ಬೆಂಗಳೂರು ಅಪರಾಧಿಯನ್ನು ಗಲ್ಲು ಶಿಕ್ಷೆಯಿಂದ ಪಾರು ಮಾಡಿದ ಆರ್‌ಸಿಬಿ ಪುರುಷರ ತಂಡ; ಈಗಲೂ ವಿಕ್ಕಿ ಸೇಫ್‌!

By Sathish Kumar KHFirst Published Apr 4, 2024, 6:04 PM IST
Highlights

ಭಾರತದಲ್ಲಿ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಆರ್‌ಸಿಬಿ ತಂಡವು ಬೆಂಗಳೂರಿನ ಅಪರಾಧಿಯೊಬ್ಬನನ್ನು ಗಲ್ಲು ಶಿಕ್ಷೆಯಿಂದ ಪಾರು ಮಾಡಿದೆ. 

ಬೆಂಗಳೂರು (ಏ.04): ಭಾರತದಲ್ಲಿ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಆರ್‌ಸಿಬಿ ತಂಡವು ಬೆಂಗಳೂರಿನ ಅಪರಾಧಿಯೊಬ್ಬನನ್ನು ಗಲ್ಲು ಶಿಕ್ಷೆಯಿಂದ ಪಾರು ಮಾಡಿದೆ. ಆದರೆ, ಇದು ದುಃಖ ವಿಚಾರವೋ ಅಥವಾ ಸಂತಸ ಪಡುವ ವಿಚಾರವೋ ಗೊತ್ತಾಗುತ್ತಿಲ್ಲ.

ಹೌದು, ಭಾರತದಲ್ಲಿ ಕ್ರಿಕೆಟ್‌ ಆಟಕ್ಕಿರುವ ಅಭಿಮಾನಿಗಳಷ್ಟು ಬೇರಾವ ತಂಡಕ್ಕೂ ಇಲ್ಲ. ಅದರಲ್ಲಿಯೂ ಭಾರತದ ಐಪಿಎಲ್‌ ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕಿರುವಷ್ಟು ಅಭಿಮಾನಿಗಳು ಬೇರಾವ ತಂಡಕ್ಕೂ ಇಲ್ಲವೆಂದು ಗೊತ್ತಿರುವ ವಿಚಾರವಾಗಿದೆ. ಈ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಕರ್ನಾಟಕ ಮಾತ್ರವಲ್ಲ ಇಡೀ ವಿಶ್ವದ ವಿವಿಧ ಭಾಗಗಳಲ್ಲಿ ಅಭಿಮಾನಿಗಳನ್ನು ಹೊಂದಿದ ತಂಡವಾಗಿದೆ. ಇದಕ್ಕೆ ಮಕ್ಕಳು, ಯುವಕರು, ವಯಸ್ಕರು, ವೃದ್ಧರು, ಮಹಿಳೆಯರು, ಪುರುಷರು, ಸತ್ಯವಂತರು, ಸುಳ್ಳರು, ಕಳ್ಳರು, ಅಪರಾಧಿಗಳು, ಪೊಲೀಸರು ಎಂಬ ಯಾವುದೇ ಭೇದ ಭಾವವೂ ಇಲ್ಲ. ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ, ಕ್ರಿಸ್‌ ಗೇಲ್, ಎಬಿ ಡೆವಿಲಿಯರ್ಸ್, ಮ್ಯಾಕ್ಸ್‌ವೆಲ್ ಸೇರಿ ಅನೇಕ ಘಟಾನುಘಟಿ ಕ್ರಿಕೆಟಿಗರ ಅಭಿಮಾನಿಗಳು ಕೂಡ ಆರ್‌ಸಿಬಿ ತಂಡಕ್ಕೆ ಸಪೋರ್ಟ್‌ ಮಾಡುತ್ತಾರೆ.

ನಾನು ಆರ್‌ಸಿಬಿಯ ನಿಷ್ಠಾವಂತ ಅಭಿಮಾನಿ: ನ್ಯಾಷನಲ್​ ಕ್ರಶ್ ರಶ್ಮಿಕಾ ಮಂದಣ್ಣ

ಇನ್ನು ಅಪರಾಧಿಯೊಬ್ಬನಿಗೆ ಕಳೆದ 16 ವರ್ಷಗಳ ಹಿಂದೆಯೇ ತಾನು ಮಾಡಿದ ತಪ್ಪಿಗಾಗಿ ಗಲ್ಲು ಶಿಕ್ಷೆ ಪ್ರಾಪ್ತವಾಗಿರುತ್ತದೆ. ಆದರೆ, ಆ ಖೈದಿಯನ್ನು ಗಲ್ಲಿಗೇರಿಸುವಾಗ ಆತನ ಕೊನೆಯ ಆಸೆಯೇನು ಎಂದು ಕೇಳಲಾಗಿದೆ. ಆಗ ಅಪರಾಧಿ ಕೇಳಿಕೊಂಡ ಒಂದೇ ಒಂದು ಆಸೆಯಿಂದ ಆತ 16 ವರ್ಷಗಳಾದರೂ ಇನ್ನೂ ಜೀವಂತವಾಗಿದ್ದಾನೆ. ಆತ, ನಮ್ಮ ನಿಮ್ಮೆಲ್ಲರಂತೆ ಆರ್‌ಸಿಬಿ ಗೆಲ್ಲಬೇಕು ಎಂದು ಕೇಳಿಕೊಳ್ಳುವುದಕ್ಕಿಂತ ಆರ್‌ಸಿಬಿ ತಂಡ ಸೋಲಬೇಕು ಎಂದು ಕೇಳಿಕೊಂಡಿದ್ದೇ ಹೆಚ್ಚು ಎಂದು ನಾವು ಭಾವಿಸಬಹುದು.

