮದ್ವೆ ಚಿಂತೆ