ಪುಟ್ಟಕ್ಕನ ಮಗಳು ಸಹನಾಗೆ ಹುಟ್ಟುಹಬ್ಬದ ಸಂಭ್ರಮ: ನಟಿಯ ರಿಯಲ್​ ಲೈಫ್​ ಇಂಟರೆಸ್ಟಿಂಗ್​ ವಿಷ್ಯಗಳು ಇಲ್ಲಿವೆ...

Published : Apr 14, 2024, 12:53 PM IST
ಪುಟ್ಟಕ್ಕನ ಮಗಳು ಸಹನಾಗೆ ಹುಟ್ಟುಹಬ್ಬದ ಸಂಭ್ರಮ: ನಟಿಯ ರಿಯಲ್​ ಲೈಫ್​ ಇಂಟರೆಸ್ಟಿಂಗ್​ ವಿಷ್ಯಗಳು ಇಲ್ಲಿವೆ...

ಸಾರಾಂಶ

ಪುಟ್ಟಕ್ಕನ ಮಗಳು ಸಹನಾಗೆ ಇಂದು ಹುಟ್ಟುಹಬ್ಬದ ಸಂಭ್ರಮ. ನಟಿಯ ರಿಯಲ್​ ಲೈಫ್​ ಇಂಟರೆಸ್ಟಿಂಗ್​ ವಿಷ್ಯಗಳು ಇಲ್ಲಿವೆ...  

ಹೆಸರಿಗೆ ತಕ್ಕಂತೆ ಪುಟ್ಟಕ್ಕನ ಮಗಳು ಸಹನಾ, ಇಲ್ಲಿಯವರೆಗೂ ಸಹನಾಮೂರ್ತಿಯೇ ಆಗಿದ್ದಳು. ಆದರೆ ಈಗ ಕಾಲ ಬದಲಾಗಿದೆ. ಹೆಣ್ಣು ಅಗತ್ಯಕ್ಕಿಂತ ಹೆಚ್ಚು ಸಹಿಸಿಕೊಂಡರೆ, ನೋವು, ದೌರ್ಜನ್ಯ, ಕೇಡು ಕಟ್ಟಿಟ್ಟದ್ದೇ ಎನ್ನುವ ವಿಷಯ ಅವಳಿಗೂ ತಿಳಿದಿದೆ. ಒಂದು ಹಂತ ಮೀರಿದಾಗ, ಸಹನಾಮೂರ್ತಿ ಹೆಣ್ಣೂ ಕಾಳಿಯಾಗಲೇ ಬೇಕು, ದುರ್ಜನರ ನಾಶ ಮಾಡಲೇ ಬೇಕು, ಹೆಣ್ಣಿಗೆ ಕೊಟ್ಟಿರುವ ಸಹನೆ ಎನ್ನುವ ಪಟ್ಟ ಇಟ್ಟುಕೊಂಡು ಅಳುಮುಂಜಿಯಂತೆ ಬಾಳುತ್ತಾ ಕುಳಿತುಕೊಂಡರೆ ಸಾಯುವವರೆಗೂ ದೌರ್ಜನ್ಯವನ್ನೇ ಸಹಿಸಿಕೊಂಡಿರಬೇಕು ಎನ್ನುವ ಸತ್ಯ ಈ ಸಹನಂಗೂ ತಿಳಿದಿದೆ. ಅದಕ್ಕಾಗಿಯೇ ಪುಟ್ಟಕ್ಕನ ಮಗಳು ಸಹನಾ ಬದಲಾಗಿದ್ದಾಳೆ. ಅತ್ತೆ, ಮೈದುನ ಕೊಡುತ್ತಿದ್ದ ದೌರ್ಜನ್ಯದ ವಿರುದ್ಧ ಸಿಡಿದೆದ್ದು, ಅವರನ್ನು ಜೈಲಿಗೆ ಅಟ್ಟಿದ್ದಾಳೆ. ತನ್ನನ್ನು ನಂಬದೇ ತಾಳಿಯನ್ನೇ ಬಿಚ್ಚುಕೊಡು ಎಂದ ಗಂಡನಿಗೆ ಎದುರಾಗಿ ತಾಳಿಯನ್ನೂ ಕೊಟ್ಟು ತವರು ಮನೆ ಸೇರಿದ್ದಾಳೆ. ಗಂಡನಿಗೆ ಸತ್ಯ ಗೊತ್ತಾಗಿ ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾನೆ ಎನ್ನುವ ಭರವಸೆ ಈಕೆಯದ್ದು.

