ಬಿಂಕದ ಸಿಂಗಾರಿ... ಡಾ.ರಾಜ್​ ಹಾಡಿಗೆ ಸೀತಾ-ರಾಮ ಮಾಡರ್ನ್​ ಸ್ಟೆಪ್​: ಮನಸೋತ ಅಭಿಮಾನಿಗಳು

By Suvarna News  |  First Published Apr 14, 2024, 4:58 PM IST

ಡಾ.ರಾಜ್​ಕುಮಾರ್​-ಲೀಲಾವತಿ ಅಭಿನಯದ ಬಿಂಕದ ಸಿಂಗಾರಿ ಹಾಡಿಗೆ ಸೀತಾ-ರಾಮ ಭರ್ಜರಿ ಡ್ಯಾನ್ಸ್​ ಮಾಡಿದ್ದು, ಇದರ ವಿಡಿಯೋ ವೈರಲ್​ ಆಗಿದೆ. 
 


1963ರಲ್ಲಿ ಬಿಡುಗಡೆಯಾದ ಡಾ.ರಾಜ್​ಕುಮಾರ್​ ಮತ್ತು ಲೀಲಾವತಿ ಅಭಿನಯದ ಕನ್ಯಾರತ್ನ ಚಿತ್ರದ ಬಿಂಕದ ಸಿಂಗಾರಿ... ಮೈ ಡೊಂಕಿನ ವೈಯ್ಯಾರಿ ಹಾಡು 60 ವರ್ಷಗಳ ಬಳಿಕವೂ ಇಂದಿಗೂ ಜನಜನಿತವಾಗಿದೆ. ಡಾ.ರಾಜ್​ಕುಮಾರ್​ ಅವರ ಚಿತ್ರದ ಹಾಡುಗಳೆಂದರೆ ಹಾಗೇ ಅಲ್ಲವೆ? ಶತಮಾನ ಕಳೆದರೂ ನೆನಪಿನಲ್ಲಿ ಇರುವ ಮಧುರ ಗೀತೆಗಳವು. ಇಂದಿನ ಸಿನಿಮಾಗಳ ಬಹುತೇಕ ಹಾಡುಗಳು ಅರ್ಥಹೀನವಾಗಿದ್ದರೆ, ಕೆಲವು ತಿಂಗಳುಗಳು ರೀಲ್ಸ್ ರೂಪದಲ್ಲಿ ಹಿಟ್​ ಆಗುತ್ತಲೇ ಅದೇ ವೇಗದಲ್ಲಿ ಮರೆತೇ ಹೋಗುವಂಥದ್ದು. ಆದರೆ 60-80ರ ದಶಕದ ಹಾಡುಗಳ ಮಾಧುರ್ಯವೇ ಬೇರೆ. ಅದರ ಸೊಗಡು, ಸೊಗಸೇ ಬೇರೆ. ಅವು ಎಂದೆಂದಿಗೂ ಜನಜನಿತವೇ. ಅಂಥವುಗಳಲ್ಲಿ ಒಂದು ಬಿಂಕದ ಸಿಂಗಾರಿ... ಮೈ ಡೊಂಕಿನ ವೈಯ್ಯಾರಿ ಹಾಡು. 60 ವರ್ಷಗಳ ಅಂದಿನ ಹಾಡಿಗೆ ಇಂದು ಸೀತಾ-ರಾಮ ಸೀರಿಯಲ್​ ಜೋಡಿ ಮಾಡರ್ನ್​ ಟಚ್​ ಕೊಟ್ಟು ಡ್ಯಾನ್ಸ್​ ಮಾಡಿದೆ. 

