ಸಿಹಿಯನ್ನು ಮೂರನೆಯ ಬಾರಿ ಕಿಡ್ನಾಪ್ ಮಾಡಲಾಗಿದೆ. ಭಾರ್ಗವಿ ಮತ್ತು ಗಂಡ ಈ ಕೆಲಸ ಮಾಡಿಸಿದ್ದಾರೆ. ಇದಕ್ಕೆ ನೆಟ್ಟಿಗರು ಹೇಳ್ತಿರೋದೇನು?
ಒಂದು ಹಂತಕ್ಕೆ ಸೀರಿಯಲ್ ಬಂದಾಗ, ಅದರ ಟಿಆರ್ಪಿ ನೋಡಿ ಅದನ್ನು ಚ್ಯೂಯಿಂಗ್ ಗಮ್ನಂತೆ ಎಳೆಯುವುದು ಹೊಸ ವಿಷಯವೇನಲ್ಲ. ಇದೇ ಕಾರಣಕ್ಕೆ ಒಂದು ಸೀರಿಯಲ್ ಐದಾರು ವರ್ಷಗಳಿಂದ ಹಿಡಿದು 8-10 ವರ್ಷ ಎಳೆಯುವುದೂ ಉಂಟು. ಆರಂಭದಲ್ಲಿ ಒಂದಿಷ್ಟು ಕುತೂಹಲ ಎನಿಸಿಕೊಳ್ಳುವ ಸೀರಿಯಲ್ಗಳು ಕೊನೆ ಕೊನೆಯಲ್ಲಿ ಏನೇನೋ ಕಥೆಗಳನ್ನು ತುರುಕುವ ಮೂಲಕ ಸಪ್ಪೆಯಾಗಿ ಕೊನೆಗೆ ದಿಢೀರ್ ಎಂದು ಹೇಗೇಗೋ ಮುಗಿಸುವ ಉದಾಹರಣೆಗಳು ಸಾಕಷ್ಟಿವೆ. ಆದರೆ ಜಾಹೀರಾತು, ಟಿಆರ್ಪಿ ರೇಟ್ ಬರುತ್ತಿರುವ ಸಂದರ್ಭದಲ್ಲಿ ಸೀರಿಯಲ್ಗಳನ್ನು ಎಳೆಯುವುದು ಅನಿವಾರ್ಯವೂ ಆಗಿರುತ್ತದೆ. ಇದೇ ಕಾರಣಕ್ಕೆ ಎಷ್ಟೋ ಸೀರಿಯಲ್ಗಳು ಆರಂಭದಲ್ಲಿ ಇರಿಸಿಕೊಂಡಿರುವ ಕುತೂಹಲವನ್ನು ಕೊನೆಯವರೆಗೂ ಉಳಿಸಿಕೊಳ್ಳುವುದೇ ಇಲ್ಲ.
ಇದೀಗ ಸೀತಾರಾಮ ಸೀರಿಯಲ್ ಕೂಡ ಹೀಗೆಯೇ ಆಗುತ್ತಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬಹಳ ಟೀಕೆ ವ್ಯಕ್ತವಾಗುತ್ತಿದೆ. ಇಲ್ಲಿಯವರೆಗೆ ಸೀತಾ ಮತ್ತು ರಾಮರ ಮದುವೆಗಾಗಿ ಎಲ್ಲರೂ ಕಾಯುತ್ತಿದ್ದರು. ಇವರಿಬ್ಬರ ನವಿರಾದ ಪ್ರೀತಿಗೆ ಸೀರಿಯಲ್ ಪ್ರೇಮಿಗಳು ಮನಸೋತಿದ್ದರು. ಇವರಿಬ್ಬರ ಮದುವೆ ಯಾವಾಗ ಆಗುತ್ತದೆ ಎಂದು ಕಾದು ಕುಳಿತಿದ್ದರು. ಭಾರ್ಗವಿ, ರುದ್ರ ಪ್ರತಾಪ್ ಹೀಗೆ ಕೆಲವು ವಿಲನ್ಗಳು ಇವರ ಮದುವೆಯನ್ನು ಮುರಿಯಲು ಪ್ರಯತ್ನ ಮಾಡಿದ್ದೆಲ್ಲಾ ವಿಫಲವಾದಾಗ ಒಂದು ಹಂತದಲ್ಲಿ ಇವರ ಮದುವೆ ನಿರ್ವಿಘ್ನವಾಗಿ ನಡೆಯುವುದನ್ನು ನೋಡಲು ಖುಷಿ ಪಟ್ಟವರು ಅದೆಷ್ಟೋ ಮಂದಿ. ಇದೊಂದು ಸೀರಿಯಲ್ ಎನ್ನುವುದನ್ನೂ ಮರೆತು, ಇವರಿಬ್ಬರ ಮದುವೆ ಸಲೀಸಾಗಿ ನಡೆಯಲಿ ಎಂದು ಪ್ರಾರ್ಥಿಸಿದವರೂ ಇದ್ದಾರೆ. ಅದು ಈಡೇರಿದೆ ಕೂಡ.