ಇದು ಪುಟ್ಟಕ್ಕನ ಮಗಳು ಸಹನಾ ಮಾಯ್ತಾಯ್ತು. ಆದರೆ ರಿಯಲ್​ ಲೈಫ್​ ಸಹನಾ ಹೇಗಿದ್ದಾರೆ? ಇಲ್ಲಿದೆ ಸಹನಾ ಕುರಿತ ಇಂಟರೆಸ್ಟಿಂಗ್​ ವಿಷ್ಯಗಳು. ಅಂದಹಾಗೆ ಸಹನಾ ಪಾತ್ರಧಾರಿಯ ರಿಯಲ್​ ಲೈಫ್​ ಹೆಸರು  ಅಕ್ಷರಾ (Akshara). ಇಂದು (ಏ.14) ಅಕ್ಷರಾ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಪುಟ್ಟಕ್ಕನ ಮಗಳು ಸೀರಿಯಲ್​ನಲ್ಲಿ ಹೆಚ್ಚು ಕಲಿಯದೇ ಇರುವ ಸಹನಾ, ನಿಜ ಜೀವನದಲ್ಲಿ ಫೈನಾನ್ಸ್​ನಲ್ಲಿ ಎಂಬಿಎ ಪದವೀಧರೆ. ಈ ಸೀರಿಯಲ್​ಗೂ ಬರುವ ಮುನ್ನೆ ಕೆಲವು ಧಾರಾವಾಹಿಯಲ್ಲಿ ಅಕ್ಷರಾ ನಟಿಸಿದ್ದಾರೆ.  ‘ಅಮ್ನೋರು’ (Amnoru) ಧಾರಾವಾಹಿಯ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿ ಸೈ ಎನಿಸಿಕೊಂಡಿರುವ ಇವರಿಗೆ  ‘ಪುಟ್ಟಕ್ಕನ ಮಕ್ಕಳು’ (Puttakana Makkalu) ಸಕತ್​ ಹೆಸರು ತಂದುಕೊಡುತ್ತಿದೆ. ರಕ್ಷಾ ಬಂಧನ ಸೀರಿಯಲ್​ನಲ್ಲಿಯೂ ನಟಿಸಿದ್ದಾರೆ. 

ಸ್ತ್ರೀವಾದವು ಅತಿಯಾದ್ರೆ ಸಮಾಜಕ್ಕೆ ಅಪಾಯಕಾರಿ: ನಟಿ ನೋರಾ ಫತೇಹಿ ಕೊಟ್ಟ ಕಾರಣ ಹೀಗಿದೆ...
 
ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿರುವ ನಟಿ ಮಾಡರ್ನ್​ ಡ್ರೆಸ್​ನಲ್ಲಿ ಮಿಂಚಿದರೆ ಅಬ್ಬಬ್ಬಾ ನಮ್ಮ ಸಹನಾ ಇವರೇನಾ ಎಂದು ನಿಬ್ಬೆರಗಾಗಿ ನೋಡಬೇಕು.  ಪುಟ್ಟಕ್ಕನ ಮಗಕ್ಕಳು ಸೀರಿಯಲ್​ನಲ್ಲಿ  ಸೀರೆಯುಟ್ಟು ಹಳ್ಳಿ ಹುಡುಗಿ ಲುಕ್‌ನಲ್ಲಿ ಕ್ಯೂಟ್​ ಆಗಿ ಕಾಣುವ ಅಕ್ಷರ, ಮಾಡೆಲಿಂಗ್‌ನಲ್ಲಿಯೂ ಎತ್ತಿದ ಕೈ.  ಅಂದಹಾಗೆ ಇವರು ಹುಟ್ಟಿದ್ದು, ಬೆಂಗಳೂರಿನಲ್ಲಿ. ಸೀರಿಯಲ್​ಗೆ ಪದಾರ್ಪಣೆ ಮಾಡಲು ಅಪ್ಪ-ಅಮ್ಮನೇ ಕಾರಣ ಎಂದಿರುವ ಅಕ್ಷರಾ ಅವರು, ತಮಗೆ ಅವರೇ ಸಪೋರ್ಟ್​ ಮಾಡುತ್ತಾರೆ ಎಂದಿದ್ದಾರೆ. ಇನ್ನು ಈ ಸೀರಿಯಲ್​ನಲ್ಲಿ ಉಮಾಶ್ರೀಯಂಥ ಹಿರಿಯ ನಟಿಯ ಜೊತೆ ನಟಿಸುವ ಭಾಗ್ಯ ತಮಗೆ ಲಭಿಸಿದ್ದು, ಪುಣ್ಯ ಎನ್ನುವ ಅಕ್ಷರಾ ಅವರ,  ಯಾವುದೇ ತಪ್ಪುಗಳು ಸಂಭವಿಸಿದರೂ ಅಲ್ಲಿ ಅದನ್ನು ಸರಿಪಡಿಸಿ ಉತ್ತಮವಾಗಿ ನಟಿಸಲು ಸಲಹೆಗಳನ್ನು ನೀಡುತ್ತಾರೆ ಎನ್ನುತ್ತಾರೆ.
 
ಅಂದಹಾಗೆ ಕಿರುತೆರೆ ಮಾತ್ರವಲ್ಲದೇ ಹಿರಿತೆರೆಗೂ ಪ್ರವೇಶಿಸಿದ್ದಾರೆ ಅಕ್ಷರಾ. ಅಭಿಷೇಕ್ ಅಂಬರೀಶ್ ನಟನೆಯ ಬ್ಯಾಡ್ ಮ್ಯಾನರ್ಸ್ ಹಾಗೂ ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು ಸಿನಿಮಾದಲ್ಲಿ ಅಕ್ಷರಾ ಅವರು ನಟಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರೋ ಇವರು, ಅವರನ್ನು ನೋಡಿಯೇ ತಾನು ಇವರಂತೆ ನಟನಾ ಜಗತ್ತಿನಲ್ಲಿ ಗುರುತಿಸಿಕೊಳ್ಳಬೇಕೆಂದು ಬಯಸಿದರಂತೆ.  

ಸಲ್ಮಾನ್​ ಬೆಂಬಲಿಗ ಗಿಪ್ಪಿ ಮನೆ ಮೇಲೂ ಗುಂಡಿನ ದಾಳಿ, ರಾಖಿಗೂ ಬೆದರಿಕೆ: ಅಷ್ಟಕ್ಕೂ ನಟನ ಮೇಲೆ ಏಕಿಷ್ಟು ಕೋಪ?
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ' ಎಂದ ಅಭಿಷೇಕ್
ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್​ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್​ ಕೊಟ್ರು ನೋಡಿ!