ಈ ಡ್ಯಾನ್ಸ್​ ಆರಂಭದಲ್ಲಿ ಬ್ಲ್ಯಾಕ್​ ಆ್ಯಂಡ್​ ವೈಟ್​ ಟಚ್​ ಕೊಡಲಾಗಿದ್ದು, ಬಳಿಕ ಮಾಡರ್ನ್​ ಟಚ್​ ಕೊಡಲಾಗಿದೆ ಇದರಲ್ಲಿ ಸೀತಾ ಮತ್ತು ರಾಮ್​ ಪಾತ್ರಧಾರಿಗಳು ಸಕತ್​ ಸ್ಟೆಪ್​ ಹಾಕಿದ್ದಾರೆ.  ಈ ಜೋಡಿಯ ಡ್ಯಾನ್ಸ್​ ವಿಡಿಯೋ ವೈರಲ್​ ಆಗಿದೆ. ಅದರಲ್ಲಿ ಸೀತೆ ಮತ್ತು ರಾಮ್​ ನೃತ್ಯ ಮಾಡುವುದನ್ನು ನೋಡಬಹುದು. ಅಷ್ಟಕ್ಕೂ ಸೀತಾ ಪಾತ್ರಧಾರಿ ವೈಷ್ಣವಿ ಗೌಡ, ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಇದ್ದು, ಡ್ಯಾನ್ಸ್​ನಲ್ಲಿಯೂ ಎಕ್ಸ್​ಪರ್ಟ್​. ಈ ರೀಲ್ಸ್​ಗೆ ಥಹರೇವಾರಿ ಕಮೆಂಟ್ಸ್​ ಬಂದಿವೆ. ನಿಮ್ಮ ಜೋಡಿ ಸೂಪರ್​ ಎನ್ನುತ್ತಿದ್ದಾರೆ ಅಭಿಮಾನಿಗಳು. ಸೀತಾ ರಾಮ ಸೀರಿಯಲ್​ ಇದೀಗ ಕುತೂಹಲದ ಘಟ್ಟ ತಲುಪಿದೆ. ಸೀತೆ ಮತ್ತು ರಾಮ್​ ಇಬ್ಬರೂ ತಮ್ಮ ಪ್ರೀತಿಯನ್ನು ನಿವೇದನೆ ಮಾಡಿಕೊಂಡದ್ದು ಆಗಿದೆ. ಇವರಿಬ್ಬರ ಪ್ರೀತಿ ಮದುವೆಯ ಹಂತ ತಲುಪುವುದು ಒಂದೇ ಬಾಕಿ. ಇದರ ನಡುವೆಯೇ ಚಾಂದನಿ ಎಂಟ್ರಿ ಕೊಟ್ಟಿದ್ದು, ಅವಳಿಂದ ಏನಾದರೂ ಸಮಸ್ಯೆ ಆಗುತ್ತದೆಯೇ ಎಂದು ಕಾದು ನೋಡಬೇಕಿದೆ. ಈ ಮಧ್ಯೆಯೇ ಇವರಿಬ್ಬರ ರೀಲ್ಸ್​ ಬಹಳ ಸೌಂಡ್​ ಮಾಡುತ್ತಿದೆ. 

Tap to resize

Latest Videos

ಬಳಕು ಬಳ್ಳಿಯಂತಿರೋ ಉರ್ಫಿ ಡ್ರೆಸ್​ ಹಿಡಿಯಲು ಹತ್ತಾರು ಮಂದಿ! ತಲೆಯೊಳಗೆ ಏನಿದೆ ಕೇಳಿದ ಫ್ಯಾನ್ಸ್​...


