ಸೀತಾರಾಮ ಸೀರಿಯಲ್ ಪ್ರಿಯಾ ಮದ್ವೆಯ ಭರ್ಜರಿ ಫೋಟೋಶೂಟ್ ಹೇಗಿತ್ತು? ವಿಡಿಯೋದಲ್ಲಿ ಪ್ರಿಯಾ ಪಾತ್ರಧಾರಿ ಮೇಘನಾ ಶಂಕಪ್ಪ ಮಾಹಿತಿ ನೀಡಿದ್ದಾರೆ.
ಇಂದು ಸೀರಿಯಲ್ಗಳು ಎಂದರೆ ಅವು ಕೇವಲ ಸೀರಿಯಲ್ಗಳಾಗಿರಲ್ಲ. ಬದಲಿಗೆ ಅದು ನಿಜ ಜೀವನದ ಕಥೆಯಂತೆ ಇಂದು ಮನೆಮನಗಳನ್ನು ತುಂಬಿಕೊಂಡಿವೆ. ಅದರಲ್ಲಿರುವ ಪಾತ್ರಧಾರಿಗಳೆಲ್ಲರೂ ತಮ್ಮ ಮನೆಯದ್ದೋ ಇಲ್ಲವೇ ನೆರೆಮನೆಯ ಸದಸ್ಯರಂತೆ ಕಾಣುವ ದೊಡ್ಡ ವರ್ಗವೇ ಇದೆ. ಇದೇ ಕಾರಣಕ್ಕೆ ಸೀರಿಯಲ್ಗಳು ಕೂಡ ವೀಕ್ಷಕರನ್ನು ಸೆರೆ ಹಿಡಿಯಲು ದೊಡ್ಡ ತಂತ್ರವನ್ನೇ ರೂಪಿಸುತ್ತಾರೆ. ಇದೀಗ ಸೀತಾರಾಮ ಸೀರಿಯಲ್ನಲ್ಲಿ ಪ್ರಿಯಾ ಮತ್ತು ಅಶೋಕ್ ಮದುವೆ ಸಂಭ್ರಮ ಜೋರಾಗಿ ಶುರುವಾಗಿದೆ. ಸೀರಿಯಲ್ಗಳ ಮದುವೆ ಎಂದರೆ ಅದು ಒಂದೆರಡು ದಿನಗಳ ಮದ್ವೆಯಲ್ಲ. ಇದೀಗ ನಿಜ ಜೀವನದಲ್ಲಿಯೂ ಸೆಲೆಬ್ರಿಟಿ ಮದ್ವೆಗಳು ತಿಂಗಳುಗಳ ಕಾಲ ನಡೆಯುವುದು ಇದೆ. ಇನ್ನು ಧಾರಾವಾಹಿಗಳು ಎಂದ ಮೇಲೆ ಕೇಳಬೇಕೆ. ಒಂದು ಮದುವೆಯ ಸೀನ್ ವರ್ಷಗಟ್ಟಲೆ ಹೋದರೂ ಅಚ್ಚರಿಯಿಲ್ಲ.
ಇದೀಗ ಸೀತಾರಾಮ ಸೀರಿಯಲ್ ವಿಷಯಕ್ಕೆ ಬರುವುದಾದರೆ ಪ್ರಿಯಾ-ಅಶೋಕ್ ಮದುವೆಯ ಸಂಭ್ರಮ ಶುರುವಾಗಿದೆ. ಇದು ರೀಲ್ ಮದ್ವೆಯಾದರೂ ರಿಯಲ್ ಮದ್ವೆಯ ರೀತಿಯಲ್ಲಿಯೇ ಪ್ರಿಯಾ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಯೂಟ್ಯೂಬ್ ತೆರೆದಿರುವ ಪ್ರಿಯಾ ಅವರು ಮದುವೆ ಫೋಟೋಶೂಟ್ ಹೇಗಿತ್ತು ಎಂಬುದನ್ನು ತಮ್ಮ ಯುಟ್ಯೂಬ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಪ್ರಿಯಾ ಅವರ ನಿಜವಾದ ಹೆಸರು ಮೇಘನಾ ಶಂಕರಪ್ಪ. ಇವರು ಪ್ರಿಯಾ ಮದುವೆಯ ಫೋಟೋಶೂಟ್ ವಿಡಿಯೋ ಶೇರ್ ಮಾಡಿಕೊಂಡಿದ್ದು, ನಿಜವಾದ ಮದುವೆಯ ರೀತಿಯಲ್ಲಿಯೇ ಇದನ್ನು ಬಿಂಬಿಸಲಾಗಿದೆ.
