ಭಾಗ್ಯಳಿಗೆ ಬುದ್ಧಿ ಕಲಿಸಲು ರೂಪಾಳನ್ನು ಕರೆತಂದ ತಾಂಡವ್​ಗೆ ಅವಳೇ ತಿರುಗುಮಂತ್ರವಾಗ್ತಾಳಾ? ಏನಿದು ಟ್ವಿಸ್ಟ್​?

Published : Apr 14, 2024, 03:46 PM IST
ಭಾಗ್ಯಳಿಗೆ ಬುದ್ಧಿ ಕಲಿಸಲು ರೂಪಾಳನ್ನು ಕರೆತಂದ ತಾಂಡವ್​ಗೆ ಅವಳೇ ತಿರುಗುಮಂತ್ರವಾಗ್ತಾಳಾ? ಏನಿದು ಟ್ವಿಸ್ಟ್​?

ಸಾರಾಂಶ

ಭಾಗ್ಯಳಿಗೆ ಬುದ್ಧಿ ಕಲಿಸಲು ಬಂದಿರೋ ರೂಪಾ ಮನೆಯ ಬೆಳವಣಿಗೆಗಳನ್ನು ಗಮನಿಸುತ್ತಿದ್ದಾಳೆ. ಈಗ ಆಕೆ ಯಾರಿಗೆ ಬುದ್ಧಿ ಕಲಿಸುತ್ತಾಳೆ ಎನ್ನುವ ಕುತೂಹಲ ಇಲ್ಲಿದೆ...   

ಭಾಗ್ಯಳಿಗೆ ಬುದ್ಧಿ ಕಲಿಸಲು  ಹೊಸ ಅಡುಗೆಯವಳನ್ನು  ಕರೆತಂದಿದ್ದಾನೆ ತಾಂಡವ್​.  ಅವಳ ಹೆಸರು ರೂಪಾ. ಅಡುಗೆಯ ಜೊತೆಗೆ ಸಂಸಾರವನ್ನು ಸರಿ ಮಾಡುತ್ತೇನೆ ಎಂದಿದ್ದಾಳೆ ರೂಪ. ಅಸಲಿಗೆ ಅವಳನ್ನು ತಾಂಡವ್​ ಕರೆದುಕೊಂಡು ಬಂದಿರುವುದು ಭಾಗ್ಯ ಮತ್ತು ಆತನನ್ನು ಬೇರೆ ಬೇರೆ ಮಾಡಲು. ಮನೆಯೊಳಕ್ಕೆ ಗೆರೆ ಎಳೆದಿರುವ ಕುಸುಮಾ,  ಒಂದು ಕಡೆ ಮಗ ತಾಂಡವ್​ನನ್ನು ಇರಿಸಿ ಇನ್ನೊಂದು ಕಡೆ ಉಳಿದ ಎಲ್ಲಾ ಸದಸ್ಯರನ್ನೂ ಇಟ್ಟುಕೊಂಡಿದ್ದಾಳೆ. ಈಗ ತಾಂಡವ್​ ಒಬ್ಬಂಟಿಯಾಗಿದ್ದಾನೆ. ಆದರೆ  ಆಕಾಶ-ಭೂಮಿ ಒಂದು ಮಾಡಿಯಾದರೂ ಭಾಗ್ಯಳನ್ನು ಮನೆಯಿಂದ ಹೊರಕ್ಕೆ ಹಾಕಬೇಕು ಎನ್ನುವುದು ತಾಂಡವ್ ಶಪಥ.  ಸದ್ಯ  ಅಮ್ಮ ಕುಸುಮಾ ಎದುರು ಎಲ್ಲವೂ ಠುಸ್​ ಆಗಿದೆ. ಆದರೆ ಇದೀಗ ಯುಗಾದಿ ದಿನವೇ ಗಂಡ-ಹೆಂಡತಿ ನಡುವೆ ಭರ್ಜರಿ ಪ್ರತಿಜ್ಞೆ ಆಗಿದೆ. ಇಬ್ಬರೂ ಪ್ರತಿಜ್ಞೆ ಮಾಡಿದ್ದು, ಗೆಲುವು ಯಾರದ್ದು, ಹೇಗೆ ಎನ್ನುವುದು ಈಗಿರುವ ಪ್ರಶ್ನೆ. ಅಷ್ಟಕ್ಕೂ, ನಮಗೆ ಮಗನಿಗಿಂತಲೂ ಸೊಸೆಯೇ ಮೇಲು ಎಂದು ಕುಸುಮಾ ಮತ್ತು ಅವರ ಮನೆಯವರು ಭಾಗ್ಯಳ ಪರ ನಿಂತಿದ್ದಾರೆ.   ಯಾವುದೇ ಕಾರಣಕ್ಕೂ ಕುಸುಮಾಳನ್ನು ಹೊರಗೆ ಹಾಕುವ ಪಣ ತೊಟ್ಟ ಮಗ ತಾಂಡವ್​ಗೆ ಬುದ್ಧಿ ಕಲಿಸಲು ಮುಂದಾಗಿದ್ದಾಳೆ.  ತಾಂಡವ್​ಗೆ ಬುದ್ಧಿ ಕಲಿಸಲು, ತಮ್ಮ ಸೊಸೆ ಭಾಗ್ಯಳನ್ನು ಉಳಿಸಿಕೊಳ್ಳಲು ಇದಲ್ಲದೇ ಬೇರೆ ಮಾರ್ಗವಿಲ್ಲ ಎಂದು ಈ ಮಾರ್ಗವನ್ನು ತನ್ನದಾಗಿಸಿಕೊಂಡಿದ್ದಾಳೆ.  