ಇಷ್ಟೆಲ್ಲಾ ಪೀಠಿಕೆ ಹಾಕಿದರೂ, ಆರ್‌ಸಿಬಿ ಗಲ್ಲು ಶಿಕ್ಷೆಯನ್ನು ತಪ್ಪಿಸಿದ್ದು ಹೇಗೆ ಎಂಬ ಪ್ರಶ್ನೆ ಸಹಜವಾಗಿ ಹುಟ್ಟುತ್ತದೆ. ಇಲ್ಲಿದೆ ನೋಡಿ ಉತ್ತರ.... ಇದು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ ನಲ್ಲಿ ನಾನು ನಂದಿನಿ.. ಬೆಂಗಳೂರಿಗೆ ಬಂದೀನಿ ಎಂಬ ವೈರಲ್‌ ಹಾಡಿನ ಖ್ಯಾತಿಯ ವಿಕ್ಕಿಪೀಡಿಯಾ ಮಾಡಿದ ರೀಲ್ಸ್‌ ಆಗಿದೆ. ಆರ್‌ಸಿಬಿ ಅಭಿಮಾನಿಯಾಗಿರುವ ವಿಕ್ಕಿಪೀಡಿಯಾಗೆ ಗಲ್ಲು ಶಿಕ್ಷೆ ಆಗಿರುತ್ತದೆ. ಇನ್ನೇನು ಗಲ್ಲಿಗೇರಿಸಬೇಕು ಎನ್ನುವಾಗ ನಿನ್ನ ಕೊನೆಯ ಆಸೆಯೇನು ಎಂದು ಕೇಳಲಾಗುತ್ತದೆ.

Bengaluru: ಆಟೋ ಚಾರ್ಜ್ ಕೊಟ್ಟಿಲ್ಲವೆಂದು ಯುವತಿಯನ್ನು ಎಳೆದೊಯ್ದು ಅತ್ಯಾಚಾರವೆಸಗಿ ಕೊಲೆಗೈದ ಚಾಲಕ

ಆಗ, ಬೇಡ ಬಿಡಿ ಸಾರ್.. ನಾನು ಕೇಳುವುದನ್ನು ನೀವು ಈಡೇರಿಸಲು ಸಾಧ್ಯವಿಲ್ಲವೆಂದು ಅಪರಾಧಿ ಹೇಳುತ್ತಾನೆ. ಆದರೂ, ಇಲ್ಲ ನೀನು ಕೇಳಿದ್ದನ್ನು ತಾವು ಕಡ್ಡಾಯವಾಗಿ ಈಡೇರಿಸುತ್ತೇವೆ ಹೇಳು ಎಂದು ಪೊಲೀಸರು ಖಡಕ್ ಆಗಿ ಕೇಳುತ್ತಾರೆ. ಆಗ ಅಪರಾಧಿ ತಾನು ಆರ್‌ಸಿಬಿ ಮೆನ್ಸ್‌ ತಂಡವು ಗೆಲ್ಲುವುದನ್ನು ನಾನು ನೋಡಬೇಕು, ಇದೇ ತನ್ನ ಕೊನೆಯಾಸೆ ಎಂದು ಹೇಳುತ್ತಾನೆ. ಆದರೆ, 16 ವರ್ಷಗಳಿಂದಲೂ ಆರ್‌ಸಿಬಿ ತಂಡ ಗೆದ್ದಿಲ್ಲ. ಹೀಗಾಗಿ, ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಆರೋಪಿ ವಿಕ್ಕಿಪೀಡಿಯಾನನ್ನು ಹೊರಗೆ ಕಳಿಸಲಾಗಿದ್ದು, ಆತ ಆರ್‌ಸಿಬಿ ಮ್ಯಾಚ್ ನೋಡುತ್ತಿದ್ದಾನೆ. ಈ 2024ನೇ ಸಾಲಿನಲ್ಲಾದರೂ ಆರ್‌ಸಿಬಿ ಪುರುಷರ ತಂಡ ಗೆಲ್ಲುವುದಾ? ಅಪರಾಧಿಯನ್ನು ಗಲ್ಲಿಗೇರಿಸಲಾಗುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ.

click me!