ಸೀತಾಗೆ ಸಿಹಿ ಎನ್ನುವ ಮಗಳಿದ್ದಾಳೆ ಎನ್ನುವ ಸತ್ಯ ತಾತಂಗೆ ಗೊತ್ತಾಗಿದೆ. ಆತ ಸಿಹಿಯನ್ನು ಒಪ್ಪಿಕೊಳ್ತಾನಾ? ಅವನಿಗೆ ವಿಷಯ ಮೊದಲೇ ಗೊತ್ತಿತ್ತಾ?
ತನಗೆ ಸಿಹಿ ಎನ್ನುವ ಮಗಳು ಇದ್ದಾಳೆ ಎನ್ನುವ ಸತ್ಯವನ್ನು ತಾತನ ಎದುರು ಹೇಳಲು ಹೋದಾಗ ಅದಕ್ಕೆ ಭಾರ್ಗವಿ ಅಡ್ಡಗಾಲು ಹಾಕಿದ್ದಳು. ಅದರೆ ತಾತ ಮತ್ತು ಸಿಹಿ ನಡುವೆ ಇದಾಗಲೇ ಫೋನ್ನಲ್ಲಿ ಮಾತುಕತೆ ನಡೆದಿತ್ತು. ಸಿಹಿ ತಾತನನ್ನು ಮನೆಗೆ ಕರೆದಿದ್ದಳು. ಅಲ್ಲಿ ಬಂದ ತಾತನನ್ನು ಸಿಹಿ ಮನೆಗೆ ಕರೆದುಕೊಂಡು ಹೋಗಿ ಸೀತಮ್ಮನ ಮನೆ ಎಂದಿದ್ದಾಳೆ. ನನಗೆ ಸೀತಮ್ಮನ ಮನೆ ಬೇಡ, ನಿನ್ನ ಮನೆ ಬೇಕು ಎಂದಿದ್ದಾನೆ ತಾತ. ಆಗ ಸಿಹಿ ಇದು ಸೀತಮ್ಮನ ಮನೆಯೇ. ನಾನು ಸೀತಮ್ಮನ ಮಗಳು ಎಂದಿದ್ದಾಳೆ. ಈ ವಿಷಯ ತಾತನಿಗೆ ಮುಂಚೆನೇ ಗೊತ್ತಿತ್ತಾ ಅಥವಾ ಮುಚ್ಚಿಟ್ಟ ಗುಟ್ಟು ರಟ್ಟಾಗಿ ಹೋಯ್ತಾ ಎನ್ನುವುದು ಈಗಿರುವ ಕುತೂಹಲ. ಸೀತಾ ತಾತಂಗೆ ನಿಜಕ್ಕೂ ವಿಷಯ ತಿಳಿಸಿರಲೇ ಇಲ್ವಾ? ಏನಾದರೂ ಆಗಲಿ, ಸಿಹಿಯ ವಿಷಯ ಮುಚ್ಚಿಡಲು ಸಾಧ್ಯವೇ ಇಲ್ಲ ಎಂದು ತಾತನ ಕೋಣೆಗೆ ಹೋಗಿದ್ದ ಸೀತಾ ಅಲ್ಲಿ ಸಿಹಿಯ ವಿಷಯ ಹೇಳಿದ್ದಳಾ ಎನ್ನುವ ಕುತೂಹಲವಿದೆ.