ಇನ್ನು ಸೀತಾ ಪಾತ್ರಧಾರಿ ವೈಷ್ಣವಿ ಅವರ ಕುರಿತು ಹೇಳುವುದಾದರೆ, ಕನ್ನಡದ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಇವರು ಪರಿಚಯವಿದ್ದರು. ಅಗ್ನಿಸಾಕ್ಷಿ ಸೀರಿಯಲ್​ನ ಸನ್ನಿಧಿ ಮೂಲಕ ಸಕತ್​ ಫೇಮಸ್​ ಆಗಿದ್ದ ನಟಿ ಈಗ ಸೀತಾರಾಮದ ಸೀತೆಯಾಗಿ ಮನೆ ಮಾತಾಗಿದ್ದಾರೆ.  ವೈಷ್ಣವಿ ಕನ್ನಡ ಕಿರುತೆರೆಲೋಕದ ಜನಪ್ರಿಯ ನಟಿ. ಅಷ್ಟೇ ಅಲ್ಲದೇ,  ಹಲವು ಉತ್ಪನ್ನಗಳ ರಾಯಭಾರಿಯೂ ಹೌದು. ಅಷ್ಟಕ್ಕೂ ಇವರು ನಟನಾ ಲೋಕಕ್ಕೆ ಕಾಲಿಟ್ಟಿದ್ದೂ ಕುತೂಹಲ ವಿಷಯವಾಗಿದೆ. ಒಮ್ಮೆ ಇವರು  ತಾಯಿಯ ಜೊತೆ ದೇವಸ್ಥಾನಕ್ಕೆ  ಹೋದಾಗ ಸಹಾಯಕ ನಿರ್ದೇಶಕರೊಬ್ಬರು ನೋಡಿ ತಮ್ಮ ಸೀರಿಯಲ್‌ನಲ್ಲಿ ನಟಿಸಲು ಆಫರ್ ನೀಡಿದ್ದರಂತೆ.  ಜೀ ಕನ್ನಡದ `ದೇವಿ' ಸೀರಿಯಲ್‌ನಿಂದ ಇವರ ಕಿರುತೆರೆ ಪಯಣ ಆರಂಭವಾಯಿತು.ನಂತರ `ಪುನರ್‌ವಿವಾಹ'ದಲ್ಲಿ ನಟಿಸಿ `ಅಗ್ನಸಾಕ್ಷಿ' ಸೀರಿಯಲ್‌ನ ಸನ್ನಿಧಿಯಾಗಿ ಆಯ್ಕೆಗೊಂಡರು. ಈ ಪಾತ್ರದ ಮೂಲಕ ಅಪಾರ ಜನಮನ್ನಣೆ ಪಡೆದಿದ್ದಾರೆ.  ಇವರ ಕಾಲೇಜು ಶಿಕ್ಷಣದ ಕುರಿತು ಹೇಳುವುದಾದರೆ, ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡಿದ್ದಾರೆ.  ಪದವಿ ಅರ್ಧಕ್ಕೆ ಬಿಟ್ಟು, ಬಳಿಕ  ಬೆಂಗಳೂರು ವಿಶ್ವವಿದ್ಯಾನಿಲಯದ ದೂರಶಿಕ್ಷಣ ಮೂಲಕ ಪದವಿ ಪಡೆದಿದ್ದಾರೆ.  ಭರತನಾಟ್ಯ, ಕುಚಿಪುಡಿ ಮತ್ತು ಬೆಲ್ಲಿ ಡ್ಯಾನ್ಸಿಂಗ್‌ನಲ್ಲಿ ವಿಶೇಷ ಪರಿಣತಿ ಪಡೆದಿದ್ದಾರೆ.  `ಗಿರಿಗಿಟ್ಲೆ' ಚಿತ್ರದ ಮೂಲಕ ನಾಯಕಿಯಾಗಿದ್ದಾರೆ.  `ಭರ್ಜರಿ ಕಾಮಿಡಿ' ಎಂಬ ರಿಯಾಲಿಟಿ ಷೋ   ನಿರೂಪಣೆ ಕೂಡ ಮಾಡಿದ್ದಾರೆ.  `ಕುಣಿಯೋಣ ಬಾರ' ಡ್ಯಾನ್ಸ್ ರಿಯಾಲಿಟಿ ಷೋ ಆಗೂ ಬಿಗ್​ಬಾಸ್​ ಸೀಸನ್​ 8ನಲ್ಲಿ ಭಾಗವಹಿಸಿದ್ದಾರೆ.

