ಸೀತಾಳ ಮೊಬೈಲ್ಗೆ ಮೆಸೇಜ್ ಒಂದು ಬಂದಿದ್ದು, ಅದನ್ನು ನೋಡುತ್ತಿದ್ದಂತೆಯೇ ಆಕೆ ಮೂರ್ಛೆ ಹೋಗಿದ್ದಾಳೆ. ಸಂದೇಶ ಕಳುಹಿಸಿದವರು ಯಾರು?
ಪ್ರೀತಿಸೋದು ಸುಲಭ. ಏಕೆಂದರೆ ಪ್ರೀತಿಗೆ ಕಣ್ಣಿಲ್ಲ ಎನ್ನುತ್ತಾರೆ. ಆದರೆ ಪ್ರೀತಿಸಿದವರು ಸಿಗುವುದು ಅಷ್ಟು ಸುಲಭನಾ? ಅದೂ ಒಬ್ಬ ಅವಿವಾಹಿತನಿಗೆ ಒಂದು ಮಗುವಿನ ತಾಯಿ ಪತ್ನಿಯಾಗಿ ಬರುವುದು ಎಂದರೆ..? ಸಮಾಜ, ಕುಟುಂಬ, ಹಿನ್ನೆಲೆ... ಹೀಗೆ ನೂರೆಂಟು ವಿಘ್ನ. ಅದೇ ರೀತಿ ಇದೀಗ ಸೀತಾ ಬಾಳಲ್ಲೂ ಆಗಿದೆ. ಸೀತಾ ಮತ್ತು ರಾಮ್ ಮನಸ್ಸು ಒಂದಾಗಿದೆ. ಇದಕ್ಕೆ ಪುಟಾಣಿ ಸಿಹಿಯ ಮುದ್ರಯೂ ಬಿದ್ದಿದೆ. ಇನ್ನೇನು ಇಬ್ಬರೂ ಮದುವೆಯಾಗುವುದು ಒಂದೇ ಬಾಕಿ. ನಿಜ ಜೀವನದಲ್ಲಿಯೇ ಇಂಥ ಘಟನೆ ಕಷ್ಟಸಾಧ್ಯ ಎನ್ನಿಸಬೇಕಾದರೆ, ಸೀರಿಯಲ್ಗಳಲ್ಲಿ ಇದೇ ಮುಖ್ಯವಾಗಿರುವಾಗ ಅದು ಅಷ್ಟು ಬೇಗ ನಡೆದುಬಿಡುತ್ತಾ? ಸಾಧ್ಯವೇ ಇಲ್ಲ. ಇನ್ನೇನು ಎಲ್ಲವೂ ಒಂದು ಹಂತಕ್ಕೆ ಬರುತ್ತಿದೆ ಎನ್ನುವಷ್ಟರಲ್ಲಿಯೇ ಸೀತಾ ಮೊಬೈಲ್ಗೆ ಬಂದ ಮೆಸೇಜ್ ಆಕೆಯ ಮೂರ್ಛೆ ತಪ್ಪುವಂತೆ ಮಾಡಿದೆ!
ಹೌದು. ಪ್ರಿಯಾ ಮತ್ತು ಅಶೋಕ್ ಮದುವೆಗೆ ಬಟ್ಟೆ ಖರೀದಿಗೆ ಹೋಗಿರೋ ಸೀತಾ-ರಾಮ್ ಮತ್ತು ಸೀತಾ ಎಲ್ಲರೂ ಬಟ್ಟೆ ಖರೀದಿಸಿ ವಾಪಸಾಗುತ್ತಿದ್ದಾರೆ. ಆ ಸಮಯದಲ್ಲಿ ರಾಮ್ ಪುಟಾಣಿ ಸಿಹಿಯ ಜೊತೆ ಮುಂದೆ ಹೋಗಿದ್ದಾನೆ. ಹಿಂದೆ ಇರುವ ಸೀತಾಳ ಮೊಬೈಲ್ಗೆ ಮೆಸೇಜ್ ಬಂದಿದೆ. ಅದರಲ್ಲಿ, ಅಷ್ಟು ಸುಲಭಕ್ಕೆ ಎಲ್ಲಾ ಮರೆತು ಇಷ್ಟೊಂದು ಮುಂದುವರೆದಿದ್ದಿಯಾ? ಅದು ಹೇಗೆ ನಿನ್ನ ಇತಿಹಾಸ ಮರೆತುಬಿಟ್ಟೆ ಸೀತಾ ಎಂದು ಕೇಳಲಾಗಿದೆ. ಇದನ್ನು ನೋಡಿ ಸೀತಾ ಮೂರ್ಛೆ ತಪ್ಪಿದ್ದು, ರಾಮ್ ಮತ್ತು ಸಿಹಿ ಓಡಿ ಬಂದು ಸೀತಾಳನ್ನು ಎಬ್ಬಿಸುವ ಪ್ರಯತ್ನ ಮಾಡುತ್ತಿದ್ದು, ಸೀತಾರಾಮ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಶೇರ್ ಮಾಡಿದೆ.