ಸೀರಿಯಲ್ ಶೂಟಿಂಗ್ನಲ್ಲಿ ಹೀಗಿರತ್ತೆ ರೊಮಾನ್ಸ್! ತಬ್ಬಿಕೊಂಡ ನಟ-ನಟಿಯನ್ನು ಎಬ್ಬಿಸಲು ಹರಸಾಹಸ
ಆದರೆ ಇದೀಗ ಯಾಕೋ, ಸಿಹಿಯನ್ನೇ ಮುಂದು ಮಾಡಿಕೊಂಡು ಸೀರಿಯಲ್ ಅನ್ನು ಅಡ್ಡಾದಿಡ್ಡಿ ಕೊಂಡೊಯ್ಯಲಾಗುತ್ತಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಸುರಿಮಳೆ ಆಗ್ತಿದೆ. ಈ ಹಿಂದೆ ಎರಡು ಬಾರಿ ಸಿಹಿಯನ್ನು ಕಿಡ್ನ್ಯಾಪ್ ಮಾಡಿಸಲಾಗಿದೆ. ಆಗ ಭಾರ್ಗವಿ ಮತ್ತು ರುದ್ರಪ್ರತಾಪ್ ಈ ಕೆಲಸ ಮಾಡಿಸಿದ್ದರು. ಇನ್ನೇನು ಇಬ್ಬರೂ ಒಂದಾಗುತ್ತಿದ್ದಾರೆ ಎನ್ನುವಾಗಲೇ, ಸಿಹಿಯನ್ನು ರಾಮ್ ಎತ್ತಿಕೊಂಡ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಬಂದು ರಾಮ್ನ ಕೈಯನ್ನು ಚಾಕುವಿನಿಂದ ಇರಿದು ಹೋಗಿದ್ದ. ನಂತರ ಬೈಕ್ ಮೇಲೆ ಹತ್ತಿಕೊಂಡು ಹೋದ. ಚಾಕುವಿನ ಇರಿತಕ್ಕೆ ರಾಮ್ ವಿಲವಿಲ ಒದ್ದಾಡುತ್ತಿದ್ದರೂ, ಹೆಗಲ ಮೇಲಿದ್ದ ಸಿಹಿಯನ್ನು ಬೀಳಲು ಕೊಡಲಿಲ್ಲ. ಇದಕ್ಕೂ ಮುನ್ನ, ಸೀತಾ ಮತ್ತು ಸಿಹಿ ಹೋಗುತ್ತಿರುವ ಹೊತ್ತಿಗೆ ಓರ್ವ ಆಗಂತುಕ ಬೈಕ್ನಲ್ಲಿ ಬಂದು ಗಾಬರಿ ಹುಟ್ಟಿಸಿದ್ದ. ಸಿಹಿಯ ಅಪಹರಣ ಮಾಡಿಕೊಂಡು ಬೈಕ್ನಲ್ಲಿ ಹೋಗಲಾಗಿತ್ತು. ಅದಕ್ಕೂ ಮುನ್ನವೂ ಸಿಹಿಯನ್ನು ಅಪಹರಿಸಲಾಗಿತ್ತು.
ಇದೀಗ ಮತ್ತದೇ ಡ್ರಾಮಾ. ಈ ಬಾರಿ ಭಾರ್ಗವಿ ಜೊತೆ ಗಂಡ ಸೇರಿಕೊಂಡಿದ್ದಾನೆ. ಸಿಹಿಯನ್ನು ದೂರ ಮಾಡಿದರಷ್ಟೇ ಸೀತಾ ಮತ್ತು ರಾಮ ವಿಲವಿಲ ಎನ್ನುತ್ತಾರೆ ಎನ್ನುವುದು ಅವರಿಗೆ ಗೊತ್ತು. ಇದೇ ಕಾರಣಕ್ಕೆ ಸಿಹಿಯನ್ನು ಅಪಹರಿಸಲು ನೋಡಿದ್ದಾರೆ. ಇದಾಗಲೇ ಅಪ್ಪ-ಅಮ್ಮ ಚೆನ್ನಾಗಿ ಇರಬೇಕು ಎಂದರೆ ನೀನು ದೂರವಾಗಬೇಕು ಎಂದು ಸಿಹಿಯ ತಲೆಗೆ ಭಾರ್ಗವಿ ತುಂಬುತ್ತಲೇ ಬಂದಿದ್ದಾಳೆ. ಸಾಲದು ಎಂಬುದಕ್ಕೆ ಆಕೆಯ ಮಗನೂ ಸಿಹಿಗೆ ಟಾರ್ಚರ್ ಕೊಡುತ್ತಿದ್ದಾನೆ. ಇದೀಗ ಶಾಲೆಯಿಂದ ಸಿಹಿಯನ್ನು ಕಿಡ್ನ್ಯಾಪ್ ಮಾಡಲಾಗಿದೆ. ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ನೆಟ್ಟಿಗರು ಒಂದೇ ಸಮನೆ ಸೀರಿಯಲ್ ಅನ್ನು ಬೈಯುತ್ತಿದ್ದಾರೆ. ಎಷ್ಟು ಅಂತ ಹೇಳಿದ್ದನ್ನೇ ಹೇಳ್ತೀರಾ, ಬೇರೆ ಕಥೆ ಇಲ್ವಾ? ಡಬ್ಬಾ ಸೀರಿಯಲ್ ಆಗ್ತಿದೆ ಎಂದೆಲ್ಲಾ ಕಮೆಂಟ್ ಮಾಡ್ತಿದ್ದಾರೆ. ಮುಂದೇನಾಗುತ್ತೋ ನೋಡಬೇಕಿದೆ.
ಡಾನ್ಸ್ ಕರ್ನಾಟಕ ಡಾನ್ಸ್ ಷೋನಲ್ಲೂ ಪುಟ್ಟಕ್ಕನ ಮಗಳು ಸಹನಾಗೆ ಮೆಸ್ಸಿಂದೇ ಚಿಂತೆಯಲ್ಲಪ್ಪಾ!