ಇನ್ನು ರಾಮ್​ ಪಾತ್ರಧಾರಿ ಗಗನ್​ ಚಿನ್ನಪ್ಪ ಕುರಿತು ಹೇಳುವುದಾದರೆ, ಕೊಡಗು ಮೂಲದ ಗಗನ್​,  ಬಣ್ಣ ಲೋಕಕ್ಕೆ ಎಂಟ್ರಿ ಕೊಡುವ ಮೊದಲದು  ಎರಡು ವರ್ಷ ಓಮನ್‌ ದೇಶದಲ್ಲಿ ಅದಾದ ಬಳಿಕ  ಒಂದು ವರ್ಷ ಅಬುದಾಬಿಯಲ್ಲಿ ಕೆಲಸ ಮಾಡಿದ್ದರು. ಶಿಕ್ಷಣ ಮುಗಿಸಿದ ಬಳಿಕ ಕೆಲಸಕ್ಕೆ ಸೇರಿದ್ದವರು. ವಿದೇಶಗಳಲ್ಲಿ ಕೆಲಸ ಮಾಡಿದ ಸಂದರ್ಭದಲ್ಲಿ ಅವರ ಒಂದು ಫೋಟೋಶೂಟ್​ ಅವರನ್ನು ಬಣ್ಣದ ಲೋಕಕ್ಕೆ ಬರುವಂತೆ ಮಾಡಿತು.  2014 ರಲ್ಲಿ ಫೋಟೋಶೂಟ್​ ಮಾಡಿಸಿ ಸೋಷಿಯಲ್​ ಮೀಡಿಯಾದಲ್ಲಿ ಹಾಕಿದ್ದರು. ಆಗ ಅವರಿಗೆ ಚಿತ್ರವೊಂದಕ್ಕೆ ಆಫರ್​ ಬಂದಿತ್ತು. ಬಣ್ಣದ ಲೋಕದ ಸೆಳೆತದಿಂದ ಅಬುದಾಬಿ ಬಿಟ್ಟು ಬೆಂಗಳೂರಿಗೆ ಬಂದರು. ಚಿತ್ರದಲ್ಲಿ ನಟಿಸಿದರೂ ಅದು ರಿಲೀಸ್​ ಆಗಲೇ ಇಲ್ಲ. ಸೀರಿಯಲ್​ಗಳಲ್ಲಿ ಆಡಿಷನ್​ ಕೊಟ್ಟರೂ ಭಾಷೆ ಸರಿಯಿಲ್ಲವೆಂದು ರಿಜೆಸ್ಟ್​ ಆಗುತ್ತಿದ್ದಂತೆ. ನಂತರ ಬಣ್ಣದ ಲೋಕ ಬೇಡ ಎಂದು  ಮಾರ್ಕೆಟಿಂಗ್‌ ಮ್ಯಾನೇಜರ್‌ ಆಗಿ ಕೆಲಸ ಶುರು ಮಾಡಿದರು. ಆದರೆ ಬಣ್ಣದ ಲೋಕದ ಸೆಳೆತ ಇದ್ದೇ ಇದ್ದು.  ಮಂಗಳಗೌರಿ ಮದುವೆ ಸೀರಿಯಲ್‌ನಲ್ಲಿ ಅವಕಾಶ ಸಿಕ್ಕಿತು.  ಈ ಧಾರಾವಾಹಿಯಲ್ಲಿ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮಿನಿ ಬಿಗ್ ಬಾಸ್​ಗೂ ಎಂಟ್ರಿ ಕೊಟ್ಟು ಈಗ  ಸೀತಾರಾಮ ಸೀರಿಯಲ್​ ಮೂಲಕ ಕನ್ನಡ ಧಾರಾವಾಹಿ ಲೋಕದಲ್ಲಿ ಪೂರ್ಣಪ್ರಮಾಣದ ನಾಯಕರಾಗಿ ಮಿಂಚುತ್ತಿದ್ದಾರೆ.  ತೆಲುಗು ಕಿರುತೆರೆಗೂ ಕಾಲಿಟ್ಟಿರೋ ಗಗನ್​ ಅವರು,  ‘ಕೃಷ್ಣ ಮುಕುಂದ ಮುರಾರಿ’ ಸೀರಿಯಲ್​ನಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಅವವರು  ಮುರಾರಿ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಪ್ರೇರಣಾ ಕಂಬಮ್, ಯಶ್ಮಿ ಗೌಡ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಸೀತಾರಾಮ ಸೀರಿಯಲ್​ ಪ್ರಿಯಾ ಮದ್ವೆಯ ಭರ್ಜರಿ ಫೋಟೋಶೂಟ್ ಹೇಗಿತ್ತು? ವಿಡಿಯೋ ಮಾಹಿತಿ ನೀಡಿದ ನಟಿ

click me!