ಅಷ್ಟಕ್ಕೂ, ತನಗೆ ಮಗಳು ಸಿಹಿ ಇರುವ ಸತ್ಯವನ್ನು ತಾತನ ಎದುರು ಹೇಳಬೇಡ ಎಂದು ಭಾರ್ಗವಿ ಸೀತಾಳಿಗೆ ಹೇಳಿದ್ದಳು. ಅವಳೇನೂ ಅದನ್ನು ಕಾಳಜಿಯಿಂದ ಹೇಳಿದ್ದಲ್ಲ. ಬದಲಿಗೆ ಸೀತಾ ಈ ಸತ್ಯವನ್ನು ಅಡಗಿಸಿಟ್ಟರೆ, ಕೊನೆಗೆ ಸತ್ಯ ಮುಚ್ಚಿಟ್ಟಿದ್ದಾಳೆ ಎಂದು ರಾಮ್ ಮತ್ತು ಸೀತಾಳನ್ನು ದೂರ ಮಾಡುವ ದುರುದ್ದೇಶ ಇವಳದ್ದು. ಆದರೆ ಚಿಕ್ಕಮ್ಮನ ಕುತಂತ್ರ ಇತ್ತ ರಾಮ್ಗೂ ಗೊತ್ತಿಲ್ಲ, ಸೀತಾಳಿಗೂ ಗೊತ್ತಿಲ್ಲ. ಇಬ್ಬರೂ ಭಾರ್ಗವಿ ಒಳ್ಳೆಯವಳು ಎಂದೇ ಅಂದುಕೊಂಡಿದ್ದಾರೆ. ಆದರೆ ಸತ್ಯ ಹೇಳಿದರೆ ತಾತನ ಪ್ರಾಣಕ್ಕೆ ಕುತ್ತು ಬರಬಹುದು ಎಂದು ಚಿಕ್ಕಮ್ಮ ಹೇಳಿದ್ದರಿಂದ ಏನು ಮಾಡುವುದು ಎಂದು ಸೀತಾಳಿಗೆ ತಿಳಿಯುತ್ತಿಲ್ಲ. ಆದರೆ ತಾನು ಸತ್ಯವನ್ನು ಮುಚ್ಚಿಡುವುದು ಸಾಧ್ಯವೇ ಇಲ್ಲ ಎಂದಿದ್ದಾಳೆ. ನಿಮಗೆ ಹೇಗೆ ಅನ್ನಿಸುತ್ತದೆಯೋ, ಅದೇ ರೀತಿ ಮಾಡಿ ಎಂದೂ ರಾಮ್ ಸಪೋರ್ಟ್ ಮಾಡಿದ್ದ. ಸೀತಾ ತಾತನ ಬಳಿ ಹೋಗಿದ್ದಾಳೆ. ಅವನು ವಿಷಯ ಕೇಳಿದಾಗ ನನಗೆ ಅಪ್ಪ-ಅಮ್ಮ ಇಲ್ಲ... ಅವರ ಜಾಗದಲ್ಲಿ... ಎಂದಷ್ಟೇ ಸೀತಾ ಹೇಳಿದ್ದಳು. ಆದರೆ ಅವರ ನಡುವೆ ಸಿಹಿಯ ಮಾತುಕತೆ ನಡೆದಿದ್ಯೋ ಇಲ್ವೋ ಎನ್ನುವುದು ಸಸ್ಪೆನ್ಸ್ ಇಡಲಾಗಿದೆ.
ತನಗಿಂತ ಹೆಚ್ಚು ಗೌರವ ಸಿಗ್ತಿದೆಯಂತ ಕೊಲೆನೇ ಮಾಡ್ಸೋದಾ? ನಿಜಕ್ಕೂ ಇಂಥ ಹೆಂಗಸರು ಇರ್ತಾರಾ?
ಭಾರ್ಗವಿ ಮತ್ತು ಚಾಂದನಿ ಒಂದಾಗಿಯೇ ಈ ಕುತಂತ್ರ ಹೆಣೆದಿದ್ದಾರೆ. ಸೀತಾಳನ್ನು ಪ್ರೀತಿ ಮಾಡುವುದಾಗಿ ರಾಮ್ ತಾತನ ಎದುರು ಎಂದಿಗೂ ಬಾಯಿ ಬಿಟ್ಟಿಲ್ಲ. ಇನ್ನು ಚಿಕ್ಕಮ್ಮನೋ ತಾತನ ತಲೆಯನ್ನು ಚಾಂದನಿ ವಿಷಯದಲ್ಲಿ ತುಂಬಿದ್ದಾಳೆ. ಅವಳಿಗೆ ಚಾಂದನಿ ಇಷ್ಟವಿಲ್ಲದಿದ್ದರೂ ಸೀತಾ ಮತ್ತು ರಾಮ್‌ರನ್ನು ದೂರ ಮಾಡುವುದು ಮಾತ್ರ ಬೇಕಿದೆ. ಹಾಗಿದ್ದರೆ ರಾಮ್‌ನ ಮದುಮಗಳ ಹೆಸರು ಯಾರದ್ದು ಹೇಳಲಾಗುತ್ತದೆ? ಸದ್ಯ ಸೀತಾ ಮತ್ತು ರಾಮ್ ಅಡಕತ್ತರಿಯಲ್ಲಿ ಸಿಲುಕಿದ ಅನುಭವ ಪಡುತ್ತಿದ್ದಾರೆ.