ಇದರ ನಡುವೆಯೇ,  ಭಾಗ್ಯ ಯುಗಾದಿ ಹಬ್ಬಕ್ಕೆಂದು ಅಡುಗೆ ಮಾಡಿದ್ದಾಳೆ. ಆದರೆ ಕೇಸರಿಬಾತ್​ ಮತ್ತು ಉಪ್ಪಿಟ್ಟಿನ ಪಾತ್ರೆಗಳನ್ನು ಒಂದರ ಮೇಲೆ ಇನ್ನೊಂದು ಇಟ್ಟಿದ್ದಳು. ಹಸಿದು ಬಂದಿರೋ ಮಗ ಗುಂಡಾ ತಿಂಡಿ ಪರಿಮಳ ನೋಡಿ ಅದನ್ನು ತೆಗೆಯಲು ಹೋದಾಗ, ಅದು ಬಿದ್ದು ಎಲ್ಲಾ ಚೆಲ್ಲಿ ಹೋಗಿದೆ. ಸಾಲದು ಎನ್ನುವುದಕ್ಕೆ ಚೆಲ್ಲಿರುವುದನ್ನು ಗುಂಡಾ ಎತ್ತಿ ಪಾತ್ರೆಗೆ ಹಾಕಿದ್ದಾನೆ.  ಭಾಗ್ಯಳ ಮನೆ ಎರಡು ಪಾಲಾಗಿದೆ. ಹೆತ್ತ ಮಗನನ್ನೇ ಪಕ್ಕದ ಮನೆಯವರೇ ಎಂದು ಸಂಬೋಧಿಸುತ್ತಿದ್ದಾಳೆ ಕುಸುಮಾ. 

ಸಲ್ಮಾನ್​ ಬೆಂಬಲಿಗ ಗಿಪ್ಪಿ ಮನೆ ಮೇಲೂ ಗುಂಡಿನ ದಾಳಿ, ರಾಖಿಗೂ ಬೆದರಿಕೆ: ಅಷ್ಟಕ್ಕೂ ನಟನ ಮೇಲೆ ಏಕಿಷ್ಟು ಕೋಪ?