ಬಳಕು ಬಳ್ಳಿಯಂತಿರೋ ಉರ್ಫಿ ಡ್ರೆಸ್ ಹಿಡಿಯಲು ಹತ್ತಾರು ಮಂದಿ! ತಲೆಯೊಳಗೆ ಏನಿದೆ ಕೇಳಿದ ಫ್ಯಾನ್ಸ್...
ಇನ್ನು ಮೇಘನಾ ಅವರ ಬಣ್ಣದ ಬದುಕಿನ ಕುರಿತು ಹೇಳುವುದಾದರೆ, 'ಸೀತಾರಾಮ' ಸೀರಿಯಲ್ಗೂ ಮುನ್ನ ಅವರು, ನಟಿಸಿದ್ದು 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಖಳನಾಯಕಿ ನೇತ್ರಾ ಪಾತ್ರದ ಮೂಲಕ ಗಮನ ಸೆಳೆದಿದ್ದರು ಮೇಘನಾ ಶಂಕರಪ್ಪ. ನಿರೂಪಕಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಮೇಘನಾ ಶಂಕರಪ್ಪ ನಟನೆಗೆ ಕಾಲಿಟ್ಟಿದ್ದು 'ಕಿನ್ನರಿ' ಧಾರಾವಾಹಿಯ ನಂತರ. ಮುಂದೆ 'ಕೃಷ್ಣ ತುಳಸಿ', 'ರತ್ನಗಿರಿ ರಹಸ್ಯ', 'ದೇವಯಾನಿ', 'ಸಿಂಧೂರ' ಹೀಗೆ ಕೆಲವೊಂದು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಮೇಘನಾ ಅವರು ಸದ್ಯ ಪ್ರಿಯಾ ಆಗಿ ಬದಲಾದುದು ಕಿರುತೆರೆ ವೀಕ್ಷಕರಿಗೆ ಖುಷಿ ತಂದಿದೆ. ಪಾಸಿಟಿವ್ ಆಗಿರಲಿ, ನೆಗೆಟಿವ್ ಆಗಿರಲಿ ಯಾವುದೇ ಪಾತ್ರ ನೀಡಿದರೂ ಅಚ್ಚುಕಟ್ಟಾಗಿ ಜೀವ ತುಂಬುವ ಮೇಘನಾ ಎರಡು ಶೇಡ್ ಪಾತ್ರವಿರುವ ಪಾತ್ರದ ಮೂಲಕ ಗುರುತಿಸಿಕೊಂಡಾಕೆ. ಕಿರುತೆರೆ ಅಂಗಳದಲ್ಲಿ ಭಿನ್ನ ಪಾತ್ರಗಳ ಮೂಲಕ ಮೋಡಿ ಮಾಡುತ್ತಿರುವ ಈಕೆಗೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುವ ಆಸೆಯೂ ಇದೆ.
ಅಂದಹಾಗೆ ಈಚೆಗೆ ಮೇಘನಾ ಅವರು, ಈಚೆಗೆ ಹೊಸ ಮನೆಗೆ ಕಾಲಿಟ್ಟಿದ್ದಾರೆ. ಅವರ ಯುಟ್ಯೂಬ್ ಚಾನೆಲ್‌ನಲ್ಲಿ ಅವರು ನೂತನ ಮನೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅವರ ಗೃಹ ಪ್ರವೇಶಕ್ಕೆ ‘ಸೀತಾ ರಾಮ’ ಧಾರಾವಾಹಿ ಕಲಾವಿದರಾದ ಮುಖ್ಯಮಂತ್ರಿ ಚಂದ್ರು, ವೈಷ್ಣವಿ ಗೌಡ, ಅಶೋಕ ಮುಂತಾದವರು ಆಗಮಿಸಿದ್ದರು.
ಹೋಳಿ ಶೂಟಿಂಗ್ ವೇಳೆ ಸೀತಾರಾಮ ಸೆಟ್ನಲ್ಲಿ ಏನೆಲ್ಲಾ ಆಯ್ತು? ವಿಡಿಯೋ ಮೂಲಕ ಪ್ರಿಯಾ ಮಾಹಿತಿ