ಇದರ ನಡುವೆಯೇ, ಚಾಂದನಿ ಸೀತಾಗೆ ಷರತ್ತು ಕೂಡ ಹಾಕಿದ್ದಾಳೆ. ಸೀತಾ-ರಾಮ ಒಂದಾಗುವುದನ್ನು ಚಾಂದನಿಗೆ ನೋಡಲು ಆಗುತ್ತಿಲ್ಲ. ಸೀತಾ ಸಿಕ್ಕಾಗಲೆಲ್ಲಾ ಪದೇ ಪದೇ ಹಂಗಿಸುತ್ತಲೇ ಇರುತ್ತಾಳೆ. ರಾಮ್ ತನಗೆ ಸಿಗುವುದಿಲ್ಲ ಎಂದು ತಿಳಿದರೂ ಸೀತಾಳನ್ನು ಹೇಗಾದರೂ ಮಾಡಿ ರಾಮ್ನಿಂದ ದೂರ ಮಾಡುವ ಯೋಚನೆ ಅವಳದ್ದು. ಅದಕ್ಕೆ ತಕ್ಕಂತೆ ಚಿಕ್ಕಮ್ಮ ಭಾರ್ಗವಿ ಕುತಂತ್ರ ಬೇರೆ. ಪ್ರಿಯಾ ಮತ್ತು ಅಶೋಕ್ ಮದುವೆ ಮುಗಿಯುವುದರೊಳಗೆ ಅವರಿಬ್ಬರನ್ನೂ ಬೇರೆ ಮಾಡುತ್ತೇನೆ ಎಂದಿದ್ದಾಳೆ ಭಾರ್ಗವಿ. ಇದನದ್ನೇ ನಂಬಿಕೊಂಡಿದ್ದಾಳೆ ಚಾಂದನಿ. ಈ ಮಧ್ಯೆಯೇ ಸೀತಾಳಿಗೆ ರಾಮ್ ಕೊಡಿಸಿರೋ ಸೀರೆ ಮೇಲೆ ಚಾಂದನಿ ಕಣ್ಣು ಬಿದ್ದಿದೆ. ಅದನ್ನು ತನ್ನದು ಮಾಡಿಕೊಳ್ಳಬೇಕು ಎಂದುಕೊಂಡಿದ್ದಳು. ಅದು ಸಾಧ್ಯವಾಗಿರಲಿಲ್ಲ. ಅದಕ್ಕೆ ರಾಮ್ ಕೊಡಿಸಿದ ಸೀರೆ ನಿನಗೆ ಸಿಕ್ಕಿದೆ, ಆದರೆ ರಾಮ್ ಸಿಗಲ್ಲ ಎಂದಿದ್ದಾಳೆ. ಅದೇ ಇನ್ನೊಂದೆಡೆ ರಾಮ್ ಸೀತಾ ಹೆಸರಿನ ಎಸ್ ಅನ್ನು ಕೈ ಮೇಲೆ ಬರೆಸಿಕೊಂಡಿದ್ದ. ಅದನ್ನು ಸೀತಾಳಿಗೆ ತೋರಿಸಿದಾಗ ನಾಚಿಕೊಂಡಿದ್ದಳು. ಇದನ್ನು ನೋಡಿ ಚಿಕ್ಕಮ್ಮ ಉರಿದುಕೊಂಡಿದ್ದಾಳೆ. ಸೀತಾ ಮತ್ತು ರಾಮ್ ಕಣ್ಣಿನಲ್ಲಿಯೇ ಮಾತನಾಡುವುದನ್ನು ಚಿಕ್ಕಮ್ಮ ಮತ್ತು ಚಾಂದನಿಗೆ ಸಹಿಸಲು ಸಾಧ್ಯವಾಗ್ತಿಲ್ಲ. ಇದೀಗ ಸೀತಾಳನ್ನೇ ಇಕ್ಕಟ್ಟಿನಲ್ಲಿ ಸಿಲುಕಿಸಿ ಮಜಾ ನೋಡುತ್ತಿದ್ದಾಳೆ.
ಬೇಸರ ಮಾಡಿಕೊಂಡಿದ್ದ ಫ್ಯಾನ್ಸ್ಗೆ ಶಾರುಖ್ ಭರ್ಜರಿ ಸಿಹಿ ಸುದ್ದಿ: ಮಗಳಿಗಾಗಿ ಮತ್ತೊಮ್ಮೆ ಡಾನ್!