ಇದೀಗ ಕುತೂಹಲದ ಘಟ್ಟದಲ್ಲಿ ಅಡುಗೆ ಎಲ್ಲಾ ಚೆಲ್ಲಿ ಹೋಗಿದೆ. ಅತ್ತ ತಾಂಡವ್​ಗೆ ರೂಪ ಬಗೆಬಗೆ ಅಡುಗೆ ಮಾಡಿಕೊಟ್ಟಿದ್ದಾಳೆ. ಮಕ್ಕಳನ್ನು ತನ್ನ ಕಡೆಗೆ ಸೆಳೆದುಕೊಳ್ಳಲು ತಾಂಡವ್​ ಮಕ್ಕಳಿಗೆ ಇಷ್ಟವಾಗಿರೋ ಅಡುಗೆಯನ್ನೇ  ಮಾಡಿಸಿದ್ದಾನೆ. ತುಂಬಾ ಹಸಿವಾಗಿದೆಯಲ್ಲಾ, ನಿಮ್ಮ ಅಮ್ಮ ಇಷ್ಟು ಬೇಗ ಅಡುಗೆ ಮಾಡಲ್ಲ, ಬೇಗ ಬನ್ನಿ ಎಂದು ಮಕ್ಕಳಿಗೆ ಕರೆಯುತ್ತಿದ್ದಾನೆ. ಈ ಗೆರೆ ದಾಟಿ ಬನ್ನಿ ಸಾಕು ಎನ್ನುತ್ತಿದ್ದಾರೆ. ಮಕ್ಕಳು ಗೆರೆಯವರೆಗೆ ಬಂದಿದ್ದು, ಅದರ ಪ್ರೊಮೋ ಬಿಡುಗಡೆ ಮಾಡಲಾಗಿದೆ. ಅಷ್ಟಕ್ಕೂ ಮಕ್ಕಳು ಗೆರೆ ದಾಟುವುದಿಲ್ಲ, ಅಪ್ಪನನ್ನು ಬೈದು ವಾಪಸ್​ ಬರುತ್ತಾರೆ ಎನ್ನುವುದು ಸೀರಿಯಲ್​ ಪ್ರೇಮಿಗಳ ಅಭಿಮತ.

ಇದರ ನಡುವೆಯೇ ಹಸಿದ ಮಗನನ್ನು ತಾಂಡವ್​ ಊಟಕ್ಕೆ ಕರೆದಾಗ ಅಪ್ಪನ ಜೊತೆ ಇರುವ ಈ ಆಂಟಿ ಮಾಡಿದ ಅಡುಗೆಯನ್ನು ನಾನು ತಿನ್ನುವುದಿಲ್ಲ. ನಾನೇನಿದ್ದರೂ ಅಮ್ಮಾ ಮಾಡಿದ ಅಡುಗೆ ತಿನ್ನುವುದು ಎಂದಿದ್ದಾನೆ. ಆದರೆ ಅಡುಗೆ ಮನೆಯಲ್ಲಿ ಭಾಗ್ಯಳಿಗೆ ಕೊಟ್ಟ ಟೈಂ ಮುಗಿದು ಹೋಗಿದ್ದು, ಅಡುಗೆ ಚೆಲ್ಲಾಪಿಲ್ಲಿಯಾಗಿದೆ. ಈಗ ರೂಪಾ ತಾಂಡವ್​ಗೆ ಅಡುಗೆ ಮಾಡುವ ಸರದಿ. ಆದರೆ ಭಾಗ್ಯ ನನಗೆ ಗ್ಯಾಸ್ ಎಲ್ಲಾ ಇಲ್ಲದೇ ಹೇಗೆ ಅಡುಗೆ ಮಾಡುವುದು ಎನ್ನುವುದು ಗೊತ್ತು. ಮಕ್ಕಳನ್ನು ಉಪವಾಸ ಹಾಕಲ್ಲ ಎಂದಿದ್ದಾಳೆ. ಇಷ್ಟೆಲ್ಲಾ ಗಮನಿಸ್ತಿರೋ ರೂಪಾಗೆ ಇದೀಗ ತಾಂಡವ್​ ಮೇಲೆಯೇ ಸಂದೇಹ ಶುರುವಾಗಿದೆ. ಇಲ್ಲಿಯವರೆಗೆ ತಾಂಡವ್​ ಹೇಳಿದ್ದನ್ನು ಕೇಳಿ, ಭಾಗ್ಯ ಮತ್ತು ಅತ್ತೆಯದ್ದೇ ತಪ್ಪು ಎಂದುಕೊಂಡಿದ್ದ ರೂಪಾಗೆ ತಾಂಡವ್​ ಮೇಲೆ ಅನುಮಾನ ಶುರುವಾಗಿದೆ. ಭಾಗ್ಯಳಿಗೆ ಬುದ್ಧಿ ಕಲಿಸಲು ಹೋಗಿ ತಾಂಡವ್​ನೇ ಬುದ್ಧಿ ಕಲೀತಾನಾ ನೋಡಬೇಕಿದೆ. 

ಪುಟ್ಟಕ್ಕನ ಮಗಳು ಸಹನಾಗೆ ಹುಟ್ಟುಹಬ್ಬದ ಸಂಭ್ರಮ: ನಟಿಯ ರಿಯಲ್​ ಲೈಫ್​ ಇಂಟರೆಸ್ಟಿಂಗ್​ ವಿಷ್ಯಗಳು ಇಲ್ಲಿವೆ...


PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?