ಡಾನ್ಸ್​ ಕರ್ನಾಟಕ ಡಾನ್ಸ್​ ಷೋನಲ್ಲೂ ಪುಟ್ಟಕ್ಕನ ಮಗಳು ಸಹನಾಗೆ ಮೆಸ್ಸಿಂದೇ ಚಿಂತೆಯಲ್ಲಪ್ಪಾ!

By Suchethana D  |  First Published Aug 5, 2024, 3:25 PM IST

ಡಾನ್ಸ್​ ಕರ್ನಾಟಕ ಡಾನ್ಸ್​ನಲ್ಲಿ ಕಾಣಿಸಿಕೊಂಡಿರುವ ಪುಟ್ಟಕ್ಕನ ಮಗಳು ಸಹನಾ ಅರ್ಥಾತ್​ ಅಕ್ಷರಾ ಅವರು ರೀಲ್ಸ್​ ಮಾಡಿದ್ದು, ಕ್ಯಾಂಟೀನ್​ ಬಗ್ಗೆ ಚಿಂತಿಸುತ್ತಿದ್ದಾರೆ.
 


ಸಹನಾ ಎಂದಾಕ್ಷಣ ಎಲ್ಲರ ಕಣ್ಣ ಮುಂದೆ ಬರುವುದು ಪುಟ್ಟಕ್ಕನ ಮಗಳು. ಇದೀಗ ಮನೆಯಿಂದ ದೂರವಾಗಿ ತನ್ನದೇ  ಮೆಸ್ ನಡೆಸುತ್ತಿದ್ದಾಳೆ ಸಹನಾ. ಅತ್ತ ಸಹನಾ ಬದುಕಿರುವ ವಿಷಯ ಅಮ್ಮ ಪುಟ್ಟಕ್ಕನಿಂದ ಕಣಿ ಹೇಳುವವಳಿಂದ ತಿಳಿದಿದೆ. ಇತ್ತ ಸಹನಾ ಕೂಡ ವಿದೇಶಿಗನಿಗೆ ತನ್ನ ಸತ್ಯವನ್ನು ಬಿಚ್ಚಿಟ್ಟಿದ್ದಾಳೆ. ಈಗ ಏನಿದ್ದರೂ ಅಮ್ಮ-ಮಗಳು ಒಂದಾಗುವ ಸಮಯ. ಅದರ ನಡುವೆಯೇ ಸಹನಾ ಡಾನ್ಸ್​ ಕರ್ನಾಟಕ ಡಾನ್ಸ್​ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾಳೆ. ಅಂದಹಾಗೆ ಸಹನಾ ನಿಜವಾದ ಹೆಸರು ಅಕ್ಷರಾ. ಅಕ್ಷರಾ ಅವರು ಇದೀಗ ಡಿಕೆಡಿ ವೇದಿಕೆಯಲ್ಲಿ ತೀರ್ಪುಗಾರರ ಮನಸ್ಸನ್ನು ಗೆಲ್ಲುತ್ತಿದ್ದಾರೆ. 

ಕರ್ನಾಟಕ ಮೂಲೆಮೂಲೆಯಲ್ಲಿ ಇರುವ ಪ್ರತಿಭೆಗಳನ್ನು ಗುರುತಿಸಿ, ಅವರನ್ನು ಒಂದೇ ವೇದಿಕೆಯ ಮೇಲೆ ನರ್ತಿಸುವಂತೆ ಮಾಡುವ ಷೋ ಇದೆ. ಆದರೆ ಒಂದೇ ವ್ಯತ್ಯಾಸ ಎಂದರೆ ಇಲ್ಲಿ ಬರುವ ಸ್ಪರ್ಧಿಗಳು ಬಣ್ಣದ ಲೋಕದಲ್ಲಿ ಗುರುತಿಸಿಕೊಂಡವರೇ ಹೆಚ್ಚು. ಕಿರುತೆರೆ, ಹಿರಿತೆರೆ ಸೇರಿದಂತೆ ಸೋಷಿಯಲ್​ ಮೀಡಿಯಾಗಳಲ್ಲಿ ಸಕತ್​ ಸೌಂಡ್​ ಮಾಡುತ್ತಿರುವವರನ್ನು ಇದರಲ್ಲಿ ಆಯ್ಕೆ ಮಾಡಲಾಗುತ್ತದೆ.  ಅಂದಹಾಗೆ ಈ ಷೋನಲ್ಲಿ ಈ ಬಾರಿ ಆರ್ಯವರ್ಧನ್​ ಗುರೂಜಿ, ಒಳ್ಳೆ ಹುಡುಗ ಎಂದೇ ಹಾಕಿಕೊಳ್ಳುವ ಪ್ರಥಮ್​, ಪುಟ್ಟಕ್ಕನ ಮಕ್ಕಳು ಕಂಠಿ ಅಂದರೆ ಧನುಷ್​,  ಇದೇ ಸೀರಿಯಲ್​ನ ಸಹನಾ ಅಂದರೆ ಅಕ್ಷರ, ಸೀತಾರಾಮ ಸೀರಿಯಲ್​ ಖ್ಯಾತಿಯ ಪ್ರಿಯಾ ಅಂದರೆ ಮೇಘನಾ ಶಂಕರಪ್ಪ, ಗಗನ, ರೆಮೊ, ವಿಶ್ವ, ಅಮೃತಧಾರೆ ಜೀವನ್ ಅರ್ಥಾತ್​ ಶಶಿ ಹೆಗ್ಡೆ​ ಮುಂತಾದವರು ಈ ಷೋನಲ್ಲಿ ಸ್ಪರ್ಧಿಗಳಾಗಿ ಕಾಣಿಸಿಕೊಂಡಿದ್ದಾರೆ.  ಅದರಲ್ಲಿ ಅಕ್ಷರಾ ಕೂಡ ಎಲ್ಲರ ಗಮನ ಸೆಳೆಯುತ್ತಿದ್ದಾರೆ. 