ಅಮ್ಮನಾಗ್ತಿರೋ ನಟಿ ದೀಪಿಕಾ ಪಡುಕೋಣೆ ಇನ್ನೊಂದು ಗುಡ್ ನ್ಯೂಸ್: ಆಸ್ಕರ್ರಿಂದ ವಿಶೇಷ ಮನ್ನಣೆ
ಅಷ್ಟಕ್ಕೂ ಸೀತಾಳ ಇತಿಹಾಸ ಇಲ್ಲಿಯವರೆಗೆ ಮುಚ್ಚಿಡಲಾಗಿದೆ. ರಾಮ್ನನ್ನು ತಾನು ಪ್ರೀತಿಸುತ್ತೇನೆ ಎಂದು ತಿಳಿದಾಗಲೇ ಸೀತಾಗೆ ಹಿಂದಿನ ಜೀವನದ ಬಗ್ಗೆ ಟೆನ್ಷನ್ ಶುರುವಾಗಿತ್ತು. ನಾನು ಇದನ್ನು ಮುಚ್ಚಿಡಬಾರದು ಎಂದುಕೊಂಡಿದ್ದಳು. ಸಂಪೂರ್ಣ ಕಥೆ ಕೇಳಿದ ಮೇಲೆ ರಾಮ್ ನನ್ನನ್ನು ಒಪ್ಪಿಕೊಳ್ತಾನಾ ಎನ್ನುವುದೂ ಆಕೆಗೆ ಸಂದೇಹ ಶುರುವಾಗಿತ್ತು, ಅಷ್ಟಕ್ಕೂ ಸೀತಾಳ ಹಿಂದಿನ ಕಥೆಯೇನು? ಅವಳದ್ದು ನಿಜವಾಗಿಯೂ ಮದ್ವೆಯಾಗಿದ್ಯಾ? ಗಂಡ ಬಿಟ್ಟಿದ್ದಾಳಾ ಅಥ್ವಾ ಗಂಡನೇ ಇಲ್ವಾ? ಸಿಹಿ ಸೀತಾಳ ಸ್ವಂತ ಮಗಳು ಹೌದಾ? ಎಷ್ಟೊಂದು ಪ್ರಶ್ನೆಗಳು ವೀಕ್ಷರನ್ನು ಕಾಡುತ್ತಿವೆ. ಅತ್ತ ಭಾರ್ಗವಿಗೂ ಸೀತಾ ಒಂದು ಮಗುವಿನ ತಾಯಿ ಎಂದು ತಿಳಿದಿದ್ದು, ಅವಳ ಇತಿಹಾಸ ಕೆದಕಲು ರುದ್ರಪ್ರತಾಪ್ನನ್ನು ಬಿಟ್ಟಿದ್ದಾಳೆ.
ತನ್ನ ಹಿಂದಿನ ಕಥೆ ನಿಮಗೆ ಗೊತ್ತಿಲ್ಲ ಎಂದು ಅದನ್ನು ಸೀತಾ ಹೇಳಲು ಹೋದಾಗ ರಾಮ್ ತಡೆದಿದ್ದಾನೆ. ನನ್ನ ಹಿಂದಿನ ಕಥೆಯೂ ಚೆನ್ನಾಗಿಲ್ಲ, ಅದೆಲ್ಲಾ ನನಗೆ ಬೇಡ... ನೀವು ಬೇಕು, ನಿಮ್ಮ ಪ್ರೀತಿ ಬೇಕು ಎಂದು ಹೇಳುವ ಮೂಲಕ ಸೀತಾಳಿಗೆ ತನ್ನ ಹಿಂದಿನ ಕಥೆಯನ್ನು ಹೇಳಲು ರಾಮ್ ಕೊಟ್ಟಿಲ್ಲ. ಆಗ ಸೀತಾ ಸುಮ್ಮನಾಗಿದ್ದಳು. ರಾಮ್ನನ್ನು ಪ್ರೀತಿ ಮಾಡುವುದಾಗಿ ಒಪ್ಪಿಕೊಂಡಿದ್ದಳು. ಇದೀಗ ಇಬ್ಬರೂ ಲವ್ನಲ್ಲಿ ಬಿದ್ದಿದ್ದಾರೆ. ಇದರ ಮಧ್ಯೆಯೇ, ಕೆಲ ಎಪಿಸೋಡ್ ಹಿಂದೆ ಬೈಕ್ನಲ್ಲಿ ಬಂದಾತನೊಬ್ಬ ಸಿಹಿಯನ್ನು ಕಿಡ್ನಾಪ್ ಮಾಡಿದ್ದ. ಸೀತಾಳ ಮೇಲೆ ದಾಳಿ ಮಾಡಲು ನೋಡಿದ್ದ. ರಾಮ್ನನ್ನು ಇರಿದಿದ್ದ. ಹಾಗಿದ್ದರೆ ಅವನಿಗೂ ಸೀತಾಗೂ ಸಂಬಂಧ ಇದೆಯಾ ಎಂಬ ಪ್ರಶ್ನೆ ಸೀತಾರಾಮ ಸೀರಿಯಲ್ ಫ್ಯಾನ್ಗಳನ್ನು ಕಾಡುತ್ತಿದೆ.
ಪಾಕ್ ನಟರಿಂದ ಬಾಲಿವುಡ್ ಖಾನ್ತ್ರಯರಿಗೆ ಅಭದ್ರತೆ ಕಾಡ್ತಿದೆಯಂತೆ: ನಟಿ ಕೊಟ್ಟ ಸ್ಟೇಟ್ಮೆಂಟ್ ಏನು ನೋಡಿ...