Tap to resize

Latest Videos

ಹಿಟ್ಲರ್​ ಕಲ್ಯಾಣದ ಅಂತರಾ ಪಾತ್ರಧಾರಿ ರಜನಿ WANTED! ಅಭಿಮಾನಿಗಳಿಗೆ ಶಾಕ್​ ಕೊಟ್ಟ ನಟಿ

ಇದೀಗ ಅವರು ತಮ್ಮ ಸಹಸ್ಪರ್ಧಿ ಜೊತೆಗೆ ರೀಲ್ಸ್​ ಒಂದನ್ನು ಮಾಡಿದ್ದಾರೆ. ಅದರಲ್ಲಿ ಅಕ್ಷರಾ ಡಾನ್ಸ್​ ಮಾಡೋ ಮಧ್ಯೆ ಮೆಸ್ಸಿನ ಕಡೆ ಗಮನನೇ ಕೊಡಲು ಆಗ್ತಿಲ್ವಲ್ಲಾ ಎಂದು ತಮಾಷೆ ಮಾಡಿದ್ದಾರೆ. ಇದರ ವಿಡಿಯೊ ಅನ್ನು ಜೀ ಕನ್ನಡ ವಾಹಿನಿ ಶೇರ್​ ಮಾಡಿಕೊಂಡಿದೆ. ನಂತರ ಬನ್ನಿ ಡಾನ್ಸ್ ಮಾಡೋಣ, ಮೆಸ್ಸನ್ನು ಮರೆಯಿರಿ ಎಂದು ಡಾನ್ಸ್​  ಮಾಡಿಸಿದ್ದಾಗ ಕೋ-ಸ್ಟಾರ್​. ನಂತರ ಅಕ್ಷರಾ ಅವರು ಭರ್ಜರಿ ಸ್ಟೆಪ್​ ಮಾಡಿದ್ದಾರೆ.  ಅಂದಹಾಗೆ ಈ ಬಾರಿಯ ಡಿಕೆಡಿಯಲ್ಲಿ ಈ ಬಾರಿಯ ಸ್ಪರ್ಧಿಗಳು ನೃತ್ಯ ಕ್ಷೇತ್ರದಲ್ಲಿ  ಅಷ್ಟು ಎಕ್ಸ್​ಪರ್ಟ್​ ಇಲ್ಲದವರು. ಅವರನ್ನು ಈ ಕಾಂಪಿಟೇಷನ್​ನಲ್ಲಿ ಸ್ಪರ್ಧಿಗಳನ್ನಾಗಿ ಮಾಡಲಾಗಿದೆ.   

ಪುಟ್ಟಕ್ಕನ ಮಗಳು ಸೀರಿಯಲ್​ನಲ್ಲಿ ಹೆಚ್ಚು ಕಲಿಯದೇ ಇರುವ ಸಹನಾ, ನಿಜ ಜೀವನದಲ್ಲಿ ಫೈನಾನ್ಸ್​ನಲ್ಲಿ ಎಂಬಿಎ ಪದವೀಧರೆ. ಈ ಸೀರಿಯಲ್​ಗೂ ಬರುವ ಮುನ್ನೆ ಕೆಲವು ಧಾರಾವಾಹಿಯಲ್ಲಿ ಅಕ್ಷರಾ ನಟಿಸಿದ್ದಾರೆ.  ‘ಅಮ್ನೋರು’ (Amnoru) ಧಾರಾವಾಹಿಯ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿ ಸೈ ಎನಿಸಿಕೊಂಡಿರುವ ಇವರಿಗೆ  ‘ಪುಟ್ಟಕ್ಕನ ಮಕ್ಕಳು’ (Puttakana Makkalu) ಸಕತ್​ ಹೆಸರು ತಂದುಕೊಡುತ್ತಿದೆ. ರಕ್ಷಾ ಬಂಧನ ಸೀರಿಯಲ್​ನಲ್ಲಿಯೂ ನಟಿಸಿದ್ದಾರೆ. ಭಿಷೇಕ್ ಅಂಬರೀಶ್ ನಟನೆಯ ಬ್ಯಾಡ್ ಮ್ಯಾನರ್ಸ್ ಹಾಗೂ ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು ಸಿನಿಮಾದಲ್ಲಿ ಅಕ್ಷರಾ ಅವರು ನಟಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರೋ ಇವರು, ಅವರನ್ನು ನೋಡಿಯೇ ತಾನು ಇವರಂತೆ ನಟನಾ ಜಗತ್ತಿನಲ್ಲಿ ಗುರುತಿಸಿಕೊಳ್ಳಬೇಕೆಂದು ಬಯಸಿದರಂತೆ.  

ಫ್ರೆಂಡ್​ಷಿಪ್ ಡೇ​ಗೆ ಸೀತಾರಾಮ್​ ಟೀಮ್​ ಫನ್ನಿ ರೀಲ್ಸ್​: ಇರೋರನ್ನು ಬಿಟ್ಟು ಅಶೋಕ್​ದೇ ಚಿಂತೆ ಅಭಿಮಾನಿಗಳಿಗೆ!

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!